Wednesday, November 1, 2023

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ರಾಜ್ಯೋತ್ಸವ ಆಚರಣೆ

  ರಬಕವಿ ಬನಹಟ್ಟಿ

 ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಬೈಕ್ ಆಟೋ ರಿಕ್ಷಾಗಳ ಮೇಲೆ ವೀರ ಹೋರಾಟಗಾರರಾದ ದಕ್ಷಿಣ ಪತೇಶ್ವರ ಇಮ್ಮಡಿ ಪುಲಕೇಶಿ ಸಂಗೊಳ್ಳಿ ರಾಯಣ್ಣ ಕಿತ್ತೂರಾಣಿ ಚೆನ್ನಮ್ಮ ಬೆಳವಡಿ ಮಲ್ಲಮ್ಮ ತಾಯಿ ಭುವನೇಶ್ವರಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಇನ್ನು ಹಲವು ಭಾವಚಿತ್ರಗಳನ್ನು ಆಟೋರಿಕ್ಷಗಳ ವಿವಿಧ ಬೀದಿಗಳಲ್ಲಿ ಸಂಚರಿಸಿ ,
 ಬನಹಟ್ಟಿ ಇಂದ ರಬಕವಿ ನಾಕ ಅವರಿಗೆ ಬೃಹತ್ ಆಚರಣೆ ಮಾಡಲಾಯಿತು .


ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜೇಶ್ವರಿ ಹಿರೇಮಠ್ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ವಹಿದಾ ನದಾಫ್ ಅಜಿತ್ ಬರಡಗಿ ಸುರೇಶ ಗೋಕಾವಿ ಮಲಿಕ್ ಜಮಾದಾರ್ ರೇಷ್ಮಾ ಲಕ್ಷ್ಮಿ ಶಿವಲೀಲಾ ಗೈಬು ಸಾಬ್ ಮಲ್ಲು ಬಂಡಾರಿ ಸಿರಾಜ್ ಅತ್ತಾರ್ ಇನ್ನು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು .



ವರದಿ :
ಮಹಬೂಬ್ ಎಂ ಬಾರಿಗಡ್ಡಿ

Tuesday, October 24, 2023

ಕಳೆದ 75 ವರ್ಷಗಳಲ್ಲಿ ಇಸ್ರೇಲ್ ನಡೆಸುತ್ತಾ ಬಂದಿರುವುದು ಏನನ್ನು?

ಭಯೋತ್ಪಾದನೆ ಎಲ್ಲಿ ನಡೆದರೂ ಅದರ ಕಾರಣ ಏನೇ ಇದ್ದರೂ ಅದು ಅಮಾನವೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಇಸ್ರೇಲ್-ಫೆಲಸ್ತೀನ್ ಯುದ್ಧದ ಹಿನ್ನೆಲೆಯಲ್ಲಿ  ಪ್ರಧಾನಿ ಆಡಿದ ಮಾತಿದು.

ಅಮೆರಿಕ, ಇಂಗ್ಲೆಂಡ್ ಸಹಿತ ಪಾಶ್ಚಾತ್ಯ ಶಕ್ತಿಗಳು ಹಮಾಸ್ ಅನ್ನು ಟೆರರಿಸ್ಟ್ ಎಂದು ಕರೆಯುತ್ತವೆ. ಆದರೆ ವಿಶ್ವಸಂಸ್ಥೆ, ಭಾರತ ಮತ್ತು ನೆರೆಯ ಅರಬರಾಗಲಿ ಚೀನ, ರಷ್ಯವಾಗಲಿ ಹಮಾಸನ್ನು ಇನ್ನೂ ಟೆರರಿಸ್ಟ್ ಸಂಘಟನೆ ಎಂದು ಘೋಷಿಸಿಲ್ಲ.

ಯಾವುದೇ ಒಂದು ಸಂಘಟನೆ ಇನ್ನೊಂದು ದೇಶದ ಗಡಿ ದಾಟಿ  ನಾಗರಿಕರ ಹತ್ಯೆ ಮಾಡಿದರೆ ಅದನ್ನು ಟೆರರಿಸಂ ಎಂದು  ಹೇಳಲಾಗುತ್ತದೆ. ಹೀಗಾಗಿ ಹಮಾಸ್‌ನ ಕೃತ್ಯವನ್ನು ಸಮರ್ಥಿಸುವಂತಿಲ್ಲ. ಈಗ ಹಮಾಸ್ ಇಸ್ರೇಲಿನೊಳಗೆ ನುಗ್ಗಿ ಯುದ್ಧ ಆರಂಭಿಸಿದೆ. 1300ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಹಮಾಸ್‌ನ ಆ ಕೃತ್ಯದಂತೆ ಇಸ್ರೇಲ್ ನಡೆಸಿದ ಬಾಂಬಿಂಗನ್ನು ಕೂಡ ಸಮರ್ಥಿಸುವಂತಿಲ್ಲ. ಅದು ನಾಗರಿಕರ ಮೇಲೆ, ವಿಶ್ವಸಂಸ್ಥೆಯ ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಫೆಲಸ್ತೀನ್ ನಿರಾಶ್ರಿತರ ವಿಭಾಗ ತಿಳಿಸಿದೆ. ಹಾಗಾಗಿ ಇದೂ ಟೆರರಿಸ್ಟ್ ಕೃತ್ಯವೇ ಆಗಿಬಿಡುತ್ತದೆ. ಹೀಗಾಗಿಯೇ ವಿಶ್ವಸಂಸ್ಥೆಗೆ ಈ ವರೆಗೆ ಹಮಾಸ್ ಅನ್ನು ಟೆರರಿಸ್ಟ್  ಪಟ್ಟಿಗೆ ಸೇರಿಸಲು ಸಾಧ್ಯವಾಗದೇ ಹೋಗಿದೆ.

ಗಾಝವನ್ನು ನಿರ್ಜನ ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಗಾಝವನ್ನು ನಿರ್ಜನ ಮಾಡುತ್ತೇವೆ ಎನ್ನುವಾಗ ಅಲ್ಲಿರುವ  ಸುಮಾರು 50 ಲಕ್ಷ ಮಂದಿಯನ್ನು ಇಸ್ರೇಲ್ ನಾಶಪಡಿಸುತ್ತದೆ ಎಂದರ್ಥ. ಈಗಾಗಲೇ ನೀರು, ವಿದ್ಯುತ್, ಇಂಧನ, ಆಹಾರ ಎಲ್ಲ ಮೂಲ ಸೌರ‍್ಯಗಳನ್ನು ಇಸ್ರೇಲ್ ಸ್ಥಗಿತಗೊಳಿಸಿದೆ. ಆದರೆ ಮಾಧ್ಯಮಗಳು ಈ ಅಂಶವನ್ನು ಪರಿಗಣಿಸುತ್ತಿಲ್ಲ. ನಮ್ಮ ಮಾಧ್ಯಮ ಮಂದಿ ವಿಕೃತ ಸಂಭ್ರಮಾಚರಣೆಯಲ್ಲಿದ್ದಾರೆ.

