Tuesday, June 25, 2024

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ 

 ಬಾಗಲಕೋಟೆ / ರಬಕವಿ - ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕೆಲವು ಕಾಲ ರಸ್ತೆಯನ್ನು ತಡೆದು ಭಾರತೀಯ ಜನತಾ ಪಕ್ಷವು ಬೃಹತ್ ಪ್ರತಿಭಟನೆ ಮಾಡಿದರು . 

ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕೈಗೊಂಡಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೇರದಾಳ್ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು . 

 ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸೌದಿ 
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಹೇಳಿದರು . 

ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮಾನ್ಯರು, ಕಾರ್ಮಿಕರು, ಬಡವರು, ರೈತರು ಮುಖ್ಯವಾಗಿ ನಮ್ಮ ನೇಕಾರರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ತಕ್ಷಣ ಈ ನಿರ್ಧಾರ ಹಿಂಪಡೆಯುವಂತೆ ಎಚ್ಚರಿಸಿದರು 
 
ಈ ಸಂದರ್ಭದಲ್ಲಿ ರಬಕವಿ. ಬನಹಟ್ಟಿ ಬಿಜೆಪಿ ನಗರ ಘಟಕದ ಧ್ಯಕ್ಷರಾದ . ಶ್ರೀಶೈಲ್ ಬೀಳಗಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುರೇಶ್ ಅಕ್ಕಿವಾಟ್ ,ಮತ್ತು ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 ವರದಿ : ಮಹಬೂಬ್ ಎಂ ಬಾರಿಗಡ್ಡಿ

Monday, June 17, 2024

ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

*ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

 ಇದ್ಗಾ ಮೈದಾನದಲ್ಲಿ ನಮಾಜ್ ಮಾಡಲು ಸಾವಿರಾರು ಜನ ಮುಸ್ಲಿಂ ಬಾಂಧವರು ಬಾಗಿ....

ಎಲ್ಲ ಜೀವರಾಶಿಗಳಲ್ಲಿ ಶ್ರೇಷ್ಠವಾದದ್ದು ಮಾನವ ಜನ್ಮ ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ನಮ್ಮವರು ತಮ್ಮವರು ಅನ್ನುವ ಮನೋಭಾವದಿಂದ ಕಾಣುತ್ತಾ ದೇವರ ಜ್ಞಾನ ಮಾಡೋಣ ಪ್ರತಿದಿನ ನಮಾಜ್ ಮಾಡುವ ಮೂಲಕ ನಮಗೆ ಬಂದ ಕಷ್ಟವನ್ನು ದೂರಮಾಡು ಎಂದು ಅಲ್ಲಾ ಹತ್ತಿರ ಕೇಳಿಕೊಳ್ಳೋಣ.
ಎಲ್ಲರನ್ನೂ ಸಮಾನವಾಗಿ ನೋಡೋಣ ಭೂಮಿಯ ಮೇಲೆ ಇರುವ ಎಲ್ಲ ಜೀವ ರಾಶಿಗಳನ್ನು ಚೆನ್ನಾಗಿಟ್ಟು ಕಾಪಾಡು ಎಂದು ದೇವರ ಸ್ಮರಣೆ ಮಾಡೋಣ ಎಂದು ಮೋಸಿನ್ ಮೌಲಾನಾ ಗೋಕಾಕ್ ಎಲ್ಲರಿಗೂ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಮುಸ್ಲಿಂ ಬಾಂಧವರು ಬಹಳ ಸರಳ ಹಾಗೂ ಶಾಂತತೆಯಿಂದ 
ಸಾವಿರಾರು ಸಂಖ್ಯೆಯಲ್ಲಿ ರಬಕವಿಯ ವಿದ್ಯಾ ನಗರ ಹತ್ತಿರ ಇರುವ ಇದ್ಗಾ ಮೈದಾನಕ್ಕೆ ಬಂದು ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.

ವರದಿ:- ಮೊಹಮ್ಮದ್ ಹುಸೇನ್ ಲೆಂಗ್ರೆ

Sunday, June 16, 2024

ಶಾಂತಿಯಿಂದ ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ

 ಬಾಗಲಕೋಟೆ / 

ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು . 

