*ರಬಕವಿ ಬನಹಟ್ಟಿ :*
ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದ ರಬಕವಿ ಬನಹಟ್ಟಿ ವ್ಯಾಪ್ತಿಯ ರಾಂಪುರ ನಗರದಲ್ಲಿ ಭರ್ಜರಿ ಬೈಕ್ ರ್ಯಾಲಿ ಮೂಲಕ ಆಮ್ ಆದ್ಮಿ ಪಕ್ಷದ ಮುಖ್ಯ ಕಾರ್ಯಾಲಯವನ್ನು ಉದ್ಘಾಟನೆ ಆಯಿತು .
ನಂತರ ಪತ್ರಕರ್ತರ ಜೊತೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಹಾಗೂ ನ್ಯಾಯವಾದಿ ರಮೇಶ್ ಬದನೂರು , ದೇಶಕ್ಕೆ ಪರ್ಯಾಯ ರಾಜಕಾರಣ ಬೇಕಾಗಿದೆ .ಪ್ರಜಾಪ್ರಭುತ್ವದ ಮೂಲ ಆಸೆಯನ್ನ ಸಂವಿಧಾನದ ಅನುಷ್ಠಾನವನ್ನು ಮಾಡ್ಲಿಕ್ಕೆ ಈ ದೇಶದ ಜನಸಾಮಾನ್ಯರ ಬೆನ್ನಿಗೆ ನಿಂತುಕೊಂಡು ಜನಸಾಮಾನ್ಯರ ಧ್ವನಿಯಾಗಿ ಆಮ್ ಆದ್ಮಿ ಪಕ್ಷವು ಒಂದು ಸಂಘರ್ಷದ ಮೂಲಕ ಜನ್ಮ ತಾಳಿದೆ .ಕಾಂಗ್ರೆಸ್ಸು ಮತ್ತು ಬಿಜೆಪಿ ಇದುವವರಿಗೆ ದೇಶ ಆಳಿರುವಂತ ಎಲ್ಲ ಪ್ರಮುಖ ಪಕ್ಷಗಳು ನಂಬಿಕೆಯಲ್ಲಿ ಹಿಂಜರೆದ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ತೊಲಗಿಸುವುದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿ ಎಲ್ಲ ರಾಜಕೀಯ ಪಕ್ಷಗಳು ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲ ಎಸೆದಾಗ ಆ ಸವಾಲನ್ನು ಸ್ವೀಕರಿಸಿ ಜನ್ಮ ತಾಳಿದ ಪಕ್ಷವೇ ಆಮ್ ಆದ್ಮಿ ಪಕ್ಷ , ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಇವತ್ತು ನಾವು ಆಡಳಿತ ಮಾಡುತ್ತಿದ್ದೇವೆ .
ಬಿಜೆಪಿಯವರಿಗೆ ಹಾಗೂ ಕಾಂಗ್ರೆಸ್ಸಿನವರಿಗೆ ಸೋಲಿನ ಭಯ ಕಾಡುತ್ತಿದೆ .ಆದರೆ ಸೋಲಿನ ಭಯದಲ್ಲಿ ಗೆಲವು ಕಾಣುತ್ತಿರುವುದು ಆಮ್ ಆದ್ಮಿ ಪಕ್ಷ , ಅದಕ್ಕೆ ಈ ಆಮ್ ಆದ್ಮಿ ಪಕ್ಷವನ್ನು ಜನರು ಒಪ್ಪುತ್ತಿದ್ದಾರೆ ಎಂದು ಹೇಳಿದರು .
ನಂತರ ಪತ್ರಕರ್ತರ ಜೊತೆ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲಗಿಗೌಡರ, ಕಳೆದ ಕೆಲವು ವರ್ಷಗಳಿಂದ ಆಡಳಿತ ನಡೆಸಿರುವಂತಹ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಸರ್ಕಾರಗಳು ಸಂಪೂರ್ಣವಾಗಿ ಲಂಚವನ್ನೇ ನಂಬಿ ಆಡಳಿತ ಮಾಡುತ್ತಾ ಬಂದಿವೆ . ಮಾಜಿ ಶಾಸಕರಾದ ಉಮಾಶ್ರೀ ಅವರ ಆಡಳಿತದಲ್ಲಿ ಜಲಜೀವನದ ಯೋಜನೆಯ ಮಂಜೂರು ಆದಂತಹ , ಕುಡಿಯುವ ನೀರು ಇವತ್ತಿನವರೆಗೂ ಆ ಯೋಜನೆಯನ್ನು ಪೂರ್ಣಗೊಳಿಸುವದಲ್ಲಿ ಈಗ ಇರುವಂತಹ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ . ಇದಲ್ಲದೆ ಮಹೇಶ್ ವಾಡಗಿಯ ಕೃಷ್ಣಾ ನದಿಯ ಸೇತುವೆಯ ಯೋಜನೆ 2018 ರಲ್ಲಿ 30 ಕೋಟಿ 26 ಲಕ್ಷ ಮಂಜೂರು ವಾಗಿದ್ದು , ಆ ಯೋಜನೆಯು 5 ವರ್ಷ ಕಳೆದರೂ ಕೂಡ ನೆನೆಗುದಿಗೆ ಬಿದ್ದಿದೆ .ಈಗಿರುವ ಶಾಸಕರ ಕಿರಿಕಿರಿಗು ,ಅವ್ಯವಸ್ಥೆಗೊ ಅಲ್ಲಿರುವಂತ ಗುತ್ತಿಗೆದಾರ ಗೆಲುವು ದಿನಗಳ ಹಿಂದೆ , ಎಲ್ಲ ಕಬ್ಬಿನ ಸಲಕರಣೆಗಳನ್ನು ಹೇರಿಕೊಂಡು ಬೇರೆ ಕಡೆಗೆ ಪಲಾಯನ ಮಾಡಿದ್ದಾರೆ . ಏಕೆಂದರೆ ಜನರಿಗೆ ಬೇಕಾಗಿರುವ ಅಭಿವೃದ್ಧಿಯ ಕೆಲಸ , ಶಾಸಕರಿಗೆ ಬೇಕಾಗಿರುವುದು ಕೇವಲ ಕಮಿಷನ್ , ಮಾಜಿ ಶಾಸಕರಿಗೆ ಕೂಡ ಬೇಕಾಗಿರುವುದೇ ಕಮಿಷನ್ , ಇವರಿಬ್ಬರೂ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು .
ಈ ಸಂದರ್ಭದಲ್ಲಿ ಬಾಗಲಕೋಟ್ ಜಿಲ್ಲಾ ವೀಕ್ಷಕರಾಗಿ ರೋಹನ್ ಐನಾಪುರ್ , ತೆರೆದಾಳ್ ಮತ ಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ , ಹಾಗೂ ನಗರ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು ,ಜಿಲ್ಲೆಯ ಎಲ್ಲಾ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು .
ವರದಿ : ಮಹಿಬೂಬ್ ಬಾರಿಗಡ್ಡಿ
No comments:
Post a Comment