ರಬಕವಿ ಬನಹಟ್ಟಿ
ಹೊಸ ವರ್ಷದ ಆಚರಣೆ ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ . ಇಲ್ಲೊಬ್ಬ ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು , ಬುದ್ಧ , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ ಚಿತ್ರದಲ್ಲಿ ಮುದ್ರನ (ಪ್ರಿಂಟ್ ) ಹಾಕಿ ,ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ , ವಾರದ ಮುಂಚೆ , ಕೋಮುಸೌಹಾರ್ದತೆ ಯನ್ನು ಎತ್ತಿ ಹಿಡಿಯಲಿಕ್ಕೆ ,ಎಲ್ಲ ಸಮಾಜಗಳಿಗೆ ,ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು ಸತ್ - ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ .
ದಯವೇ ಧರ್ಮದ ಮೂಲವಯ್ಯ , ನಿಮ್ಮ ಏಕತೆ , ನನ್ನ ಪೂಜೆ , ನನ್ನ ಉಳಿಸಿ ಜಗತ್ತು ರಕ್ಷಿಸಿ , ಜೈ ಭಾರತ ಜನನಿಯ ತನುಜಾತೆ , ರಾಷ್ಟ್ರೀಯ ಏಕತೆಯೇ ನನ್ನ ಸೌಂದರ್ಯ , ಹಾಗೂ ನವಿಲು ನರ್ತನ , ಇನ್ನೂ ಅನೇಕ 16 ಚಿತ್ರ ಕಲೆಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ಹೊರ ತಂದಿದ್ದಾರೆ .
ಸಲೀಂ ಮೈನುದ್ದೀನ್ ಡಾಂಗೆ ಇವರು ಕಲಾ ಶಿಕ್ಷಕರು ಸದ್ಯ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ್ ಪಟ್ಟಣದ ಸಿಖ್ಯಾಬ ಸಂಸ್ಥೆಯ ಉರ್ದು ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ .
ಪ್ರತಿಯೊಂದು ಹೊಸ ವರ್ಷಕ್ಕೆ ಅವರ ವಿಶಿಷ್ಟವಾದ ಕೋಮು ಸೌಹಾರ್ದತೆ ಸಲುವಾಗಿ ಸಾಮ್ಯರಸ ಬದುಕಿನ ಸಂದೇಶಗಳನ್ನು ಸಾರುವ ಅಪರೂಪದ ತಮ್ಮ ವಿಶಿಷ್ಟ ಕಲಾ ಕೃತಿಗಳಲ್ಲಿ ಬಿಡಿಸಿ , ಗಣ್ಯ ವ್ಯಕ್ತಿಗಳಿಗೆ ಹಾಗೂ ಸಾರ್ವಜನಿಕರಿಗೆ , ಉಚಿತವಾಗಿ ತಮ್ಮ ಚಿತ್ರಕಲೆಗಳ ಗ್ರೀಟಿಂಗ್ಸ್ ಗಳನ್ನು ಹಂಚುವುದರ ಮೂಲಕ , ಹೊಸ ವರ್ಷದ ಆಚರಣೆಯನ್ನು ಮಾಡುವುದರ ಮೂಲಕ , ಎಲ್ಲರ ಮನೆ ಮಾತಾಗಿದ್ದಾರೆ .
ಶಿಕ್ಷಕ ಸಲೀಂ ಎಂ ಡಾಂಗೆ ಇವರು 1993 ದಿಂದ 2023 ರವರೆಗೆ ಕನಿಷ್ಠ 31 ವರ್ಷದಿಂದ ಈ ವಿಭಿನ್ನ ಚಿತ್ರಕಲೆಗಳ ಮೂಲಕ ಘಣಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ . 1995 - 96 ರಲ್ಲಿ ದೇಶದ ರಾಷ್ಟ್ರಪತಿಗಳಿಂದ ಕೂಡ ಪ್ರಶಂಸೆಯ ಪತ್ರವೂ ಕೂಡ ಬಂದಿದೆ .
