Sunday, January 9, 2022

Kalaam express news

ಅರಸೀಕೆರೆ :- ನಿದ್ದೆಯ ಮಂಪರಿಗೆ ಜಾರಿದ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಗಾಡಿ ಹೆದ್ದಾರಿಗೆ ಅಡ್ಡಲಾಗಿ ಮಗಚಿಕೊಂಡರು ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಅಕ್ಕಿ ತುಂಬಿಕೊಂಡು ಶಿವಮೊಗ್ಗ ದಿಂದ ಬೆಂಗಳೂರು ಕಡೆ ಸಾಗುತ್ತಿದ್ದ ಬುಲೆರೋ ಗೂಡ್ಸ್ ಗಾಡಿ ನಗರದ ಪಿಪಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 206 BH ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಗುದ್ದಿ ನೆಲಸಮಗೊಳಿಸಿ ಇರುವುದಲ್ಲದೆ ಗೂಡ್ಸ್ ಗಾಡಿ ಸಹ ಪಲ್ಟಿ ಹೊಡೆದಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದ ರಸ್ತೆ ಅಪಘಾತದ ವೇಳೆ ಯಾವುದೇ ವಾಹನಗಳು ಸಾಗದೆ ಇದುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲ್ಲೇ ಅಂತರದಲ್ಲಿ ತಪ್ಪಿದೆ. ಮುಂಜಾನೆ ಅನಿರೀಕ್ಷಿತವಾಗಿ ಸಂಭವಿಸಿದ ಘಟನೆ ಯಿಂದಾಗಿ ಹೆದ್ದಾರಿ ಮೂಲಕ ಬೆಂಗಳೂರು ಮೈಸೂರು ಹಾಗೂ ಹಾಸನ ಸೇರಿದಂತೆ ಇತರೆ ಊರುಗಳಿಗೆ ಸಾಗುತ್ತಿದ್ದ ಪ್ರಯಾಣಿಕರು ಕೆಲಸಮಯ ತೊಂದರೆ ಅನುಭವಿಸುವಂತಾಯಿತು ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ ಪರ್ವೀಜ್ ಅಹಮದ್ ಅರಸೀಕೆರೆ ಹಾಸನ ಜಿಲ್ಲೆ

No comments:

Post a Comment