Sunday, July 31, 2022

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ತಾಲೂಕು ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಬಸ್ಸುನಿಲ್ದಾಣ ಕುರಿತು ಸುದ್ದಿಗೋಷ್ಠಿ :*



 *ರಬಕವಿ ಬನಹಟ್ಟಿ :* 

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ  ತಾಲೂಕಿನ ಬನಹಟ್ಟಿ ನಗರದ,  ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ , ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ ನೇತೃತ್ವದಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ , ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳಾದ ತಾಲೂಕಾಸ್ಪತ್ರೆ ಮತ್ತು ನಗರದ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲು ಹೋರಾಟದ ರೂಪುರೇಷೆಗಳ ಬಗ್ಗೆ ,ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು .

ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ,ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ  ,ಅವಳಿ ನಗರಗಳಾದ ರಬಕವಿ-ಬನಹಟ್ಟಿ ತಾಲೂಕು ನಂತರವೂ ಕೂಡ  ನಗರದ ಆಸ್ಪತ್ರೆಯು  ಅದೇ ರೀತಿ ಇದೆ , ಈ ಆಸ್ಪತ್ರೆಗೆ , ಕನಿಷ್ಠ  100  ಹಾಸಿಗೆಯುಳ್ಳ ಅತ್ಯಾಧುನಿಕ  ಆಸ್ಪತ್ರೆ ಆಗಬೇಕಾಗಿತ್ತು , .ಆದರೆ ಇನ್ನೂ ಕೂಡ ಆಗಿಲ್ಲ ,ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ಘೋಷಣೆಯಾಗಿತ್ತು , ಇದೇ ಸರ್ಕಾರದಲ್ಲಿ ಶ್ರೀಮತಿ ಉಮಾಶ್ರೀ ಕೂಡ ಸಂಪುಟ ಸಚಿವೆಯಾಗಿದ್ದರು ಕೂಡ ಹೆಚ್ಚಿನ ಅನುದಾನ  ತರುವಂತಹ ಕೆಲಸ ಮಾಡಲಿಲ್ಲ.

 ಈಗಿನ ಸರ್ಕಾರದ ಶಾಸಕರು ಶ್ರೀ ಸಿದ್ದು ಸವದಿ ಕೂಡ , ತಾಲೂಕ  ಆಸ್ಪತ್ರೆ ಹಾಗೂ ನಗರದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು  ಸಮರ್ಪಕವಾದ ಅನುದಾನ ತರಲು ಪ್ರಯತ್ನ ಮಾಡುತ್ತಿಲ್ಲ , ಎಂದು ಆರೋಪಿಸಿದರು .

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪದಾಧಿಕಾರಿಗಳು , ಹಾಗೂ ಕಾರ್ಯಕರ್ತರು , ಮಹಿಳಾ ಮುಖಂಡರು ,  ಮುಖಂಡರು ಉಪಸ್ಥಿತರಿದ್ದರು .

Wednesday, July 27, 2022

ಸಿದ್ದರಾಮಯ್ಯ ಅವರ 75ನೇ ಜನ್ಮೋತ್ಸವ ಅಂಗವಾಗಿ ಪೂರ್ವಭಾವಿ ಸಭೆ :

75 ನೇಯ ಸಿದ್ದರಾಮಯ್ಯ ಅವರ ಜನ್ಮ ದಿನೋತ್ಸವ ಅಂಗವಾಗಿ ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತೇರದಾಳ ಮತ ಕ್ಷೇತ್ರದ ಅಭ್ಯರ್ಥಿಯಾದ ಡಾ,ಎ ಆರ್ ಬೆಳಗಲಿ ಅವರು ಭಾಗಿಯಾಗಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದಂತಹ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರ  ಜನ್ಮದಿನೋತ್ಸವವನ್ನು ಕರ್ನಾಟಕದ ಎಲ್ಲಕಡೆ  ಆಚರಿಸಲಾಗುತ್ತಿದೆ.

