Tuesday, November 19, 2024

ಹೂಸೂರದಲ್ಲಿ 20ರಂದು ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪುಸುಲ್ತಾನ್ ಜಯಂತ್ಯುತ್ಸವ

ಹೂಸೂರದಲ್ಲಿ 20ರಂದು ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪುಸುಲ್ತಾನ್  ಜಯಂತ್ಯುತ್ಸವ 

ಬನಹಟ್ಟಿ: ರಬಕವಿ ಬನಹಟ್ಟಿ . ನಗರಸಭೆ ವ್ಯಾಪ್ತಿಯ ಹೂಸೂರದ  ಶಿರಾಜಸಾಬ ಮುರಾದಸಾಬ ದರ್ಗಾ ಹತ್ತಿರ ಬುಧವಾರ ಬೆಳಿಗ್ಗೆ 10 ಘಂಟೆಗೆ ,ಜರುಗುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ, ಅಧ್ಯಕ್ಷತೆ ಹಾಫಿಜ್ ಆದಮ ಹೊರಟ್ಟಿ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದು ಕೊಣ್ಣೂರ, ಡಿವೈಎಸ್ಪಿ ಶಾಂತವೀರ ಈ, ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ,ಸಿಪಿಐ ಸಂಜೀವ ಬಳಿಗಾರ, ಶ್ರೀಮತಿ ಶಾಂತಾ ಹಳ್ಳಿ, ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ಕಾಂಗ್ರೆಸ್ ಪಕ್ಷದ ಮುಖಂಡ ಸತ್ಯಪ್ಪ ಮಗದುಮ್, ಎಸ್ ಡಿ ಪಿ ಐ ಪಕ್ಷದ ಅಧ್ಯಕ್ಷ ಹುಸೇನ್ ಜಮಾದಾರ, ನ್ಯಾಯವಾದಿ ವೆಂಕಟೇಶ ನಿಂಗಸಾನಿ, ಹಿರಿಯ ಪತ್ರಕರ್ತರಾದ ಶಿವಾನಂದ ಮಹಾಬಳಶೆಟ್ಟಿ, ಕಿರಣ ಆಳಗಿ, ಶಿರಾಜ ಹೊರಟ್ಟಿ, ಪಿಎಸೈ ಕುಮಾರಿ ಜಯಶ್ರೀ ಮಠಪತಿ, ಮುಸ್ಲಿಂ ಸಮಾಜದ ಹಿರಿಯರಾದ ಫಾರುಖ ನದಾಫ, ಹಾರುಣಸಾಬ ಹೊರಟ್ಟಿ, ಅಬ್ದುಲ್ ಹೊರಟ್ಟಿ, ಹಾಫಿಜ್ ಜಮಖಂಡಿ, ಅಕ್ರಮ ಜಮಾದಾರ, ವಿಶೇಷ ಉಪನ್ಯಾಸಕರಾಗಿ ನಿವೃತ್ತ ಶಿಕ್ಷಕ ಯಶವಂತ ವಾಜಂತ್ರಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

Saturday, October 19, 2024

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ : ಲೇಖನ ಮಹೆಬೂಬ್ಎಂ ಬಾರಿಗಡ್ಡಿ

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ  : 

ಕರ್ನಾಟಕ ರಾಜ್ಯದ ಐತಿಹಾಸಿಕ ನಗರ ಬಿಜಾಪುರ್ ,ಅಂದರೆ ಈಗಿನ ವಿಜಯಪುರ ನಗರ ,ಈ ನಗರದ ಜನಪ್ರತಿನಿಧಿ ಎಂ ಎಲ್ ಎ ಬಸವನ್ ಗೌಡ ಪಾಟೀಲ್ ಯತ್ನಾಳ್ , ಇವರಿಗೆ ಕಟ್ಟರ್ ಹಿಂದೂ ವಾದಿ ಯುವಕರು ಹಿಂದೂ ಹುಲಿ ಅಂತ ಬಿರುದು ಕೂಡ ಕೊಟ್ಟಿದ್ದಾರೆ , ಇವರು ಮಾ ತೆತ್ತಿದ್ದರೆ ಸಾಕು ಸಾಬ್ರು , ಪಾಕಿಸ್ತಾನ , ಟಿಪ್ಪು ಸುಲ್ತಾನ ಹಿಂದೂ-ಮುಸ್ಲಿಂ ,ಇಂತಹದೇ ಕೋಮುಸೌಹಾರ್ದ ಕ್ಕೆ  ಧಕ್ಕೆ ತರುವಂತ ಹೇಳಿಕೆ ಕೊಡುವುದರಲ್ಲಿ ನಿಶ್ಚಿಮ ,  ಒಬ್ಬ ನಗರದ ಜನಪ್ರತಿನಿಧಿಯಾಗಿ ಹಾಗೂ ರಾಜಕಾರಣಿಯಾಗಿ ಒಂದು ಸಮಾಜದ ವಿರುದ್ಧ ಒಂದು ಸಮಾಜದ ಗಣ್ಯ ವ್ಯಕ್ತಿಗಳ ವಿರುದ್ಧ , ಒಂದು ಸಮಾಜದ ಇತಿಹಾಸದ ರಾಜ ಮಹಾರಾಜ  ವಿರುದ್ಧ ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ , ನಗರದಲ್ಲಿ ಆಗಲಿ ಇತರ ಕಡೆ ರಾಜಕೀಯ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಒಂದು ಸಮಾಜದ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ . ಇದು ಎಷ್ಟರ ಮಟ್ಟಿಗೆ ಸರಿ ,ಒಂದು ಸಾಮಾನ್ಯ ಸಭೆಯಲ್ಲಿ ಕೂಡ ಬಾಯಿಗೆ ಬಂದದ್ದೆ  ಮಾತು . ಅವರ ಮನಸ್ಥಿತಿ ಹಾಗೂ ಸಂಸ್ಕೃತಿ ಎಷ್ಟರಮಟ್ಟಿಗೆ ಸರಿ , ಇವರ ವೀರಶೈವ ಲಿಂಗಾಯತ ಧರ್ಮದವರು , ಪ್ರತಿಯೊಂದು ಧರ್ಮದ ಅಜೆಂಡಾದಲ್ಲಿ ಮತ್ತೊಂದು ಧರ್ಮನು ಹೀನಾಯವಾಗಿ ಮಾತನಾಡಬಾರದು ಅನ್ನುವಂಥ ಎಲ್ಲ ಧರ್ಮದಲ್ಲಿ ಕೂಡ ಪಾಠ ಹೇಳಿಕೊಟ್ಟಿದೆ .


ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ವಿಧಾನಸಭೆಯ ಜನ ಪ್ರತಿನಿಧಿಯಾಗಿ ಪ್ರತಿಯೊಂದು ಸಮುದಾಯದ ಜನರ ಮನಸು ಒಂದು ಮಾಡುವುದನ್ನು ಬಿಟ್ಟು , ಸಾಬ್ರು ಹಾಗೆ ಹೀಗೆ ಅಂತ ಹೇಳಿ ಕೋಮು ದ್ವೇಷದ  ಭಾಷಣಗಳಲ್ಲಿ ಶಿಳ್ಳೆ , ಚಪ್ಪಾಳೆ ,  ಗಿಟ್ಟಿಸಿಕೊಳ್ಳುವ ಗೋಸ್ಕರ ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .

ಬಸವನ್ ಗೌಡ ಪಾಟೀಲ್ ಯತ್ನಾಳ ಜಾತ್ಯತೀತ ಜನತಾದಳ ಪಕ್ಷದಲ್ಲಿ ಇದ್ದಾಗ , ಸಾಬರಿಂದಲೇ ರಾಜಕೀಯ ಜೀವ ಪಡೆದ ಸಾಬರದೋಪಿ ಹಾಕಿದಾಗ ಹಿಂದುತ್ವ ನೆನಪಿಗೆ ಬರಲಿಲ್ಲವೇ ? ಮುಸ್ಲಿಂರ ಮನೆಗೆ ಹೋಗುವದು, ಮುಸಲ್ಮಾನರ ಮಸೀದಿಗೆ ಹೋಗುವುದು , ಮುಸಲ್ಮಾನರ ಹಬ್ಬ ಹರಿ ದಿನಗಳಲ್ಲಿ ಭಾಗವಹಿಸುವುದು , ಮುಸಲ್ಮಾನರ ಮತಗಳನ್ನು ಪಡೆಯುತ್ತಿದ್ದ , ನಂತರ ಏಕಾಏಕಿ ರಾಜಕೀಯ ಬದಲಾವಣೆಯ ಗಾಳಿ ಬಿಸಿ ,ಭಾರತೀಯ ಜನತಾ ಪಾರ್ಟಿಗೆ ಪಕ್ಷಾಂತರ ಮಾಡಿ ನಂತರ ಮುಸಲ್ಮಾನರ ವಿರುದ್ಧ ಸಮಾಜದ ವಿರುದ್ಧ ಅವರ ಇತಿಹಾಸದ ಗಣ್ಯ ವ್ಯಕ್ತಿಗಳ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ , ಹಾಗೂ ಸಾಬರ  ಗಣ್ಯ ವ್ಯಕ್ತಿಗಳಿಗೆ  ಭಾಸ್ಕಳ ಬಯ್ಯೋದು ಕೂಡ ಇವರ ಪ್ರಸ್ತುತ ರಾಜಕೀಯ ವಾಗಿಬಿಟ್ಟಿದೆ  , 

ಭಾರತ ದೇಶದ ಸಂವಿಧಾನದ ಅಡಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ನಂತರ ಎಲ್ಲ ಧರ್ಮದ ಜನರನ್ನು ಒಂದೇ ತರ ನೋಡುತ್ತೇನೆ ಎನ್ನುವುದು ಪ್ರತಿಜ್ಞೆ ಕೂಡ ಮಾಡಿ , ನಂತರ ಹಿಂದೂ - ಮುಸ್ಲಿಂ ದ್ವೇಷದ ಮಾತುಗಳಲ್ಲಿ ದ್ವೇಷ ಹುಟ್ಟಿಸಿ , ಸಾಮಾನ್ಯ ಜನರ ಮನಸ್ಸನ್ನು ಬೇರೆ ಬೇರೆ ಮಾಡಿ ,ಸಂವಿಧಾನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿರುವಂತಹ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರೆ ಎಷ್ಟು ಮಟ್ಟಿಗೆ ಸರಿ , ಒಬ್ಬ ಕ್ಷೇತ್ರದ ಜನಪ್ರತಿನಿಧಿಯಾಗಿ ತನ್ನ ಕ್ಷೇತ್ರ ತನ್ನ ರಾಜ್ಯ ಹೇಗೆ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ತನ್ನ ಕ್ಷೇತ್ರದ ಜನರ ಮನಸ್ಸನ್ನು ಹೇಗೆ ಗೆಲ್ಲಬೇಕೆಂದು , ಗಮನ ಕೊಡುವುದನ್ನು ಬಿಟ್ಟು ,ಕೇವಲ ಧರ್ಮ ಧರ್ಮಗಳ , ಜಾತಿ ಜಾತಿಗಳ ಮಧ್ಯ ದ್ವೇಷದ ವಾತಾವರಣ ಸೃಷ್ಟಿಸಿ , ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .

ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಕೂಡ ಭಾರತೀಯ ಜನತಾ ಪಕ್ಷದಿಂದ ಜನಪ್ರತಿನಿಧಿಯಾಗಿ ಎಂ ಎಲ್ಎ ಸಿದ್ದು ಸೌದಿ  ಕೂಡ ಇದ್ದಾರೆ . ಆದರೆ ಬಸವನಗೌಡ ಪಾಟೀಲ್ ಯತ್ನಾಳ  ರಾಜಕೀಯ , ಸಿದ್ದು ಸವದಿ ಅವರ ರಾಜಕೀಯ ಅಜಗಜಾಂತರ ವ್ಯತ್ಯಾಸ ಇದೆ , ಅನ್ನಬಹುದು . ಏಕೆಂದರೆ ಈ ಕ್ಷೇತ್ರದ ಜನಪ್ರತಿನಿಧಿ ಎಂಎಲ್ಎ ಸಿದ್ದು ಸವದಿ ಅವರು ಮುಸ್ಲಿಮರ ಒಡನಾಟ ನಲ್ಲಿದ್ದು  ಮುಸ್ಲಿಮರ   ಸಭೆ ಸಮಾರಂಭ ಮದುವೆಗಳಲ್ಲಿ ಭಾಗವಹಿಸಿ  ಹಲವು ಮುಸ್ಲಿಮರ ಜನರ ಮನಸ್ಸು ಗೆದ್ದಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ .

.ಬಸವನಗೌಡ ಪಾಟೀಲ್ ಯತ್ನಾಳ ಒಬ್ಬ  ಜನಪ್ರತಿನಿಧಿಯಾಗಿ ತನ್ನದೇ ಧರ್ಮ- ಜಾತಿಯ ತನ್ನದೇ ಪಕ್ಷದ ಗಣ್ಯ ವ್ಯಕ್ತಿಗಳನ್ನು ಕೂಡ ಏಕವಚನದಲ್ಲಿ ಹೀನಾಯವಾಗಿ  ಮಾತನಾಡುತ್ತಾರೆ , ಇವರು ಮುಂಬರುವ ದಿನಮಾನಗಳಲ್ಲಿ ಇವರಿಗೆ ತನ್ನದೇ ಸಮಾಜದ ಜನ ವಿರೋಧಿಸುವ ಕಾಲ  ಬರಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ , 

ಪ್ರತಿಯೊಂದು ವೇದಿಕೆಯಲ್ಲಿ ,
ಹಿಂದೂ ಸಮಾಜದ ರಕ್ಷಕನಾಗಿದ್ದ ಶಿವಾಜಿ ಛತ್ರಪತಿ ಶಿವಾಜಿ ಮಹಾರಾಜ್ ಇರದಿದ್ದರೆ ನಾವು ಇರುತ್ತಿರಲಿಲ್ಲ ಎಂದು ಹಿಂದೂ ಸಮಾಜದ ಯುವಕರ ಎಲ್ಲರನ್ನೂ ದ್ವೇಷಪೂರಿತ  ಮಾತುಗಳ ಯುವಕರ  ತಲೆಯಲ್ಲಿ ತುಂಬಿ ಮುಸ್ಲಿಮರನ್ನು ವಿರೋಧಿಸುವಂತೆ ಪ್ರಚೋದಿಸುತ್ತಾರೆ . 

ಜಗತ್ತು 5g ಐದನೇ ತಲೆಮಾರಿನಲ್ಲಿ ಸಾಗುತ್ತಿದೆ . ಆದರೆ ನಮ್ಮ ದೇಶದ ಹಾಗೂ ರಾಜ್ಯಗಳ  ಜನಪ್ರತಿನಿಧಿಯಾಗಿ , ಧರ್ಮ ಧರ್ಮಗಳ , ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದರಲ್ಲಿ  ಮಗ್ನರಾಗಿದ್ದಾರೆ ಅಂದರೆ ಇದು ದೇಶದ ಭವಿಷ್ಯ  ಭಾರಿ  ಭಯಾನಕವಾಗಿದೆ  , 

ವಿಜಯಪುರದ ಜನತೆ ಬರುವ 2027 ರ ರಾಜ್ಯದ ಚುನಾವಣೆಯಲ್ಲಿ ಎಲ್ಲ ಸಮುದಾಯಗಳ ಸಮಾನ ರೀತಿಯಲ್ಲಿ ನೋಡುವಂತಹ ಒಬ್ಬ ಜನಪ್ರತಿನಿಧಿಯನ್ನು ವಿಧಾನಸಭೆಗೆ ಕಳುಹಿಸಬೇಕು . ಆಗಲೇ ನಗರ ಅಭಿವೃದ್ಧಿ , ಹಾಗೂ ಪ್ರತಿಯೊಂದು ಸಮಾಜದಲ್ಲಿ ,  ಶಾಂತಿ ಹಾಗೂ ಕೋಮು ಸೌಹಾರ್ದತೆಯನ್ನು  ಕಾಪಾಡುವುದರಲ್ಲಿ ಮಹತ್ವವಾದ ಕಾರ್ಯವನ್ನು ಜನಸಾಮಾನ್ಯರು ಮಾಡಬೇಕು   .


