ಬಾಗಲಕೋಟೆ : ಲೋಕಸಭಾ ಮತಕ್ಷೇತ್ರದಲ್ಲಿ 5 ಜನ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರು ಸಚಿವರು, 3 ನಿಗಮ-ಮಂಡಳಿ ಅಧ್ಯಕ್ಷರನ್ನು ಹೊಂದಿರುವ ಲೋಕಸಭೆ ಕ್ಷೇತ್ರ , ಆದರೆ ಅಲ್ಪ ಪ್ರಮಾಣದಲ್ಲಿ ಮತಗಳನ್ನು ಮುನ್ನಡೆ ಸಾಧಿಸಿದ್ದು ನರಗುಂದ್ ಮಾತ್ರ ಕಾಂಗ್ರೆಸ್ ಮುನ್ನಡೆ ಉಳಿದ ಕ್ಷೇತ್ರಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ ಇದಕ್ಕೆ ಕಾರಣ ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ಮುಳುವಾಯಿತಾ ? ಅನ್ನುದಕ್ಕೆ ಒಳ ಒಳಗೆ ಬುಸುಗುಸು ಪ್ರಾರಂಭವಾಗಿದೆ.
ಕೋಟೆ ನಾಡಿನ ಲೋಕಸಭ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ವೀಣಾ ಕಾಶಪ್ಪನವರು ಭಾವಿ ಸಂಸದರು ಎಂದೆ ಪ್ರಚಾರ ಹೊಂದಿದ್ದರು. ಇದಲ್ಲದೆ ಕಾಂಗ್ರೆಸ್ ಹೈಕಮಾಂಡ್ ಕೂಡ ಇವರಿಗೆ ಬಿ ಫಾರಂ ಕೊಡೋದು ಪಕ್ಕಾ ಅಂತ ಕಾರ್ಯಕರ್ತರಲ್ಲಿ ನಂಬಿಕೆ ವಿಶ್ವಾಸ ಸಾಕಷ್ಟು ಇಟ್ಟುಕೊಂಡಿದ್ದರು . ಹಾಗೂ ಕೆಲವು ಮುಖಂಡರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರೂ ಅವರನ್ನೆಲ್ಲ ಹಿಂದಿಕ್ಕಿ , ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ನೆರೆಯ ವಿಜಯಪುರ ಜಿಲ್ಲೆಗೆ ಸೇರಿದ ಸಿದ್ದರಾಮಯ್ಯ ಸಂಪುಟದ ಸದಸ್ಯ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ ಅವರನ್ನು ಕರೆತಂದು ಚುನಾವಣೆ ಅಖಾಡಕ್ಕೆ ಇಳಿಸಿದರು .
ಹೊಸ ಮುಖವಾಗಿದ್ದ ನೆರೆಯ ಜಿಲ್ಲೆಯ ವಿಜಯಪುರದ ಸಂಯುಕ್ತ ಪಾಟೀಲರ ಗೆಲ್ಲಿಸುವ ನಿಟ್ಟಿನಲ್ಲಿ ಎಷ್ಟೆಲ್ಲ ರಣತಂತ್ರಗಳ ಮೊರೆ ಹೋಗಿದ್ದರು. ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರೊ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರ ಪಡೆಯಲ್ಲಿ ಉತ್ಸಾಹ ಇರಲಿಲ್ಲವೇನು ? ಎಂದು ಅನುಮಾನ ಮೂಡಿದೆ .
ಕ್ಷೇತ್ರದ ಕಾಂಗ್ರೆಸ್ ಶಾಸಕರೆಲ್ಲ ತಾವು ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ ಲೀಡ್ ಗಿಂತ ಹೆಚ್ಚು ಲೀಡ್ ಕೊಡುವ ಭರವಸೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆಪಾದಿಸಿ, ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ,
ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದರು.
ಪಂಚ ಗ್ಯಾರೆಂಟಿಗಳು ಮಾಡಿದ ಪರಿಣಾಮ ಕಾಂಗ್ರೆಸ್ಸಿನ ಯಾವ ತಂತ್ರಗಳೂ ಫಲಕಾರಿ ಆಗಲಿಲ್ಲ.
