*ತೇರದಾಳ ಪಟ್ಟಣಕ್ಕೆ ದಿಡೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್*
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಹೋಬಳಿ ಪಟ್ಟಣಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಉಪ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದರು .
ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸಾಯಂಕಾಲ ನಾಲ್ಕು ಗಂಟೆಗೆ ಆಗಮಿಸಿ , ಸಾರ್ವಜನಿಕ ಕುಂದು ಕೊರತೆಗಳನ್ನು ಸ್ವೀಕರಿಸಿ , ನಂತರ ಮಾಧ್ಯಮದವರ ಜತೆ ಕೆಲವು ಕಾಲ ಸಂವಾದ ನಡೆಸಿದರು .
*ಮಾಧ್ಯಮದವರು ಕೇಳಿದ ಪ್ರಶ್ನೆ ತಾವು* ದಿಡೀರನೆ ತೇರದಾಳ ಪಟ್ಟಣಕ್ಕೆ ಭೇಟಿ ನೀಡಿದ ಉದ್ದೇಶವೇನು ?ಎಂದಾಗ ,ಉದ್ದೇಶ ಏನು ಇಲ್ಲ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಒಂದು ತಾಲೂಕಿಗೆ ಭೇಟಿ ನೀಡಬೇಕು ಎಂದು ಸರ್ಕಾರದ ವತಿಯಿಂದ ಸುತ್ತೋಲೆ ಇದೆ ಆದ್ದರಿಂದ ಈ ದಿನ ರಬಕವಿ-ಬನಹಟ್ಟಿ ತಾಲೂಕಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು .
ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಶಾಲೆಗಳ ದುಸ್ಥಿತಿಗಳ ಬಗ್ಗೆ ಕೇಳಿದಾಗ ,ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದು , ಎಜುಕೇಶನ್ ಡಿಪಾರ್ಟ್ಮೆಂಟ್ದ ಅವರೇ ಮಾಡಬೇಕಾದ ಕೆಲಸ , ನಾನು ಶಾಸಕರಿಗೆ ಕೂಡ ವಿನಂತಿ ಮಾಡಿದ್ದೇನೆ ಶಾಸಕರ ಅನುದಾನದ ಸ್ವಲ್ಪ ಪರ್ಸೆಂಟೇಜ್ ಶಾಲೆ ಮತ್ತು ಅಂಗನವಾಡಿಗಳಿಗೆ ರಿಪೇರಿ ಮಾಡಿಸಲು ಜಿಲ್ಲೆಯ ಎಲ್ಲ cಶಾಸಕರಿಗೆ ಮನವಿ ಮೂಲಕ ಕೇಳಿದ್ದೇನೆ ಎಂದು ಹೇಳಿದರು .
*ಇದೇ ಸಂದರ್ಭದಲ್ಲಿತಾಲೂಕುಗಳ ಸಮಸ್ಯೆಗಳ ಬಗ್ಗೆ ಕೇಳಿದಾಗ* , ಒಂದೇ ಪ್ರಸ್ತಾವನೆಯಲ್ಲಿ , ತೇರದಾಳ ತಾಲೂಕು ಹೆಡ್ ಹೋಬಳಿ ಕೇಂದ್ರವನ್ನಾಗಿ ಮಾಡುವುದು ,ಇನ್ನೊಂದು ರಬಕವಿ-ಬನಹಟ್ಟಿ ತಾಲೂಕಿನಲ್ಲಿ , ರಬಕವಿ ಬನಹಟ್ಟಿ ಮತ್ತು ಮಹಾಲಿಂಗಪುರ್ ನಗರಗಳಲ್ಲಿ ಹೋಬಳಿಗಳನ್ನು ಮಾಡಿ , ಒಂದೇ ಬಾರಿ ಮೂರು ಕೆಲಸಗಳಿಗೆ ಪರಿಹಾರದ , ಪ್ರಸ್ತಾವನೆಗಳನ್ನು ಕಳಿಸಿದ್ದೇವೆ ಎಂದು ಹೇಳಿದರು .
MAHIBOOB BARIGADDI
TV6TERDALZONE
RABKAVI BANHATTI
No comments:
Post a Comment