ರಬಕವಿ ಬನಹಟ್ಟಿ :
ಬಾಗಲಕೋಟೆ ಜಿಲ್ಲೆ
ಬನಹಟ್ಟಿ ನಗರದ ಪ್ರವಾಸಿ ಮಂದಿರದಲ್ಲಿ (ಐ ಬಿ ) ರಬಕವಿ ಬನಹಟ್ಟಿ ಮಹಾಲಿಂಗಪೂರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಹಾರುನರಶಿದ ಸಾಂಗ್ಲೀಕರ ಇವರ ನೇತೃತ್ವದಲ್ಲಿ ಸಭೆ ನಡೆಯಿತು . ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್ ಬಾರಿಗಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು . ಈ ಸಭೆಯಲ್ಲಿ ಹಾರುನರಶೀದ್ ಸಾಂಗ್ಲಿಕರ ರಪಿಕ ಬಾರಿಗಡ್ಡಿಅವರು ಮುಂಖಡರ ಉದ್ದೇಶಿಸಿ ಮಾತನಾಡಿದರು .
ರಬಕವಿ ಬನಹಟ್ಟ ತಾಲೂಕಿನ ಅಲ್ಪಸಂಖ್ಯಾತರ ಕಮಿಟಿ ಹಾಗೂ ಚುನಾವಣೆ ಪಟ್ಟಿಯಲ್ಲಿ ಹೆಸರ ಸೇರ್ಪಡೆ ಮಾಡುವ ಸಲುವಾಗಿ ಬೂತ್ ಮಟ್ಟದ ಪದಾಧಿಕಾರಿಗಳು ನೇಮಕ ಮಾಡಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಕೊಟ್ಟಂತ ಹಕ್ಕು ಪ್ರತಿಯೊಬ್ಬರ ಮತ ಅಮೂಲ್ಯವಾದದ್ದು ,ಮತದಾನದ ಹಕ್ಕು ತಪ್ಪದೇ.ಚಲಾವಣೆ ಮಾಡಬೇಕು ಅಂತ ಸಲಹೆ ನೀಡಿದರು.
ಸಿದ್ದರಾಮಯ್ಯ ಸರಕಾರ ಅಲ್ಪಸಂಖ್ಯಾತರಿಗೆ.ಮಾಡಿದಂತ ಯೋಜನೆಗಳು. ಅದು.ಶಾದಿ ಭಾಗ್ಯ ,ಕ್ಷೀರ ಭಾಗ್ಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಇರಬಹುದು ಇನ್ನಿತರ ಯೋಜನಗಳು ಇರಬಹುದು ಈಗಿನ ಇರುವಂತ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ತೆಗೆದು ಹಾಕಿದೆ . ಮುಂಬರುವ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ , ಅಲ್ಪಸಂಖ್ಯಾತರು ಹಾಗೂ ದಲಿತರ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಾರೆ ಅಲ್ಪಸಂಖ್ಯಾತರ ಮತಗಳು ವಿಭಜನೆ ಆಗದಂತೆ ಇನ್ನಿತರ ಬೇರೆ ಪಕ್ಷಗಳಿಗೆ ಎಂಐಎಂ ಎಸ್ ಡಿ ಪಿ ಐ ಆಮ್ ಆದ್ಮಿ ಪಕ್ಷಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಅಂತ ,ಸಲಹೆ ಸೂಚನೆಗಳು ನೀಡಿದರು .
ಇದೇ ಸಂದರ್ಭದಲ್ಲಿ , ಬೆಳಗಾವಿ ವಿಭಾಗದ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾರುನರಶೀದ್ ಭೇವುರ ಮತ್ತು ಗ್ರಾಮೀಣ ವಿಭಾಗದ ಬ್ಲಾಕ್ ಅಧ್ಯಕ್ಷ ಪಜಲ ಅತಾರುತ ಕಾಂಗ್ರೆಸ್ ಮುಖಂಡ ಅಕಬರ ಫನಿಭಂದ. ನಸೀಮ್ ಮೂಕಾಶಿ ಹುಜೇಫಾ ಮುಲ್ಲಾ ಸಾದಿಕ ಜಕಾತಿ ಸೂಹೀಲ ಚೀಂಚಲಿ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಹುಜೇಪಾ ಮುಲ್ಲಾ ,ಸ್ವಾಗತ ಭಾಷಣ ಮಾಡಿದರು ಹಾಗೂ ನಸೀಮ್ ಮೂಕಾಶಿ ವಂದಿಸಿದರು .
*ವರದಿ : ಮಹಿಬೂಬ್ ಬಾರಿಗಡ್ಡಿ*
No comments:
Post a Comment