 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೆಂಡಾರಿ ಮೊಹಲ್ಲಾದ ಇದಗಾ ಮೈದಾನದಲ್ಲಿ ಸಾಮೂಹಿಕವಾಗಿ ಬಕ್ರೀದ್ ಹಬ್ಬದ ಪ್ರಾರ್ಥನೆ ಯನ್ನು ಸಲ್ಲಿಸಿದರು . ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಕೈ ಕುಲುಕಿದರ ಮೂಲಕ ಒಬ್ಬರಿಗೊಬ್ಬರು ಶುಭಾಶಯಗಳು ವಿನಮಯ ಮಾಡಿಕೊಂಡರು . 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ನಾವುಗಳು ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ಮಾಡಬೇಕು ಹೊರತು ನಮ್ಮ ದೊಡ್ಡ ಸ್ಥಿಕೆಯನ್ನು ತೋರಿಸಲಿಕ್ಕೆ ಮಾಡಬಾರದು ಎಂದು ಹೇಳಿದರು . ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 
 
 ವರದಿ ಮಹಿಬೂಬ ಎಂ ಬಾರಿಗಡ್ಡಿ

Tuesday, June 11, 2024

ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬನಹಟ್ಟಿ ಆಟೋ ಚಾಲಕರು*



ಬಾಗಲಕೋಟೆ/ ರಬಕವಿ ಬನಹಟ್ಟಿ :

ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40 ರಿಂದ 50 ವರ್ಷಗಳಿಂದ ಆಟೋ ನಿಲ್ದಾಣ ಇದೆ   ಈ ಆಟೋ ನಿಲ್ದಾಣದ 400 ಕ್ಕಿಂತ ಅಧಿಕ ಆಟೋ ಚಾಲಕರು ತಮ್ಮ ತಮ್ಮ ಕುಟುಂಬದ ಉಪಜೀವನವನ್ನು ಮಾಡುತ್ತಿ ರೂವಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ ಅಂದ್ರೆ ಮಹಿಳೆಯರಿಗಾಗಿ ಉಚಿತ ಬಸ್ ಮಾಡಿದ ಮೇಲೆ ಆಟೋ ಚಾಲಕರಿಗೆ ಭಾರಿ ವಾಡಿತ ಬಿದ್ದಿದೆ . ಹೀಗಿರುವಾಗ  ನಗರದ ಹೊಸ ಬಸ್ ನಿಲ್ದಾಣದ ಕಟ್ಟಡದ ಮುಕ್ತಾಯ ಹಂತ ತಲುಪಿರುವಾಗ  , ಕೆಎಸ್ಆರ್ಟಿಸಿ ಅಧಿಕಾರಿಗಳ ಆದೇಶ ಅನುಸಾರ ಬಸ್ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನ ತಡೆ ಕಂಬಗಳನ್ನು ಹಾಕಲಿಕ್ಕೆ ಮುಂದಾದಾಗ ಆಟೋ ನಿಲ್ದಾಣದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ .

 ದಿಡೀರನೆ ನಗರದ 400 ಕಿಂತ ಹೆಚ್ಚು ಆಟೋಗಳನ್ನು ಬಂದು ಮಾಡಿ ಚಾಲಕರು ಹಾಗೂ ಮಾಲಕರು ಸೇರಿ ರಬಕವಿ ಬನಹಟ್ಟಿ ನಗರ ಸಭೆ ಅಧಿಕಾರಿಗಳಿಗೆ ಹಾಗೂ ತೇರದಾಳ ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು .

 ಈ ಸಂದರ್ಭದಲ್ಲಿ ಮಾತನಾಡಿದ ಬಸ್ಸಿರ ಜಮಾದಾರ್ , ಕಳೆದ ಸುಮಾರು 40 ವರ್ಷಗಳಿಂದ ಆಟೋ ಚಾಲಕರು ಬಸ್ ನಿಲ್ದಾಣದ ಹತ್ತಿರ ನಾವು  ನಮ್ಮ ಉಪಜೀವನವನ್ನು ನಡೆಸುತ್ತಿದ್ದೇವೆ . ಬಸ್ ನಿಲ್ದಾಣದ ಹಳೆ ಕಟ್ಟಡವನ್ನು ತೆರೆವುಗೊಳಿಸಿದ್ದಾರೆ  . ಇದರಿಂದ ನಮ್ಮ ಅಟೋಗಳನ್ನು ನಿಲ್ಲುಗಡೆ ಮಾಡ್ಲಿಕ್ಕೆ ಜಾಗ  ಇರೋದಿಲ್ಲ ಇದೇ ಜಾಗದಲ್ಲಿ ನಮ್ಮ ಉಪಜೀವನ ನಡೆಯುತ್ತಿದೆ  .  ಆದ್ದರಿಂದ ನಾವುಗಳು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ,  ಇನ್ನೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ , ಅಧಿಕಾರಿಗಳು ಏನು ಹೇಳುತ್ತಾರೆ  ಅನ್ನುವುದನ್ನು ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷೆ ಮಾಡಿ  , ಧರಣಿ ಮುಖಾಂತರ ಆಟೋ ನಿಲ್ದಾಣಕ್ಕೆ ಜಾಗವನ್ನು ತೆಗೆದುಕೊಳ್ಳುವಂತ ಕೆಲಸ ಮಾಡುತ್ತೆವೆ ಎಂದು ಎಚ್ಚರಿಕೆಯನ್ನು ನೀಡಿದರು  .