ಹೀಗಾಗಿ ಪ್ರಧಾನಿ ಮೋದಿಯ ಮಾತಿನ ಅರ್ಥದಲ್ಲಿ ಹೇಳುವುದಾದರೆ ಇದು ಕೂಡ ಮನುಷ್ಯತ್ವ ರಹಿತವಾದದ್ದು. ಆದರೆ ಹಮಾಸ್ ಮಾಡುವುದೂ ಈ ಹಿಂದೆ ಫೆಲಸ್ತೀನ್ ಲಿಬರೇಷನ್ ಫ್ರಂಟ್ ಮಾಡಿದ್ದೂ ಅವರ ನಾಡಿನ  ಸ್ವಾತಂತ್ರ್ಯಕ್ಕೆ ಎಂಬುದು ಹಗಲಿನಷ್ಟೇ ಸ್ಪಷ್ಟ. ಆದ್ದರಿಂದ ಇಲ್ಲಿ ಧರ್ಮಕ್ಕೆ ಸ್ಥಾನ ಇಲ್ಲ. ಆದರೆ ಇಸ್ರೇಲ್? ಫೆಲಸ್ತೀನ್ ಭೂಭಾಗದಲ್ಲಿ 1948ರಲ್ಲಿ ಅಕ್ರಮವಾಗಿ ಸ್ಥಾಪಿಸಿದ ದೇಶ ಅದು. ನಿಜಕ್ಕಾದರೆ ಅದು ಹುಟ್ಟಿಕೊಂಡದ್ದೆ ಫೆಲಸ್ತೀನಿಯರ ವಿರೋಧದ ನಡುವೆ. ಪಾಶ್ಚಾತ್ಯ  ಶಕ್ತಿಗಳು ಬಲವಂತದಿಂದ ಹುಟ್ಟು ಹಾಕಿದ ದೇಶ ಅದು. ಇಂದು ಹಮಾಸ್ ಅನ್ನು ಇವರೇ ಟೆರರಿಸ್ಟ್ ಎಂದು ಘೋಷಿಸಿದ್ದಾರೆ. ನಮ್ಮ  ದೇಶಕ್ಕೂ ಇದು ಗೊತ್ತಿದೆ. ಹೀಗಾಗಿ ಫೆಲಸ್ತೀನ್ ಸ್ವತಂತ್ರ ದೇಶ ಎಂಬ ಸಂಕಲ್ಪವನ್ನು ಭಾರತ ಬೆಂಬಲಿಸುತ್ತಾ ಬಂದಿದೆ.

ವಿಷಯ ಬದಲಿಸೋಣ:
ಚುನಾವಣಾ ಆಯೋಗವು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಝೊರಂಗಳ ಚುನಾವಣಾ ದಿನಾಂಕ ಪ್ರಕಟಿಸಿದ  ನಂತರ ಪಕ್ಷಾವಾರು ಮೇಲಾಟಗಳು ಶುರುವಾಗಿವೆ. ಇದೇ ವೇಳೆ ರಾಜಸ್ತಾನದಲ್ಲಿ ಬಿಜೆಪಿ ಹಾಕಿದ ಪೋಸ್ಟರ್‌ವೊಂದು ಭಾರೀ ವಿವಾದಕ್ಕೆ ಮತ್ತು ಕಾನೂನು ಕ್ರಮಕ್ಕೆ ತುತ್ತಾಗುವಂತೆ ಮಾಡಿದೆ. ಗೆಲ್ಲಲೇಬೇಕಾದ ಅನಿವಾರ‍್ಯತೆಯಲ್ಲಿ ಬಿಜೆಪಿ ಇಲ್ಲಿ ಸುಳ್ಳಿನ ಮೊರೆ ಹೋಗಿದೆ.

ಬಿಜೆಪಿ ರೈತರ ವಿಷಯವನ್ನು ಎತ್ತಿಕೊಂಡು ಗೆಹ್ಲೋಟ್ ಸರಕಾರವನ್ನು ರಾಜಸ್ತಾನ ಸಹಿಸುವುದಿಲ್ಲ ಎಂಬ ಅಭಿಯಾನವನ್ನು ನಡೆಸಿತು. ಇದರಲ್ಲಿ ಅಂಟಿಸಿದ ಪೋಸ್ಟರ್‌ನಲ್ಲಿ ಮಾಧೇರಾಂ ಎಂಬ ರೈತನ ಫೋಟೊ ಇತ್ತು. 19 ಸಾವಿರಕ್ಕೂ ಹೆಚ್ಚು ರೈತರ ಜಮೀನು ಏಲಂ ಆಗಿದೆ ಎಂದು ಅದರಲ್ಲಿ ಬರೆಯಲಾಗಿತ್ತು.

ಫೋಟೊದಲ್ಲಿದ್ದ ಮಾಧೇರಾಂರ 200 ಬಿಗಾ ಜಮೀನನ್ನು ಆತ ಪಡೆದ ಸಾಲಕ್ಕೆ ಗೆಹ್ಲೋಟ್  ಸರಕಾರ ಏಲಂ ಮಾಡಿಸಿದೆ ಎಂದು ಆರೋಪ ಹೊರಿಸಲಾಗಿತ್ತು. ಆದರೆ, ತನ್ನ 200 ಬಿಗಾ ಜಮೀನು ತನ್ನ ಬಳಿಯೇ ಇದೆ, ಯಾರೂ ಏಲಂ ಮಾಡಿಲ್ಲ, ಬಿಜೆಪಿ ಫೋಟೊ ಹಾಕಿ ಅಪಮಾನ ಮಾಡಿದೆ ಎಂದು ರೈತ ರಾಧೇರಾಂ ಪೊಲೀಸ್ ಠಾಣೆಯಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಪ್ರಚಾರಕ್ಕೆ ಹೋಗಿ ರಾಜಸ್ತಾನ ಬಿಜೆಪಿ ಸಿಕ್ಕಿಬಿದ್ದಿದೆ. ಮಾಧೇರಾಂರನ್ನು ಸ್ವತಃ ಮುಖ್ಯಮಂತ್ರಿ ಗೆಹ್ಲೋಟ್  ಭೇಟಿಯಾಗಿ ಪೋಸ್ಟರ್ ತೆಗೆಸುವ ಭರವಸೆ ಕೊಟ್ಟರು.

ಬಿಜೆಪಿಯ ಸ್ಥಿತಿ ಉತ್ತಮ ಆಗಿಲ್ಲ ಎಂಬುದನ್ನೆ ಈ ಸುಳ್ಳು ಪ್ರಚಾರ ತೋರಿಸುತ್ತಿದೆ.  ಈ ಪ್ರಕಾರ ಹೇಳುವುದಾದರೆ ಚುನಾವಣೆ  ಘೋಷಣೆಯಾದ ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಚುನಾವಣಾ ಪರ‍್ವ ಸಮೀಕ್ಷೆಗಳನ್ನು ಗಮನಿಸುವುದಾದರೆ,  ಮಿಝೊರಂ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿಯ ಪರಿಸ್ಥಿತಿ ನೆಟ್ಟಗಿಲ್ಲ.

ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದೇ ಚುನಾವಣಾ ಪರ‍್ವ ಸಮೀಕ್ಷೆಗಳು ಹೇಳುತ್ತಿವೆ. ಮಧ್ಯಪ್ರದೇಶದ ಬಗ್ಗೆ  ಟೈಮ್ಸ್ ನೌ- ನವಭಾರತ್ ಸಮೀಕ್ಷೆಯಲ್ಲಿ ಬಿಜೆಪಿಗೆ 110 ಸೀಟು, ಕಾಂಗ್ರೆಸ್‌ಗೆ 119 ಸೀಟುಗಳು,  ಟೈಮ್ಸ್- ಎಬಿಪಿ, ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ 113 ರಿಂದ 125 ಸೀಟು ಸಿಗಬಹುದು. ಒಟ್ಟು 230 ಸೀಟುಗಳಲ್ಲಿ ಈ ಫಲಿತಾಂಶ. ಇಲ್ಲಿಯೂ ಬಿಜೆಪಿ ಗೆಲ್ಲುವುದು ಕಷ್ಟ. ಛತ್ತೀಸ್‌ಗಢದಲ್ಲಿ ಎಬಿಪಿ ಸಮೀಕ್ಷೆ ಪ್ರಕಾರ, ಬಿಜೆಪಿಗೆ 39 ರಿಂದ 45 ಸೀಟು ಸಿಗಬಹುದು. ಅದೇ ವೇಳೆ ಕಾಂಗ್ರೆಸ್‌ಗೆ  45 ರಿಂದ 51 ಸೀಟು ಸಿಗುವ ಸಾಧ್ಯತೆ ಇದೆ. ಇಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್‌ರ ಬಿಆರ್ ಎಸ್‌ಗೆ  43ರಿಂದ 55 ಸೀಟುಗಳು ಸಿಗಲಿದೆ. ಕಾಂಗ್ರೆಸ್‌ಗೆ 48ರಿಂದ 69 ಸೀಟುಗಳ ವರೆಗೆ ಸಿಗಲಿದೆ. ಇಲ್ಲಿ ಬಿಜೆಪಿ ಚಿತ್ರದಲ್ಲೇ ಇಲ್ಲ. ಸಿಕ್ಕರೆ  5ರಿಂದ 11 ಸೀಟುಗಳು ಸಿಗಬಹುದು.

ರೈತ ಮಾಧೇರಾಂರನ್ನು ಅಪಮಾನಿಸಿದ ರಾಜಸ್ಥಾನವನ್ನೇ ಎತ್ತಿ ಕೊಳ್ಳುವುದಾದರೆ ಇಲ್ಲಿಯೂ ಬಿಜೆಪಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾರ ಮುನಿಸು. ಈಗ ವಸುಂಧರಾ ರಾಜೆ ಸಿಂಧಿಯಾ ನೇರವಾಗಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ. ಅವರು ಎಲ್ಲಾದರೂ ಬಂಡಾಯ ಎದ್ದರೆ  ರಾಜಸ್ತಾನದಲ್ಲಿ ಬಿಜೆಪಿ ಕಾಣೆಯಾಗಬಹುದು. ವಸುಂಧರಾ ರಾಜೆ ಸಿಂಧಿಯರ ಬೆಂಬಲಿಗರಿಗೆ ಬಿಜೆಪಿ ಟಿಕೆಟು ನಿರಾಕರಿಸಿದೆ. ಇವರಲ್ಲಿ  ಮುಖೇಶ್ ಗೋಯಲ್ ತನ್ನ ಬೆಂಬಲಿಗರ ಸಭೆಯಲ್ಲಿ ಅತ್ತು ಬಿಟ್ಟಿದ್ದಾರೆ. ಮಾತ್ರವಲ್ಲ ಸಂಸತ್ಸದಸ್ಯ ರಾಜ್ಯ ವರ್ಧನ ಸಿಂಗ್ ರಾಠೋಡ್,  ದಿವ್ಯ ಕುಮಾರಿಗೆ ಟಿಕೆಟ್ ಕೊಟ್ಟಿರುವುದು ರಾಜಸ್ತಾನದಲ್ಲಿ ಬಿಜೆಪಿಯ ದುಸ್ಥಿತಿಯನ್ನು ಓದಿ ಹೇಳುತ್ತಿದೆ.

ಇವೆಲ್ಲಕ್ಕೆ ವಸುಂಧರಾರ ಬಂಡಾಯವನ್ನೇ ಕಾರಣ ಎಂದು ಹೇಳಬಹುದಾದರೂ ಜಾಟ್ ವಿಭಾಗ ಬಿಜೆಪಿ ವಿರೋಧಿಯಾಗಿದ್ದೂ ಒಂದು ಕಾರಣವಾಗಿದೆ ಎಂದು ಹೊರಬರುತ್ತಿರುವ ವಿಶ್ಲೇಷಣೆಗಳು ಹೇಳುತ್ತಿವೆ. ಇನ್ನೊಂದು ಕಡೆ ಜಾತಿ ಜನಗಣತಿ ನಡೆಸುವ ಕಾಂಗ್ರೆಸ್ಸಿನ ಘೋಷಣೆಯು ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವವು ಬಿಜೆಪಿ ಹಿಂದುತ್ವ ತತ್ವಕ್ಕೆ ಪ್ರತಿಯಾಗಿ ಎದ್ದು ನಿಂತದ್ದೂ ಕಾರಣವಾಗಿದೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಒಬಿಸಿ ವಿಭಾಗದವರಿದ್ದರು. ಕಾಂಗ್ರೆಸ್ ರಾಜ್ಯಗಳಲ್ಲಿ ಜಾತಿ ಜನಗಣತಿ ಮಾಡಿ ಒಬಿಸಿ ವಿಭಾಗಗಳಿಗೆ ಅರ್ಹ ಸರಕಾರಿ ಕೆಲಸ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ತರುತ್ತೇವೆ ಎಂದಿದ್ದಾರೆ. ಇದೂ ಜಾಟ್ ಮತದಾರರನ್ನು ರಾಜಸ್ತಾನದಲ್ಲಿ ಒಲಿಸಿಕೊಳ್ಳುವುದು ಖಚಿತವಾಗಿದೆ. ಬಿಜೆಪಿಯ ದುಸ್ಥಿತಿಗೆ ಇದೂ ಒಂದು ಕಾರಣವಾಗಬಹುದು.

