ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ , ಕಲಾಂ ಎಕ್ಸ್ ಪ್ರೆಸ್ ನ್ಯೂಸ್ ಸಂಪಾದಕರು ಹಾಗೂ ಹೊನ್ನನುಡಿ ದಿನಪತ್ರಿಕೆ ಕರುನಾಡು ಕಂದ ಪತ್ರಿಕೆಯ ತಾಲೂಕ ವರದಿಗಾರರು
ಕರ್ನಾಟಕ ರಾಜ್ಯದ ಐತಿಹಾಸಿಕ ನಗರ ಬಿಜಾಪುರ್ ,ಅಂದರೆ ಈಗಿನ ವಿಜಯಪುರ ನಗರ ,ಈ ನಗರದ ಜನಪ್ರತಿನಿಧಿ ಎಂ ಎಲ್ಎ ಬಸವನ್ ಗೌಡ ಪಾಟೀಲ್ ಯತ್ನಾಳ್ , ಇವರಿಗೆ ಕಟ್ಟರ್ ಹಿಂದೂ ವಾದಿ ಯುವಕರು ಹಿಂದೂ ಹುಲಿ ಅಂತ ಬಿರುದು ಕೂಡ ಕೊಟ್ಟಿದ್ದಾರೆ , ಇವರು ಮಾ ತೆತ್ತಿದ್ದರೆ ಸಾಕು ಸಾಬ್ರು , ಪಾಕಿಸ್ತಾನ , ಟಿಪ್ಪು ಸುಲ್ತಾನ ಹಿಂದೂ-ಮುಸ್ಲಿಂ ,ಇಂತಹದೇ ಕೋಮುಸೌಹಾರ್ದ ಕ್ಕೆ ಧಕ್ಕೆ ತರುವಂತ ಹೇಳಿಕೆ ಕೊಡುವುದರಲ್ಲಿ ನಿಶ್ಚಿಮ , ಒಬ್ಬ ನಗರದ ಜನಪ್ರತಿನಿಧಿಯಾಗಿ ಹಾಗೂ ರಾಜಕಾರಣಿಯಾಗಿ ಒಂದು ಸಮಾಜದ ವಿರುದ್ಧ ಒಂದು ಸಮಾಜದ ಗಣ್ಯ ವ್ಯಕ್ತಿಗಳ ವಿರುದ್ಧ , ಒಂದು ಸಮಾಜದ ಇತಿಹಾಸದ ರಾಜ ಮಹಾರಾಜ ವಿರುದ್ಧ ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ , ನಗರದಲ್ಲಿ ಆಗಲಿ ಇತರ ಕಡೆ ರಾಜಕೀಯ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಒಂದು ಸಮಾಜದ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ . ಇದು ಎಷ್ಟರ ಮಟ್ಟಿಗೆ ಸರಿ ,ಒಂದು ಸಾಮಾನ್ಯ ಸಭೆಯಲ್ಲಿ ಕೂಡ ಬಾಯಿಗೆ ಬಂದದ್ದೆ ಮಾತು . ಅವರ ಮನಸ್ಥಿತಿ ಹಾಗೂ ಸಂಸ್ಕೃತಿ ಎಷ್ಟರಮಟ್ಟಿಗೆ ಸರಿ , ಇವರ ವೀರಶೈವ ಲಿಂಗಾಯತ ಧರ್ಮದವರು , ಪ್ರತಿಯೊಂದು ಧರ್ಮದ ಅಜೆಂಡಾದಲ್ಲಿ ಮತ್ತೊಂದು ಧರ್ಮನು ಹೀನಾಯವಾಗಿ ಮಾತನಾಡಬಾರದು ಅನ್ನುವಂಥ ಎಲ್ಲ ಧರ್ಮದಲ್ಲಿ ಕೂಡ ಪಾಠ ಹೇಳಿಕೊಟ್ಟಿದೆ .
ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ವಿಧಾನಸಭೆಯ ಜನ ಪ್ರತಿನಿಧಿಯಾಗಿ ಪ್ರತಿಯೊಂದು ಸಮುದಾಯದ ಜನರ ಮನಸು ಒಂದು ಮಾಡುವುದನ್ನು ಬಿಟ್ಟು , ಸಾಬ್ರು ಹಾಗೆ ಹೀಗೆ ಅಂತ ಹೇಳಿ ಕೋಮು ದ್ವೇಷದ ಭಾಷಣಗಳಲ್ಲಿ ಶಿಳ್ಳೆ , ಚಪ್ಪಾಳೆ , ಗಿಟ್ಟಿಸಿಕೊಳ್ಳುವ ಗೋಸ್ಕರ ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .
