Thursday, August 17, 2023

ನೇಕಾರರಿಗೆ 10 ಹೆಚ್ ಪಿ ಉಚಿತ ವಿದ್ಯುತ್ ಜಾರಿ ಮಾಡಿ , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪತ್ರ ಅಭಿಯಾನ ಚಳುವಳಿ:




 *ರಬಕವಿ ಬನಹಟ್ಟಿ*: 


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ  ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ , ಕರ್ನಾಟಕ ನೇಕಾರ ಸೇವಾ ಸಂಘ ಇವರ ಆಶ್ರಯದಲ್ಲಿ ಸಭೆಯನ್ನು ನಿಯೋಜನೆ ಮಾಡಲಾಗಿತ್ತು . 

ಕರ್ನಾಟಕ ಸರ್ಕಾರ  07-07-2024 ರಂದು ರಾಜ್ಯ ನೇಕಾರ ಒತ್ತಾಯದ  ಮೇರೆಗೆ  10 ಹೆಚ್ ಪಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು ಘೋಷಣೆ ಮಾಡಿಯು ಸರ್ಕಾರ ಅನುಷ್ಠಾನ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ  , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು  ಸರ್ಕಾರಕ್ಕೆ ಮನವರಿಕೆ ಮಾಡುವುದು ಗೋಸ್ಕರ ,  ಪತ್ರ ಅಭಿಯಾನ ಚಳುವಳಿ ಮಾಡಲಾಗುವುದು   ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು . 

 ಪ್ರತಿಯೊಬ್ಬರೂ ಪತ್ರ ಅಭಿಯಾನ ಪ್ರಾರಂಭಿಸೋಣ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಕಾರರನ್ನು ಹೋರಾಟಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭ ಮಾಡಿ  , ಜಿಲ್ಲಾ ಮಟ್ಟದ ಸಭೆಯನ್ನು ಮಾಡಲಾಗುವುದು  ಹಾಗೂ ದಿನಾಂಕ 18-08-2023 ರಂದು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನೇಕಾರರು ಮಾನಕಾಪೂರದಲ್ಲಿ ಸಭೆ ಸೇರಿ ಚರ್ಚಲಾಗುವುದು ನಾವುಗಳು ಕೂಡಾ ಸಭೆಗೆ ಭಾಗವಹಿಸಲಿದ್ದೆವೆ ಎಂದು ಹೇಳಿದರು .


 ದಿ 27-08-2023 ರಂದು ರಬಕವಿ ಬನಹಟ್ಟಿಯಲ್ಲಿ ಬಾಗಲಕೋಟ ಜಿಲ್ಲೆ ಮತ್ತು ಬೆಳಗಾವಿ  ವಿಜಯಪುರ ಜಿಲ್ಲೆಯ ನೇಕಾರರ ಬೃಹತ್ ಸಭೆಯನ್ನು , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಕರೆಯಲು ನಿರ್ಧರಿಸಲಾಗಿದೆ ಈ ಸಭೆಯು ನಾಡಿನ ಲಕ್ಷಾಂತರ ಜನ ನೇಕಾರರ ಶಾಶ್ವತ ಪರಿಹಾರಕ್ಕಾಗಿ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಸೌಲಭ್ಯಗಳು ದೊರೆಯಲಿ ಎನ್ನುವ ಉದ್ದೇಶವಾಗಿದೆ ಹಲವಾರು ವರ್ಷಗಳಿಂದ ನಮ್ಮೆಲ್ಲರ ಹೋರಾಟಗಳನ್ನು ಮುಂದಿಟ್ಟುಕೊಂಡು ಬೇರೆಯವರು ಕೆಲವಿಷ್ಟು ನಮ್ಮ ನಾಯಕರುಗಳು ಒಳಗೂಡಿ ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಹಾಗೂ ವ್ಯಾಪಾರೀಕರಣದ ಉದ್ಯಮಿಗಳಾಗುವ ದೃಷ್ಠಿ ಕೊನದಿಂದಾಗಿ ಪ್ರಾಮಾಣಿಕವಾದ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ . ಇದಕ್ಕೆ ಯಾವುದಕ್ಕೂ ಜಗ್ಗದೆ ನಿರಂತರ ಹೋರಾಟಗಳು  ನೇಕಾರರ ಸ್ವಂತ ಬಸ್ ಚಾರ್ಜ್ ಹಾಗೂ ಊಟ  ತಮ್ಮದೆ  ,   ಸ್ವಂತ ಖರ್ಚಿನಲ್ಲಿ ಹೋರಾಟಗಳು ನಿರಂತರ ನಡೆಯುತ್ತಿವೆ ಎಂದು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ   ಹೇಳಿದರು . 


