Monday, March 4, 2024

ಅಂಜುಮನ್ ಹಾಗೂ ಜಮಿಯತೆ ಉಲೇಮ ಹಿಂದ್ ಇವರ ಸಂಯುಕ್ತ ಆಶ್ರಯದಲ್ಲಿ ವೋಟರ್ ಐಡಿ ಹಾಗೂ ತಿದ್ದುಪಡಿ ಸೇವೆ :



 ಬಾಗಲಕೋಟೆ / 

ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಮಿಎತ್ ಹಾಗೂ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ಜಂಟಿ ಅಂಜುಮನ್ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವೋಟರ್ ಐಡಿ ಹಾಗೂ ಅದರ ತಿದ್ದುಪಡಿಯ ಸೇವೆ ಕಳೆದ 30 ದಿನಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ . 


 ಈ ಸಂದರ್ಭದಲ್ಲಿ ಪತ್ರಕರ್ತ ಮಾಧ್ಯಮದೊಂದಿಗೆ ಮಾತನಾಡಿದ ಜಮೀಯತೆ ಉಲೆಮಾ ಹಿಂದ ತಾಲೂಕಾಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಅವರು ಪ್ರತಿಯೊಬ್ಬರೂ ಚುನಾವಣಾ ಗುರುತಿನ ಚೀಟಿ ಹೊಂದಲೇಬೇಕಾದ ಅವಶ್ಯಕತೆ ಇದೆ , ಆದ್ದರಿಂದ ಜಮ್ಯತೆ ಉಲೇಮ ಹಿಂದ ರಾಂಪುರ್ ಇದರ ಕಚೇರಿಯಲ್ಲಿ ಹಿಂದೂ ಮುಸ್ಲಿಂ ಅನ್ನದೆ ನಿರಂತರವಾಗಿ ಸೇವೆಯನ್ನು ನೀಡುತ್ತಿದ್ದು , ಆದ್ದರಿಂದ ನೀವೆಲ್ಲರೂ ಹೊಸ ಚುನಾವಣೆ ಗುರುತಿನ ಚೀಟಿ ಹಾಗೂ ತಿದ್ದುಪಡಿ ಇದ್ದಲ್ಲಿ ಕಚೇರಿಗೆ ಬಂದು ಸೇವೆಯನ್ನು ಸದ್ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು . 


 ವರದಿ : ಮಹಿಬೂಬ್ ಎಂ ಬಾರಿಗಡ್ಡಿ 

No comments:

Post a Comment