ಹಗಲದರೊಡೆಗೆ ಯತ್ನಿಸಿದ ಕಳ್ಳರಿಗೆ ಹೆಡೆಮುರಿ ಕಟ್ಟಿದ ಎಎಸ್ಐ ರಜಪೂತ್ :
ಬಾಗಲಕೋಟೆ /
ರಬಕವಿ ಬನಹಟ್ಟಿ : ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯ ರಬಕವಿಯ ಬಸವನಗರದ ಆರನೇ ಕ್ರಾಸ್ ಹತ್ತಿರ ಶಿವಾನಂದ ಕೋಲಿ ಅವರ ಮನೆಗೆ ಹಾಡು ಹಗಲಿನಲ್ಲಿ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಈ ಘಟನೆಯ ಮುಂಜಾನೆ ಶುಕ್ರವಾರ 11:00 ನಂತರ ನಡೆದಿದೆ ಎನ್ನಲಾಗಿದ್ದು, ಮಾಹಿತಿ ಬಂದ ಕೂಡಲೇ ರಬಕವಿ ಹೊರ ಠಾಣೆಯ ASI ರಜಪೂತ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಳ್ಳರು ಮನೆಯೊಳಗೆ ನುಗ್ಗಿದ ಸಂಧರ್ಭದಲ್ಲಿ ಅವರನ್ನು ಅಲ್ಲಿಯೇ ಕೂಡಿ ಹಾಕಿ ಸಾರ್ವಜನಿಕರ ಸಹಕಾರದೊಂದಿಗೆ ಇಬ್ಬರು ಕಳ್ಳರನ್ನು ಹೆಡೆಮುರಿ ಕಟ್ಟುವರಲ್ಲಿ ಯಶಸ್ವಿಯಾಗಿದ್ದಾರೆ. ನಂತರ ತೇರದಾಳ ಪಿ.ಎಸ್.ಐ ಅಪ್ಪಣ್ಣ ಐಗಳಿ ರವರಿಗೆ ಮಾಹಿತಿ ದೊರೆತ ನಂತರ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಧಾವಿಸಿ,ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಹೋಗಿ ಜೈಲಿಗಟ್ಟಿದ್ದಾರೆ .
ಆರೋಪಿಗಳಾದ ಅರ್ಜುನ್ ಗಾಡಿವಡ್ಡರ್ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದ ಎನ್ನಲಾಗಿದ್ದು ,
ಎರಡನೇ ಆರೋಪಿ ಸುನಿಲ್ ಗಾಡಿವಡ್ಡರ್ . ಶಿವಾನಂದ್ ಕೋಲಿ ಅವರ ಪತ್ನಿ ಮತ್ತು ಆಕೆ ಮಗಳನ್ನು ಮಾರಕಾಸ್ತ್ರಗಳನ್ನು ತೋರಿಸಿ , ಹೆದರಿಸಿ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ, ಬಂಗಾರದ ಒಡವೆ ಹಾಗೂ ಹಣ ದೋಚಿಕೊಂಡು ಪರಾರಿಯಾಗುತ್ತಿರುವಾಗ ಸಂದರ್ಭದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಕಳ್ಳರನ್ನು ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿಯಿಂದ ತಿಳಿದು ಬಂದಿದೆ.
ವರದಿ : ಮಹಿಬೂಬ್ ಬಾರಿಗಡ್ಡಿ


No comments:
Post a Comment