 ಈ ಸಂದರ್ಭದಲ್ಲಿ  ಶ್ರೀ ಕಾಡ ಸಿದ್ದೇಶ್ವರ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಅಪ್ಸರ ಭಾಷಾ ಪೆಂಡಾರಿ , ಅಶೋಕ್ ಹೊಸಕೋಟೆ, ಅಕ್ರಂ ರಾಜನ್ನವರ್ , ಮಲ್ಲಪ್ಪ  ದಿವಾನ್ದಾರ್ ಮುಸ್ತಾಕ್ ಪೆಂಡಾರಿ ,ಇಕ್ಬಾಲ್ ಮುಧೋಳ್ ಸುಭಾಷ್ ಪಾರತ್ನ ಹಳ್ಳಿ , ರಾವ್ ಸಾಬ್ ಶಿಂದೆ ಪ್ರಕಾಶ್ ಪುಕಾಳೆ ,ಈಶ್ವರ್ ,ಶಂಶೋದ್ದೀನ್ ಪೆಂಡಾರಿ , ರಾಜು ಎಂಟ್ ಗೌಡ, ಆಯಾಜ ಇನಾಮ್ದಾರ್ ಸಿದ್ದಲಿಂಗ ಗೌಡ ಪಾಟೀಲ್ ಇನ್ನೂ ಅನೇಕ ಆಟೋ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು. 

 ವರದಿ :  ಮಹಿಬೂಬ್ ಎಂ ಬಾರಿಗಡ್ಡಿ

Friday, June 7, 2024

ಆಕ್ರಮ ಲೈಂಗಿಕ ಚಟುವಟಿಕೆಗಳ ತಾನವಾಗುತ್ತಿರುವ ಬನಹಟ್ಟಿ ರೇವಣ್ಣ ಲಾಡ್ಜ್*

*ಆಕ್ರಮ  ಲೈಂಗಿಕ ಚಟುವಟಿಕೆಗಳ ತಾನವಾಗುತ್ತಿರುವ ಬನಹಟ್ಟಿ ರೇವಣ್ಣ ಲಾಡ್ಜ್* 

 *ಬಾಗಲಕೋಟೆ / ರಬಕವಿ ಬನಹಟ್ಟಿ :*

 ತಾಲೂಕಿನ ಬನಹಟ್ಟಿ ನಗರದಲ್ಲಿ ದಿನೇ ದಿನೇ ಆಕ್ರಮ ಅನೈತಿಕ ಲೈಂಗಿಕ ಚಟುವಟಿಕೆಗಳು ನಡೆಯುವಲ್ಲಿ ಭಾರಿ  ಹೆಸರುವಾಸಿಯಾಗುತ್ತಿದೆ . ಹಾಸನದ ಪ್ರಜ್ವಲ್ ರೇವಣ್ಣ , ಎಚ್ ಡಿ ರೇವಣ್ಣ ಅಂತ ಸುದ್ದಿಗಳು ದಿನೇ ದಿನೇ ಕೇಳಿ ಸಾರ್ವಜನಿಕರು ದಂಗಾಗಿ ಹೋಗಿರುವಾಗ , ಇಲ್ಲೊಂದು  ಇದೇ ಹೆಸರಿನ ರೇವಣ್ಣ ಲಾಡ್ಜ್ ಒಂದರಲ್ಲಿ ಮೈ ಮಾರಾಟಗಳ ಕೇಂದ್ರ ಸ್ಥಾನ ವಾಗುತ್ತಿರುವಾಗ ಸ್ಥಳೀಯ ಸಾರ್ವಜನಿಕರು ದಂಗಾಗಿದ್ದಾರೆ . ಲಾಡ್ಜ್ ಗಳಿಗಾಗಿ ಸರ್ಕಾರದ ಸುತ್ತೋಲೆ , ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ , ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಫ್ಲೆಕ್ಸ ಬೋರ್ಡ್ ಗಳು ಇಟ್ಟುಕೊಂಡು ಆಕ್ರಮ ವಾಗಿ  ಲೈಂಗಿಕ ಕ್ರಿಯೆಗೆ ಅಡ್ಡೆ ,  ತಾಣವಾಗುತ್ತಿರುವ ವಿಷಾದಕರ ಸಂಗತಿಯಾಗಿದೆ.

