ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಮಿತಿಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಭಾವುಕತೆಗೂಡಿದ ಹಾಗೂ ವಿಜೃಂಭಣೆಯೊಂದಿಗೆ ಆಚರಿಸಲಾಯಿತು.
“ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ” ಎಂಬ ಘೋಷವಾಕ್ಯದ ಮೂಲಕ ಈ ಸಮಯದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಸರ್ವಾಧಿಕಾರ ಶಕ್ತಿಗಳ ತಾಕೀತಿಗೆ ಒಳಪಟ್ಟು, ಅದನ್ನು ಸರಿಪಡಿಸುವ ಅಗತ್ಯತೆ ಬಗ್ಗೆ ಗಮನ ಸೆಳೆಯಲಾಯಿತು.
ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ SDPI ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ, ಜಿಲ್ಲಾ ಸಮಿತಿ ಸದಸ್ಯರು ಹುಸೇನ ಜಮಾದಾರ, ಗೌಸ್ ನದಾಫ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಸ್ಲಂ ಇನಾಮದಾರ, ಮಹಾಲಿಂಗಪುರ ನಗರ ಸಮಿತಿಯ ಅಧ್ಯಕ್ಷ ಯಾಸೀನ್ ಬಳಗಾರ ಹಾಗೂ ಕಾರ್ಯದರ್ಶಿ ಮೂಸಾ ಬೂದಿಹಾಳ ಅವರುಗಳು ಉಪಸ್ಥಿತರಿದ್ದರು.
ಅದೇ ರೀತಿ ದಲಿತ ಸಮಾಜದ ಮುಖಂಡರಾದ ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಎಂ.ಡಿ. ಆನಂದ್, ರಘು ಆಸಿಪ್ಪನವರ, ಪುಂಡಲೀಕ ಮೇತ್ರಿ, ದುರಗಪ್ಪ ಕಿರಿಕಿರಿ, ಅಭಿನಂದನ ಮುಖ್ಯನವರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
No comments:
Post a Comment