ಇದೇ ಸಂದರ್ಭದಲ್ಲಿ ಸಂಗಪ್ಪ ಉದ್ಗಟ್ಟಿ  ಲಕ್ಕಪ್ಪ ಪವಾರ್ ,ಆನಂದ್ ಜಗದಾಳ್ ,ಮಹದೇವ್ ನುಚ್ಚಿ, ಆನಂದ ಜೀರಗಾಳ ,ಆನಂದ್ ಬಾಣಕಾರ್ , ಅಶೋಕ್ ಕರಲಟ್ಟಿ , ಕಾಡು ಕೋಕಟ್ನೂರ್ , ಬಸು ಚಿಂಚಕಂಡಿ , ರಬಕವಿ ಬನಹಟ್ಟಿ ರಾಂಪುರ ಹೊಸೂರ್ ಆಸಂಗಿ ಹುನ್ನೂರ್ ಮಹಾಲಿಂಗಪುರ್ ತೆರದಾಳ ದ ನೂರಾರು ಜನ ನೇಕಾರರು ಭಾಗವಹಿಸಿದ್ದರು .


ವರದಿ : 
 ಮಹಬೂಬ್ ಬಾರಿಗಡ್ಡಿ

Saturday, August 12, 2023

ಮುಸ್ಲಿಂ ವ್ಯಕ್ತಿ ಖಲೀಲ್ ಅವರ ಜೀವ ಬಚಾವ ಮಾಡಿದ ಹಿಂದೂ ಯುವಕ ವಿಠಲ್ ಒಡೆಯರ್ :




  ರಬಕವಿ ಬನಹಟ್ಟಿ  :


  ಶೃದ್ಧಾಂಜಲಿ ಮದುವೆಯ ಕಾರ್ಯಕ್ರಮಗಳಿಗೆ  ಔತನಕೂಟ ಏರ್ಪಾಟ ಮಾಡಿಕೊಳ್ಳುವುದು ಸಹಜ , ಆದರೆ ಇತ್ತೀಚಿಗೆ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ  ನಗರದ , ಖಲೀಲ್ ರಾಜನ್ನವರ್ ತನ್ನ ಸಂತಸ ಮುಗಿಲು ಮುಟ್ಟಿದ್ದಲ್ಲದೆ, ಜೀವ ಉಳಿದ ಹಾಗೂ ಉಳಿಸಿದಕ್ಕಾಗಿ , ಸಾವಿರಾರು ಜನತೆಗೆ ಔತನಕೂಟ ಏರ್ಪಡಿಸುವುದರ ಮೂಲಕ  ,    ಸೃಷ್ಟಿಕರ್ತನಿಗೆ  ಹೃದಯಪೂರ್ವಕವಾಗಿಅಭಿನಂದನೆ ಮಾಡುವುದರ ಮೂಲಕ , ನೆಮ್ಮದಿ ಕಾಣುವಲ್ಲಿ ವಿಶೇಷವಾಗಿತ್ತು.

ನಡೆದಿದ್ದೇನು ? 

ಈಚೆಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ರಾಮಪುರ ನಗರದ ವ್ಯಕ್ತಿ  ಖಲೀಲ ರಾಜನ್ನವರನನ್ನು ಹಿಂದೂ ಯುವಕ  ಮಲ್ಲಾಪುರ ಗ್ರಾಮದ ವಿಠ್ಠಲ ಒಡೆಯರ್ ಜೀವವನ್ನು ಕಾಪಾಡುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆ.