ಇನ್ನು ಮಧ್ಯಪ್ರದೇಶದಲ್ಲಿ ಯಾವ ಕಾರಣಕ್ಕೂ ಶಿವರಾಜ ಸಿಂಗ್ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳಿಂದಲೂ ಗೊತ್ತಾಗುತ್ತದೆ. ಬಹುತೇಕ ಬಿಜೆಪಿಯವರು ಕಾಂಗ್ರೆಸ್ಸಿಗೆ ಬರುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಜ್ಯೋತಿರಾದಿತ್ಯ ಸಿಂಧಿಯಾರ ವಿರುದ್ಧ ಬಹಳ ಅಸಮಾಧಾನ ಬಿಜೆಪಿಯವರಲ್ಲಿದೆ. ಸಿಂಧಿಯಾ ಬೆಂಬಲಿಗರೇ ಕಾಂಗ್ರೆಸ್ ಮರು ಸೇರ್ಪಡೆಯಾಗುತ್ತಿದ್ದು ಇತ್ತ ಛತ್ತೀಸ್‌ಗಢದಲ್ಲಿ ಮತ್ತೊಮ್ಮೆ ಭೂಪೇಶ್ ಬಗೇಲ್ ಸರಕಾರ ರಚಿಸುವ ಸಾಧ್ಯತೆಯನ್ನು ಸಮೀಕ್ಷೆ ತಿಳಿಸುತ್ತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢದ ಆದಿವಾಸಿ ಪ್ರದೇಶದಲ್ಲಿ ಆದಿವಾಸಿ ಸಮುದಾಯ ಬಿಜೆಪಿಯನ್ನು ಈ ಸಲ ದೂರ ಇಡುವ ಸಾಧ್ಯತೆ ಗೊಚರಿಸುತ್ತಿದೆ. ಒಟ್ಟು ನಾಲ್ಕು ರಾಜ್ಯಗಳು ಕಾಂಗ್ರೆಸ್ ತೆಕ್ಕೆಗಾಗಬಹುದು.

ಪಾರ್ಲಿಮೆಂಟ್ ಚುನಾವಣೆಗೆ ಸೆಮಿಫೈನಲ್ ಎನ್ನಲಾಗುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗಯಾ ಎಂದಾದರೆ 2024ರ ಪಾರ್ಲಿಮೆಂಟ್ ಚುನಾವಣೆ ಗೆಲ್ಲುವುದು ಕಷ್ಟ.

ಇರಲಿ ವಿಷಯಕ್ಕೆ ಬರೋಣ:

ಹಮಾಸ್, ಇಸ್ರೇಲ್ ಘರ್ಷಣೆ ಮಾನವತೆಯ ದುರಂತದತ್ತ ಸಾಗುತ್ತಿದೆ ಎಂಬುದು ಸತ್ಯ. ಚುನಾವಣೆಯ ವೇಳೆ ಫೇಕ್ ನ್ಯೂಸ್‌ಗಳು  ಹಬ್ಬಿಸಲಾಗುವಂತೆ ಹಮಾಸ್-ಇಸ್ರೇಲ್ ಯುದ್ಧದ ಕುರಿತ ಸುಳ್ಳು ಸುದ್ದಿಗಳೂ ಬಿರುಸಿನಿಂದ ಹರಿದಾಡುತ್ತಿವೆ. ಅಮೆರಿಕದ ಅಧ್ಯಕ್ಷ ಬೈಡನ್‌ರೇ ಈ ಫೇಕ್ ನ್ಯೂಸ್ ವಾಹಕರಾದದ್ದು  ಒಂದು ವಿಚಿತ್ರ.

ಅಮೆರಿಕದ ಯಹೂದಿ ಸಮುದಾಯವನ್ನು ಉದ್ದೇಶಿಸಿ ಮಾತಾಡುವಾಗ ಟೆರರಿಸ್ಟ್ ಗಳು ಶಿಶುಗಳ ತಲೆ ಕತ್ತರಿಸುವ ದೃಶ್ಯವನ್ನು ನಾನು ನೋಡಬೇಕಾದೀತೆಂದು ಭಾವಿಸಿಲ್ಲ ಎಂದು ಹೇಳಿ ಬಿಟ್ಟಿದ್ದರು. ಅದನ್ನು ಎತ್ತಿಕೊಂಡು ಸಿಎನ್‌ಎನ್ ಮುಂತಾದ ವಿದೇಶಿ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿದವು. ಭಾರತದಲ್ಲಿಯೂ ಇದು ದೊಡ್ಡ ಸುದ್ದಿಯಾಗಿ ಟಿವಿ, ಪತ್ರಿಕೆಗಳಲ್ಲಿ ಬಂತು. ಬೈಡನ್ ಅಂದ ಬೆನ್ನಿಗೆ  ವೈಟ್ ಹೌಸ್ ಸ್ಪಷ್ಟನೆ ಕೊಟ್ಟು ಬೈಡನ್ ಅಂತಹ ಚಿತ್ರ-ದೃಶ್ಯಗಳನ್ನು ನೋಡಿಲ್ಲ ಎಂದು ಸ್ಪಷ್ಟೀಕರಣ ನೀಡಿತು. ತಮ್ಮ ಅಧ್ಯಕ್ಷರ ಮಾತನ್ನೇ  ಅಲ್ಲಗಳೆಯುವ ವೈಟ್ ಹೌಸ್‌ನ ಶಕ್ತಿಯನ್ನು ಪ್ರಶಂಸಿತಕ್ಕದ್ದೇ ಅನ್ನಬಹುದು.

ಇತ್ತೀಚೆಗೆ ಗಾಝದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ. 58 ಮಂದಿ ಹಮಾಸನ್ನು ಬೆಂಬಲಿಸಿದ್ದಾರೆ. ಈ ಮೂಲಕ ಫತಹ್ ಪಾರ್ಟಿಯನ್ನು  ತಿರಸ್ಕರಿಸಿದ್ದಾರೆ. ಹಮಾಸ್ ಗಾಝದಲ್ಲಿ ಜನ ಬೆಂಬಲ ಇರುವ ಒಂದು ಪಾರ್ಟಿಯಾಗಿದೆ. ಅಮೆರಿಕ ಹೇಳಿದ್ದನ್ನು ಕೇಳ್ಕೊಂಡು ತೆಪ್ಪಗಿರುವ  ಸ್ವಭಾವ ಅದಕ್ಕಿಲ್ಲ. ಅದಕ್ಕೆ ಅಜೆಂಡ ಇದೆ, ಅದರಂತೆ ಅದು ಕಾರ್ಯ ನಿರ್ವಹಿಸುತ್ತಿದೆ.

