Sunday, January 8, 2023

ಸಿದ್ದು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಹಿಳಾ ಕಬ್ಬಡ್ಡಿ ಚಾಂಪಿಯನ್ಶಿಪ್ ಮುಕ್ತಾಯ .


ಮಹಾಲಿಂಗಪೂರ : ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ   ಬೆಲ್ಲದಿ ನಗರಿ ಎಂದೇ ಖ್ಯಾತ ಪಡೆದ  ಮಹಾಲಿಂಗಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ  ಮಹಿಳಾ ಎ ಗ್ರೇಡ್  ಕಬ್ಬಡ್ಡಿ ಚಾಂಪಿಯನ್ಶಿಪ್  ಮುಕ್ತಾಯಗೊಂಡಿತು .
ಅಮೇಚೂರ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ
 ಕರ್ನಾಟಕ ರಾಜ್ಯ ಅಮೇಚೂರ ಕಬಡ್ಡಿ ಅಸೋಶಿಯನ್ ಅನುಮತಿಯೊಂದಿಗೆ ಹಾಗೂ ಬಾಗಲಕೋಟ್ ಅಮೇಚೂರ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ 
ಸಿದ್ದು  ಕೊಣ್ಣೂರ ಸ್ಪೋಟ್ಸ ಕ್ಲಬ್ ಹಾಗೂ ಕೆ.ಎಲ್.ಇ ಕಾಲೇಜ್  ಮಹಾಲಿಂಗಪುರ ವತಿಯಿಂದ  ಅಖಿಲ್ ಭಾರತ ಎ -ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಪದ್ಯಾವಳಿಯ ಫೈನಲ್ ಪಂದ್ಯ ಜನೆವರಿ 4 ರಂದು ನಡೆಯಿತು.
ಫೈನಲ್ ನಲ್ಲಿ ಪ್ರಥಮ ಬಹುಮಾನ ವೆಸ್ಟರ್ನ ರೈಲ್ವೆ. ಪಡೆದುಕೊಂದಿದ್ದರೆ,  ಪಾಲಂ ದೆಹಲಿ  ತಂಡ 2 ಸ್ಥಾನ ಪಡೆದುಕೊಂಡಿದೆ, ಚಿಂಚಲಿಯ ಜೈ ಮಾಕಾಳಿ ತಂಡ ತೃತಿಯ ಬಹುಮಾನ ಪಡೆದುಕೊಂಡಿದೆ, ಆಳ್ವಾಸ ಮೂಡಬಿದರೆಯ ತಂಡ ನಾಲ್ಕನೇಯ ಬಹುಮಾನ ಪಡೆದುಕೊಂಡಿದೆ .

  
 ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದ ದೆಹಲಿ . .
ಫೈನಲ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ  ಕಾಂಗ್ರೆಸ್ ಪಕ್ಷದ ಹಿರಿಯರು ಮಾಚಿ ಸಚಿವರಾದ   ರಾಮಲಿಂಗಾರೆಡ್ಡ ಅವರು.ಕೆಪಿಸಿಸಿ ಕಾರ್ಯಾದ್ಯಕ್ಷರಾದ  ಸತೀಶ ಜಾರಕಿಹೊಳಿ., ಬಾಗಲಕೋಟ  ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ  ಎಸ್. ಜಿ. ನಂಜಯ್ಯನಮಠ , ಮಾಜಿ ಸಚಿವರು ಗಳಾದ ಎಸ್.ಆರ್ ಪಾಟೀಲ್ , ಆರ್ ಬಿ. ತಿಮ್ಮಾಪೂರ  ಸೇರಿದಂತೆ ಅಪಾರ ಪ್ರಮಾಣದಲ್ಲಿ ಕ್ರೀಡಾಸಕ್ತರು ಉಪಸ್ಥಿತರಿದ್ದರು .


ವರದಿ ಮಹಬೂಬ್ ಬಾರಿಗಡ್ಡಿ 

No comments:

Post a Comment