*ರಬಕವಿ ಬನಹಟ್ಟಿ :*
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಮೊದಲ ಬಾರಿಗೆ ವ್ಯಸನ ಮುಕ್ತ
ಕಾರ್ಯಕ್ರಮವನ್ನು ನಗರದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು .
ನಂತರ ನಗರದ ಬೀದಿಗಳಲ್ಲಿ
ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ , ಜಾಥಾ ಮಾಡುವ ಮೂಲಕ , ನಮ್ಮ ದೇಶ ನಮ್ಮ ಗ್ರಾಮ ವ್ಯಸನ ಮುಕ್ತವಾಗಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಹಿಂದಿನ ಕಾಲದಲ್ಲಿ ಜನರು ಹೋಟೆಲ್ ಗಳಿಗೆ ಹೋಗಿ ಚಹಾ ಸೇವಿಸೋಕೆ ಹಿಂದೇಟು ಹಾಕುತ್ತಿದ್ದರು.
ಆದರೆ ಈಗಿನ ಜನ ನಿರ್ಭಯವಾಗಿ ಬಾರ.ಗೆ ತೆರಳಿ ರಾಜಾರೋಷವಾಗಿ ಸಾರಾಯಿ ಕುಡಿಯುವುದು ಹಾಗೂ ಧೂಮಪಾನ ಮಾಡುವ ಮೂಲಕ ದುಷ್ಟ ಚಟಗಳಿಗೆ ಬಲಿಯಾಗಿ , ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಮುಂದೆ ನೀವು ಹಾಗೆ ಆಗಬೇಡಿ ಒಳ್ಳೆ ವಿದ್ಯಾರ್ಥಿಗಳಾಗಿ ದೇಶಕ್ಕೆ ಒಳ್ಳೆ ಪ್ರಜೆಗಳಾಗಿ ದುಷ್ಟ ಚಟಗಳಿಗೆ ದಾಸರಾಗದೆ ಒಳ್ಳೆಯತನದಿಂದ ಬಾಳಿ ಬದುಕಿ ಎಂದು ಗುರು ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ¹
ಪರಮಪೂಜ್ಯ ಗುರುಸಿದ್ದೇಶ್ವರ ಮಹಾಸ್ವಾಮೀಜಿಗಳು ಬ್ರಹ್ಮಾನಂದ ಮಠ ರಬಕವಿ.
ಎಸ್ ಎಲ್ ಕಾಗಿ ಗ್ರೇಡ್2 ತಹಶೀಲ್ದಾರ್
ಶ್ರೀಕಾಂತ್ ಮಾಯಣ್ಣವರ್,
ಸಿದ್ದಪ್ಪ ಮೆಣಿ,
ಸಂಯೋಜಕರಾದ ಶ್ರೀಶೈಲ್ ಬುರ್ಲಿ ,
ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು .
ವರದಿ :
ಮಹಿಬೂಬ್ ಎಂ ಬಾರಿಗಡ್ಡಿ
No comments:
Post a Comment