 ವಕ್ಫ್ ಆಸ್ತಿ ಅಂದರೇನು  : 

ಭಾರತ ದೇಶದ ಮುಸಲ್ಮಾನ ರಾಜ ಮಹಾರಾಜರು ದೇಶ ಸ್ವಾತಂತ್ರ್ಯ ಕ್ಕಿಂತ ಮುಂಚೆ ಹಾಗೂ  ಸ್ವಾತಂತ್ರ್ಯ ಆದ ನಂತರ ತನ್ನ ಸಾಮ್ರಾಜ್ಯದ ಬಹುಪಾಲ ಆಸ್ತಿಯನ್ನು ದೇಶದ ಖಜಾನೆಗೆ ಕೊಟ್ಟ ನಂತರ ಉಳಿದ ಆಸ್ತಿ ಮುಸ್ಲಿಂ ಸಮುದಾಯಕ್ಕೆ ದೇಣಿಗೆಯಾಗಿ ದಾನದ ರೂಪದಲ್ಲಿ ಕೊಟ್ಟಂತ ಆಸ್ತಿಗೆ ವಕ್ಫ್ ಆಸ್ತಿ ಅನ್ನುತ್ತಾರೆ . ಈ ದೇಶದ ಮುಸ್ಲಿಂ ರಾಜ ಮಹಾರಾಜರು ಹೋದ ನಂತರ ತಮ್ಮ ಆಸ್ತಿಗಳನ್ನೆಲ್ಲ ಈ ದೇಶದ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಅವರ ಸಾಮಾಜಿಕ ಧಾರ್ಮಿಕ ಶಿಕ್ಷಣ ಹಾಗೂ ಇನ್ನಿತರ ಕೆಲಸಗಳಿಗೆ ಈ ದಾನದ ರೂಪದಲ್ಲಿ ಕೊಟ್ಟಿರುವಂತಹ ಆಸ್ತಿಯೂ ಸಹಾಯಕವಾಗಬಹುದು ಅನ್ನುವ ನಿಟ್ಟಿನಲ್ಲಿ, ವಕ್ಫ್ ಬೋರ್ಡ್ ರಚನೆಯಾಗಿರುತ್ತದೆ. ಈ ಆಸ್ತಿಯೂ ಯಾವ ಸರ್ಕಾರದ ಆಸ್ತಿ ಅಲ್ಲ   , ಆದರೆ ಕೇವಲ ಈ ಆಸ್ತಿಯನ್ನು ಸರ್ಕಾರದ ಅಧೀನದಲ್ಲಿ ಒಳಪಟ್ಟಿರುತ್ತೆ ವಿನಹ ಇದು ಸರ್ಕಾರದ ಆಸ್ತಿಯಲ್ಲ . ರಾಜ್ಯ ಸರ್ಕಾರದಲ್ಲಾಗಲಿ ಕೇಂದ್ರ ಸರ್ಕಾರದ ಆಗಲಿ ಈ ವಕಪ್ ಆಸ್ತಿಗಳು ಕೇವಲ   ದೇಕ್ರೂಖಿ ಅಂದ್ರೆ ನೆದುರು ಅಥವಾ ಕಣ್ಗಾವಲು ಇಡಬಹುದು  . ಈ ಆಸ್ತಿಯೂ ಮುಸ್ಲಿಂ ಒಬ್ಬ ವ್ಯಕ್ತಿ ಒಂದು ಸಂಘಟನೆಗೆ ಒಳಪಟ್ಟಿರುವುದಿಲ್ಲ ಇಡೀ ಭಾರತೀಯ ಮುಸ್ಲಿಂ ಸಮುದಾಯದ ಜನರ ಅಭಿವೃದ್ಧಿಗಾಗಿ ಇರುತ್ತದೆ  . ಇದೇ ತರಹ ಹಿಂದೂ ಧರ್ಮದಲ್ಲಿ ದತ್ತಿ ಕಾಯ್ದೆ ಕೂಡ ಇದೆ   .


 ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ ಬಸವನಗೌಡ್ ಪಾಟೀಲ್ ಯತ್ನಾಳ್  ಅವರ ಬಾಯಿ ಇದ್ಯೋ ? ಬಚ್ಚಲು ಇದಿಯೋ ?ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ , ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ನಿಂದಿಸಿ , ಅಶ್ಲೀಲ ಪದವನ್ನು ಬಳಿಸಿ ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ . ಈ ವಿಷಯದ ಸಂಬಂಧಪಟ್ಟಂತೆ ವಿಜಯಪುರ್ ನಗರದ ಪೋಲಿಸ್ ಠಾಣೆಯಲ್ಲಿ fir ದಾಖಲಾಗಿರುತ್ತದೆ  .

