ಮಾಜಿ ರಾಷ್ಟ್ರಪತಿ ,ಭಾರತರತ್ನ
ಡಾ. ಎ. ಪಿ. ಜೆ ಅಬ್ದುಲ್ ಕಲಾಂ ರವರ 91ನೇಯ್
ಹುಟ್ಟು ಹಬ್ಬ ಆಚರಣೆ .
ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪ್ರತಿಷ್ಠಿತ ಬಿಲಾಲ್ ಮಸೀದಿ ಮೊಹಲ್ಲಾದ ಯುವಕರು ಹಾಗೂ ಹಿರಿಯರು ವತಿಯಿಂದ ಮಾಜಿ ರಾಷ್ಟ್ರಪತಿ ಭಾರತರತ್ನ ಎಪಿಜೆ ಅಬ್ದುಲ್ ಕಲಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು .
ಪ್ರಾಸ್ತಾವಿಕ ಮಾತನಾಡಿದ , ಮುಖ್ಯ ಅತಿಥಿಯಾಗಿ ಹಾಗೂ ತ್ರಿಭಾಷಾ ಕವಿ ಪ್ರಶಸ್ತಿ ಪಡೆದ , ಶಂಶುದ್ದಿನ್ ಜಾರೆ ಸರ್ , ಅಕ್ಟೋಬರ್ 15 1931 ರಲ್ಲಿ ಜನಿಸಿದ , ಎಪಿಜೆ ಅಬ್ದುಲ್ ಕಲಾಂ , ಅವರ ಅಂತಿಮ ವಿದಾಯ 2015 ಜುಲೈನಲ್ಲಿ ಆಯಿತು .
ಇವರು 2002 ರಿಂದ 2007 ರವರೆಗೆ ದೇಶದ ರಾಷ್ಟ್ರಪತಿಯಾಗಿ ಕಾರ್ಯಭಾರ ಮಾಡಿದ್ದರು .
ಇವರದೇ ಒಂದು ಮಾತು "ಸೂರ್ಯವನ್ನಾಗಿ ಮಿಂಚಬೇಕಾದರೆ ,ಮೊದಲು ಸೂರ್ಯನ ತರ ಸುಡುವ ಕೊಳ್ಳುವುದನ್ನು ಕಲಿಯಬೇಕು " ಎಂದು ಹೇಳಿದ ಮಹಾನ್ ವ್ಯಕ್ತಿ ಎಂದು ಈ ಸಂದರ್ಭದಲ್ಲಿ ನೆನಪಿಸಿ ಕೊಟ್ಟರು .
ಇದೇ ಸಂದರ್ಭದಲ್ಲಿ ಮಾತನಾಡಿದ ಫಯಾಜ್ ಕೊಯಿಮುತ್ತೂರು ,ಭಾರತ ದೇಶದ ಮಹಾನ್ ವಿಜ್ಞಾನಿ ಹಾಗೂ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು .ಹಾಗೂ ಬರುವಂತಹ ದಿನಮಾನಗಳಲ್ಲಿ ನಮ್ಮ ಮಕ್ಕಳನ್ನು ಕೂಡ ಈ ದೇಶದ ವಿಜ್ಞಾನಿಗಳ ನ್ನಾಗಿ ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮವನ್ನು ಬನಹಟ್ಟಿ ನಗರದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕ ಜಾಕಿರ್ ಹುಸೇನ್ ಬಾರಿಗಡ್ಡಿ ಅವರು ನಿರೂಪಿಸಿದರು .
ಈ ಕಾರ್ಯಕ್ರಮದ ಅಧ್ಯಕ್ಷತೆ ಮುರಾದ್ ಮುರಾದ್ ಮೋಮಿನ ವಹಿಸಿದ್ದರು .
ಈ ಸಂದರ್ಭದಲ್ಲಿ ಬಿಲಾಲ್ ಮಜಿದ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಜಾಕಿರ್ ಬಾರಿಗಡ್ಡಿ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಸಿರಾಜ್ ಮೋಮಿನ ,ಹಸನ್ ಮುಲ್ಲಾ, ಗುಲಾಬ ಯಾದವಾಡ , ಮಹಿಬೂಬ್ ಬಾರಿಗಡ್ಡಿ ,ಶಬ್ಬೀರ್ ಮೊಮಿನ್ ,ಹುಸೇನ್ ಅಥಣಿ ಯುಸೂಪ ಮುಧೋಳ ,ಜುಬೇರ್ ಮೋಮಿನ ,ಮೀರಾಸಾಬ ಬಾರಿಗಡ್ಡಿ ಇಮ್ತಿಯಾಜ್ ಅತ್ತಾರ ,ಅಕ್ಬರ್ ಅತನಿ , ಮೋದಿನಸಾಬ್ ಸಪ್ತಸಾಗರ, ಇನ್ನೂ ಅನೇಕರು ಹಾಜರಿದ್ದರು.
No comments:
Post a Comment