*ಈದ್ ಮಿಲಾದ್ ಪ್ರಯುಕ್ತ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ*
ಮುಧೋಳ : ಬಾಗಲಕೋಟ ಜಿಲ್ಲೆಯ ಮುಧೋಳ ನಗರದ ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ವತಿಯಿಂದ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಕೊಡುವುದರ ಮೂಲಕ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಿದರು .
ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ಮುದೋಳ ನಗರದಲ್ಲಿ ಒಂದಿಲ್ಲ ಒಂದು ಸಾಮಾಜಿಕ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ಜನತೆಯ ಮನಸ್ಸು ಗೆದ್ದಿದ್ದಾರೆ .
ಈ ಕಾರ್ಯಕ್ರಮದ ಸಂದರ್ಭದಲ್ಲಿ ದಸರಾ ಕ್ರೀಡಾ ಕಾರ್ಯಕ್ರಮದಲ್ಲಿ ಕುಸ್ತಿ ವಿಜೇತ ಕ್ರೀಡಾಪಟು ಪ್ರತೀಕ್ಷಾ ಸೈದು ಬೋವಿ ಅವರನ್ನು ಸನ್ಮಾನ ಮಾಡಲಾಯಿತು .
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಂಜು ಮಾನೆ , ಸೈದುಸಾಬ ಬೋವಿ ,ಹುಸೇನ್ ಸಾಬ್ ಪಡಕೆ ,ನಗರದ ಭೀಮ್ ಆರ್ಮಿಯ ಅಧ್ಯಕ್ಷ ಲವಿತ್ ಮೇತ್ರಿ ,ಅನಿಲ್ ಬರ್ಗಿ ,ನಗರಸಭೆ ಸದಸ್ಯರಾದ ರಾಜು ಬೇಪಾರಿ ,ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ರುವಾರಿ ಶಫೀಕ್ M ಬೇಪಾರಿ ,ರಾಜು ಬೇಪಾರಿ, ರಾಶಿದ್ ಪಟಾನ್ ,ಗೌಸ ಸುರ್ನಾಸಿ ,ಹಾಗೂ ಇನ್ನುಳಿದ ಮುಖಂಡರು ಹಾಜರಿದ್ದರು .
ಕಲಾಮ್ ಎಕ್ಸ್ ಪ್ರೈಸ್ ನ್ಯೂಸ್
ರಬಕವಿ ಬನಹಟ್ಟಿ .
No comments:
Post a Comment