Wednesday, April 9, 2025

ನಗರಸಭೆ ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು :

ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು : 

 ಬಾಗಲಕೋಟೆ / 
ರಬಕವಿ - ಬನಹಟ್ಟಿ : ತಾಲೂಕಿನ ಬನಹಟ್ಟಿ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ 5 ಮತ್ತು 6 ನೇ ವಾರ್ಡಿನ ಮಲ್ಲಿಕಾರ್ಜುನ ಚಿತ್ರಮಂದಿರ ವನ್ನು ತೆರವುಗೊಳಿಸಿದ ನಂತರ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ರಬಕವಿ-ಬನಹಟ್ಟಿ ನಗರಸಭೆಯ ನಗರದ ವಾರ್ಡ ನಂ. 5 ಮತ್ತು 6 ರಲ್ಲಿ ಗಾಂಧಿಚೌಕ ಹತ್ತಿರ ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಈಗಾಗಲೇ 8 ಪೂಟ ಅಗಲದ 200 ಪೂಟ ಉದ್ದದ ರಸ್ತೆ ಇದ್ದು, ಇದು ಬಹಳ ಚಿಕ್ಕದಾಗಿದ್ದು, ಇದನ್ನು ಈಗ ಅಗಲೀಕರಣ ಮಾಡುವುದು ತುಂಬಾ ಅವಶ್ಯಕವಾಗಿದೆ ಏಕೆಂದರೆ ಇಲ್ಲಿ ಪ್ರತಿ ದಿನ ಕಾಯಿಫಲೈ ವ್ಯಾಪಾರ ನಡೆಯುವುದರಿಂದ ಜನ ಸಂದನಿ ಹೆಚ್ಚಾಗಿರುತ್ತದೆ. ಆದರಿಂದ ಇಲ್ಲಿ ಹಾಯ್ದಾಡಲು ವಯೋವೃದ್ಧರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಅಷ್ಟೆ ಅಲ್ಲದೆ ಈ ಸಮಯದಲ್ಲಿ ದ್ವಿಚಕ್ರ ವಾಹನಗಳೂ ಚಲಾಯಿಸಲು ಆಗುವುದಿಲ್ಲ. ಆದರಿಂದ ದಿನ ನಿತ್ಯ ಜಗಳ ವಾಗ್ವಾದ ನಡೆಯುವುದು ಸಹಜವಾಗಿದೆ 
ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಸದರಿ ರಸ್ತೆಯನ್ನು 20 ಪೂಟ ಅಗಲ ಮತ್ತು 200 ಪೂಟ ಉದ್ದದವರೆಗೆ ಅಗಲೀಕರಣ ಮಾಡಿ ಎಲ್ಲ ಸಾರ್ವಜನಿಕರ ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಎಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಬನಹಟ್ಟಿ ಅಲ್ಪಸಂಖ್ಯಾತ ಕೋಆಪರೇಟ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಇರ್ಷಾದ್ ಮೋಮಿನ್ , ಇಸುಫ್ ಮುಧೋಳ್ , ಮಲ್ಲಿಕ ಸಾಬ್ ಮುಲ್ಲಾ, ಶಿರಾ ಸಾಬ್ ಮಳಲಿ , ಜಿನ್ನಾ ಮಳಲಿ , ಮೈನು ಮಳಲಿ ಬಂದೆ ನಮಾಜ್ ಡಾಂಗೆ , ಆಸಿಫ್ ಕಡ್ಲಿಮಟ್ಟಿ , ಉಪಸ್ಥಿತರಿದ್ದರು .

No comments:

Post a Comment