 ನಮ್ಮ ತೇರದಾಳ್ ಮತಕ್ಷೇತ್ರದ ಎಲ್ಲಾ ಜನತೆಯು, ಪಕ್ಷದ ಕಾರ್ಯಕರ್ತರು,ಮುಖಂಡರು ಯುವ ಸಮೂಹವು ಕೂಡಿ  ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ 75ನೇ ಜನ್ಮ ದಿನೋತ್ಸವವನ್ನು ಒಂದು  ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

 ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನೀಲಕಂಠ ಮುತ್ತೂರ,ಸಂಜು ಜೋತಾವರ, ಶಂಕರ ಜಾಲಿಗಿಡದ, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೇ ಸವಿತಾ ಚವಲಿ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.


KALAAM EXPRESS NEWS
RABKAVI BANHATTI

ತೇರದಾಳ ಪಟ್ಟಣಕ್ಕೆ ದಿಡೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್*

*ತೇರದಾಳ ಪಟ್ಟಣಕ್ಕೆ ದಿಡೀರನೆ  ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್* 

 ತೇರದಾಳ : 
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಹೋಬಳಿ ಪಟ್ಟಣಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಉಪ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದರು .

ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸಾಯಂಕಾಲ ನಾಲ್ಕು ಗಂಟೆಗೆ ಆಗಮಿಸಿ , ಸಾರ್ವಜನಿಕ ಕುಂದು ಕೊರತೆಗಳನ್ನು ಸ್ವೀಕರಿಸಿ , ನಂತರ ಮಾಧ್ಯಮದವರ ಜತೆ ಕೆಲವು ಕಾಲ ಸಂವಾದ ನಡೆಸಿದರು .

 *ಮಾಧ್ಯಮದವರು ಕೇಳಿದ ಪ್ರಶ್ನೆ ತಾವು*  ದಿಡೀರನೆ ತೇರದಾಳ  ಪಟ್ಟಣಕ್ಕೆ ಭೇಟಿ ನೀಡಿದ ಉದ್ದೇಶವೇನು ?ಎಂದಾಗ   ,ಉದ್ದೇಶ ಏನು ಇಲ್ಲ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಒಂದು  ತಾಲೂಕಿಗೆ ಭೇಟಿ ನೀಡಬೇಕು ಎಂದು ಸರ್ಕಾರದ ವತಿಯಿಂದ ಸುತ್ತೋಲೆ ಇದೆ  ಆದ್ದರಿಂದ ಈ ದಿನ ರಬಕವಿ-ಬನಹಟ್ಟಿ ತಾಲೂಕಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು  .

ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಶಾಲೆಗಳ ದುಸ್ಥಿತಿಗಳ ಬಗ್ಗೆ  ಕೇಳಿದಾಗ ,ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದು , ಎಜುಕೇಶನ್ ಡಿಪಾರ್ಟ್ಮೆಂಟ್ದ ಅವರೇ  ಮಾಡಬೇಕಾದ ಕೆಲಸ , ನಾನು ಶಾಸಕರಿಗೆ ಕೂಡ ವಿನಂತಿ ಮಾಡಿದ್ದೇನೆ ಶಾಸಕರ ಅನುದಾನದ ಸ್ವಲ್ಪ ಪರ್ಸೆಂಟೇಜ್ ಶಾಲೆ ಮತ್ತು ಅಂಗನವಾಡಿಗಳಿಗೆ ರಿಪೇರಿ ಮಾಡಿಸಲು ಜಿಲ್ಲೆಯ ಎಲ್ಲ cಶಾಸಕರಿಗೆ ಮನವಿ ಮೂಲಕ ಕೇಳಿದ್ದೇನೆ ಎಂದು ಹೇಳಿದರು .

