KALAAM EXPRESS NEWS
ವರದಿ ಮಹಿಬೂಬ್ ಬಾರಿಗಡ್ಡಿ
ದೇಶದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ಖಂಡಿಸಿ, ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದಲ್ಲಿ ರ್ಯಾಲಿ ಮೂಲಕ ಭಾರಿ ಪ್ರತಿಭಟನೆ ಮಾಡಿದರು .
ಈ ಪ್ರತಿಭಟನೆಯ ರ್ಯಾಲಿಯು ನಗರದ ,, ಬಸ್ ನಿಲ್ದಾಣದ ಹತ್ತಿರ ಗಣಪತಿ ದೇವಾಲಯದಿಂದ ಚಾಲನೆಗೊಂಡು ,ನಗರದ ಕಿತ್ತೂರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಗಾಂಧಿ ಸರ್ಕಲ್ ಪುರಸಭೆವರೆಗೆ ಘೋಷಣೆಗಳ ಮೂಲಕ ಭಾರಿ ಪ್ರತಿಭಟನೆ ನಡೆಸಿ ,ನಂತರ ಪುರಸಭೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು .
ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಲ್ಪಸಂಖ್ಯಾತರ ಮುಖಂಡ ಜಾವೇದ್ ಭಾಗವಾನ್ ಮಾತನಾಡಿದರು .
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಮನಪ್ಪ ಗುಣದಾಳ ನಗರದ ಅಲ್ಪಸಂಖ್ಯಾತರ ಮುಖಂಡರಾದ ಜಾವೇದ್ ಭಗವಾನ್ ಪರಶುರಾಮ್ ಮೇತ್ರಿ , ಮುಬಾರಕ್ ಅಲ್ಲಾಖಾನ್ ,ಸಿಂಹ ಮೇತ್ರಿ ,ಭೀಮ್ ಆರ್ಮಿಯ ಮುಖಂಡರು ಲವಿತ್ ಮೇತ್ರಿ ಸಂಜು ಕಂಬಾಗಿ ,ಡಿಎಸ್ಎಸ್ ಹರಿಜನ್ ಮುಖಂಡರಾದ ಸುನಿಲ್ ಹರಿಜನ್ ,ಅರ್ಜುನ್ ದೊಡ್ಮನಿ , ಭೀಮ್ಸಿ ಮಾವಿನ ಹಿಂದಿ ಬಸು ಮಾವಿನಹಿಂದಿ ,ಸಿರಾಜುದ್ದೀನ್ ಮುಜಾವರ ,ಯಾಸೀನ್ ಬಳಗಾರ , ಯುನುಸ್ ಬೀಳಗಿ , ಇನ್ನೂ ಹಲವಾರು ಮುಖಂಡರು ಭಾಗಿಯಾಗಿದ್ದರು .
No comments:
Post a Comment