ಹೇಳಿ, ಇಲ್ಲಿ ಸತ್ಯ ಯಾವುದು? ಭೂಪಟದಲ್ಲಿಯೇ ಇಲ್ಲದ ಒಂದು ದೇಶ ಫೆಲಸ್ತೀನಿನಲ್ಲಿ 1948ರಲ್ಲಿ ಪಾಶ್ಚಾತ್ಯರ ಬಲವಂತದಲ್ಲಿ ಸ್ಥಾಪನೆ  ಯಾದದ್ದಾ? ಅಥವಾ ಆಗಾಗ ನಡೆಯುವ ಆಕ್ರಮಣಕ್ಕೆ ಪ್ರತಿರೋಧವಾಗಿ ಹುಟ್ಟಿಕೊಂಡ ಹಮಾಸ್ ಗತ್ಯಂತರವಿಲ್ಲದೆ ಶಸ್ತ್ರಾಸ್ತ್ರ ದಾಳಿಯನ್ನು ನೆಚ್ಚಿಕೊಂಡದ್ದಾ? ಪ್ರಧಾನಿ ಮೋದಿ ಹೇಳುವಂತೆ ಎಲ್ಲಿಯೇ ಆಗಿರಲಿ ಯಾವುದೇ ಕಾರಣಕ್ಕಾಗಿಯೇ ಆಗಿರಲಿ ಟೆರರಿಸಂ ಮನುಷ್ಯತ್ವ ವಿರುದ್ಧದ್ದು. 


ವಿವರಣೆ 

ಪತ್ರಕರ್ತ ಮೆಹಬೂಬ್ ಎಂ ಬಾರಿಗಡ್ಡಿ 

ರಬಕವಿ ಬನಹಟ್ಟಿ




Thursday, October 12, 2023

ಉಚಿತ ವಿದ್ಯುತ್ತ ಆದೇಶ ಆದಷ್ಟು ಬೇಗನೆ ಹೊರಡಿಸಿ , ಅಧ್ಯಕ್ಷ ಶಿವಲಿಂಗ ಟಿರಕಿ ಅಗ್ರಹ .

*ಉಚಿತ ವಿದ್ಯುತ್ತ ಆದೇಶ ಆದಷ್ಟು ಬೇಗನೆ ಹೊರಡಿಸಿ , ಅಧ್ಯಕ್ಷ ಶಿವಲಿಂಗ ಟಿರಕಿ ಅಗ್ರಹ .* 

ಬಾಗಲಕೋಟೆ /
 *ರಬಕವಿ ಬನಹಟ್ಟಿ* 

ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಉಚಿತ ವಿದ್ಯುತ್ ಆದೇಶ ಹೊರಡಿಸಿ ಆದಷ್ಟು ಬೇಗನೆ ನೇಕಾರರಿಗೆ ತಲುಪಿಸುವಂತಹ ಯೋಜನೆಯಾಗಬೇಕು  ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ನೇಕಾರರು ಬಹುದಿನಗಳಿಂದ ಉಚಿತ ವಿದ್ಯುತ್ ಜಾರಿಗಾಗಿ ಕಾಯುತ್ತಿದ್ದು ,ಸರ್ಕಾರ ಇನ್ನೂ ಕೂಡ ಆದೇಶ ಹೊರಡಿಸದೆ ಇರುವುದು 
ನೇಕಾರ ಸಮುದಾಯಕ್ಕೆ ನಿರಾಶೆಯಾಗಿದೆ
 ಹಾಗೂ ಈಗಾಗಲೇ ಇರುವ ನಾಲ್ಕೈದು ತಿಂಗಳ ಬಾಕಿ ಬಿಲ್ಲನ್ನು ಪಾವತಿಸಲು ನೇಕಾರರಿಂದ ಆಗದ ಹಿನ್ನೆಲೆಯಲ್ಲಿ ಸರ್ಕಾರವೇ ಬರಿಸಿಕೊಳ್ಳಬೇಕು   ಮತ್ತು ದಿನಾಂಕ 24 -10 -2023 ರೊಳಗೆ ಆದೇಶ ಹೊರಡಿಸಿ ಉಚಿತ ವಿದ್ಯುತ್  ನೇಕಾರರಿಗೆ ತಲುಪದೇ ಹೋದಲ್ಲಿ ರಾಜ್ಯದ್ಯಂತ ನೇಕಾರರು ಸೇರಿ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆ  ಎಂದು ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು. 
ಈ ಸಂದರ್ಭದಲ್ಲಿ ,
 ರಬಕವಿ - ಬನಹಟ್ಟಿ ರಾಂಪುರ ತೇರದಾಳ ಹೊಸೂರ ,ಆಸಂಗಿ ಮಹಾಲಿಂಗಪುರ, ಮಾಲಾಪುರ ದಿಂದ ನೂರಾರು ನೇಕಾರರು  ಭಾಗವಹಿಸಿದ್ದರು .

ಈ ಸಂದರ್ಭದಲ್ಲಿ ನೇಕಾರರ ಮುಖಂಡರಾದ , ರಾಜೇಂದ್ರ ಮಿರ್ಜಿ ಆನಂದ ಜಗದಾಳ ಸಂಗಪ್ಪ ಉದ್ಗಟ್ಟಿ ,ಲಕ್ಕಪ್ಪ ಪವಾರ್ ,ಎಸ್ಐ ಕಾಯಿಸಲಿಗಿ ,ರಾಮಣ್ಣ ಹುಲಕುಂದ್ ,ಶಿವಾನಂದ ಗಟ್ನಟ್ಟಿ ,ಮತ್ತು ಎಲ್ಲ ಊರುಗಳಿಂದ ನೂರಾರು ಜನ ಭಾಗವಹಿದ್ದರು .


ವರದಿ 
ಮಹಬೂಬ್ ಎಂ ಬಾರಿಗಡ್ಡಿ

Tuesday, October 10, 2023

ತೇರದಾಳದಲ್ಲಿ ಜನತಾ ದರ್ಶನ | ಜನರ‌ ಸಮಸ್ಯೆಗೆ ಸ್ಪಂದಿಸಿದ ಡಿಸಿ*ಜನತಾ ದರ್ಶನಕ್ಕೆ ಉತ್ತಮ‌ ಪ್ರತಿಕ್ರಿಯೆ*

