Sunday, January 12, 2025

ಕೌನ್ ಬನೇಗಾ ಕರೋಡ್​ಪತಿಯಲ್ಲಿ 50 ಲಕ್ಷ ಗೆಲವು ಪಡೆದ ಮಹಾಲಿಂಗಪುರದ ಬಡ ಯುವಕ ರಮಜಾನ್ ಪೀರಜಾದೆ :

ಕೌನ್ ಬನೇಗಾ ಕರೋಡ್​ಪತಿಯಲ್ಲಿ 50 ಲಕ್ಷ ಗೆಲವು ಪಡೆದ ಮಹಾಲಿಂಗಪುರದ ಬಡ ಯುವಕ ರಮಜಾನ್ ಪೀರಜಾದೆ : 

 ಬಾಗಲಕೋಟೆ /ರಬಕವಿ- ಬನಹಟ್ಟಿ 


 ಶಿಕ್ಷಣವೇ ಎಲ್ಲದಕ್ಕಿಂತಲೂ 
ಮಿಗಿಲಾದ ಶ್ರೀಮಂತಿಕೆ ಎಂಬ ಹಳೆ ಮಾತಿದೆ. ಕೇವಲ ಶಿಕ್ಷಣದ ಜ್ಞಾನದಿಂದಲೇ ಬಡ ಕಾರ್ಮಿಕನ ಮಗನೊಬ್ಬ ಈಗ ಕರೋಡ್ಪತಿ ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಗೆದ್ದು ಬಂದಿದ್ದಾನೆ . . ಬಡ ವೆಲ್ಡರ್ ಕಾರ್ಮಿಕನ ಮಗನೊಬ್ಬ ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ.

ಅಷ್ಟಕ್ಕೂ ಈ ಯುವಕ ಬೇರೆ ರಾಜ್ಯದವನಲ್ಲ. ನಮ್ಮದೇ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯ ಮಹಾಲಿಂಗಪುರ ಪಟ್ಟಣದವನು ವನು.

ಬಾಗಲಕೋಟೆಯ ರಬಕವಿ -ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮಜಾನ್ ಮಲಿಕ್ ಸಾಬ್ ಫೀರಜಾದೆ , ಸೋನಿ ಹಿಂದಿ ವಾಹಿನಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಬಲು ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಭಾಗಿಯಾಗಿದ್ದ,  

ಕಾರ್ಯಕ್ರಮದ ಕೊನೆ ಹಂತದ ವರೆಗೆ ತಲುಪಿದ ರಮಜಾನ್ ಅವನು ಒಂದೊಂದಾಗಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತಾ ಹೋದ ಬಡ ಯುವಕ , 50 ಲಕ್ಷ ರೂಪಾಯಿ ಗಳನ್ನು ತನ್ನ ಅದೃಷ್ಟದ ತೆಕ್ಕೆಗೆ ತೆಗೆದುಕೊಂಡಿದ್ದಾನೆ .

ಯುವಕ ರಮಜಾನ್ ಅವರ ತಂದೆ ಮಲ್ಲಿಕ್, ಮಹಾಲಿಂಗಪುರ ಪಟ್ಟಣದ ಗ್ಯಾರೇಜ್ ಒಂದರಲ್ಲಿ ವೆಲ್ಡಿಂಗ್ ಕೆಲಸಕ್ಕೆ ಇರುತ್ತಾರೆ . ರಮಜಾನ್ ಕೂಡ ತಂದೆಗೆ ಸಹಾಯ ಮಾಡುತ್ತಿದ್ದ , ಅತಿ ಬಡ ಕುಟುಂಬವಾಗಿದ್ದರಿಂದ ಕುಟುಂಬಕ್ಕೆ ಸಹಾಯ ಮಾಡಲು ಚಹಾ ಅಂಗಡಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದ , ಇದಲ್ಲದೆ ಬ್ಯಾಡ್​ಮಿಂಟನ್ ಕೋರ್ಟ್​ನ ಒಂದರಲ್ಲಿ ವಾಚ್​ಮ್ಯಾನ್ ಹೀಗೆ ಹಲವು ಸಣ್ಣಪುಟ್ಟ ಕೆಲಸ ಮಾಡುತ್ತಾ ಬಿ ಎ ಪದವಿ ಮುಗಿಸಿ ಕೊಂಡಿದ್ದ . ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕೂಡ ನಡೆಸುತ್ತಿದ್ದಾನೆ . ಹೀಗಿರುವಾಗ ಕೌನ್ ಬನೇಗಾ ಕರೋಡ್​ಪತಿಗೆ ಕಾರ್ಯಕ್ರಮಕ್ಕೆ ಅರ್ಜಿ ಹಾಕಿದ್ದ ರಮಜಾನ್​ಗೆ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರಕಿಸಿ ಕೊಂಡಿದ್ದನು .

ಈ ಅವಕಾಶದ ಸದುಪಯೋಗ ಪಡೆಸಿಕೊಂಡು ರಮಜಾನ್ ಜನಪ್ರಿಯವಾದ ಹಿಂದಿ ಚಾನೆಲ್ ಒಂದರಲ್ಲಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸರಿಯಾದ್ ಉತ್ತರ ನೀಡಿ , 50 ಲಕ್ಷ ರೂಪಾಯಿ ದ್ವಿತೀಯ ದರ್ಜೆಯ ಬಹುಮಾನ ರೂಪದಲ್ಲಿ ಪಡೆದಿದ್ದಾರೆ . ಇದು ಮೊದಲನೆಯ ಬಹುಮಾನ ಒಂದು ಕೋಟಿ ರೂಪಾಯಿಗಳು , ಆದರೆ ರಮಜಾನ್ ಅವನು ಆ ಕೊನೆಯ ಪ್ರಶ್ನೆಗೆ
ಉತ್ತರವನ್ನು ನೀಡಿದ್ದರೆ ಆ ಮೊದಲನೆಯ ಬಹುಮಾನ ಒಂದು ಕೋಟಿ ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದ, ಆದರೆ ಆ ಪ್ರಶ್ನೆಯ ತನ್ನ ಉತ್ತರಕ್ಕೆ ಅನುಮಾನ ವ್ಯಕ್ತಪಡಿಸಿ , ರಮ್​ಜಾನ್ ಅವನು ಆಟದಿಂದ ಹೊರಗೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ ನಂತರ , 50 ಲಕ್ಷ ರೂಪಾಯಿ ಹಣವನ್ನು ತನ್ನ ಅದೃಷ್ಟದ ತೆಕ್ಕೆಗೆ ತೆಗೆದುಕೊಂಡು ಬೀಗಿದ್ದಾನೆ . 

ಕೌನ್ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಗೆದ್ದು ಬಂದ ರಮಜಾನ್ ಸ್ವಂತ ಮಹಾಲಿಂಗಪೂರ ಪಟ್ಟಣಕ್ಕೆ ಬಂದಾಗ ಜನ ಬಾರಿ ಸ್ವಾಗತ ನೀಡಿ, ಹೂವಿನ ಮಾಲೆಯನ್ನು ಹಾಕಿ ಪಟ್ಟಣದಲ್ಲಿ ಮೆರವಣಿಗೆ ಮಾಡಿದ್ದಾರೆ .

 ವರದಿ ಮಹಿಬೂಬ್ ಎಂ ಬಾರಿಗಡ್ಡಿ

No comments:

Post a Comment