ವರದಿ ಮಹಿಬೂಬ್ ಬಾರಿಗಡ್ಡಿ
ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ಮಹಾಲಿಂಗಪುರ್ ಹಾಗೂ ತೇರದಾಳ ನಗರಗಳಲ್ಲಿ ಗಣೇಶ್ ಪ್ರತಿಷ್ಠಾಪನೆ ಹಾಗೂ ಅವುಗಳ ವಿಸರ್ಜನೆ ಮಾಡುವುದು ಕುರಿತು ,ಬನಹಟ್ಟಿ ನಗರ ಪೊಲೀಸ್ ಠಾಣೆಯಲ್ಲಿ ಸರ್ವಧರ್ಮ ಶಾಂತಿಪಾಲನಾ ಸಭೆ ನಡೆಯಿತು .
ಈ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ್ ಗುಡಿಮನಿ ,ಸರ್ಕಾರದ ಸುತ್ತೋಲೆಯಂತೆ ಗರಿಷ್ಠ ಐದು ಅಡಿ ಎತ್ತರದ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಇದಕ್ಕಿಂತ ಹೆಚ್ಚು ಅಡಿ ಪ್ರತಿಷ್ಠಾಪನೆ ಮಾಡುವುದು ಸರ್ಕಾರ ನಿರ್ಬಂಧನೆ ಮಾಡಲಾಗಿದೆ ಹಾಗೂ ಮಣ್ಣಿನ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಪ್ಲಾಸ್ಟರ್ ನಲ್ಲಿ ಮಾಡಿದಂತ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದರು .
ಕಂದಾಯ ಇಲಾಖೆ ,ಪೊಲೀಸ್ ಇಲಾಖೆ ,ವಿದ್ಯುತ್ ಇಲಾಖೆ, ನಗರಸಭೆ ಇಲಾಖೆ , ಫೈಯರ್ ಗ್ರೇಡ್ ಇಲಾಖೆ , 5 ಇಲಾಖೆ ಅಧಿಕಾರಿಗಳ ತಂಡ ಏಕಗವಾಕ್ಷಿ ಪದ್ಧತಿ ರೂಪದಲ್ಲಿ ಅತಿ ಶೀಘ್ರವಾಗಿ ಪ್ರತಿಷ್ಠಾಪನೆಯ ಪರವಾನಿಗೆಯನ್ನು ಕೊಡತಕ್ಕಂಥ ವ್ಯವಸ್ಥೆಯನ್ನು ಸರ್ಕಾರದ ಆದೇಶದಂತೆ ನಾವು ಈಗಾಗಲೇ ಚಾಲನೆ ಮಾಡಿದ್ದೇವೆ ಎಂದು ಹೇಳಿದರು .
ಈ ಶಾಂತಿಪಾಲನೆ ಸಭೆಯಲ್ಲಿಮಾತನಾಡಿದ ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ವೀರೇಶ್ ಮಠಪತಿ ,ವಿಸರ್ಜನೆ ಸಲುವಾಗಿ ಕೊಟ್ಟಿರುವಂತಹ ಮಾರ್ಗದಲ್ಲಿ ಯಾವುದೇ ಕೂಡ ವ್ಯತ್ಯಾಸ ಆಗಬಾರದು ,ಎಲ್ಲ ಗಣೇಶ ಪ್ರತಿಷ್ಠಾಪನ ಮಂಡಳಿಗಳು ಆದೇಶ ಪಾಲನೆ ಮಾಡಬೇಕು. ರಾತ್ರಿ 12 ಗಂಟೆಯವರೆಗೆ ವಿಸರ್ಜನೆ ಮಾಡಲಿಕ್ಕೆ ಸಮಯ ಕೊಡಬೇಕು ,ಎಂದು ಕೇಳಿದ ಗಣೇಶ ಪ್ರತಿಷ್ಠಾಪನ ಮಂಡಳಿಗಳಿಗೆ ಉತ್ತರಿಸಿದ ,ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಿ ಮಾಡಿರುವಂತಹ ಅಲಂಕಾರಗಳನ್ನು ನೋಡಲಿಕ್ಕೆ ಸಾರ್ವಜನಿಕರಿಗೆ , ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಹಾಗೂ ಮಕ್ಕಳಿಗೆ ನೋಡುವಂತ ವ್ಯವಸ್ಥೆ ಆಗಬೇಕು , ಆದರೆ ವಿಸರ್ಜನೆ ಹೆಚ್ಚು ಸಮಯ ತೆಗೆದುಕೊಂಡರೆ ,ಆಯಾ ಪ್ರತಿಷ್ಠಾಪನ ಮಂಡಳಿಗಳೇ , 100 , 150 ಜನ ಕೇವಲ ತೆಗೆದುಕೊಂಡು ಹೋಗಬೇಕಾಗುತ್ತದೆ ,ಎಂದು ಉತ್ತರಿಸಿದರು .
No comments:
Post a Comment