 *ಇದೇ ಸಂದರ್ಭದಲ್ಲಿತಾಲೂಕುಗಳ ಸಮಸ್ಯೆಗಳ ಬಗ್ಗೆ ಕೇಳಿದಾಗ* , ಒಂದೇ ಪ್ರಸ್ತಾವನೆಯಲ್ಲಿ , ತೇರದಾಳ ತಾಲೂಕು ಹೆಡ್ ಹೋಬಳಿ ಕೇಂದ್ರವನ್ನಾಗಿ ಮಾಡುವುದು ,ಇನ್ನೊಂದು ರಬಕವಿ-ಬನಹಟ್ಟಿ  ತಾಲೂಕಿನಲ್ಲಿ , ರಬಕವಿ ಬನಹಟ್ಟಿ ಮತ್ತು ಮಹಾಲಿಂಗಪುರ್ ನಗರಗಳಲ್ಲಿ ಹೋಬಳಿಗಳನ್ನು ಮಾಡಿ , ಒಂದೇ ಬಾರಿ ಮೂರು ಕೆಲಸಗಳಿಗೆ ಪರಿಹಾರದ ,  ಪ್ರಸ್ತಾವನೆಗಳನ್ನು ಕಳಿಸಿದ್ದೇವೆ ಎಂದು ಹೇಳಿದರು .

MAHIBOOB BARIGADDI
TV6TERDALZONE
RABKAVI BANHATTI

Sunday, July 24, 2022

ಆಮ್ ಆದ್ಮಿ ಪಕ್ಷದಿಂದ 10 ಕಂಪ್ಯೂಟರ್ ಕೊಡಲು ಭರವಸೆ ನೀಡಿದ ಮುಖಂಡ ಅರ್ಜುನ್ ಹಲಗಿಗೌಡರ್ :*



 *ರಬಕವಿ ಬನಹಟ್ಟಿ*

 ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ನಗರ , ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ  ಜಿಲ್ಲಾ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿ ಗೌಡರ್  ರಿಪಬ್ಲಿಕನ್ ಪಾರ್ಟಿ ಆಫ್  ಸಂಘಟನೆ ,ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಮುಂದೆ ಬಂದಿರುವುದು ಬಹಳ ಸಂತೋಷದ ವಿಷಯ ,

 ಅರ್ಜುನಹಲಗಿಗೌಡರ್ , RPI  ಸಂಘಟನೆಗೆ 5 ಕಂಪ್ಯೂಟರ್ ಬೇಕು ಎಂದು ಮನವಿ ನೋಡಿ , ಸ್ವೀಕರಿಸಿ , ಮಾತನಾಡಿದ ಅವರು , 5 ಕಂಪ್ಯೂಟರ್ ಅಲ್ಲ ನನ್ನಿಂದ 10 ಕಂಪ್ಯೂಟರ್ ನೀಡಲು ಆ ದೇವರು ನನ್ನ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು .

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಂಬೇಡ್ಕರ್ ಸಂಘಟನೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಒದಗಿಸಲು ಮುಂದೆ ಬಂದಿದೆ , ಆದ್ದರಿಂದ ಇದೇ ಕಂಪ್ಯೂಟರ್ ಕೇಂದ್ರದಿಂದ ಸಾರ್ವಜನಿಕರಿಗೆ , ಸರ್ಕಾರಿ ಯೋಜನೆಗಳನ್ನು ತಲುಪಿಸಲು ನಾವು ಪ್ರಯತ್ನ ಮಾಡೋಣ ಎಂದು ಹೇಳಿದರು  . 



ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅಬ್ಬಾಸ್ ಮುಲ್ಲಾ ಶ್ರೀಕಾಂತ್ ಬುಗುಟಿ ರಪಿಕ್ ಕೋಲೂರ್ ಜಿಲ್ಲಾ ಕಾರ್ಯದರ್ಶಿ ಅಸ್ಸಲಾಂ ತರತರಿ  , ಜಿಲ್ಲಾ ಮಹಿಳಾ ಅಧ್ಯಕ್ಷ ಮಾನಂದಾ ಬುಗಟ್ಟಿ , ಜಿಲ್ಲಾ ಉಪಾಧ್ಯಕ್ಷರಾದ  ಜಿಲಾನಿ , ರಾಕೇಶ್ ಕಾಂಬಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು  ಮತ್ತಿತರರು ಉಪಸ್ಥಿತರಿದ್ದರು. 