ಪ್ರತಿಯೊಂದು, ಹೊಸ ವರ್ಷದ ಸಂದರ್ಭದಲ್ಲಿ ಬೇರೆ ಬೇರೆ ಚಿತ್ರಕಲೆಗಳ ಮೂಲಕ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಚಿತ್ರ ಕಲೆಗಳ ಮುಖಾಂತರ ಗ್ರೀಟಿಂಗ್ಸ್ ಗಳನ್ನು ಹೊರ ತರುತ್ತಾರೆ . ಈ ವರ್ಷ ಮಾಡಿದ್ದ ಚಿತ್ರಕಲೆಯ ಶೈಲಿ ಮುಂದಿನ ಹೊಸ ವರ್ಷದಲ್ಲಿ ಬೇರೆ ತರಹದ ವಿಭಿನ್ನ ರೂಪದಲ್ಲಿ ಹೊರ ತರುತ್ತಾರೆ . ಅಂದರೆ ಈ ವರ್ಷ ಮಾಡಿದ್ದ ಚಿತ್ರಕಲೆ , ಬರುವ ಹೊಸ ವರ್ಷದಲ್ಲಿ ಚಿತ್ರಕಲೆ ಇನ್ನೊಂದು ತರ ಇರುತ್ತದೆ . ತಮ್ಮ ಕಲಾ ಕೃತಿಗಳ ಗ್ರೀಟಿಂಗ್ಸ್ ಗಳನ್ನು ರಚಿಸಲು ತಮ್ಮ ಸ್ವಂತ ಬಂಡವಾಳ ಹಾಕುತ್ತಾರೆ . ಯಾರಿಂದಲೂ ಕೂಡ ಒಂದು ರೂಪಾಯಿಯ ಸಹಾಯ ಕೂಡ ಪಡೆಯುವುದಿಲ್ಲ .
1990ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ನಗರದ ಮುರಗೇಂದ್ರ ಲಲಿತ ಕಲಾ ಮಹಾವಿದ್ಯಾಲಯದಲ್ಲಿ , ಆರ್ಟ್ಸ್ ಮಾಸ್ಟರ್ ಪದವಿ ಮುಗಿಸಿದ ಸಲೀಂ ಡಾಂಗೆ ಅವರಿಗೆ ಚಿತ್ರಕಲೆ , ಸಾಹಿತ್ಯ , ರಂಗಭೂಮಿ , ಲಘು ಸಂಗೀತ , ಸಂಘಟನೆ , ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಒಲವು ಇರುತ್ತದೆ .
ನಾನು ಕಷ್ಟಪಟ್ಟು ಮಾಡುತ್ತಿರುವ ಕಲಾಕೃತಿ ಗ್ರೀಟಿಂಗ್ಸ್ ಗಳ ಸಾಮ್ಯರಸ ಶಾಂತಿ ಸಂದೇಶ ಸಾರವನ್ನು ಜನಸಾಮಾನ್ಯರು ಅರಿತುಕೊಂಡು ,ಅದರಂತೆಯೇ ನಡೆದುಕೊಂಡರೆ ಪ್ರತಿಯೊಂದು ಸಮಾಜಕ್ಕಾಗಿ ನನ್ನ ಚಿತ್ರಕಲೆಗಳ ಮೂಲಕ ತನ್ನ ಅಳಿಲು ಸೇವೆ ಸ್ವಾರ್ಥಕವಾಗುತ್ತದೆ ಎಂದು ಕಲಾ ಶಿಕ್ಷಕ ಸಲೀಂ ಡಾಂಗೆ ಹೇಳುತ್ತಾರೆ .
ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ
ಸಂಪಾದಕರು
ಕಲಾಂ ಎಕ್ಸ್ ಪ್ರೆಸ್ ನ್ಯೂಸ್
9448593518
No comments:
Post a Comment