Sunday, January 9, 2022

kalaam

ಅರಸೀಕೆರೆ..  ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವ ಪುಂಡರ ವಿರುದ್ಧ ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಪಿ.ಪಿ ವೃತ್ತದವರೆಗೂ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಯಲ್ಲಿ ವಿವಿಧ ಪಕ್ಷಗಳಮುಖಂಡರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ರಸ್ತೆ ತಡೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕುರುಬ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಸಂಗೊಳ್ಳಿ ರಾಯಣ್ಣ ಯಾವುದೇ ಒಂದು  ಜಾತಿ ವರ್ಗಕ್ಕೆ ಸೀಮಿತವಲ್ಲ ಇಡೀ ರಾಷ್ಟ್ರಕ್ಕೆ ಸೇನಾನಿಯಾದ ವ್ಯಕ್ತಿ ಅಂಥವರಿಗೆ ಅಪಮಾನ ಮಾಡಿರುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ವಿಕಾಸ ಸೌಧ ಮುಂಭಾಗದಲ್ಲಿ ರಾಯಣ್ಣವರ ಪ್ರತಿಮೆಯನ್ನು ಸ್ಥಾಪಿಸಬೇಕು  ಅದರ ಮೇಲೆ ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಹೇಳಿದರು       

 ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ರವರು ಒಂದು ಗಂಟೆಯಿಂದ ಸಂಚಾರ ಸ್ಥಗಿತವಾದ ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಕ್ಲಿಯರ್ ಮಾಡಿ ವಾಹನಗಳಿಗೆ ಓಡಾಡಲು ಅವಕಾಶ ಮಾಡಿಕೊಟ್ಟರು.

ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು 

ಪ್ರತಿಭಟನೆಯಲ್ಲಿ  ಜೆಡಿಎಸ್ ಮುಖಂಡ ಬಿಳಿಚೌಡಯ್ಯ ಕಾಂಗ್ರೆಸ್ ಮುಖಂಡ ಶಶಿಧರ್, ಗಂಜಿಗೆರೆ ಚಂದ್ರಶೇಖರ್ , ಬಿಜೆಪಿ ನಗರ ಅಧ್ಯಕ್ಷ ಪುರುಷೋತ್ತಮ್ , ಸುಬ್ರಮಣ್ಯ ಬಾಬು, ಜಮೀರ್ ಅಹಮದ್ ಅಭಿಮಾನಿ ಬಳಗದ ಅಧ್ಯಕ್ಷ ಸಿರಾಜ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ವಾಮಿ, ಜಯ ಕರ್ನಾಟಕ ಜನಪರ ವೇದಿಕೆಯ  ನಗರ   ಅಧ್ಯಕ್ಷ  ಮಧುಸೂದನ್, ಮದನ್ , ಪ್ರದೀಪ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಲಾಂ ಎಕ್ಸ್ ಪ್ರೆಸ್ ನ್ಯೂಸ್  ಅರಸೀಕೆರೆ 

ವರದಿ
ಪರ್ವೀಜ್ ಅಹಮದ್
ಅರಸೀಕೆರೆ
ಹಾಸನ ಜಿಲ್ಲೆ

No comments:

Post a Comment