*ರಬಕವಿ ಬನಹಟ್ಟಿ:*
ರಬಕವಿ ಬನಹಟ್ಟಿ
ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗುವಂಥ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ .
ಬನಹಟ್ಟಿ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಬಸ್ ನಿಲ್ದಾಣ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ಮಧ್ಯ ಮುಖ್ಯರಸ್ತೆಯಲ್ಲಿ ಹಾಗೂ ಜನಬೀಡ ಪ್ರದೇಶದಲ್ಲಿ ,ಒಳಚರಂಡಿ ಕುಸಿದು ಹೋಗಿ ಗುಂಡಿಯು ನಿರ್ಮಾಣವಾಗಿದ್ದರಿಂದ ,
ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ . ಈಗಾಗಲೇ ಕೆಲವು ಜನ ಈ ಗುಂಡಿಯಲ್ಲಿ ಬಿದ್ದು ತಲೆ ಒಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷ ಧರಿಸಿಗಳು ಅಳಲು ತೋಡಿಕೊಂಡಿದ್ದಾರೆ . ನಗರದ ಬಸ್ ನಿಲ್ದಾಣ
ಹತ್ತಿರ ಪಶುವೈದ್ಯಕೀಯ ಆಸ್ಪತ್ರೆ ಮುಂದೇನೆ ಗುಂಡಿಯು ಇರುವುದರಿಂದ ಪಶು ವೈದ್ಯಕೀಯ ಆಸ್ಪತ್ರೆಯವರು ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಏನು ಪ್ರಯೋಜನವಾಗಲಿಲ್ಲ
ಸಾರ್ವಜನಿಕರಿಗೆ ತೊಂದರೆ ಆಗುವಂತ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳು ಸ್ಪಂದಿಸಿದಿದ್ದರೆ ,ಗಣನೆಗೆ ತೆಗೆದುಕೊಳ್ಳದಿದ್ದರೆ , ಈ ಒಳ ಚರಂಡಿಯ ಗುಂಡಿಯಲ್ಲಿ ಸಾರ್ವಜನಿಕರು ಬಿದ್ದು ಅನಾಹುತ ಗೊಂಡರೆ ,
ಸ್ಥಳೀಯ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ರಬಕವಿ ಬನಹಟ್ಟಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ಎಚ್ಚರಿಕೆಯನ್ನು ನೀಡಿದರು .
ಇದೇ ಸಂದರ್ಭದಲ್ಲಿ ಕೂಡ ಅಂಬೇಡ್ಕರ್ ಸೇನೆಯ ನಗರ ಘಟಕದ ಅಧ್ಯಕ್ಷ ಕಲ್ಲಪ್ಪ ಸಿಂಗೆ ಅವರು ಕೂಡಲೇ ಜನಬೀಡ ಪ್ರದೇಶದಲ್ಲಿ ಒಳಚರಂಡಿಯ ಗುಂಡಿಯ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಮ್ಮ ಸಂಘಟನೆಯು ನಗರಸಭೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು .
ವರದಿ :
ಮಹಬೂಬ್ ಎಂ ಬಾರಿಗಡ್ಡಿ
No comments:
Post a Comment