ಬಸವನ್ ಗೌಡ ಪಾಟೀಲ್ ಯತ್ನಾಳ ಜಾತ್ಯತೀತ ಜನತಾದಳ ಪಕ್ಷದಲ್ಲಿ ಇದ್ದಾಗ , ಸಾಬರಿಂದಲೇ ರಾಜಕೀಯ ಜೀವ ಪಡೆದ ಸಾಬರದೋಪಿ ಹಾಕಿದಾಗ ಹಿಂದುತ್ವ ನೆನಪಿಗೆ ಬರಲಿಲ್ಲವೇ ? ಮುಸ್ಲಿಂರ ಮನೆಗೆ ಹೋಗುವದು, ಮುಸಲ್ಮಾನರ ಮಸೀದಿಗೆ ಹೋಗುವುದು , ಮುಸಲ್ಮಾನರ ಹಬ್ಬ ಹರಿ ದಿನಗಳಲ್ಲಿ ಭಾಗವಹಿಸುವುದು , ಮುಸಲ್ಮಾನರ ಮತಗಳನ್ನು ಪಡೆಯುತ್ತಿದ್ದ , ನಂತರ ಏಕಾಏಕಿ ರಾಜಕೀಯ ಬದಲಾವಣೆಯ ಗಾಳಿ ಬಿಸಿ ,ಭಾರತೀಯ ಜನತಾ ಪಾರ್ಟಿಗೆ ಪಕ್ಷಾಂತರ ಮಾಡಿ ನಂತರ ಮುಸಲ್ಮಾನರ ವಿರುದ್ಧ ಸಮಾಜದ ವಿರುದ್ಧ ಅವರ ಇತಿಹಾಸದ ಗಣ್ಯ ವ್ಯಕ್ತಿಗಳ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ , ಹಾಗೂ ಸಾಬರ ಗಣ್ಯ ವ್ಯಕ್ತಿಗಳಿಗೆ ಭಾಸ್ಕಳ ಬಯ್ಯೋದು ಕೂಡ ಇವರ ಪ್ರಸ್ತುತ ರಾಜಕೀಯ ವಾಗಿಬಿಟ್ಟಿದೆ ,
ಭಾರತ ದೇಶದ ಸಂವಿಧಾನದ ಅಡಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ನಂತರ ಎಲ್ಲ ಧರ್ಮದ ಜನರನ್ನು ಒಂದೇ ತರ ನೋಡುತ್ತೇನೆ ಎನ್ನುವುದು ಪ್ರತಿಜ್ಞೆ ಕೂಡ ಮಾಡಿ , ನಂತರ ಹಿಂದೂ - ಮುಸ್ಲಿಂ ದ್ವೇಷದ ಮಾತುಗಳಲ್ಲಿ ದ್ವೇಷ ಹುಟ್ಟಿಸಿ , ಸಾಮಾನ್ಯ ಜನರ ಮನಸ್ಸನ್ನು ಬೇರೆ ಬೇರೆ ಮಾಡಿ ,ಸಂವಿಧಾನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿರುವಂತಹ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರೆ ಎಷ್ಟು ಮಟ್ಟಿಗೆ ಸರಿ , ಒಬ್ಬ ಕ್ಷೇತ್ರದ ಜನಪ್ರತಿನಿಧಿಯಾಗಿ ತನ್ನ ಕ್ಷೇತ್ರ ತನ್ನ ರಾಜ್ಯ ಹೇಗೆ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ತನ್ನ ಕ್ಷೇತ್ರದ ಜನರ ಮನಸ್ಸನ್ನು ಹೇಗೆ ಗೆಲ್ಲಬೇಕೆಂದು , ಗಮನ ಕೊಡುವುದನ್ನು ಬಿಟ್ಟು ,ಕೇವಲ ಧರ್ಮ ಧರ್ಮಗಳ , ಜಾತಿ ಜಾತಿಗಳ ಮಧ್ಯ ದ್ವೇಷದ ವಾತಾವರಣ ಸೃಷ್ಟಿಸಿ , ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .
ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಕೂಡ ಭಾರತೀಯ ಜನತಾ ಪಕ್ಷದಿಂದ ಜನಪ್ರತಿನಿಧಿಯಾಗಿ ಎಂ ಎಲ್ಎ ಸಿದ್ದು ಸೌದಿ ಕೂಡ ಇದ್ದಾರೆ . ಆದರೆ ಬಸವನಗೌಡ ಪಾಟೀಲ್ ಯತ್ನಾಳ ರಾಜಕೀಯ , ಸಿದ್ದು ಸೌದಿ ಅವರ ರಾಜಕೀಯ ಅಜಗಜಾಂತರ ವ್ಯತ್ಯಾಸ ಇದೆ ಅನ್ನಬಹುದು . ಏಕೆಂದರೆ ಈ ಕ್ಷೇತ್ರದ ಜನಪ್ರತಿನಿಧಿ ಎಂಎಲ್ಎ ಸಿದ್ದು ಸೌದಿ ಮುಸ್ಲಿಮರ ಒಡನಾಡಿನಲ್ಲಿದ್ದು ಮುಸ್ಲಿಮರ ಸಭೆ ಸಮಾರಂಭ ಮದುವೆಗಳಲ್ಲಿ ಭಾಗವಹಿಸಿ ಹಲವು ಮುಸ್ಲಿಮರ ಜನರ ಮನಸ್ಸು ಗೆದ್ದಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ .
ಬಸವನಗೌಡ ಪಾಟೀಲ್ ಯತ್ನಾಳ ಒಬ್ಬ ಜನಪ್ರತಿನಿಧಿಯಾಗಿ ತನ್ನದೇ ಧರ್ಮ- ಜಾತಿಯ ತನ್ನದೇ ಪಕ್ಷದ ಗಣ್ಯ ವ್ಯಕ್ತಿಗಳನ್ನು ಕೂಡ ಏಕವಚನದಲ್ಲಿ ಹೀನಾಯವಾಗಿ ಮಾತನಾಡುತ್ತಾರೆ , ಇವರು ಮುಂಬರುವ ದಿನಮಾನಗಳಲ್ಲಿ ಇವರಿಗೆ ತನ್ನದೇ ಸಮಾಜದ ಜನ ವಿರೋಧಿಸುವ ಕಾಲ ಬರಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ ,
ಪ್ರತಿಯೊಂದು ವೇದಿಕೆಯಲ್ಲಿ ,ಕರ್ನಾಟಕದ ರಾಜ್ಯದ ಮಹಾನುಭಾವರನ್ನು ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಸರು ಮಾಡಿರುವಂತಹ , ರಾಜ ಮಹಾರಾಜರ ಆಗಿ ಹೋಗಿರುವ ಸಂಗೊಳ್ಳಿ ರಾಯಣ್ಣ ಬೆಳವಡಿ ಮಲ್ಲಮ್ಮ ,ಕಿತ್ತೂರಾಣಿ ಚೆನ್ನಮ್ಮ ,ಕೃಷ್ಣ ದೇವರಾಜ ಇನ್ನೂ ಅನೇಕ 10 ಹಲವಾರು ರಾಜರ ಹೆಸರುಗಳನ್ನು ಬಿಟ್ಟು , ಕೇವಲ ಮರಾಠ ಸಮಾಜದ ದೊರೆ ಛತ್ರಪತಿ ಶಿವಾಜಿ ಮಹಾರಾಜರನ್ನು ಅಷ್ಟೇ ನೆನಪಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ,
ಹಿಂದೂ ಸಮಾಜದ ರಕ್ಷಕನಾಗಿದ್ದನು ಶಿವಾಜಿ ಛತ್ರಪತಿ ಶಿವಾಜಿ ಮಹಾರಾಜ್ ಇರದಿದ್ದರೆ ನಾವು ಇರುತ್ತಿರಲಿಲ್ಲ ಎಂದು ಹಿಂದೂ ಸಮಾಜದ ಯುವಕರ ಎಲ್ಲರನ್ನೂ ದ್ವೇಷಿತ ಮಾತುಗಳ ತಲೆಯಲ್ಲಿ ತುಂಬಿ ಮುಸ್ಲಿಮರ ವಿರೋಧಿಸುವಂತೆ ಪ್ರಚೋದಿಸುತ್ತಾರೆ .
