Saturday, August 27, 2022

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದ ನೂತನವಾಗಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿದ ಶಾಸಕ ಸನ್ಮಾನ್ಯ ಸಿದ್ದು ಸೌದಿ*



 
ವರದಿ  ಮಹಿಬೂಬ್  ಬಾರಿಗಡ್ಡಿ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ರಬಕವಿ-ಬನಹಟ್ಟಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ , ,ಕ್ಯಾಟರ್ ಪಿಲ್ಲರ  ಫೌಂಡೇಶನ್ ಬೆಂಗಳೂರು ,ಮತ್ತು  ಯುನೈಟೆಡ್ ವೇ   ಬೆಂಗಳೂರು , ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರಬಕವಿ-ಬನಹಟ್ಟಿ, ಸಮುದಾಯ ಆರೋಗ್ಯ ಕೇಂದ್ರ ರಬಕವಿ ಬನಹಟ್ಟಿ ಇವರ ಸಹಯೋಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು .

 ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ತೇರದಾಳ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಸಿದ್ದು ಸವದಿ ಉದ್ಘಾಟನೆ ಮಾಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಸಿದ್ದು ಸವದಿ ಕಳೆದ ಕೋವಿಡ್-19 ಲ್ಲಿ ಸಾಕಷ್ಟು ಜನರಿಗೆ ಆಕ್ಸಿಜನ ಇಲ್ಲದೆ ಇರುವುದರಿಂದ ಸಾಕಷ್ಟು ಜನರ ಜೀವ ಕಳೆದುಕೊಂಡರು .ಒಂದು ಆಮ್ಲಜನಕದ ಟ್ಯಾಂಕರ್ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ಹಂಚು ಹರಿದು ಹೋಗುವಷ್ಟರಲ್ಲಿ ಸಾಕಷ್ಟು ಜನರು  ಆಮ್ಲಜನಕದ ತೊಂದರೆಗೆ  ಈಡಾಗುತ್ತಿದ್ದರು .ಈಗ ಬಾಗಲಕೋಟ್ ಜಿಲ್ಲೆಯ  ರಬಕವಿ ಬನಹಟ್ಟಿ ಯಲ್ಲಿ  ಆಮ್ಲಜನಕವನ್ನೇ ಅಂದ್ರೆ ಆಕ್ಸಿಜನ್ ನೆ  ಉತ್ಪಾದನೆ ಮಾಡುವಂತಹ ಘಟಕ ನಿರ್ಮಾಣವಾಗಿವೆ . ಆಮ್ಲಜನಕದ ಘಟಕಗಳು ನಿರ್ಮಾಣ ಮಾಡುವಲ್ಲಿ ಕ್ಯಾಟರ್ ಪಿಲ್ಲರ್ ಹಾಗೂ ಅಸಿಸ್ಟ್ ಇಂಟರ್ನ್ಯಾಷನಲ್ ಸಂಸ್ಥೆ ಮತ್ತು ಯುನೈಟೆಡ್ ವೇ  ಸಂಸ್ಥೆ ಜಂಟಿ ಸಹಯೋಗದೊಂದಿಗೆ ಆಮ್ಲಜನಕದ ಘಟಕಗಳು ದಾನ ಮಾಡಿರುವಂತ ದಾನಿಗಳಿಗೆ ಆ ಭಗವಂತ ಇನ್ನಷ್ಟು ದಾನಮಾಡುವ ಶಕ್ತಿ ಕೊಡ್ಲಿ ಅಂತ ಸಂದರ್ಭದಲ್ಲಿ ಹೇಳಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ ಜಿಲ್ಲಾ  ಆರೋಗ್ಯ ಅಧಿಕಾರಿ ಜಯಶ್ರೀ ಎಮ್ಮಿ ಮಾತನಾಡಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ .ಕ್ಯಾಟರ ಪಿಲ್ಲರ್ ಸಂಸ್ಥೆಯ ಪೀಟರ್ ,ತಾಲೂಕ ಆರೋಗ್ಯ ಅಧಿಕಾರಿ ಜಿಎಸ್ ಗಲಗಲಿ , ರಬಕವಿ-ಬನಹಟ್ಟಿ ತಾಲೂಕಾ ತಹಸೀಲ್ದಾರ್ ಸಂಜಯ್ ಇಂಗಳೆ ,ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ನಿರೀಕ್ಷಕರು ವೀರೇಶ್ ಮಠಪತಿ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ್ ತೆಗ್ಗಿ , ಉಪಾಧ್ಯಕ್ಷ ಶ್ರೀಮತಿ ವಿದ್ಯಾ ದಬಾಡಿ   ,ಸಮುದಾಯ ಆರೋಗ್ಯ ಕೇಂದ್ರ ರಬಕವಿ-ಬನಹಟ್ಟಿ ಮುಖ್ಯ ವೈದ್ಯಾಧಿಕಾರಿ  N M ನದಾಫ್ .ಸಂಜಯ್ ಹಿಪ್ಪರ್ಗಿ  ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ , ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತರು  ಉಪಸ್ಥಿತರಿದ್ದರು .

No comments:

Post a Comment