 ನಗರದ ಸೋಮವಾರ ಪೇಟದಲ್ಲಿ ರೇವಣ್ಣ ಲಾಡ್ಜ್ ಹೆಸರಿನ ಲಾಜ್ ಒಂದರಲ್ಲಿ ಅಕ್ರಮವಾಗಿ ಲೈಂಗಿಕ ಚಟುವಟಿಕೆಗಳ ಸಲುವಾಗಿ ಅನ್ಯ ಕೋಮಿಗಳ ಜೋಡಿ ಒಂದು ತೆರಳುತ್ತಿರುವಾಗ ಒಂದು ಸಮುದಾಯದ ಜನ ಹಿಡಿದು, ಅಕ್ರಮ ಲೈಂಗಿಕ ಕ್ರಿಯೆಗಳ  ತಾಣವಾಗುವುದನ್ನು ಸ್ಥಳೀಯ  ನಾಗರಿಕರ ಗಮನಕ್ಕೆ ಬಂದು  ಆಕ್ರೋಶಕ್ಕೆ ಕಾರಣವಾಗಿ ಕೆಲವೊಂದು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಜನರನ್ನು ಚದುರಿಸಲು ಪೊಲೀಸರು ತಮ್ಮ ಲಾಠಿಗಳ ಮೂಲಕ ಹರಸಹಾಸ ಪಡಬೇಕಾಯಿತು.

 ಅನ್ಯಕೋಮಿನ  ಸೇರಿದ ಜೋಡಿಗಳು ಈಗ ಪೊಲೀಸರ ಅಥಿತಿಯಾಗಿದ್ದಾರೆ. ಬನಹಟ್ಟಿ ನಗರದ ಪೊಲೀಸ್ ಠಾಣಾಧಿಕಾರಿ , ಈ ಅಕ್ರಮ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ , ಯಾರ ಭಯವಿಲ್ಲದೆ  ನಡೆಸುತ್ತಿರುವ, ಲಾಡ್ಜ್ ಮಾಲಿಕನನ್ನು ಕರೆದು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ .

 ವರದಿ   : 
ಮಹಿಬೂಬ್ ಎಂ ಬಾರಿಗಡ್ಡಿ

Tuesday, June 4, 2024

ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತಾ ? ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಹಿನ್ನೆಡೆ :

ಬಾಗಲಕೋಟೆ   : ಲೋಕಸಭಾ  ಮತಕ್ಷೇತ್ರದಲ್ಲಿ 5 ಜನ ಕಾಂಗ್ರೆಸ್ ಶಾಸಕರಲ್ಲಿ   ಒಬ್ಬರು ಸಚಿವರು, 3 ನಿಗಮ-ಮಂಡಳಿ ಅಧ್ಯಕ್ಷರನ್ನು ಹೊಂದಿರುವ  ಲೋಕಸಭೆ ಕ್ಷೇತ್ರ , ಆದರೆ ಅಲ್ಪ ಪ್ರಮಾಣದಲ್ಲಿ ಮತಗಳನ್ನು ಮುನ್ನಡೆ ಸಾಧಿಸಿದ್ದು ನರಗುಂದ್ ಮಾತ್ರ  ಕಾಂಗ್ರೆಸ್ ಮುನ್ನಡೆ ಉಳಿದ ಕ್ಷೇತ್ರಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ ಇದಕ್ಕೆ ಕಾರಣ ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು  ಮುಳುವಾಯಿತಾ ? ಅನ್ನುದಕ್ಕೆ ಒಳ ಒಳಗೆ ಬುಸುಗುಸು   ಪ್ರಾರಂಭವಾಗಿದೆ.