ಜಗತ್ತು 5g ಐದನೇ ತಲೆಮಾರಿನಲ್ಲಿ ಸಾಗುತ್ತಿದೆ . ಆದರೆ ನಮ್ಮ ದೇಶದ ಹಾಗೂ ರಾಜ್ಯಗಳ ಜನಪ್ರತಿನಿಧಿಯಾಗಿ , ಧರ್ಮ ಧರ್ಮಗಳ , ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದರಲ್ಲಿ ಮಗ್ನರಾಗಿದ್ದಾರೆ ಅಂದರೆ ಇದು ಹಾಸ್ಯಸ್ಪದ ,
ವಿಜಯಪುರದ ಜನತೆ ಬರುವ 2023ರ ಚುನಾವಣೆಯಲ್ಲಿ ಎಲ್ಲ ಸಮುದಾಯಗಳ ಸಮಾನ ರೀತಿಯಲ್ಲಿ ನೋಡುವಂತಹ ಒಬ್ಬ ಜನಪ್ರತಿನಿಧಿಯನ್ನು ವಿಧಾನಸಭೆಗೆ ಕಳುಹಿಸಬೇಕಾಗಿದೆ . ಆಗಲೇ ನಗರ ಅಭಿವೃದ್ಧಿ , ಹಾಗೂ ಪ್ರತಿಯೊಂದು ಸಮಾಜದಲ್ಲಿ , ಶಾಂತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವುದರಲ್ಲಿ ಮಹತ್ವವಾದ ಕಾರ್ಯವನ್ನು ಜನಸಾಮಾನ್ಯರು ಮಾಡಬೇಕಿದೆ .
ಭಾರತ ದೇಶದಲ್ಲಿ ಇರುವಂತ ಆಯಾಧರ್ಮಗಳಲ್ಲಿ ಬೆಂಕಿ ಹಚ್ಚುವ ಕೆಲಸ ಜನಪ್ರತಿನಿಧಿಗಳೇ ಮಾಡುತ್ತಿದ್ದರೆ ,ದೇಶಕ್ಕ ಗಂಡಾಂತರ ಬರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ,ಜನಪ್ರತಿನಿಧಿಗಳು ಕೇವಲ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಇರಬೇಕು ಜೊತೆಗೆ ಎಲ್ಲ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿ ಬೇಕು ನಂತರ ಅದನ್ನು ಬಗೆಹರಿಸುಕಿ ಕೊಡಬೇಕಾಗಿರುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಬೇಕು ಹೊರತು ಹಿಂದೂ ಮುಸ್ಲಿಂ ಅಂತ ನೀಚ ರಾಜಕಾರಣಿ ಆಗಬಾರದು .
ಇಂತಹ ರಾಜಕಾರಣಿಗಳು ಇತಿಹಾಸವನ್ನು ತಿರುಚಿ , ಕೋಮು ದ್ವೇಷದ ಭಾಷಣಗಳಲ್ಲಿ ರಾಜ್ಯದ ಜನರನ್ನು ಮರಳು ಮಾಡಿ ,ತನ್ನ ರಾಜಕೀಯ ಬೆಳೆಯನ್ನು ಬೆಳೆಯುವುದೇ ಇವರ ಮುಖ್ಯ ಉದ್ದೇಶವಾಗಿರುತ್ತದೆ . ಜನಸಾಮಾನ್ಯರು ಇನ್ನೂ ಇವರ ಚಿಲ್ಲರೆ ರಾಜಕೀಯ ಮಾಡುವುದರ ಮೂಲಕ ನಮ್ಮನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನುವುದನ್ನು ಅರಿತುಕೊಳ್ಳಬೇಕಾಗಿದೆ ,
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಶಾಂತಿ ಕೋಮುಸೌಹಾರ್ದದಿಂದ ಅನ್ಯೂನ್ಯವಾಗಿ ,ಒಬ್ಬರೊಬ್ಬರ ಜೊತೆ ಬಾಳಿದರೆ ಮಾತ್ರ ದೇಶ ಹಾಗೂ ರಾಜ್ಯ ಉನ್ನತ ಮಟ್ಟದಲ್ಲಿ ಹೋಗಬಹುದು ಅನ್ನೋದು ಎರಡು ಮಾತಿಲ್ಲ .
ಲೇಖನ :
ಮಹೆಬೂಬ್ ಎಂ ಬಾರಿಗಡ್ಡಿ