ನದಿ ದಡದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ವಿಠ್ಠಲ ಘಟಪ್ರಭಾ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ್ದಾನೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ.

ಮತ್ತೊರ್ವ ಪ್ರಯಾಣಿಕ ವಾಹನದಲ್ಲಿ ಸಿಲುಕಿಕೊಂಡಿರುವದನ್ನು ಗಮನಿಸಿ ಈಜು ಬರುವದಿಲ್ಲವೆಂದು ಅರಿತ ವಿಠ್ಠಲ, ತಕ್ಷಣ ನದಿಗೆ ಹಾರಿ ಕಾರನ್ನು ತಲುಪಿo ಪ್ರಯಾಣಿಕನನ್ನು ಸುರಕ್ಷಿತವಾಗಿ ಹೊರಗೆಳೆದು ನದಿಯ ದಡಕ್ಕೆ ಕರೆದೊಯ್ದ ಸಿನಿಮೀಯ ಘಟನೆ ನಡೆದಿತ್ತು.


ಇದರ ಸಂಭ್ರಮಕ್ಕಾಗಿ ಶುಕ್ರವಾರದಂದು ರಬಕವಿ-ಬನಹಟ್ಟಿಯ ಸಾವಿರಾರು ಜನರಿಗೆ ಔತನಕೂಟದೊಂದಿಗೆ ಸಂಭ್ರಮಿಸುವ ಮೂಲಕ ತನ್ನ ಜೀವದಾನಕ್ಕೆ ಕಾರಣನಾದ ಯುವಕ ವಿಠ್ಠಲ ಒಡೆಯರ್ ಅವರನ್ನು ಸನ್ಮಾನಿಸಿದ ವಿಶೇಷ ಘಟನೆ ನಡೆಯಿತು.



ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಜಮೀಯತೆ ಉಲೇಮ  ಹಿಂದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌಲಾನ ಮೋಸಿನ್ ಗೋಕಾಕ್ ಹಾಗೂ ಅರುಣ್ ಬೇವೂರ್, 
ಅಯ್ಯುಬ ಖಾನ್ ಹೊರಟ್ಟಿ  , ಇನ್ನೂ ಹಲವಾರು ನಗರದ  ಗಣ್ಯ ವ್ಯಕ್ತಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು .

ವರದಿ :
ಮಹಬೂಬ್ ಬಾರಿಗಡ್ಡಿ

Friday, August 11, 2023

ದಿಕ್ಕೆ ಇಲ್ಲದ ಅನಾಥವಾದ ರಾಮಪುರ ಮುಖ್ಯರಸ್ತೆ



 *ರಬಕವಿ ಬನಹಟ್ಟಿ* : 
ಅವಳಿ ನಗರಗಳು
ತಾಲೂಕ ರಚನೆಯಾಗಿ  ಹಲವು ವರ್ಷಗಳು ಕಳೆದರೂ ಕೂಡ 
 ರಬಕವಿ ಬನಹಟ್ಟಿ
ನಗರದ  ಸೌಂದರ್ಯ ಹಾಗೂ ಅಭಿವೃದ್ಧಿ ಬಗ್ಗೆ
ಯಾರುತಲೆಕೆಡಿಸಿಕೊಳ್ಳುತ್ತಿಲ್ಲ ,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಹೃದಯ ಭಾಗದಲ್ಲಿರುವಂತಹ  ರಾಮಪುರದ ಮುಖ್ಯ  ರಸ್ತೆಯ
  ಒಳಚರಂಡಿಯ ಕಾಮಗಾರಿ ಮುಗಿದು ಕೆಲವು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ  ಆಗದೆ , ಹಾಗೆ ಉಳಿದುಕೊಂಡಿರುವುದು
 ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ .
ರಬಕವಿ ಬನಹಟ್ಟಿ ನಗರಸಭೆ ಒಟ್ಟು ಜನಸಂಖ್ಯೆ ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚು ಇರುವಂತ ಪ್ರದೇಶದಲ್ಲಿ
ತೆಗ್ಗು
 ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ,ಆಟೋ ಚಾಲಕರು ದ್ವಿಚಕ್ರನ ವಾಹನದ ಸವಾರರು
 ಓಡಾಡಲು ಹರಸಹಾಸ
 ಪಡುತ್ತಿದ್ದಾರೆ .