ತೇರದಾಳದಲ್ಲಿ ಜನತಾ ದರ್ಶನ | ಜನರ‌ ಸಮಸ್ಯೆಗೆ ಸ್ಪಂದಿಸಿದ ಡಿಸಿ

*ಜನತಾ ದರ್ಶನಕ್ಕೆ ಉತ್ತಮ‌ ಪ್ರತಿಕ್ರಿಯೆ*
----------------------------------------
ಬಾಗಲಕೋಟೆ/ರಬಕವಿ-ಬನಹಟ್ಟಿ:ಅ,೧೦- ಜನರ‌ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೇರದಾಳದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
             ತೇರದಾಳ ಪುರಸಭೆ ಆವರಣದಲ್ಲಿ ನಡೆದ ಜನತಾ ದರ್ಶನದಲ್ಲಿ ಸಮಸ್ಯೆಗಳನ್ನು ಹೊತ್ತು ತಂದ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೋಡಿಕೊಂಡರು. ಎಲ್ಲರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳು ಒಬ್ಬೊಬ್ಬರಂತೆ ಜಿಲ್ಲಾಧಿಕಾರಿಗಳ ಬಳಿ ಕಳುಹಿಸುವ ಕಾರ್ಯ ಮಾಡುತ್ತಿದ್ದರು.
           ಜನರು ಹೊತ್ತು ತಂದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದು ಬಗೆಹರಿಸುವ ಕಾರ್ಯ ನಡೆಯಿತು. ಕೆಲವೊಂದು ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಇತ್ಯರ್ತಕ್ಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.
              ಪ್ರಾರಂಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿದ ಅವರು ಗಡಿಭಾಗ ನಗರವಾಗಿರುವ ತೇರದಾಳ ಕ್ಷೇತ್ರದ ಜನತೆ ತಾಲೂಕಾ ಕಚೇರಿ, ಜಿಲ್ಲಾ‌ಕಚೇರಿಗೆ ತೆರಳಿ, ಹಣ, ಸಮಯ ವ್ಯರ್ಥವಾಗುವದನ್ನು ತಡೆದು ಅವರ ಸಮಸ್ಯೆಗೆ ತತ್ ಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ‌ಮಟ್ಟದ ಅಧಿಕಾರಿಗಳು ಆಗಮಿಸಿದ್ದಾರೆ ಎಂದರು.
          ಇಲ್ಲಿಯ ಜನತೆಗೆ ವಿದ್ಯುತ್, ಕುಡಿಯುವ ನೀರು, ಜಿ.ಎಲ್.ಬಿ.ಸಿ ಯಿಂದ‌ ರೈತರಿಗೆ ನೀರು ಪೂರೈಕೆ ಸೇರಿದಂತೆ ಅನೇಕ ಸಮಸ್ಯೆ ಇವೆ. ಅದರ ಜೊತೆಗೆ ಬರಗಾಲ ಆವರಿಸಿದ್ದರಿಂದ‌ ಬರಗಾಲ ಕಾಮಗಾರಿ ಚುರುಕುಗೊಳಿಸಬೇಕು ಎಂದರು.
            ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಜಿಲ್ಲೆಯ 2ನೇ ಜನತಾ ದರ್ಶನ ಇದಾಗಿದ್ದು, ಇದಕ್ಕಿಂತ ಮೊದಲು  ತೇರದಾಳಕ್ಕೆ ಆಗಮಿಸಿ ಇಲ್ಲಿಯ ಕಾಮಗಾರಿ ವೀಕ್ಷಿಸುತ್ತಿದ್ದಾಗ ಇಲ್ಲಿಯ ಹಿರಿಯರು ಈ ಭಾಗದ ಹಲವು ಸಮಸ್ಯೆಗಳನ್ನು ಹೇಳಿದ್ದರು. ಸಮಸ್ಯೆ ಮತ್ತು ಗಡಿ ಭಾಗದ ನಗರವಾಗಿದ್ದರಿಂದ ಅಯ್ಕೆ ಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಿಂದ‌‌ ತಕ್ಷಣ‌ ಸಮಸ್ಯೆಗೆ ಪರಿಹಾರ ದೊರೆಯದಿದ್ದರೂ ಕೆಲವು ದಿನಗಳ ನಂತರವಾದರೂ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಅಧಿಕಾರಿಗಳು ಇರುವುದು ಜನರಿಗೋಸ್ಕರ, ಕಟ್ಟಡೊಳಗೆ ಕುಳಿತು ಕೇವಲ ಕಡತಗಳ ಆಧಾರದ ಮೇಲೆ‌ ಕಾರ್ಯ ಗಮನಿಸುವದನ್ನು ಬಿಟ್ಟು ಜನರ‌ ಜೊತೆಗೆ ಖುದ್ದಾಗಿ ಇದ್ದು, ಸಮಸ್ಯೆ ಅವಲೋಕಿಸುವಂತಾಗುವುದು ಎಂದರು.
         ಜಿ.ಪಂ ಸಿಇಓ ಶಶಿಧರ ಕುರೇರ‌ ಮಾತನಾಡಿ ಗ್ರಾಮೀಣ‌ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಜನ ಜೀವನ ಮಿಷನ ಯೋಜನೆಯಡಿ ಕಾಯಗಾರಿಗಳು ಪ್ರಗತಿಯಲ್ಲಿದ್ದು, ಹಿಪ್ಪರಗಿ ಬ್ಯಾರೇಜನಿಂದ ನೀರು ತರಲಾಗುತ್ತಿದೆ. ಇದಕ್ಕಾಗಿ 335 ಕೋಟಿ ಅನುದಾನ ಇದ್ದು, ಈ ಕಾಮಗಾರಿ 18 ತಿಂಗಳಲ್ಲಿ ಮುಗಿಯಲಿದೆ. ಇದರಿಂದ ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಕೈ ಜೋಡಿಸಬೇಕು ಎಂದರು.
            ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಗಿರೀಶ ಸ್ವಾದಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್ ...
*ಬಸ್ ನಲ್ಲಿ ಉಚಿತ ಟಿಕೇಟ್ ಪಡೆದು ಡಿಸಿ ಪ್ರಯಾಣ*
-------------------------------------
ತೇರದಾಳದಲ್ಲಿ ನಡೆದ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತದಿಂದ‌ ಬಸ್ ನಲ್ಲಿ ಪ್ರಯಾಣ ಮಾಡಿದರು. ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯ ಶೂನ್ಯ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸಿದರೆ,  ಉಳಿದ ಅಧಿಕಾರಿಗಳು ಟೊಕೇಟ್ ಪಡೆದು ಪ್ರಯಾಣ ಮಾಡಿದರು. ಜನತಾ ದರ್ಶನ‌ ಕಾರ್ಯಕ್ರಮಕ್ಕೆ‌ ಉತ್ತಮ ಸ್ಪಂದನೆ‌ ವ್ಯಕ್ತವಾಯಿತು.

Thursday, August 17, 2023

ನೇಕಾರರಿಗೆ 10 ಹೆಚ್ ಪಿ ಉಚಿತ ವಿದ್ಯುತ್ ಜಾರಿ ಮಾಡಿ , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪತ್ರ ಅಭಿಯಾನ ಚಳುವಳಿ:




 *ರಬಕವಿ ಬನಹಟ್ಟಿ*: 


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ  ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ , ಕರ್ನಾಟಕ ನೇಕಾರ ಸೇವಾ ಸಂಘ ಇವರ ಆಶ್ರಯದಲ್ಲಿ ಸಭೆಯನ್ನು ನಿಯೋಜನೆ ಮಾಡಲಾಗಿತ್ತು . 

ಕರ್ನಾಟಕ ಸರ್ಕಾರ  07-07-2024 ರಂದು ರಾಜ್ಯ ನೇಕಾರ ಒತ್ತಾಯದ  ಮೇರೆಗೆ  10 ಹೆಚ್ ಪಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು ಘೋಷಣೆ ಮಾಡಿಯು ಸರ್ಕಾರ ಅನುಷ್ಠಾನ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ  , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು  ಸರ್ಕಾರಕ್ಕೆ ಮನವರಿಕೆ ಮಾಡುವುದು ಗೋಸ್ಕರ ,  ಪತ್ರ ಅಭಿಯಾನ ಚಳುವಳಿ ಮಾಡಲಾಗುವುದು   ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು . 