ಭಾರತ ದೇಶದಲ್ಲಿ ಇರುವಂತ ಆಯಾಧರ್ಮಗಳಲ್ಲಿ ಬೆಂಕಿ ಹಚ್ಚುವ ಕೆಲಸ ಜನಪ್ರತಿನಿಧಿಗಳೇ ಮಾಡುತ್ತಿದ್ದರೆ ,ದೇಶಕ್ಕ ಗಂಡಾಂತರ ಬರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ   ,  ಜನಪ್ರತಿನಿಧಿಗಳು ಕೇವಲ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಇರಬೇಕು ಜೊತೆಗೆ ಎಲ್ಲ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿ ಬೇಕು ನಂತರ ಅದನ್ನು ಬಗೆಹರಿಸು ವಂತಹ ಕೆಲಸಗಳನ್ನು ಮಾಡಬೇಕಾಗಿರುವುದು   ಜನಪ್ರತಿನಿಧಿಗಳ ಜವಾಬ್ದಾರಿಯಾಗಬೇಕು ಹೊರತು  , ಹಿಂದೂ ಮುಸ್ಲಿಂ  ಅಂತ ನೀಚ ರಾಜಕಾರಣಿ ಪ್ರತಿನಿಧಿ  ಆಗಬಾರದು .

ಇಂತಹ ನಿಚ್ ಕೋಮು ದ್ವೇಷಿ ರಾಜಕಾರಣಿಗಳು ಇತಿಹಾಸವನ್ನು ತಿರುಚಿ , ಕೋಮು ದ್ವೇಷದ ಭಾಷಣಗಳಲ್ಲಿ ರಾಜ್ಯದ ಜನರನ್ನು ಮರಳು ಮಾಡಿ ,ತನ್ನ ರಾಜಕೀಯ ಬೆಳೆಯನ್ನು ಬೆಳೆಯುವುದೇ ಇವರ ಮುಖ್ಯ ಉದ್ದೇಶವಾಗಿರುತ್ತದೆ . ಇವರ ಭಾಷಣಗಳಲ್ಲಿ ಸಿಳ್ಳೇ ಚಪ್ಪಾಳೆಗಳು ತೀರ ಸಾಮಾನ್ಯ, ಇನ್ನೂ ಇವರ ಚಿಲ್ಲರೆ ದ್ವೇಷ ರಾಜಕೀಯ ಮಾಡುವುದರ ಮೂಲಕ ನಮ್ಮನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನುವುದನ್ನು  ಜನಸಾಮಾನ್ಯರು  ಅರಿತುಕೊಳ್ಳಬೇಕಾಗಿದೆ  , 

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಶಾಂತಿ ಕೋಮುಸೌಹಾರ್ದದಿಂದ ಅನ್ಯೂನ್ಯವಾಗಿ ,ಒಬ್ಬರೊಬ್ಬರ ಜೊತೆ ಬಾಳಿದರೆ ಮಾತ್ರ ದೇಶ ಹಾಗೂ ರಾಜ್ಯ ಉನ್ನತ ಮಟ್ಟದಲ್ಲಿ ಹೋಗಬಹುದು ಅನ್ನೋದು ಎರಡು ಮಾತಿಲ್ಲ  .


ಲೇಖನ : 
ಮಹೆಬೂಬ್ ಎಂ ಬಾರಿಗಡ್ಡಿ

Friday, October 4, 2024

ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಸ್ವಾಗತಿಸಲು ತಾಲೂಕ ಆಡಳಿತದಿಂದ ಪೂರ್ವಭಾವಿ ಸಭೆ  : 
 ಬಾಗಲಕೋಟೆ /  ರಬಕವಿ - ಬನಹಟ್ಟಿ  : ಮಂಡ್ಯದಲ್ಲಿ ಜರುಗಲಿ ರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರೆಲ್ಲರೂ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ರಾಜ್ಯದ ತುಂಬೆಲ್ಲ ಸಂಚರಿಸುತ್ತಿದ್ದು , ಅಕ್ಟೋಬರ್ 6 ರಂದು ಮುಂಜಾನೆ ಮುಂಜಾನೆ ಆಗಮಿಸಲಿದ್ದು, ಕಾರಣ ರಬಕವಿ ಬನಹಟ್ಟಿ ತಾಲೂಕ ಆಡಳಿತ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು . ಈ ಭವ್ಯ ಜ್ಯೋತಿ ಹೊತ್ತ ರಥ ಸ್ವಾಗತಿಸಲು ತಾಲೂಕ ಆಡಳಿತವೂ ಸಜ್ಜಾಗಿದೆ. ರಬಕವಿ ನಗರದ ಕಂಠಿ ಬಸವೇಶ್ವರ ಜ್ಯೋತಿ ಹೊತ್ತ ರಥ ಸ್ವಾಗತ ಮಾಡಿಕೊಂಡು  ನಗರದ ಹೊಸ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗಪುರ ನಾಕಾ , ಹಜಾರೆ ಸರ್ಕಲ್ , ಹೊಸೂರ್ ಮಾರ್ಗವಾಗಿ ಬನಹಟ್ಟಿ ನಗರಕ್ಕೆ ಆಗಮಿಸಲಿದ್ದು , ನಗರದ ಎಸ್ ಆರ್ ಎ ಕಾಲೇಜ್ ಮೂಲಕ ಮಹಾತ್ಮ ಗಾಂಧಿ ವೃತ ದಿಂದ ಹೊರಟು ವೈಭವ  ಚಿತ್ರಮಂದಿರದಿಂದ ನಗರದ ನೂಲಿನ ಗಿರಣಿ ವರೆಗೆ ನಡೆಯಲಿದೆ ಎಂದು ರಬಕವಿ ಬನಹಟ್ಟಿ ತಾಲೂಕ ಉಪ -ತಹಸಿಲ್ದಾರ್ ಎಸ್ ಬಿ   ಕಾಂಬಳೆ   ಹೇಳಿದರು.

