Wednesday, November 16, 2022

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಾರೋನ ರಶೀದ್ ಸಾಂಗ್ಲಿ ಕರ್ ಆಯ್ಕೆ .

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆ .  
ರಬಕವಿ ಬನಹಟ್ಟಿ :

ಶ್ರೀ ಇಮ್ರಾನ ಪ್ರತಾಪಗಡ  ರಾಜ್ಯಸಭಾ ಸದಸ್ಯರು ,ಹಾಗೂ ಅಧ್ಯಕ್ಷರು, ಅಲ್ಪಸಂಖ್ಯಾತರ ವಿಭಾಗ, ಎ.ಐ.ಸಿ.ಸಿ, ಹೊಸದೆಹಲಿ ಮತ್ತು ಸನ್ಮಾನ ಶ್ರೀ ಕೆ. ಅಬ್ದುಲ್ ಜಬ್ಬಾರ, ಎಂ.ಎಲ್.ಸಿ. ಹಾಗೂ ಅಧ್ಯಕ್ಷರು, ಕೆ.ಪಿ.ಸಿ.ಸಿ, ಅಲ್ಪಸಂಖ್ಯಾತರ ವಿಭಾಗ, ಬೆಂಗಳೂರು ಇವರ ಆದೇಶದ ಮೇರೆಗೆ ,ಹರುನ್ ರಶೀದ್  ಸಾಂಗ್ಲಿಕರ್ ಅವರನ್ನು  ರಬಕವಿ ಬನಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿದ್ದಾರೆ .
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷರು ರಫೀಕ್ ಬಾರಿಗಡ್ಡಿ ,ಮೌಲಾನ ಅಬು ಶಮ ,ಹಾರೋನ  ರಶೀದ್ ಬೇವೂರ ,  ಮೌಲಾನ ಮೋಸಿನ್  ಗೋಕಾಕ್ ,ಹಾಜಿ ಶೋಕತ ಅತ್ತಾರ , ಟಿಪ್ಪು ಸುಲ್ತಾನ್ ಅಲ್ಮೆಲ್ ,ಮಲಿಕ್ ಮುಜಾವರ್ , ಇನ್ನು ಅನೇಕರು ಉಪಸ್ಥಿತರಿದ್ದರು .

ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸಿದರು .

No comments:

Post a Comment