Tuesday, August 23, 2022

_ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಾಲಯ ಉದ್ಘಾಟನೆ_* :



ಬಾಗಲಕೋಟೆ ಆಮ್ ಆದ್ಮಿ ಪಕ್ಷದ ಕಾರ್ಯಾಲಯ ನವನಗರದಲ್ಲಿ ರಾಜ್ಯಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಯಿತು .

ಭಾರತ್ ಮಾತಾ ಕಿ ಜೈ ,ಒಂದೇ ಮಾತರಂ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಜಯವಾಗಲಿ , ಅನ್ನುವ ಘೋಷಣೆಗಳನ್ನು ಹೇಳುತ್ತಾ ,ನಗರದ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ , ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ,ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಜೈಕಾರ ಗಳನ್ನು ಕುಗುತ್ತಾ ರ್ಯಾಲಿ ಮೂಲಕ ಸಂಚರಿಸಿ , ಕೊನೆಗೆ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ಸೇರಿದರು .

ಬಾಗಲಕೋಟ ಜಿಲ್ಲೆಯ ಪ್ರತಿಯೊಂದು ವಿಧಾನಸಭೆಯ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು   ಹಾಜರಿದ್ದರು .

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ  ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿದರು .

ಈ ಕಾರ್ಯಕ್ರಮ ಸಭೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಹಾಗೂ ಖ್ಯಾತ ನ್ಯಾಯವಾದಿ ರಮೇಶ್ ಬದನ್ನೂರು ,ಬೆಳಗಾವಿ ವಲಯದ ಸಂಯೋಜಕರಾದ ತೋಪನ್ನವರ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಆಮ್ ಆದ್ಮಿ ಪಕ್ಷದ ಮುಖಂಡ ಟೆನ್ನಿಸ್ ಕೃಷ್ಣ , ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳಾದ ಅರ್ಜುನ್ ಹಲಗಿ ಗೌಡರ ಹಾಗೂ ಬಾಬು ಶೇಕ್ , ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಶಂಕರ್ ಹುಕ್ಕೇರಿ , ದರೆಪ್ಪ ಘಗ್ರಿ ಯುವರಾಜ್ ಬಂಡಿ ಇನ್ನೂ ಹಲವಾರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .


KALAAM  EXPRESS NEWS
RABKAVI-BANHATTI

No comments:

Post a Comment