ರಾಂಪುರ್ ನಗರದ ಮುಖ್ಯ ರಸ್ತೆ  ನಗರಸಭೆಯ ರಸ್ತೆಯೋ ?
ಅಥವಾ ಪಿಡಬ್ಲ್ಯೂಡಿ ರಸ್ತೆಯೋ ? ಎನ್ನುವುದು
 ಸಾರ್ವಜನಿಕರಲ್ಲಿ ಪ್ರಶ್ನೆಯಾಗಿ
 ಕಾಡ್ತಾ ಇದೆ .

ರಬಕವಿ ಬನಹಟ್ಟಿ ಅವಳಿ ನಗರಗಳ ಹೃದಯ ಭಾಗದಲ್ಲಿರುವಂತ ರಾಂಪುರ್ ಮುಖ್ಯ ರಸ್ತೆಯಲ್ಲಿ
ಆಟೋ ಚಾಲಕರ ಹಾಗೂ ದ್ವಿಚಕ್ರ ವಾಹನಗಳ ಸವಾರರ ಓಡಾಟದ ಪರಿಸ್ಥಿತಿಯನ್ನು ನೋಡಿ
 ಅಯ್ಯೋ ಪಾಪ  ಅನಿಸುತ್ತದೆ .

ಕೆಲವು ತಿಂಗಳ ಹಿಂದೆ ಆಟೋ ಚಾಲಕರ ಸಂಘದ ವತಿಯಿಂದ
ಪ್ರತಿಭಟನೆಯನ್ನು ಮಾಡಿ ,
 ಮುಖ್ಯರಸ್ತೆ ಅಭಿವೃದ್ಧಿಯ ಬಗ್ಗೆ ಮನವಿ ಕೊಡುವ ಸಂದರ್ಭದಲ್ಲಿ ,
ಈ ಮುಖ್ಯ ರಸ್ತೆಯ ವಿಷಯವನ್ನು , ನಗರಸಭೆಯ
 ಸಂಬಂಧಪಟ್ಟ ಅಧಿಕಾರಿಗಳಿಗೆ
 ಕೇಳಿದರೆ  ,ಇದು ನಮಗೆ ಸಂಬಂಧಪಟ್ಟ ರಸ್ತೆ ಅಲ್ಲ ಎಂದು ಹೇಳಿಕೊಂಡಿದ್ದಾರೆ .

ಈ ಅನಾಥವಾದ ರಸ್ತೆಗೆ  ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು  ಅಗಲೀಕರಣ ಮಾಡಿ  ಅಭಿವೃದ್ಧಿಗೊಳಿಸಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ  .

 ವರದಿ : ಮಹಿಬೂಬ್ ಎಂ ಬಾರಿಗಡ್ಡಿ

Wednesday, August 9, 2023

ಸಾರ್ವಜನಿಕ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದ , ರಬಕವಿ ಬನಹಟ್ಟಿ ನಗರಸಭೆಯ ಅಧಿಕಾರಿಗಳು*:

 *ರಬಕವಿ ಬನಹಟ್ಟಿ:* 


ಬಾಗಲಕೋಟೆ ಜಿಲ್ಲೆಯ       
ರಬಕವಿ ಬನಹಟ್ಟಿ
 ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗುವಂಥ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ  ಆರೋಪವಾಗಿದೆ .

