Tuesday, November 29, 2022

ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :

*ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :* 

ರಬಕವಿ ಬನಹಟ್ಟಿ :

 ಬಾಗಲಕೋಟೆ ಜಿಲ್ಲೆಯ ರಬಕವಿ-  ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ , 14ನೇ ದಿನಕ್ಕೆ ಕಾಲಿಟ್ಟ ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ , ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ. ವತಿಯಿಂದ ಬೆಂಬಲ ನೀಡಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ,  ತೆರೆದಾಳ ಮತಕ್ಷೇತ್ರದ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ  ಪರಶುರಾಮ್ ಮೈತ್ರಿ ,ನೇರ ಶಾಸಕರಿಗೆ ತರಾಟೆಗೆ ತೆಗೆದುಕೊಂಡು ಶಾಸಕರೆ ಅಂಗವಿಕಲರ ಕೆಲಸಗಳನ್ನು ಮಾಡದಿದ್ದರೆ , ಮುಂದಿನ ಜನ್ಮದಲ್ಲಿ ನಿಮ್ಮ ಹೊಟ್ಟೆಯಲ್ಲಿ  ನಿಮ್ಮ ಮಕ್ಕಳು ಅಂಗವಿಕಲಾಗಿ ಹುಟ್ಟಬಹುದು ಎಂದು  ಆಕ್ರೋಶ ವ್ಯಕ್ತಪಡಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾದ ದೇವೇಂದ್ರ ಅಸ್ಕಿ , ರಬಕವಿ ಬನಹಟ್ಟಿ ತಾಲೂಕ ಆಟೋ ಘಟಕದ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ,ಹಾಗೂ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರಾದ ಇಮ್ತಿಯಾಜ್ ಗೋಕಾಕ್ ,ರಂಜಾನ್ ಗೋರಿ ,ಬುಡನ್ ಸಾಬ್  ಪೆಂಡಾರಿ ,ರಿಯಾಜ್  ಜಮಖಂಡಿ ,ಮೊಹಮ್ಮದ್ ಬಿಕಾಂ , ಸಲೀಂ ಬೀಳಗಿ, ಸಿರಾಜ್ ಜಮಾದಾರ್, ಸಾಯಿಲ್ ಪೆಂಡಾರಿ ,ಇಬ್ರಾಹಿಂ ಸುಲೇದಾರ್ ,ಆದಮ್ ಸೈಯದ್ ,  ಸಮೀರ್ ಮುಲ್ಲಾ , ಬಸಿರ್ ಪೆಂಡಾರಿ  ,ಅಪ್ರೋಜ್ ಸೌದಾಗರ್ ,ಜುಬೇರ್ ಗಡ್ಡೆಕರ್  ಅರ್ಬಾಸ್ ಅಸಂಗಿ , ಮಹಮ್ಮದ್ ಗಡ್ಡೆಕರ್ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .

ವರದಿ :ಮಹಬೂಬ ಬಾರಿಗಡ್ಡಿ

No comments:

Post a Comment