Kalam Express News 
Editor Mahiboob Barigaddi

Friday, July 15, 2022

ಕುತೂಹಲ ಕೆರಳಿಸಿದ ಪುರಸಭೆ ಅಧ್ಯಕ್ಷ ಚುನಾವಣೆ , ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಬಸವರಾಜ ಹಿಟ್ಟಿನಮಟ್ ಆಯ್ಕೆ

ಕುತೂಹಲ ಕೆರಳಿಸಿದ ಪುರಸಭೆ ಅಧ್ಯಕ್ಷ ಚುನಾವಣೆ , ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಬಸವರಾಜ ಹಿಟ್ಟಿನಮಟ್ ಆಯ್ಕೆ 


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದಲ್ಲಿ ನಗರ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆ ಭಾರೀ ಕುತೂಹಲ ಕೆರಳಿಸಿರುವ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಬಸವರಾಜ್ ಹಿಟ್ಟಿನಮಟ್ ಒಂದು ಮತದ ಅಂತರದಿಂದ ಆಯ್ಕೆಯಾದರು . 

ಇಂದು ಮಧ್ಯಾಹ್ನ 1ಗಂಟೆಗೆ ನಾಮಪತ್ರಗಳ ಪರಿಶೀಲನೆ , ನಾಮಪತ್ರ ವಾಪಸ್ ಪಡೆಯುವುದು ನಂತರದಲ್ಲಿ ಪುರಸಭೆ ಅಧ್ಯಕ್ಷರ ಚುನಾವಣೆ ನಡೆಯಿತು .

 ಪುರಸಭೆಗೆ ಒಳಗೆ ಸಂಪರ್ಕಿಸುವ ಎಲ್ಲ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು  ಅಳವಡಿಸಲಾಗಿತ್ತು  .ಹಾಗೂ  ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು . ಎರಡುನೂರು ಪೊಲೀಸ್ ಅಧಿಕ ಸಿಬ್ಬಂದಿಗಳನ್ನು  ಕೂಡ ಬಂದು ಬಸ್ತಿಗೆ  ಏರ್ಪಾಡು ಮಾಡಲಾಗಿತ್ತು .

ತಾಲೂಕ ತಹಶೀಲ್ದಾರ್ S B  ಇಂಗಳೆ , ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸದರು.

ಭಾರತೀಯ ಜನತಾ ಪಕ್ಷದಿಂದ ಬಸವರಾಜ ಮಠ , ಕಾಂಗ್ರೆಸ್ ಪಕ್ಷದಿಂದ ಯಲ್ಲನಗೌಡ ಪಾಟೀಲ್ , ಹಾಗೂ ಜಾವೇದ್ ಭಾಗವಾನ್ , ಇಬ್ಬರು ಸೇರಿ ನಾಮಪತ್ರ ಸಲ್ಲಿಸಿದ್ದರಿಂದ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯ ಅಂತಿಮ ಹಂತದಲ್ಲಿರುವ ರೋಚಕತೆಯನ್ನು ಹೆಚ್ಚಿಸಿತ್ತು  .

ಇಂದು ಮಧ್ಯಾಹ್ನ 1:00 ಗಂಟೆಗೆ ನಾಮಪತ್ರ ಪರಿಶೀಲನೆ , ನಾಮಪತ್ರ ವಾಪಸ್  ಪಡೆದ , ನಂತರ ಚುನಾವಣೆಯ ಪ್ರಕ್ರಿಯೆ ನಡೆಯಿತು .


ಈ ಸಂದರ್ಭದಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯ ಜಾವೇದ್ ಭಾಗವಾನ್ ಅವರು ಮಾಧ್ಯಮದೊಂದಿಗೆ  ಮಾತನಾಡಿ , ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಹಿಟ್ಟಿನಮಠ ಅವರು ಯುವ ಮುಖಂಡ ರಾಗಿದ್ದಾರೆ ನಾವು ಅವರನ್ನು ಕೂಡ ಸಹಕರಿಸುತ್ತವೆ , ಎಂದು ಹೇಳಿದರು .