 ಪ್ರತಿಯೊಬ್ಬರೂ ಪತ್ರ ಅಭಿಯಾನ ಪ್ರಾರಂಭಿಸೋಣ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಕಾರರನ್ನು ಹೋರಾಟಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭ ಮಾಡಿ  , ಜಿಲ್ಲಾ ಮಟ್ಟದ ಸಭೆಯನ್ನು ಮಾಡಲಾಗುವುದು  ಹಾಗೂ ದಿನಾಂಕ 18-08-2023 ರಂದು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನೇಕಾರರು ಮಾನಕಾಪೂರದಲ್ಲಿ ಸಭೆ ಸೇರಿ ಚರ್ಚಲಾಗುವುದು ನಾವುಗಳು ಕೂಡಾ ಸಭೆಗೆ ಭಾಗವಹಿಸಲಿದ್ದೆವೆ ಎಂದು ಹೇಳಿದರು .


 ದಿ 27-08-2023 ರಂದು ರಬಕವಿ ಬನಹಟ್ಟಿಯಲ್ಲಿ ಬಾಗಲಕೋಟ ಜಿಲ್ಲೆ ಮತ್ತು ಬೆಳಗಾವಿ  ವಿಜಯಪುರ ಜಿಲ್ಲೆಯ ನೇಕಾರರ ಬೃಹತ್ ಸಭೆಯನ್ನು , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಕರೆಯಲು ನಿರ್ಧರಿಸಲಾಗಿದೆ ಈ ಸಭೆಯು ನಾಡಿನ ಲಕ್ಷಾಂತರ ಜನ ನೇಕಾರರ ಶಾಶ್ವತ ಪರಿಹಾರಕ್ಕಾಗಿ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಸೌಲಭ್ಯಗಳು ದೊರೆಯಲಿ ಎನ್ನುವ ಉದ್ದೇಶವಾಗಿದೆ ಹಲವಾರು ವರ್ಷಗಳಿಂದ ನಮ್ಮೆಲ್ಲರ ಹೋರಾಟಗಳನ್ನು ಮುಂದಿಟ್ಟುಕೊಂಡು ಬೇರೆಯವರು ಕೆಲವಿಷ್ಟು ನಮ್ಮ ನಾಯಕರುಗಳು ಒಳಗೂಡಿ ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಹಾಗೂ ವ್ಯಾಪಾರೀಕರಣದ ಉದ್ಯಮಿಗಳಾಗುವ ದೃಷ್ಠಿ ಕೊನದಿಂದಾಗಿ ಪ್ರಾಮಾಣಿಕವಾದ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ . ಇದಕ್ಕೆ ಯಾವುದಕ್ಕೂ ಜಗ್ಗದೆ ನಿರಂತರ ಹೋರಾಟಗಳು  ನೇಕಾರರ ಸ್ವಂತ ಬಸ್ ಚಾರ್ಜ್ ಹಾಗೂ ಊಟ  ತಮ್ಮದೆ  ,   ಸ್ವಂತ ಖರ್ಚಿನಲ್ಲಿ ಹೋರಾಟಗಳು ನಿರಂತರ ನಡೆಯುತ್ತಿವೆ ಎಂದು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ   ಹೇಳಿದರು . 


ಇದೇ ಸಂದರ್ಭದಲ್ಲಿ ಸಂಗಪ್ಪ ಉದ್ಗಟ್ಟಿ  ಲಕ್ಕಪ್ಪ ಪವಾರ್ ,ಆನಂದ್ ಜಗದಾಳ್ ,ಮಹದೇವ್ ನುಚ್ಚಿ, ಆನಂದ ಜೀರಗಾಳ ,ಆನಂದ್ ಬಾಣಕಾರ್ , ಅಶೋಕ್ ಕರಲಟ್ಟಿ , ಕಾಡು ಕೋಕಟ್ನೂರ್ , ಬಸು ಚಿಂಚಕಂಡಿ , ರಬಕವಿ ಬನಹಟ್ಟಿ ರಾಂಪುರ ಹೊಸೂರ್ ಆಸಂಗಿ ಹುನ್ನೂರ್ ಮಹಾಲಿಂಗಪುರ್ ತೆರದಾಳ ದ ನೂರಾರು ಜನ ನೇಕಾರರು ಭಾಗವಹಿಸಿದ್ದರು .


ವರದಿ : 
 ಮಹಬೂಬ್ ಬಾರಿಗಡ್ಡಿ

Saturday, August 12, 2023

ಮುಸ್ಲಿಂ ವ್ಯಕ್ತಿ ಖಲೀಲ್ ಅವರ ಜೀವ ಬಚಾವ ಮಾಡಿದ ಹಿಂದೂ ಯುವಕ ವಿಠಲ್ ಒಡೆಯರ್ :




  ರಬಕವಿ ಬನಹಟ್ಟಿ  :


  ಶೃದ್ಧಾಂಜಲಿ ಮದುವೆಯ ಕಾರ್ಯಕ್ರಮಗಳಿಗೆ  ಔತನಕೂಟ ಏರ್ಪಾಟ ಮಾಡಿಕೊಳ್ಳುವುದು ಸಹಜ , ಆದರೆ ಇತ್ತೀಚಿಗೆ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ  ನಗರದ , ಖಲೀಲ್ ರಾಜನ್ನವರ್ ತನ್ನ ಸಂತಸ ಮುಗಿಲು ಮುಟ್ಟಿದ್ದಲ್ಲದೆ, ಜೀವ ಉಳಿದ ಹಾಗೂ ಉಳಿಸಿದಕ್ಕಾಗಿ , ಸಾವಿರಾರು ಜನತೆಗೆ ಔತನಕೂಟ ಏರ್ಪಡಿಸುವುದರ ಮೂಲಕ  ,    ಸೃಷ್ಟಿಕರ್ತನಿಗೆ  ಹೃದಯಪೂರ್ವಕವಾಗಿಅಭಿನಂದನೆ ಮಾಡುವುದರ ಮೂಲಕ , ನೆಮ್ಮದಿ ಕಾಣುವಲ್ಲಿ ವಿಶೇಷವಾಗಿತ್ತು.

ನಡೆದಿದ್ದೇನು ? 

ಈಚೆಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ರಾಮಪುರ ನಗರದ ವ್ಯಕ್ತಿ  ಖಲೀಲ ರಾಜನ್ನವರನನ್ನು ಹಿಂದೂ ಯುವಕ  ಮಲ್ಲಾಪುರ ಗ್ರಾಮದ ವಿಠ್ಠಲ ಒಡೆಯರ್ ಜೀವವನ್ನು ಕಾಪಾಡುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆ.

