Tuesday, July 5, 2022

KALAAM EXPRESS NEWS

*ಕಾಣೆಯಾಗಿದ್ದ ನ್ಯಾಯವಾದಿ ಶವವಾಗಿ ಪತ್ತೆ :* 


ಬಾಗಲಕೋಟೆ  ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಕಳೆದೊಂದು ವಾರದಿಂದ ಕಾಣೆಯಾಗಿದ್ದ ಬನಹಟ್ಟಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಾಜಕುಮಾರ ಗೂಗಾಡ(46) ಶವವಾಗಿ ಪತ್ತೆ ಯಾಗಿದ್ದಾರೆ.  ಚಿಮ್ಮಡ ಗ್ರಾಮದ ಗೂಗಾಡ ಕುಟುಂಬದ ಭೂಮಿಯಲ್ಲಿನ ಕಬ್ಬಿನ ಬೆಳೆಯಲ್ಲಿ ಶವ ಪತ್ತೆಯಾಗಿದೆ.


ದಿನಾಂಕ 24 ರಂದು ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ನಾಪತ್ತೆ ಯಾಗಿದ್ದರು. ಎಲ್ಲೋ ಹೋಗಿರಬೇಕೆಂದು ಸಂಬಂಧಿಕರು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಕೊಳೆತ ಸ್ಥಿತಿಯಲ್ಲಿ ಶನಿವಾರ ಮನೆಯ ಹಿಂಭಾಗದ ಕಬ್ಬಿನ ಬೆಳೆಯಲ್ಲಿ ಕೆಟ್ಟ ವಾಸನೆ ಬರಲಾರಂಬಿಸುತ್ತಿದ್ದಂತೆ ಶೋಧ ನಡೆಸಿದ ಕುಟುಂಬಸ್ಥರಿಗೆ ಮೃತ ರಾಜಕುಮಾರನ ಶವ ಪತ್ತೆಯಾಗಿದ್ದು, ಸಾವಿಗೀಡಾದ ಪ್ರದೇಶದಲ್ಲಿ ವಿಷದ ಬಾಟಲಿ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಪೊಲೀಸರದ್ದಾಗಿದೆ. ಕಳೆದೆರಡು ವರ್ಷಗಳಿಂದ ಮಾನಸಿಕವಾಗಿ ಬಳಲುತ್ತ, ವಿಷ ಸೇವಿಸಿ ಸಾಯುವದಾಗಿ ಕುಟುಂಬಸ್ಥರ ಮುಂದೆ ಪದೇ ಪದೇ ತಿಳಿಸುತ್ತಿದ್ದನೆಂದು ಮೂಲಗಳಿಂದ ತಿಳಿದು ಬಂದಿವೆ. ಸದ್ಯ ಪ್ರಕರಣ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

KALAAM EXPRESS NEWS 
BAGALKOTE
TERDALZONE

No comments:

Post a Comment