ಲೋಕಸಭಾ ಮತ ಕ್ಷೇತ್ರದ , ವಿಧಾನಸಭಾ ಕ್ಷೇತ್ರವಾರು ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಗಮನಿಸಿದಾಗ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ 900 ಮತಗಳ ಮುನ್ನಡೆಯ ಅಲ್ಪ ಅಂತರ ಸಾಧಿಸಿದ್ದು ಬಿಟ್ಟರೆ ಎಲ್ಲೂ ಕಾಂಗ್ರೆಸ್ ಅಭ್ಯರ್ಥಿ ಲೀಡ್ ಗಳಿಸಲು ಸಾಧ್ಯವಾಗಿಲ್ಲ.
ಬಿಟಿಡಿಎ ಸಭಾಪತಿಯೂ ಆಗಿರುವ ಶಾಸಕ ಎಚ್. ವೈ. ಮೇಟಿ ಅವರ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು 16000 ಮತಗಳ ಮುನ್ನಡೆ ಸಾಧಿಸಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿತಿಮ್ಮಾಪುರ ಅವರ ಮುಧೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು 14,629
ಮತಗಳ ಮುನ್ನಡೆ ಸಾಧಿಸಿದೆ.
ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಬೀಳಗಿ ಮತಕ್ಷೇತ್ರದ ಶಾಸಕರಾಗಿರುವ ಜೆ.ಟಿ.ಪಾಟೀಲರ ಕ್ಷೇತ್ರದಲ್ಲಿ
ಬಿಜೆಪಿ ಅಭ್ಯರ್ಥಿಯು 7356 ಬಿಜೆಪಿ ಮುನ್ನಡೆ ಸಾಧಿಸಿದ್ದು, ವೀರಶೈವಲ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಕ್ಷೇತ್ರದಲ್ಲಿ ಬಿಜೆಪಿ 9453 ಮುನ್ನಡೆ ಪಡೆದುಕೊಂಡಿದೆ .
ಸಚಿವರು, ನಿಗಮ-ಮಂಡಳಿ ಅಧ್ಯಕ್ಷರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಲೀಡ್ ಗಳಿಸಲಿದೆ ಎನ್ನುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿವೆ
ಬದಾಮಿ ಮತ ಕ್ಷೇತ್ರದಲ್ಲಿ
ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ತವರು ಕ್ಷೇತ್ರ ವಾಗಿದ್ದರಿಂದ ಇಲ್ಲಿ ಬಿಜೆಪಿ 9800 ಮತಗಳ ಮುನ್ನಡೆ ಸಾಧಿಸಿದೆ.
ಇನ್ನು ಬಿಜೆಪಿ ಶಾಸಕರನ್ನು ಹೊಂದಿರುವ ತೇರದಾಳದಲ್ಲಿ ಬಿಜೆಪಿ ಅಭ್ಯರ್ಥಿಗೆ 9838 ಮತ, ಜಮಖಂಡಿ ಮತಕ್ಷೇತ್ರದಲ್ಲಿ 3637 ಮತಗಳ ಮುನ್ನಡೆಯನ್ನು ಪಡೆದುಕೊಂಡಿದೆ .
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಳ ಏಟಿನ ಪರಿಣಾಮ ನೆರೆ ಜಿಲ್ಲೆಯ ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು , ಎನ್ನುವ ಏಕೈಕ ಕಾರಣಕ್ಕಾಗಿ , ಬಿಜೆಪಿ ಅಭ್ಯರ್ಥಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದೆ . ಹೊಸ ಮುಖಕ್ಕೆ ಹೆಚ್ಚು ಮಣೆ ಹಾಕದ ಮತದಾರ , ಹಾಲಿ ಸಂಸದ ಪಿ ಸಿ ಗದ್ದಿಗೌಡ ಅವರಿಗೆ ಸಾತ ನೀಡಿದ್ದಾರೆ .
ಸಂಯುಕ್ತ ಪಾಟೀಲರ ಸೋಲಿಗೆ ಪ್ರಮುಖ ಕಾರಣ ಎನ್ನುವ ವಿಶ್ಲೇಷಣೆಗಳು ಜೋರಾಗಿವೆ. ಸೋಲಿನ ಪರಿಣಾಮ ಕಾಯ್ದು ನೋಡಬೇಕಾಗಿದೆ .
ವರದಿ: ಮಹೆಬೂಬ್ ಎಂ ಬಾರಿಗಡ್ಡಿ