ಕೋಟೆ ನಾಡಿನ ಲೋಕಸಭ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ವೀಣಾ ಕಾಶಪ್ಪನವರು ಭಾವಿ ಸಂಸದರು ಎಂದೆ  ಪ್ರಚಾರ ಹೊಂದಿದ್ದರು. ಇದಲ್ಲದೆ ಕಾಂಗ್ರೆಸ್ ಹೈಕಮಾಂಡ್ ಕೂಡ ಇವರಿಗೆ ಬಿ ಫಾರಂ ಕೊಡೋದು ಪಕ್ಕಾ ಅಂತ ಕಾರ್ಯಕರ್ತರಲ್ಲಿ ನಂಬಿಕೆ ವಿಶ್ವಾಸ ಸಾಕಷ್ಟು  ಇಟ್ಟುಕೊಂಡಿದ್ದರು . ಹಾಗೂ  ಕೆಲವು ಮುಖಂಡರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರೂ ಅವರನ್ನೆಲ್ಲ ಹಿಂದಿಕ್ಕಿ ,  ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು  ನೆರೆಯ ವಿಜಯಪುರ ಜಿಲ್ಲೆಗೆ ಸೇರಿದ ಸಿದ್ದರಾಮಯ್ಯ ಸಂಪುಟದ ಸದಸ್ಯ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ ಅವರನ್ನು ಕರೆತಂದು ಚುನಾವಣೆ ಅಖಾಡಕ್ಕೆ ಇಳಿಸಿದರು   . 

 ಹೊಸ ಮುಖವಾಗಿದ್ದ ನೆರೆಯ ಜಿಲ್ಲೆಯ ವಿಜಯಪುರದ ಸಂಯುಕ್ತ ಪಾಟೀಲರ  ಗೆಲ್ಲಿಸುವ ನಿಟ್ಟಿನಲ್ಲಿ ಎಷ್ಟೆಲ್ಲ ರಣತಂತ್ರಗಳ ಮೊರೆ ಹೋಗಿದ್ದರು. ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರೊ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರ ಪಡೆಯಲ್ಲಿ ಉತ್ಸಾಹ ಇರಲಿಲ್ಲವೇನು ? ಎಂದು ಅನುಮಾನ ಮೂಡಿದೆ  .

 ಕ್ಷೇತ್ರದ ಕಾಂಗ್ರೆಸ್ ಶಾಸಕರೆಲ್ಲ ತಾವು ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ ಲೀಡ್ ಗಿಂತ ಹೆಚ್ಚು ಲೀಡ್ ಕೊಡುವ ಭರವಸೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ,  ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆಪಾದಿಸಿ, ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ, 
 ಸರ್ಕಾರ  ನುಡಿದಂತೆ ನಡೆದಿದ್ದೇವೆ ಎಂದು ರಾಜಾರೋಷವಾಗಿ  ಹೇಳಿಕೊಂಡಿದ್ದರು.

    ಪಂಚ ಗ್ಯಾರೆಂಟಿಗಳು  ಮಾಡಿದ ಪರಿಣಾಮ ಕಾಂಗ್ರೆಸ್ಸಿನ ಯಾವ ತಂತ್ರಗಳೂ ಫಲಕಾರಿ ಆಗಲಿಲ್ಲ.

 ಲೋಕಸಭಾ ಮತ ಕ್ಷೇತ್ರದ  , ವಿಧಾನಸಭಾ ಕ್ಷೇತ್ರವಾರು ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಗಮನಿಸಿದಾಗ ನರಗುಂದ ಕ್ಷೇತ್ರದಲ್ಲಿ‌ ಕಾಂಗ್ರೆಸ್ 900  ಮತಗಳ ಮುನ್ನಡೆಯ ಅಲ್ಪ ಅಂತರ ಸಾಧಿಸಿದ್ದು ಬಿಟ್ಟರೆ ಎಲ್ಲೂ ಕಾಂಗ್ರೆಸ್ ಅಭ್ಯರ್ಥಿ ಲೀಡ್ ಗಳಿಸಲು ಸಾಧ್ಯವಾಗಿಲ್ಲ.

    ಬಿಟಿಡಿಎ ಸಭಾಪತಿಯೂ ಆಗಿರುವ ಶಾಸಕ ಎಚ್. ವೈ.‌ ಮೇಟಿ ಅವರ ಬಾಗಲಕೋಟೆ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿಯು 16000  ಮತಗಳ ಮುನ್ನಡೆ ಸಾಧಿಸಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿತಿಮ್ಮಾಪುರ ಅವರ ಮುಧೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು  14,629
ಮತಗಳ ಮುನ್ನಡೆ ಸಾಧಿಸಿದೆ.

 ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು  ಬೀಳಗಿ ಮತಕ್ಷೇತ್ರದ  ಶಾಸಕರಾಗಿರುವ  ಜೆ.ಟಿ.‌ಪಾಟೀಲರ ಕ್ಷೇತ್ರದಲ್ಲಿ
ಬಿಜೆಪಿ  ಅಭ್ಯರ್ಥಿಯು  7356 ಬಿಜೆಪಿ ಮುನ್ನಡೆ ಸಾಧಿಸಿದ್ದು, ವೀರಶೈವಲ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಕ್ಷೇತ್ರದಲ್ಲಿ  ಬಿಜೆಪಿ 9453  ಮುನ್ನಡೆ  ಪಡೆದುಕೊಂಡಿದೆ .

ಸಚಿವರು, ನಿಗಮ-ಮಂಡಳಿ ಅಧ್ಯಕ್ಷರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಲೀಡ್ ಗಳಿಸಲಿದೆ ಎನ್ನುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿವೆ 

  
 ಬದಾಮಿ ಮತ ಕ್ಷೇತ್ರದಲ್ಲಿ 
ಬಿಜೆಪಿ ಅಭ್ಯರ್ಥಿ  ಪಿ.ಸಿ. ಗದ್ದಿಗೌಡರ ತವರು ಕ್ಷೇತ್ರ ವಾಗಿದ್ದರಿಂದ   ಇಲ್ಲಿ ಬಿಜೆಪಿ 9800 ಮತಗಳ ಮುನ್ನಡೆ ಸಾಧಿಸಿದೆ.

 ಇನ್ನು  ಬಿಜೆಪಿ ಶಾಸಕರನ್ನು ಹೊಂದಿರುವ ತೇರದಾಳದಲ್ಲಿ ಬಿಜೆಪಿ ಅಭ್ಯರ್ಥಿಗೆ 9838 ಮತ, ಜಮಖಂಡಿ ಮತಕ್ಷೇತ್ರದಲ್ಲಿ  3637 ಮತಗಳ ಮುನ್ನಡೆಯನ್ನು ಪಡೆದುಕೊಂಡಿದೆ .

  ಈ ಬಾರಿಯ ಲೋಕಸಭಾ  ಚುನಾವಣೆಯಲ್ಲಿ ಒಳ ಏಟಿನ ಪರಿಣಾಮ  ನೆರೆ ಜಿಲ್ಲೆಯ ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ,  ಎನ್ನುವ ಏಕೈಕ ಕಾರಣಕ್ಕಾಗಿ  ,  ಬಿಜೆಪಿ ಅಭ್ಯರ್ಥಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದೆ . ಹೊಸ ಮುಖಕ್ಕೆ ಹೆಚ್ಚು ಮಣೆ ಹಾಕದ ಮತದಾರ , ಹಾಲಿ ಸಂಸದ ಪಿ ಸಿ  ಗದ್ದಿಗೌಡ ಅವರಿಗೆ  ಸಾತ ನೀಡಿದ್ದಾರೆ .

 ಸಂಯುಕ್ತ ಪಾಟೀಲರ ಸೋಲಿಗೆ ಪ್ರಮುಖ ಕಾರಣ ಎನ್ನುವ ವಿಶ್ಲೇಷಣೆಗಳು ಜೋರಾಗಿವೆ. ಸೋಲಿನ‌ ಪರಿಣಾಮ ಕಾಯ್ದು ನೋಡಬೇಕಾಗಿದೆ .