ಇದೇ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಹಾಗೂ ಇನ್ನೂ ಅನೇಕ ಪಕ್ಷದ ಮುಖಂಡರು  ಉಪಸ್ಥಿತರಿದ್ದರು .



KALAAM EXPRESS NEWS
TERDAL ZONE
RABKAVI - BANHATTI

Saturday, July 9, 2022

ಬನಹಟ್ಟಿ ನಗರದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ,ಈದ್ಗಾ ತೆರಳದೆ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು* :




ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಪ್ರಭಾವದಿಂದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮಸೀದಿಗೆ , ಹೋಗದೆ ಆಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡುಬಂತು  .

ನಿನ್ನೆ ಸಂಜೆ ಸತತ ಮಳೆಯ ಪ್ರಭಾವದಿಂದ ನಗರದ ಅಂಜುಮನ್ ಸಂಸ್ಥೆಯ ಹಾಗೂ ಮರ್ಕಜ್ ಮಸೀದಿಯ ಮುಖಂಡರುಗಳು ಸಭೆ ನಡೆಸಿದ ಬಳಿಕ , ಆಯಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು .ಅದೇ ರೀತಿಯಾಗಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಆಯಾ ಮಸೀದಿಗಳಲ್ಲಿ ನಿರ್ವಹಿಸಲಾಯಿತು .

ಈ ಸಂದರ್ಭದಲ್ಲಿ ಬಕ್ರೀದ್  ಹಬ್ಬದ ಸಾಮೂಹಿಕ  ಪ್ರಾರ್ಥನೆಯನ್ನು ಮೌಲಾನಾ ಆಸೀಫ ಅತ್ತಾರ   ನಿರ್ವಹಿಸಿದರು . ಹಾಗೂ ಅಯ್ಯೂಬ್ ಅತ್ತಾರ  , ಪ್ರಾರ್ಥನೆ ಸಂದರ್ಭದಲ್ಲಿ ಬರುವಂತಹ ಆಯಾಮಗಳನ್ನು ನಿರೂಪಿಸಿದರು .

ಬನಹಟ್ಟಿ ನಗರದ ಪೊಲೀಸ್ ಇಲಾಖೆ ಯಾವುದೇ ಆಹಿತ  ಘಟನೆ   ನಡೆಯದಂತೆ , ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು ಎಂದು ಸಿಪಿಐ ವೀರೇಶ್ ಮಠಪತಿ ಹೇಳಿದರು .

ಈ ಸಂದರ್ಭದಲ್ಲಿ ಮಾತನಾಡಿದ ನಗರದ  ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾರೂನ್ ರಶೀದ್  ಸಾಂಗ್ಲಿಕರ್ , ಎಲ್ಲ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಹೇಳುತ್ತಾ , ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಈದ್ ಉಲ್ ಅದಹ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ನಿರ್ವಹಿಸಿದವು. ಹಾಗೂ ಇಡೀ ಸಮಸ್ತ ಮುಸ್ಲಿಂ ನಾಗರಿಕರಿಂದ ದೇಶದಲ್ಲಿ ಎಲ್ಲರಿಗೂ ಶಾಂತಿ ಸೌಹಾರ್ದ  ಸಹಬಾಳ್ವೆಯಿಂದ  ಬಾಳೋಣ ಎಂದು ಹಾರೈಸಿದರು .