 ಈ ಪೂರ್ವಭಾವಿಯ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕ ತಹಸಿಲ್ದಾರರಾದ ಎಸ್ ಬಿ ಕಾಂಬಳೆ ಸರ್ ರಬಕವಿ ಬನಹಟ್ಟಿ ನಗರಸಭೆ ಕಮಿಷನರ್ ಹಾಗೂ ಶಾಲಾ ಕಾಲೇಜುಗಳ ಶಿಕ್ಷಕ - ಶಿಕ್ಷಕಿಯರು , ಮತ್ತು ರಬಕವಿ ಬನಹಟ್ಟಿ ಆಟೋ ಚಾಲಕರ ಅಧ್ಯಕ್ಷರು ಹಾಗೂ ಚಾಲಕರು ಇನ್ನು ಅನೇಕರು ಇದ್ದರು . 


 ಬಾಕ್ಸ್ ಹಾಕಿ

ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥ್ ಸ್ವಾಗತಿಸಲು ಕನ್ನಡಪರ ಸಂಘಟನೆಗಳಿಗೆ ಕರೆಯದೆ ಇರುವುದು ಖಂಡನೀಯ  : ಕರವೇ ಬಿ ಎಸ್ ಜಮಾದಾರ್  


 ಕನ್ನಡದ ಜ್ಯೋತಿ ಹೊತ್ತ ಕನ್ನಡದ ರಥ ಸ್ವಾಗತಿಸಲು ನಗರದ ಕನ್ನಡ ಪರ ಹೋರಾಟಗಾರರ  ಸಂಘಟನೆಗಳಿಗೆ ಪೂರ್ವಭಾವಿ ಸಭೆಗೆ  ಕರೆಯದೆ ಇರುವ ತಾಲೂಕ ತಹಸಿಲ್ದಾರ್ ಅನುಪಸ್ಥಿತಿಯಲ್ಲಿ  ತಾಲೂಕ ಉಪ ತಹಶಿಲ್ದಾರರಾದ ಎಸ್ ಬಿ ಕಾಂಬಳೆ ಅವರ ನಡೆ ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ( ನಾರಾಯಣಗೌಡರ ಬನ  ) ತಾಲೂಕ ಕಾರ್ಯದರ್ಶಿ, ಬಿಎಸ್ ಜಮಾದಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು .

 ವರದಿ ಮಹಬೂಬ್ ಎಂ ಭಾರಿಗಡ್ಡಿ

Saturday, September 28, 2024

ರಬಕವಿ ಬನಹಟ್ಟಿ ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :

*ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :

 ಬಾಗಲಕೋಟೆ / ರಬಕವಿ ಬನಹಟ್ಟಿ   : ಬಾಗಲಕೋಟೆ ಜಿಲ್ಲೆಯ ಅವಳಿ ನಗರಗಳು ಎಂದು ಖ್ಯಾತಿ ಪಡೆದ ರಬಕವಿ ಬನಹಟ್ಟಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು. 
 ಈ ಅವಳಿ ನಗರಗಳ ಬಸ್ ನಿಲ್ದಾಣಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಾಗಲಕೋಟೆ ಭಾಗದ ರಬಕವಿ ಹಾಗೂ ಬನಹಟ್ಟಿ ಬಸ್ ನಿಲ್ದಾಣಗಳನ್ನು ತಲಾ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
 ಈ ಸಂದರ್ಭದಲ್ಲಿ ಮಾತನಾಡಿದ ತೆರೆದಾಳ್ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಈ ಅವಳಿ ನಗರಗಳನ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳಿಗೆ   ಕಂಪೌಂಡು ಗೋಡೆ , ಶುದ್ಧ ಕುಡಿಯುವ  ನೀರು, ಸುಸಜ್ಜಿತ ಶೌಚಾಲಯ ಗಳನ್ನು ನಿರ್ಮಾಣ ಮಾಡಲಿಕ್ಕೆ  ತಲಾ ನಿಲ್ದಾಣಕ್ಕೆ 75 ಲಕ್ಷ ದಂತೆ  ಎರಡು ನಿಲ್ದಾಣಗಳಿಗೆ ಒಂದೂವರೆ ಒಟ್ಟು  1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಬೇಕು ಹಾಗೂ ನಮ್ಮ ಕ್ಷೇತ್ರದಿಂದ ಎರಡು ಪಲ್ಲಕ್ಕಿ ಬಸ್ ಗಳು ಎರಡು ಎಸಿ ಬಸ್ ಗಳು ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
 ಒಳಿಕ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮಲಿಂಗ ರೆಡ್ಡಿ ಅವರು ಈ ಭಾಗದಿಂದ ಪಲ್ಲಕ್ಕಿ ಬಸ್ಸುಗಳಲ್ಲಾಗಲಿ ಎಸಿ ಬಸ್ಗಳಾಗಲಿ ವಾಯುವ್ಯ ರಸ್ತೆ ಸಾರಿಗೆ ಅಥವಾ ಕೆಎಸ್ಆರ್ಟಿಸಿ ಸಂಸ್ಥೆಯ ಮೂಲಕ ಈ ಬಸ್ ಗಳನ್ನು ಕ್ಷೇತ್ರದ ಸಾರ್ವಜನಿಕರಿಗೆ ಸೌಕರ್ಯ ಮಾಡುತ್ತೇನೆ ಎಂದು ಹೇಳಿದರು. 

 ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್ ಬಿ  ತಿಮ್ಮಪೂರ್,  ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಪರಂ ಗೌಡ್ ಕಾಗೆ , ಉಪಾಧ್ಯಕ್ಷ ಗದಗದ ಪೀರ್ ಸಾಬ್  , ನಗರಸಭೆ ಅಧ್ಯಕ್ಷ ವಿದ್ಯಾ ದವಾಡಿ,  ನಾಡಗೋಡ್ ಪಾಟೀಲ್ , ಸಿದ್ದು ಕೊಣ್ಣುರ್, ಚಿದಾನಂದ್ ತೆಗ್ಗಿ, ಮಾಮುನ್ ರಶೀದ್ ಪಾರತನ ಹಳ್ಳಿ, ಅಬೂಬಕ್ಕರ್ ಜಮಖಂಡಿ , ಮಹಾಲಿಂಗಪುರ ಸಭೆ ಅಧ್ಯಕ್ಷ ಎಲ್ಲನಗೌಡ  ಪಾಟೀಲ್ , ತೇರದಾಳ್ ಪುರಸಭೆ ಅಧ್ಯಕ್ಷರು,ಇನ್ನೂ  ಅನೇಕ ನಗರಸಭೆ ಸದಸ್ಯರುಗಳು ,ಮುಖಂಡರುಗಳು ಉಪಸ್ಥಿತರಿದ್ದರು.

 ವರದಿ ಮಹಿಬೂಬ್  ಎಂ ಬಾರಿಗಡ್ಡಿ 
ರಬಕವಿ ಬನಹಟ್ಟಿ ತಾಲೂಕ ವರದಿಗಾರರು 

Tuesday, September 3, 2024

ಪೊಲೀಸ್ ಬಿಟ್ ಗಳಲ್ಲಿ ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ :

ಪೊಲೀಸ್ ಬಿಟ್ ಗಳಲ್ಲಿ  ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ :

ಬಾಗಲಕೋಟೆ / ರಬಕವಿ ಬನಹಟ್ಟಿ : ಬಾಗಲಕೋಟ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ  ನಮ್ಮ ಊರು, ನಮ್ಮ ಪೊಲೀಸ್ , ನಮ್ಮ ಬೀಟ್ ಮೊಬೈಲ್ ನಂಬರ್, ಅನ್ನುವಂತಹ ಪೋಸ್ಟರ್ ಗಳನ್ನು  ಜನಭೀಢವಾದ  ಸ್ಥಳಗಳಲ್ಲಿ ಅಂಟಿಸಿ ಸಣ್ಣಪುಟ್ಟ ಅಹಿತಕರವಾದ  ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಹಾಗೂ ನಗರದ ಪೊಲೀಸ್ ಠಾಣಾ ಪೊಲೀಸರು ಸಾರ್ವಜನಿಕರಿಗೆ  ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ.

 ಬಾಗಲಕೋಟ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರು  ನಗರದ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಮುಂಬಾಗ ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು .

 ಸುಧಾರಿತ ಬೀಟ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಬಿಟ್ ಗಳನ್ನು ಹಂಚಿಕೆ ಮಾಡಿ, ಅದರೊಳಗೆ ಪೊಲೀಸರನ್ನು ಹಂಚಿಕೆ ಮಾಡಿ , ಪೊಲೀಸರಿಗೆ ಸರ್ಕಾರಿ ಸಂಚಾರಿ ನಂಬರ್ ಗಳನ್ನು ಹಂಚಿಕೆ ಮಾಡಿರುತ್ತಾರೆ . ಈ ಬೀಟ್ ಸಂಬಂಧ ಪಟ್ಟಂತೆ ಏನೇ ಅಹಿತ ಘಟನೆಗಳ ಸಂಬಂಧಿಸಿದಂತೆ ಗೋಡೆ ಗಳ ಮೇಲೆ ಅಂಟಿಸಿರುವ  ಪೋಸ್ಟರ್ ಗಳಲ್ಲಿ   ನಮ್ಮ ಪೊಲೀಸ, ನಮ್ಮ ಬೀಟ್ ಮೊಬೈಲ್ ನಂಬರ್ ಅನ್ನುವಂತ ಸರ್ಕಾರಿ ನಂಬರುಗಳು ಇರುತ್ತವೆ. ಈ ನಂಬರ್ ಗಳಿಗೆ ನೀವು ಕರೆ ಮಾಡಿದರೆ ತಕ್ಷಣ ನಾವುಗಳು ಸ್ಪಂದನೆ ಮಾಡುತ್ತೇವೆ ಎಂದು ಬೀಟ್ ಪೊಲೀಸ್ ಗಳಾದ ದೇವೇಂದ್ರ ಹಾಗೂ ಅಜ್ಜನಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಅಧಿಕಾರಿ , ಮಲ್ಲಪ್ಪ ದಿವಾನ್ದಾರ್, ಶಿವನಗೌಡ ಪಾಟೀಲ್ , ಪ್ರಶಾಂತ್ ಪುಕಾಳೆ,  ಖೈಯುಮ್ ನಾಯಕವಾಡಿ , ಮುಬಾರಕ್ ಸಪ್ತಸಾಗರ್ ಇನ್ನೂ ಅನೇಕರಿದ್ದರು .

