ಮೀಸಲಾತಿಗೆ ಆಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟದ ಅಖಾಡಕ್ಕಿಳಿದ ಕರ್ನಾಟಕ ಮುಸ್ಲಿಮ್ ಯೂನಿಟಿ.
ಕಾಲಾಂತರದಿಂದ ಶೇ 4% ಇದ್ದ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ಹಾಗೂ2ಬಿ ಬದಲಾದ ಆರ್ಥಿಕ ಸಾಮಾಜಿಕ ಸ್ಥರವನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರಿಗೆ ಶೇ 4%ರ ಮೀಸಲಾತಿಯನ್ನು ಶೇ 8% ಹೆಚ್ಚಿಸಲು ಕರ್ನಾಟಕ ಮುಸ್ಲಿಮ್ ಯೂನಿಟಿಯು ಸದಾ ಆಗ್ರಹ ಪಡಿಸುವಲ್ಲಿ ಮುಂಚೂಣಿಯಲ್ಲಿತ್ತು ಅದರ ಮುಂದುವರೆದ ಭಾಗವಾಗಿ ಈಗ ಸಂಪೂರ್ಣ ಅಖಾಡಕ್ಕಿಲಿದು ಇಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತನ್ನ ಮನವಿಯನ್ನು ಸಲ್ಲಿಸಿದೆ.
ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯ ಸಂಚಾಲಕ ಜನಾಬ ಅಬ್ದುಲ್ ಜಬ್ಬಾರ ಕಲಬುರಗಿಯವರ ನೇತ್ರತ್ವದಲ್ಲಿ ಚಿಂತಕರು, ಹಿರಿಯ ಸಾಹಿತಿಗಳಾದ ಬಿ ಎಂ ಹನೀಫ್, ಜಿಲ್ಲಾ ವಕ್ಫ ಅಧ್ಯಕ್ಷರಾದ ಮೆಹಬೂಬ್ ಸರ್ಕಾವಸ, ಯೂನೂಸ ಮೌಲಾನಾ, ರಿಯಾಜ್ ಮುಲ್ಲಾ, ಅಲ್ತಾಫ ಕಲಬುರಗಿ, ನಜೀರ ಹರಕಾರಿಯವರು ಜೊತೆಯಾಗಿ ಹೋರಾಟಕ್ಕೆ ಕೈ ಬಲಪಡಿಸಿದರು
No comments:
Post a Comment