ಕುತೂಹಲ ಕೆರಳಿಸಿದ ಪುರಸಭೆ ಅಧ್ಯಕ್ಷ ಚುನಾವಣೆ , ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಬಸವರಾಜ ಹಿಟ್ಟಿನಮಟ್ ಆಯ್ಕೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದಲ್ಲಿ ನಗರ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆ ಭಾರೀ ಕುತೂಹಲ ಕೆರಳಿಸಿರುವ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಬಸವರಾಜ್ ಹಿಟ್ಟಿನಮಟ್ ಒಂದು ಮತದ ಅಂತರದಿಂದ ಆಯ್ಕೆಯಾದರು .
ಇಂದು ಮಧ್ಯಾಹ್ನ 1ಗಂಟೆಗೆ ನಾಮಪತ್ರಗಳ ಪರಿಶೀಲನೆ , ನಾಮಪತ್ರ ವಾಪಸ್ ಪಡೆಯುವುದು ನಂತರದಲ್ಲಿ ಪುರಸಭೆ ಅಧ್ಯಕ್ಷರ ಚುನಾವಣೆ ನಡೆಯಿತು .
ಪುರಸಭೆಗೆ ಒಳಗೆ ಸಂಪರ್ಕಿಸುವ ಎಲ್ಲ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು .ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು . ಎರಡುನೂರು ಪೊಲೀಸ್ ಅಧಿಕ ಸಿಬ್ಬಂದಿಗಳನ್ನು ಕೂಡ ಬಂದು ಬಸ್ತಿಗೆ ಏರ್ಪಾಡು ಮಾಡಲಾಗಿತ್ತು .
ತಾಲೂಕ ತಹಶೀಲ್ದಾರ್ S B ಇಂಗಳೆ , ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸದರು.
ಭಾರತೀಯ ಜನತಾ ಪಕ್ಷದಿಂದ ಬಸವರಾಜ ಮಠ , ಕಾಂಗ್ರೆಸ್ ಪಕ್ಷದಿಂದ ಯಲ್ಲನಗೌಡ ಪಾಟೀಲ್ , ಹಾಗೂ ಜಾವೇದ್ ಭಾಗವಾನ್ , ಇಬ್ಬರು ಸೇರಿ ನಾಮಪತ್ರ ಸಲ್ಲಿಸಿದ್ದರಿಂದ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯ ಅಂತಿಮ ಹಂತದಲ್ಲಿರುವ ರೋಚಕತೆಯನ್ನು ಹೆಚ್ಚಿಸಿತ್ತು .
ಇಂದು ಮಧ್ಯಾಹ್ನ 1:00 ಗಂಟೆಗೆ ನಾಮಪತ್ರ ಪರಿಶೀಲನೆ , ನಾಮಪತ್ರ ವಾಪಸ್ ಪಡೆದ , ನಂತರ ಚುನಾವಣೆಯ ಪ್ರಕ್ರಿಯೆ ನಡೆಯಿತು .
ಈ ಸಂದರ್ಭದಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯ ಜಾವೇದ್ ಭಾಗವಾನ್ ಅವರು ಮಾಧ್ಯಮದೊಂದಿಗೆ ಮಾತನಾಡಿ , ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಹಿಟ್ಟಿನಮಠ ಅವರು ಯುವ ಮುಖಂಡ ರಾಗಿದ್ದಾರೆ ನಾವು ಅವರನ್ನು ಕೂಡ ಸಹಕರಿಸುತ್ತವೆ , ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಹಾಗೂ ಇನ್ನೂ ಅನೇಕ ಪಕ್ಷದ ಮುಖಂಡರು ಉಪಸ್ಥಿತರಿದ್ದರು .
KALAAM EXPRESS NEWS
TERDAL ZONE
RABKAVI - BANHATTI
No comments:
Post a Comment