 ವರದಿ: ಮಹೆಬೂಬ್ ಎಂ ಬಾರಿಗಡ್ಡಿ

Thursday, May 30, 2024

.ಪತ್ರಕರ್ತರ ಅಂದರೂ ಕೂಡ ದಂಡ ಹಾಕಿದ ದಕ್ಷ ಖಡಕ್ ಪೊಲೀಸ್ ಠಾಣಾಧಿಕಾರಿ , ಗಿರಿ ಉಪ್ಪಾರ್


 ಈಗಿನ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಾಗಲಿ ಮತ್ತು ಬೇರೆ ಇಲಾಖೆ ಅಧಿಕಾರಿಗಳ ಆಗಲಿ ಅವರಿಗೆ ಪತ್ರಕರ್ತರಂದರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇರುತ್ತದೆ ಏಕೆಂದರೆ ತಾವು ಸರ್ಕಾರಿ ಹುದ್ದೆಯಲ್ಲಿ ಇರುವಾಗ ಪತ್ರಕರ್ತರು ಯಾವುದೇ ವಿಡಿಯೋ ಆಗಲಿ ಫೋಟೋಸ್ ಆಗಲಿ ತೆಗೆದುಬಿಟ್ಟು ಪ್ರಿಂಟ್ ಮೀಡಿಯಾದಲ್ಲಾಗಲಿ ಎಲೆಕ್ಟ್ರಿಕ್ ಮೀಡಿಯಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಾಗಲಿ ಸುದ್ದಿಗಳನ್ನು ಮಾಡಿದರೆ , ನಮ್ಮ ಹುದ್ದೆಗೆ ಕಳಂಕ ತರಬಹುದು ಏನೋ ಅನ್ನುವಂತ ಭಯ ಇದ್ದೇ ಇರುತ್ತದೆ   . ಆದರೆ   ಇಲ್ಲೊಬ್ಬ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಹಾರೂಗೇರಿ ಕ್ರಾಸ್ ಹತ್ತಿರ ಕೆಲವು ಪೊಲೀಸ್ ಸಿಬ್ಬಂದಿ ಜೊತೆ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ  , ಎಲ್ಲ ದ್ವಿ ಚಕ್ರ ವಾಹನದ ಸವಾರರಿಗೆ ಹಾಗೂ ನಾಲ್ಕು ಚಕ್ರದ ಸವಾರರಿಗೆ ಕೂಡ ವಾಹನದ ಕಾಗದ ಪತ್ರಗಳನ್ನು ತಪಾಸಣೆ ಮಾಡಿ ದಂಡವನ್ನು ವಿಧಿಸುತ್ತಿದ್ದರು . ಅದೇ ರಾಜ್ಯ ಹೆದ್ದಾರಿ ಬನಹಟ್ಟಿಯಿಂದ ಚಿಂಚಲಿ ಪಟ್ಟಣಕ್ಕೆ ಮದುವೆಗೆ ಎಂದು ಹೋಗುತ್ತಿರುವ ನಿಷ್ಠಾವಂತ ಪತ್ರಕರ್ತ ಅವರ ಸ್ಕೂಟಿಯನ್ನು ಸೈಡ್ ಹಾಕಿದರು ಪತ್ರಕರ್ತರಿಗೆ ಒಂದು ಧೈರ್ಯ ಇದ್ದೇ ಇರುತ್ತದೆ ಏನೆಂದರೆ ಪತ್ರಕರ್ತರ ಹತ್ತಿರ ಗುರುತಿನ ಐಡಿ ಕಾರ್ಡ್ ತೋರಿಸಿದರೆ ಸಾಕು ಪೊಲೀಸರು ಬಿಟ್ಟೆ ಬಿಡುತ್ತಾರೆ ಅಂತ ನಂಬಿಕೆ   ಆದರೆ , ಅದು ಹಾಗೆ ಆಗಲಿಲ್ಲ  . ಆದ್ದರಿಂದ ಠಾಣಾಧಿಕಾರಿ  ಹತ್ತಿರ ಹೋಗಿ ಸರ್ ನಾನು ಪತ್ರಕರ್ತ ಮಹಿಬೂಬ ಬಾರಿಗಡ್ಡಿ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡಾಗ ,  ಠಾಣಾಧಿಕಾರಿ ಉಪ್ಪಾರ ರವರು ನೀವೇ ನಾಲ್ಕು ಜನಕ್ಕೆ ಒಳ್ಳೆಯ ಮಾತುಗಳು ಹೇಳುವವರೇ ನೀವೇ ನಿಮ್ಮ ಸೇಫ್ಟಿಯ ಸಲುವಾಗಿ ಹೆಲ್ಮೆಟ್ ಹಾಕಿಲ್ಲ ಅಂತ ತಿಳಿ ಹೇಳಿದರು  . ನಾವು ನಿಮ್ಮ ಸಲುವಾಗಿ ಒಳ್ಳೆಯದನ್ನು ಬಯಸುತ್ತೇವೆ ಅಂತ ಹೇಳಿ ಪತ್ರಕರ್ತರ ಸ್ಕೂಟಿ ಹತ್ತಿರ ಬಂದು ಗಾಡಿ ನಂಬರ್,  ಮೊಬೈಲ್ ನಂಬರ್ , ಕೇಳಿ ಆನ್ ಲೈನ್  500 ಪಾವತಿ ಮಾಡಿಬಿಟ್ಟರು. ಎಷ್ಟು ಕೇಳಿಕೊಂಡರು ಖಡಕ್ ಠಾಣಾ ಧಿಕಾರಿ ಗಿರಿ ಉಪ್ಪಾರ್ ಅವರು ಒಳ್ಳೆಯ ಮಾತುಗಳನ್ನೇ ಆಡಿದರು.

  ಹಾರೋಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಮೂಲತ : ಬನಹಟ್ಟಿ ನಗರದವರು ಅಂತ ನನಗೆ ಮೊದಲೇ ಗೊತ್ತಿದ್ರೂ ಠಾಣಾ ಅಧಿಕಾರಿ ಉಪ್ಪಾರ್  , ನಾನು ಕೂಡ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡರು , ಠಾಣಾಧಿಕಾರಿ ಹಾಗೂ ಪತ್ರಕರ್ತರು ಒಂದೇ ಊರಿನವರು ಅಂತ ಪತ್ರಕರ್ತರಿಗೆ ಹೆಲ್ಮೆಟ್ ಇಲ್ಲದೆ , ಬಿಡಬೇಕಾಗಿತ್ತು , 
 ಆದರೆ ನಿಷ್ಠಾವಂತ ಖಡಕ್ ಠಾಣಾಧಿಕಾರಿ ತಮ್ಮ ಹುದ್ದೆಯ ಕೆಲಸವು ಸಂಪೂರ್ಣವಾಗಿ ನಿಭಾಯಿಸಿದರು .

 ಇದೇ ರೀತಿಯಾಗಿ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ,  ತಾವುಗಳು ಹಾರೂಗೇರಿ ಪಟ್ಟಣದ ಹಾಗೂ ನೆರೆಯ ಹಳಿಗಳಲ್ಲಿ ಅನೈತಿಕ ಚಟುವಟಿಕೆಯನ್ನು ಬಹಳಷ್ಟು ನಡೆಯುತ್ತಿರುತ್ತದೆ , ಇಟ್ಟಂಗಿ ಭಟ್ಟಿ ಗಳ ಹತ್ತಿರ ಪಾನ್ ಶಾಪ್ಗಳಲ್ಲಿ ಸರಾಯಿ ,    ಮಾವಾ, ಮಟಕಾ, ಅನ್ನಭಾಗ್ಯ ಖದೀಮರು , ಅನೈತಿಕ ಮರಳುಗಾರಿಕೆ  ಇನ್ನು ಹತ್ತು ಹಲವಾರು ಅನೈತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ  ಇದಕ್ಕೆ ನೀವು ಕಡಿವಾಣ ಹಾಕಿದರೆ ಮಾತ್ರ ಹೆಲ್ಮೆಟ್ ಇಲ್ಲದೆ ನಿಷ್ಠಾವಂತ ಪತ್ರಕರ್ತರಿಗೆ ದಂಡ ಕಟ್ಟಿದ  500 ಬೆಲೆ ಬರುತ್ತದೆ   ಅನ್ನುವುದು ನನ್ನ ನಂಬಿಕೆ .  

 ಯಾರೇ ಆಗಲಿ , ಪತ್ರಕರ್ತರ ಆಗಲಿ ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ . ನಾವು ಯಾವುದೇ ಕಡೆ ಬೈಕ್ ಪ್ರಯಾಣ ಬೆಳೆಸಿದರೆ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಲೇಬೇಕು . 
 ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಒಬ್ಬ ಪತ್ರಕರ್ತರ ಜೊತೆ ಹೇಗೆ ವರ್ತಿಸಬೇಕು  , ಹೇಗೆ ಮಾತನಾಡಬೇಕು ಅನ್ನುವುದನ್ನು , ಅವರ ಮಾತಿನ ದಾಟಿಯಿಂದಲೇ ಅವರೊಬ್ಬ ನಿಷ್ಠಾವಂತ ಖಡಕ್ ಅಧಿಕಾರಿ ಎಂದು ಗೊತ್ತಾಗುತ್ತದೆ . ಇಂತಹ ನಿಷ್ಠಾವಂತ ಖಡಕ್ ಅಧಿಕಾರಿ ನಮ್ಮ ಬನಹಟ್ಟಿ ನಗರದವರು ಇಂತಹ ಪೊಲೀಸ್ ಠಾಣಾಧಿಕಾರಿಯಾಗಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದು ಪತ್ರಕರ್ತ ಮೆಚ್ಚಿಕೊಂಡರು . 

 ಲೇಖನ : 
ಮಹೆಬೂಬ್ ಬಾರಿಗಡ್ಡಿ ರಬಕವಿ ಬನಹಟ್ಟಿ ತಾಲೂಕ ವರದಿಗಾರರು ಹಾಗೂ ಲೇಖಕರು