ಪಹಲ್ಗಾಮ್ ನಲ್ಲಿ ಅಮಾಯಕರ 28 ಜನರ ಮೇಲೆ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಮಾ ಹಿಂದ್ ಪ್ರತಿಭಟನೆ
ಬಾಗಲಕೋಟೆ / ರಬಕವಿ ಬನಹಟ್ಟಿ :
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಿಯತೆ ಉಲೆಮಾ ಹಿಂದ್ ಸಂಘಟನೆ ಹಾಗೂ ಅಂಜುಮನ್ ಸಂಘಟನೆಗಳ ಒಕ್ಕೂಟ ಇವರ ಆಶ್ರಯದಲ್ಲಿ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ ಮಾಡಿದರು .
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಈ ಘಟನೆ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ನಗರಗಳ ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಲೇಮಾ ಹಿಂದ್ ಮೌಲ್ವಿ ಸಂಘಟನೆ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು . ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಜಮೀಯತೆ ಉಲೆಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಗೋಕಾಕ್ , 28 ಜನರ ಅಮಾಯಕರ ಮೇಲೆ ದಾಳಿ ಮಾಡಿದ್ದನ್ನು ನಾವು ಖಂಡಿಸುತ್ತೇವೆ ಭಯೋತ್ಪಾದಕರಿಗೆ ಹಾಗೂ ಇಸ್ಲಾಂ ಧರ್ಮಕ್ಕೆ ಯಾವುದೇ ಸಂಬಂಧವಿರುವುದಿಲ್ಲ ನಮ್ಮ ದೇಶದ ಪ್ರಧಾನ ಮಂತ್ರಿ ಭಯೋತ್ಪಾದಕರ ನಿರ್ನಾಮಕ್ಕೆ ಪಣತೊಟ್ಟಿದ್ದಾರೆ ಇದಕ್ಕೆ ನಮ್ಮ ಸದಾ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದರು.
ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಇಂತಹ ಕ್ರೂರ ಕೃತ್ಯಗಳು ಇವರ ಧರ್ಮವಾಗಿದೆ. ನಾವು ಎಲ್ಲರೂ ಮೊದಲು ಭಾರತಿಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು, ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ನಗರಗಳ ಅಂಜುಮನ್ ಅಧ್ಯಕ್ಷರು ಸದಸ್ಯರು ಹಾಗೂ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು .
No comments:
Post a Comment