ಅನಾಥವಾದ ರಾಮಪುರ ಮುಖ್ಯರಸ್ತೆಗೆ ಎಂಟು ತಿಂಗಳ ನಂತರ ಡಾಂಬರೀಕರಣದ ಭಾಗ್ಯ :
ಬಾಗಲಕೋಟೆ/ ರಬಕವಿ ಬನಹಟ್ಟಿ :
ಅವಳಿ ನಗರಗಳು
ತಾಲೂಕ ರಚನೆಯಾಗಿ ಹಲವು ವರ್ಷಗಳು ಕಳೆದರೂ ಕೂಡ
ನಗರದ ಸೌಂದರ್ಯ ಹಾಗೂ ಅಭಿವೃದ್ಧಿ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ ,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯಿಂದ ಶ್ರೀನಿವಾಸ್ ಚಿತ್ರಮಂದಿರದರವರಿಗೆ ರಾಮಪುರದ ಮುಖ್ಯ ರಸ್ತೆಯ ಒಳಚರಂಡಿಯ ಕಾಮಗಾರಿ ಮುಗಿದು ಕೆಲವು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ ಆಗದೆ , ಹಾಗೆ ಉಳಿದುಕೊಂಡಿದ್ದು
ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿತ್ತು.
ನಗರಸಭೆ ಒಟ್ಟು ಜನಸಂಖ್ಯೆ ಲಕ್ಷಕ್ಕಿಂತ ಅಧಿಕ ಹೆಚ್ಚು ಇರುವಂತ ಪ್ರದೇಶದಲ್ಲಿ ತೆಗ್ಗು
ದಿಣ್ಣೆಗಳಿಂದ ಕೂಡಿದ ರಾಮಪುರ ಮುಖ್ಯ ರಸ್ತೆಯಲ್ಲಿ ,ಆಟೋ ಚಾಲಕರು ಹಾಗೂ ದ್ವಿಚಕ್ರ ವಾಹನದ ಸವಾರರು
ಓಡಾಡಲು ಹರಸಹಾಸ
ಪಡುತ್ತಿದ್ದರು .
ರಾಮಪುರ್ ನಗರದ ಮುಖ್ಯ ರಸ್ತೆ ನಗರಸಭೆಯ ರಸ್ತೆಯೋ ?
ಅಥವಾ ಪಿಡಬ್ಲ್ಯೂಡಿ ರಸ್ತೆಯೋ ? ಎನ್ನುವುದು
ಸಾರ್ವಜನಿಕರಲ್ಲಿ ಪ್ರಶ್ನೆಯಾಗಿ
ಕಾಡತೊಡಗಿತ್ತು . ಕೊನೆಗೆ ಅದು ಪಿಡಬ್ಲ್ಯೂಡಿ ರಸ್ತೆಯಾಗಿ ಮಾರ್ಪಟ್ಟಿದ್ದು , ಅವಳಿ ನಗರಗಳ ಹೃದಯ ಭಾಗದಲ್ಲಿರುವಂತ ಮುಖ್ಯ ರಸ್ತೆಯಲ್ಲಿ
ಆಟೋ ಚಾಲಕರ ಹಾಗೂ ದ್ವಿಚಕ್ರ ವಾಹನಗಳ ಸವಾರರ ಓಡಾಟದ ಪರಿಸ್ಥಿತಿಯನ್ನು ನೋಡಿ ಅಯ್ಯೋ ಪಾಪ ಅನಿಸುತ್ತಿತ್ತು .
ಈ ಅನಾಥವಾದ ರಸ್ತೆಯ ಸಾಕಷ್ಟು ಬಾರಿ ಸುದ್ದಿಗಳು ವೈರಲ್ ಆದ ನಂತರ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು 8 ತಿಂಗಳುಗಳಿಂದ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಿ , ಕೊನೆಗೂ ಶುಕ್ರವಾರ ಜನವರಿ 24 ರಂದು ಡಾಂಬರೀಕರಣ ಚಾಲನೆ ನೀಡಿದರು .
ಈ ಡಾಂಬರೀಕರಣ ಚಾಲನೆಯನ್ನು ನೋಡಿ ರಬಕವಿ - ಬನಹಟ್ಟಿ ನಗರದ ಅಟೋ ಚಾಲಕರಿಗೆ ಹಾಗೂ ದ್ವಿಚಕ್ರದ ವಾಹನ ಮಾಲೀಕರಿಗೆ ಸಂತೋಷ ಉಂಟು ಮಾಡಿದೆ .
ವರದಿ : ಮಹಿಬೂಬ್ ಎಂ ಬಾರಿಗಡ್ಡಿ


No comments:
Post a Comment