ನದಿ ದಡದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ವಿಠ್ಠಲ ಘಟಪ್ರಭಾ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ್ದಾನೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ.

ಮತ್ತೊರ್ವ ಪ್ರಯಾಣಿಕ ವಾಹನದಲ್ಲಿ ಸಿಲುಕಿಕೊಂಡಿರುವದನ್ನು ಗಮನಿಸಿ ಈಜು ಬರುವದಿಲ್ಲವೆಂದು ಅರಿತ ವಿಠ್ಠಲ, ತಕ್ಷಣ ನದಿಗೆ ಹಾರಿ ಕಾರನ್ನು ತಲುಪಿo ಪ್ರಯಾಣಿಕನನ್ನು ಸುರಕ್ಷಿತವಾಗಿ ಹೊರಗೆಳೆದು ನದಿಯ ದಡಕ್ಕೆ ಕರೆದೊಯ್ದ ಸಿನಿಮೀಯ ಘಟನೆ ನಡೆದಿತ್ತು.


ಇದರ ಸಂಭ್ರಮಕ್ಕಾಗಿ ಶುಕ್ರವಾರದಂದು ರಬಕವಿ-ಬನಹಟ್ಟಿಯ ಸಾವಿರಾರು ಜನರಿಗೆ ಔತನಕೂಟದೊಂದಿಗೆ ಸಂಭ್ರಮಿಸುವ ಮೂಲಕ ತನ್ನ ಜೀವದಾನಕ್ಕೆ ಕಾರಣನಾದ ಯುವಕ ವಿಠ್ಠಲ ಒಡೆಯರ್ ಅವರನ್ನು ಸನ್ಮಾನಿಸಿದ ವಿಶೇಷ ಘಟನೆ ನಡೆಯಿತು.



ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಜಮೀಯತೆ ಉಲೇಮ  ಹಿಂದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌಲಾನ ಮೋಸಿನ್ ಗೋಕಾಕ್ ಹಾಗೂ ಅರುಣ್ ಬೇವೂರ್, 
ಅಯ್ಯುಬ ಖಾನ್ ಹೊರಟ್ಟಿ  , ಇನ್ನೂ ಹಲವಾರು ನಗರದ  ಗಣ್ಯ ವ್ಯಕ್ತಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು .

ವರದಿ :
ಮಹಬೂಬ್ ಬಾರಿಗಡ್ಡಿ

Friday, August 11, 2023

ದಿಕ್ಕೆ ಇಲ್ಲದ ಅನಾಥವಾದ ರಾಮಪುರ ಮುಖ್ಯರಸ್ತೆ



 *ರಬಕವಿ ಬನಹಟ್ಟಿ* : 
ಅವಳಿ ನಗರಗಳು
ತಾಲೂಕ ರಚನೆಯಾಗಿ  ಹಲವು ವರ್ಷಗಳು ಕಳೆದರೂ ಕೂಡ 
 ರಬಕವಿ ಬನಹಟ್ಟಿ
ನಗರದ  ಸೌಂದರ್ಯ ಹಾಗೂ ಅಭಿವೃದ್ಧಿ ಬಗ್ಗೆ
ಯಾರುತಲೆಕೆಡಿಸಿಕೊಳ್ಳುತ್ತಿಲ್ಲ ,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಹೃದಯ ಭಾಗದಲ್ಲಿರುವಂತಹ  ರಾಮಪುರದ ಮುಖ್ಯ  ರಸ್ತೆಯ
  ಒಳಚರಂಡಿಯ ಕಾಮಗಾರಿ ಮುಗಿದು ಕೆಲವು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ  ಆಗದೆ , ಹಾಗೆ ಉಳಿದುಕೊಂಡಿರುವುದು
 ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ .
ರಬಕವಿ ಬನಹಟ್ಟಿ ನಗರಸಭೆ ಒಟ್ಟು ಜನಸಂಖ್ಯೆ ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚು ಇರುವಂತ ಪ್ರದೇಶದಲ್ಲಿ
ತೆಗ್ಗು
 ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ,ಆಟೋ ಚಾಲಕರು ದ್ವಿಚಕ್ರನ ವಾಹನದ ಸವಾರರು
 ಓಡಾಡಲು ಹರಸಹಾಸ
 ಪಡುತ್ತಿದ್ದಾರೆ .

ರಾಂಪುರ್ ನಗರದ ಮುಖ್ಯ ರಸ್ತೆ  ನಗರಸಭೆಯ ರಸ್ತೆಯೋ ?
ಅಥವಾ ಪಿಡಬ್ಲ್ಯೂಡಿ ರಸ್ತೆಯೋ ? ಎನ್ನುವುದು
 ಸಾರ್ವಜನಿಕರಲ್ಲಿ ಪ್ರಶ್ನೆಯಾಗಿ
 ಕಾಡ್ತಾ ಇದೆ .

ರಬಕವಿ ಬನಹಟ್ಟಿ ಅವಳಿ ನಗರಗಳ ಹೃದಯ ಭಾಗದಲ್ಲಿರುವಂತ ರಾಂಪುರ್ ಮುಖ್ಯ ರಸ್ತೆಯಲ್ಲಿ
ಆಟೋ ಚಾಲಕರ ಹಾಗೂ ದ್ವಿಚಕ್ರ ವಾಹನಗಳ ಸವಾರರ ಓಡಾಟದ ಪರಿಸ್ಥಿತಿಯನ್ನು ನೋಡಿ
 ಅಯ್ಯೋ ಪಾಪ  ಅನಿಸುತ್ತದೆ .

ಕೆಲವು ತಿಂಗಳ ಹಿಂದೆ ಆಟೋ ಚಾಲಕರ ಸಂಘದ ವತಿಯಿಂದ
ಪ್ರತಿಭಟನೆಯನ್ನು ಮಾಡಿ ,
 ಮುಖ್ಯರಸ್ತೆ ಅಭಿವೃದ್ಧಿಯ ಬಗ್ಗೆ ಮನವಿ ಕೊಡುವ ಸಂದರ್ಭದಲ್ಲಿ ,
ಈ ಮುಖ್ಯ ರಸ್ತೆಯ ವಿಷಯವನ್ನು , ನಗರಸಭೆಯ
 ಸಂಬಂಧಪಟ್ಟ ಅಧಿಕಾರಿಗಳಿಗೆ
 ಕೇಳಿದರೆ  ,ಇದು ನಮಗೆ ಸಂಬಂಧಪಟ್ಟ ರಸ್ತೆ ಅಲ್ಲ ಎಂದು ಹೇಳಿಕೊಂಡಿದ್ದಾರೆ .

ಈ ಅನಾಥವಾದ ರಸ್ತೆಗೆ  ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು  ಅಗಲೀಕರಣ ಮಾಡಿ  ಅಭಿವೃದ್ಧಿಗೊಳಿಸಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ  .

 ವರದಿ : ಮಹಿಬೂಬ್ ಎಂ ಬಾರಿಗಡ್ಡಿ