KALAAM EXPRESS NEWS
TERDAL ZONE
BAGALKOTE
RABKAVI - BANHATTI

Friday, July 8, 2022

ಆಮ್ ಆದ್ಮಿ ಪಕ್ಷ ತೆರೆದಾಳ ಮತಕ್ಷೇತ್ರದಲ್ಲಿ ,ಗ್ರಾಮ ಸಂಪರ್ಕ ಅಭಿಯಾನ , ಹಾಗೂ ಕಾರ್ಯಕರ್ತರ ಸಭೆ

ಆಮ್ ಆದ್ಮಿ ಪಕ್ಷ ತೆರೆದಾಳ ಮತಕ್ಷೇತ್ರದಲ್ಲಿ ಗ್ರಾಮ ಸಂಪರ್ಕ ಅಭಿಯಾನ ಹಾಗೂ ಕಾರ್ಯಕರ್ತರ ಸಭೆ
ಬಾಗಲಕೋಟ ಜಿಲ್ಲೆಯ ತೇರದಾಳ ಮತಕ್ಷೇತ್ರದ ಮಹಾಲಿಂಗಪುರ್ ನಗರದ ಶ್ರೀ ಚೆನ್ನಶ್ವರ ಕಲ್ಯಾಣ ಮಂಟಪದಲ್ಲಿ ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಮತ್ತು ಕಾರ್ಯಕರ್ತರ ಸಭೆ ನಡೆಯಿತು


ಇದೇ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ , ರಮೇಶ್ ಬದನೂರ ಈ ದೇಶಕ್ಕೆ ಭ್ರಷ್ಟಾಚಾರ ಅನ್ನುವುದು ಒಂದು ದೊಡ್ಡ ಕ್ಯಾನ್ಸರ್ ಇದ್ದಹಾಗೆ , ದೇಶ ಭ್ರಷ್ಟಾಚಾರದಿಂದ ತುಂಬಿತುಳುಕುತ್ತಿದ.   ಭ್ರಷ್ಟಾಚಾರವನ್ನು ಹೋಗಲಾಡಿಸಬೇಕಾದರೆ ಯುವಕರೆಲ್ಲರೂ  ಒಂದಾಗಬೇಕು .ಪಕ್ಷದಲ್ಲಿ ಯಾವುದೇ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಇರುವುದಿಲ್ಲ ಎಂದು ಹೇಳಿದರು .

ಸುದ್ದಿಗಾರರ ಜೊತೆ ಮಾತನಾಡಿದ ಅವರು ,ಆಮ್ ಆದ್ಮಿ ಪಕ್ಷವು ದೇಶದಲ್ಲಿ ಜನಸೇವೆ ಮಾಡ್ತಾಯಿದೆ ಹೊರತು ರಾಜಕಾರಣವಲ್ಲ, ದೆಹಲಿ ಮತ್ತು ಪಂಜಾಬದಲ್ಲಿ ಜನರು ಸರ್ಕಾರದ ಸೇವೆಗಳನ್ನು ಪಡೆಯುತ್ತಿದ್ದಾರೆಯೋ ಅದನ್ನೇ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿ ಬಂದನಂತರ ಕರ್ನಾಟಕದ ಜನರಿಗೆ ಕೊಡಬೇಕು ಅನ್ನುವುದು ಮುಖ್ಯ ಉದ್ದೇಶವಾಗಿದೆ , ಎಂದು ಹೇಳಿದರು  .


ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಅರ್ಜುನ್ ಹಲಗಿ ಗೌಡರ ಮಾತನಾಡಿ ಒಂದು ವೇಳೆ ನನ್ನನ್ನು ಮತ ಕ್ಷೇತ್ರದ ಶಾಸಕ ಮಾಡಿದರೆ ಶಾಸಕರಿಗೆ ಬರುವಂತ ಸಂಬಳ 2 ,ಲಕ್ಷ 5000  ರೂಪಾಯಿಗಳನ್ನು ಅತಿ ಕಡುಬಡವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನಾನು ಕೊಡುತ್ತೇನೆ ಎಂದು ಹೇಳಿದರು .

ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ  ಹಾಗೂ ಆಮ್ ಆದ್ಮಿ ಪಕ್ಷದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ , ಬಾಬು ಶೇಕ್ , ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .

KALAAM EXPRESS NEWS
TERDAL ZONE
BAGALKOTE