ಈಗಿನ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಾಗಲಿ ಮತ್ತು ಬೇರೆ ಇಲಾಖೆ ಅಧಿಕಾರಿಗಳ ಆಗಲಿ ಅವರಿಗೆ ಪತ್ರಕರ್ತರಂದರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇರುತ್ತದೆ ಏಕೆಂದರೆ ತಾವು ಸರ್ಕಾರಿ ಹುದ್ದೆಯಲ್ಲಿ ಇರುವಾಗ ಪತ್ರಕರ್ತರು ಯಾವುದೇ ವಿಡಿಯೋ ಆಗಲಿ ಫೋಟೋಸ್ ಆಗಲಿ ತೆಗೆದುಬಿಟ್ಟು ಪ್ರಿಂಟ್ ಮೀಡಿಯಾದಲ್ಲಾಗಲಿ ಎಲೆಕ್ಟ್ರಿಕ್ ಮೀಡಿಯಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಾಗಲಿ ಸುದ್ದಿಗಳನ್ನು ಮಾಡಿದರೆ , ನಮ್ಮ ಹುದ್ದೆಗೆ ಕಳಂಕ ತರಬಹುದು ಏನೋ ಅನ್ನುವಂತ ಭಯ ಇದ್ದೇ ಇರುತ್ತದೆ . ಆದರೆ ಇಲ್ಲೊಬ್ಬ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಹಾರೂಗೇರಿ ಕ್ರಾಸ್ ಹತ್ತಿರ ಕೆಲವು ಪೊಲೀಸ್ ಸಿಬ್ಬಂದಿ ಜೊತೆ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ , ಎಲ್ಲ ದ್ವಿ ಚಕ್ರ ವಾಹನದ ಸವಾರರಿಗೆ ಹಾಗೂ ನಾಲ್ಕು ಚಕ್ರದ ಸವಾರರಿಗೆ ಕೂಡ ವಾಹನದ ಕಾಗದ ಪತ್ರಗಳನ್ನು ತಪಾಸಣೆ ಮಾಡಿ ದಂಡವನ್ನು ವಿಧಿಸುತ್ತಿದ್ದರು . ಅದೇ ರಾಜ್ಯ ಹೆದ್ದಾರಿ ಬನಹಟ್ಟಿಯಿಂದ ಚಿಂಚಲಿ ಪಟ್ಟಣಕ್ಕೆ ಮದುವೆಗೆ ಎಂದು ಹೋಗುತ್ತಿರುವ ನಿಷ್ಠಾವಂತ ಪತ್ರಕರ್ತ ಅವರ ಸ್ಕೂಟಿಯನ್ನು ಸೈಡ್ ಹಾಕಿದರು ಪತ್ರಕರ್ತರಿಗೆ ಒಂದು ಧೈರ್ಯ ಇದ್ದೇ ಇರುತ್ತದೆ ಏನೆಂದರೆ ಪತ್ರಕರ್ತರ ಹತ್ತಿರ ಗುರುತಿನ ಐಡಿ ಕಾರ್ಡ್ ತೋರಿಸಿದರೆ ಸಾಕು ಪೊಲೀಸರು ಬಿಟ್ಟೆ ಬಿಡುತ್ತಾರೆ ಅಂತ ನಂಬಿಕೆ ಆದರೆ , ಅದು ಹಾಗೆ ಆಗಲಿಲ್ಲ . ಆದ್ದರಿಂದ ಠಾಣಾಧಿಕಾರಿ ಹತ್ತಿರ ಹೋಗಿ ಸರ್ ನಾನು ಪತ್ರಕರ್ತ ಮಹಿಬೂಬ ಬಾರಿಗಡ್ಡಿ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡಾಗ , ಠಾಣಾಧಿಕಾರಿ ಉಪ್ಪಾರ ರವರು ನೀವೇ ನಾಲ್ಕು ಜನಕ್ಕೆ ಒಳ್ಳೆಯ ಮಾತುಗಳು ಹೇಳುವವರೇ ನೀವೇ ನಿಮ್ಮ ಸೇಫ್ಟಿಯ ಸಲುವಾಗಿ ಹೆಲ್ಮೆಟ್ ಹಾಕಿಲ್ಲ ಅಂತ ತಿಳಿ ಹೇಳಿದರು . ನಾವು ನಿಮ್ಮ ಸಲುವಾಗಿ ಒಳ್ಳೆಯದನ್ನು ಬಯಸುತ್ತೇವೆ ಅಂತ ಹೇಳಿ ಪತ್ರಕರ್ತರ ಸ್ಕೂಟಿ ಹತ್ತಿರ ಬಂದು ಗಾಡಿ ನಂಬರ್, ಮೊಬೈಲ್ ನಂಬರ್ , ಕೇಳಿ ಆನ್ ಲೈನ್ 500 ಪಾವತಿ ಮಾಡಿಬಿಟ್ಟರು. ಎಷ್ಟು ಕೇಳಿಕೊಂಡರು ಖಡಕ್ ಠಾಣಾ ಧಿಕಾರಿ ಗಿರಿ ಉಪ್ಪಾರ್ ಅವರು ಒಳ್ಳೆಯ ಮಾತುಗಳನ್ನೇ ಆಡಿದರು.
ಹಾರೋಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಮೂಲತ : ಬನಹಟ್ಟಿ ನಗರದವರು ಅಂತ ನನಗೆ ಮೊದಲೇ ಗೊತ್ತಿದ್ರೂ ಠಾಣಾ ಅಧಿಕಾರಿ ಉಪ್ಪಾರ್ , ನಾನು ಕೂಡ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡರು , ಠಾಣಾಧಿಕಾರಿ ಹಾಗೂ ಪತ್ರಕರ್ತರು ಒಂದೇ ಊರಿನವರು ಅಂತ ಪತ್ರಕರ್ತರಿಗೆ ಹೆಲ್ಮೆಟ್ ಇಲ್ಲದೆ , ಬಿಡಬೇಕಾಗಿತ್ತು ,
ಆದರೆ ನಿಷ್ಠಾವಂತ ಖಡಕ್ ಠಾಣಾಧಿಕಾರಿ ತಮ್ಮ ಹುದ್ದೆಯ ಕೆಲಸವು ಸಂಪೂರ್ಣವಾಗಿ ನಿಭಾಯಿಸಿದರು .
ಇದೇ ರೀತಿಯಾಗಿ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ , ತಾವುಗಳು ಹಾರೂಗೇರಿ ಪಟ್ಟಣದ ಹಾಗೂ ನೆರೆಯ ಹಳಿಗಳಲ್ಲಿ ಅನೈತಿಕ ಚಟುವಟಿಕೆಯನ್ನು ಬಹಳಷ್ಟು ನಡೆಯುತ್ತಿರುತ್ತದೆ , ಇಟ್ಟಂಗಿ ಭಟ್ಟಿ ಗಳ ಹತ್ತಿರ ಪಾನ್ ಶಾಪ್ಗಳಲ್ಲಿ ಸರಾಯಿ , ಮಾವಾ, ಮಟಕಾ, ಅನ್ನಭಾಗ್ಯ ಖದೀಮರು , ಅನೈತಿಕ ಮರಳುಗಾರಿಕೆ ಇನ್ನು ಹತ್ತು ಹಲವಾರು ಅನೈತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ ಇದಕ್ಕೆ ನೀವು ಕಡಿವಾಣ ಹಾಕಿದರೆ ಮಾತ್ರ ಹೆಲ್ಮೆಟ್ ಇಲ್ಲದೆ ನಿಷ್ಠಾವಂತ ಪತ್ರಕರ್ತರಿಗೆ ದಂಡ ಕಟ್ಟಿದ 500 ಬೆಲೆ ಬರುತ್ತದೆ ಅನ್ನುವುದು ನನ್ನ ನಂಬಿಕೆ .
ಯಾರೇ ಆಗಲಿ , ಪತ್ರಕರ್ತರ ಆಗಲಿ ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ . ನಾವು ಯಾವುದೇ ಕಡೆ ಬೈಕ್ ಪ್ರಯಾಣ ಬೆಳೆಸಿದರೆ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಲೇಬೇಕು .
ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಒಬ್ಬ ಪತ್ರಕರ್ತರ ಜೊತೆ ಹೇಗೆ ವರ್ತಿಸಬೇಕು , ಹೇಗೆ ಮಾತನಾಡಬೇಕು ಅನ್ನುವುದನ್ನು , ಅವರ ಮಾತಿನ ದಾಟಿಯಿಂದಲೇ ಅವರೊಬ್ಬ ನಿಷ್ಠಾವಂತ ಖಡಕ್ ಅಧಿಕಾರಿ ಎಂದು ಗೊತ್ತಾಗುತ್ತದೆ . ಇಂತಹ ನಿಷ್ಠಾವಂತ ಖಡಕ್ ಅಧಿಕಾರಿ ನಮ್ಮ ಬನಹಟ್ಟಿ ನಗರದವರು ಇಂತಹ ಪೊಲೀಸ್ ಠಾಣಾಧಿಕಾರಿಯಾಗಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದು ಪತ್ರಕರ್ತ ಮೆಚ್ಚಿಕೊಂಡರು .
ಲೇಖನ :
ಮಹೆಬೂಬ್ ಬಾರಿಗಡ್ಡಿ ರಬಕವಿ ಬನಹಟ್ಟಿ ತಾಲೂಕ ವರದಿಗಾರರು ಹಾಗೂ ಲೇಖಕರು