 ವರದಿ  : 
ಮಹಿಬೂಬ್ ಎಂ ಬಾರಿಗಡ್ಡಿ

Tuesday, July 16, 2024

ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು :


 ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : 

 ಬಾಗಲಕೋಟೆ :

ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಬೆಳಗಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೂರಾಣಿ ಮಸಿದೆ ಹಿಂಭಾಗದ ಇರುವ ದಸಗಿರ್ ಪೆಂಡಾರಿ ಇವರ ಮನೆಯ ಮೇಲೆ ಸಿನಿಮಯ ರೀತಿಯಲ್ಲಿ ದುಷ್ಕರ್ಮಿಗಳು ಅಂದಾಜು 250 ಲೀ ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿಕೊಂಡು. 2 hp ನೀರು ಎತ್ತುವ ಮೋಟಾರ್ ಮೂಲಕ ಮನೆಯ ಮೇಲೆ ಸಿಂಪಡಿಸಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಅತಿ ಕ್ರೂರ ಕೃತ್ಯವನ್ನು ಎಸೆಗಿದ್ದಾರೆ. 

ಈ ಮನೆಯಲ್ಲಿ ಐದು ಜನ ಇದ್ದರು. ಮಧ್ಯರಾತ್ರಿ 2 ಅಥವಾ 3 ಗಂಟೆಯ ಮಧ್ಯದಲ್ಲಿ ಈ ಕೃತ್ಯವು ನಡೆದಿರಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದರು.

 ಮುಸ್ಲಿಂ ಕುಟುಂಬದ ಜೈಬಾನ್ ದಸಗಿರ್ ಪೆಂಡಾರಿ ವಯಸು 55, ಶಬಾನಾ ದಸಗಿರ್ ಪೆಂಡಾರಿ ವಯಸು 26, ಈ ಇಬ್ಬರು ಘಟನೆಯಲ್ಲೇ ಸುಟ್ಟು ಸಾವನ್ನಪ್ಪಿದ್ದಾರೆ .
 ದಸಗಿರ ಪೆಂಡಾರಿ ಹಾಗೂ ಸುಭಾನ್ ದಸಗಿರ್ ಪೇಂಡಾರಿ ತಂದೆ ಮಗ ಇವರಿಬ್ಬರೂ ನಿದ್ದೆಯಲ್ಲಿದ್ದ ಎಚ್ಚರಗೊಂಡು, ನಡೆಯುತ್ತಿರುವಂತಹ ಘಟನೆಯನ್ನು ಕಂಡು ಕೂಡಲೇ ಘಟನೆಯ ಸ್ಥಳದಲ್ಲಿದ್ದ ಮನೆಯ ಹೊರಗಡೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸಿದ್ದಿಕ್ ಶೌಕತ್ ಪೆಂಡಾರಿ ಈತ ಕ್ಷಣದಲ್ಲಿ ಪಾರಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿಕೊಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಬಾಗಲಕೋಟೆ ಎಸ್‌ಪಿ ಅವರು ಈ ಘಟನೆಯ ವಿಚಾರಣೆಗೆ ಮೂರು ತಂಡಗಳನ್ನು ಏರ್ಪಡಿಸಿದ್ದಾರೆ. ಈ ಘಟನೆಗೆ ಕಾರಣಗಳಾದ ದುಷ್ಕರ್ಮಿಗಳನ್ನು ಎಡಮುರಿ ಕಟ್ಟಲು ತಯಾರಾಗಿದ್ದಾರೆ ಹಾಗೂ ಈ ಘಟನೆ ಕುರಿತುಲೆ ಮುಧೋಳ ನಗರದ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನಕ್ಕೆ ಪ್ರಕರಣ ದಾಖಲಾಗಿದ್ದು ದಾ ಎಂದು ಬಾಗಲಕೋಟೆ ಜಿಲ್ಲಾ ಎಸ್ ಪಿ ಅಮರ್ನಾಥ್ ರೆಡ್ಡಿ ತಿಳಿಸಿದರು.

 ವರದಿ ಮಹಿಬೂಬ್ ಎಂ ಬಾರಿಗಡ್ಡಿ 

Tuesday, June 25, 2024

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ 

 ಬಾಗಲಕೋಟೆ / ರಬಕವಿ - ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕೆಲವು ಕಾಲ ರಸ್ತೆಯನ್ನು ತಡೆದು ಭಾರತೀಯ ಜನತಾ ಪಕ್ಷವು ಬೃಹತ್ ಪ್ರತಿಭಟನೆ ಮಾಡಿದರು . 

ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕೈಗೊಂಡಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೇರದಾಳ್ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು . 

 ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸೌದಿ 
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಹೇಳಿದರು . 

ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮಾನ್ಯರು, ಕಾರ್ಮಿಕರು, ಬಡವರು, ರೈತರು ಮುಖ್ಯವಾಗಿ ನಮ್ಮ ನೇಕಾರರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ತಕ್ಷಣ ಈ ನಿರ್ಧಾರ ಹಿಂಪಡೆಯುವಂತೆ ಎಚ್ಚರಿಸಿದರು 
 
ಈ ಸಂದರ್ಭದಲ್ಲಿ ರಬಕವಿ. ಬನಹಟ್ಟಿ ಬಿಜೆಪಿ ನಗರ ಘಟಕದ ಧ್ಯಕ್ಷರಾದ . ಶ್ರೀಶೈಲ್ ಬೀಳಗಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುರೇಶ್ ಅಕ್ಕಿವಾಟ್ ,ಮತ್ತು ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 ವರದಿ : ಮಹಬೂಬ್ ಎಂ ಬಾರಿಗಡ್ಡಿ