ಬನಹಟ್ಟಿ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಬಸ್ ನಿಲ್ದಾಣ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ಮಧ್ಯ ಮುಖ್ಯರಸ್ತೆಯಲ್ಲಿ ಹಾಗೂ  ಜನಬೀಡ ಪ್ರದೇಶದಲ್ಲಿ ,ಒಳಚರಂಡಿ ಕುಸಿದು  ಹೋಗಿ ಗುಂಡಿಯು ನಿರ್ಮಾಣವಾಗಿದ್ದರಿಂದ ,
ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ . ಈಗಾಗಲೇ ಕೆಲವು ಜನ ಈ ಗುಂಡಿಯಲ್ಲಿ ಬಿದ್ದು ತಲೆ ಒಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷ ಧರಿಸಿಗಳು ಅಳಲು ತೋಡಿಕೊಂಡಿದ್ದಾರೆ .   ನಗರದ ಬಸ್ ನಿಲ್ದಾಣ
ಹತ್ತಿರ ಪಶುವೈದ್ಯಕೀಯ ಆಸ್ಪತ್ರೆ ಮುಂದೇನೆ ಗುಂಡಿಯು ಇರುವುದರಿಂದ ಪಶು ವೈದ್ಯಕೀಯ ಆಸ್ಪತ್ರೆಯವರು ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ  ಏನು ಪ್ರಯೋಜನವಾಗಲಿಲ್ಲ 
ಸಾರ್ವಜನಿಕರಿಗೆ ತೊಂದರೆ ಆಗುವಂತ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳು ಸ್ಪಂದಿಸಿದಿದ್ದರೆ ,ಗಣನೆಗೆ ತೆಗೆದುಕೊಳ್ಳದಿದ್ದರೆ , ಈ ಒಳ ಚರಂಡಿಯ ಗುಂಡಿಯಲ್ಲಿ ಸಾರ್ವಜನಿಕರು ಬಿದ್ದು ಅನಾಹುತ ಗೊಂಡರೆ ,
ಸ್ಥಳೀಯ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ರಬಕವಿ ಬನಹಟ್ಟಿ  ತಾಲೂಕ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ಎಚ್ಚರಿಕೆಯನ್ನು ನೀಡಿದರು .

ಇದೇ ಸಂದರ್ಭದಲ್ಲಿ ಕೂಡ ಅಂಬೇಡ್ಕರ್ ಸೇನೆಯ ನಗರ ಘಟಕದ ಅಧ್ಯಕ್ಷ ಕಲ್ಲಪ್ಪ ಸಿಂಗೆ ಅವರು ಕೂಡಲೇ ಜನಬೀಡ ಪ್ರದೇಶದಲ್ಲಿ ಒಳಚರಂಡಿಯ ಗುಂಡಿಯ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಮ್ಮ ಸಂಘಟನೆಯು ನಗರಸಭೆ ಅಧಿಕಾರಿಗಳಿಗೆ    ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು .

ವರದಿ :
ಮಹಬೂಬ್ ಎಂ ಬಾರಿಗಡ್ಡಿ

Tuesday, August 8, 2023

ಕರ್ನಾಟಕ ರಾಜ್ಯ ರೈಲ್ವೆ ಹೋರಾಟ ಸಮಿತಿ ನಿಯೋಗ ದೆಹಲಿಗೆ

  

ಬಾಗಲಕೋಟೆ  : 
     
ರೈಲ್ವೆ ಹೋರಾಟ ಸಮಿತಿಯ ನಿಯೂಗ ಬಾಗಲಕೋಟ್ ಲೋಕಸಭಾ ಮತಕ್ಷೇತ್ರದ ಸಂಸದ PC ಗದ್ದಿಗೌಡರ ,  ಸಂಸದ ಅಣ್ಣಾ ಸಾಬ ಜೊಲ್ಲೆ ಅವರನು    ಭೇಟಿ ಮಾಡಿ ,   ಕುಡಚಿ - ಬಾಗಲಕೋಟೆ   ರೈಲ್ವೆ ಮಾರ್ಗದ     ಕಾಮಗಾರಿಯನ್ನು , ಕುಡಚಿ ಕಡೆಯಿಂದ ಲೋಕಾಪುರ   ದವರೆಗೆ ಏಕಕಾಲ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ   ತರಬೇಕು  ಎಂದು  ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ   ಕೂತುಬುದ್ದಿನ ಖಾಜಿ  ,    ರಾಜ್ಯ ಉಪಾಧ್ಯಕ್ಷ    ಶ್ರೀನಿವಾಸ ಬಳ್ಳಾರಿ  ,   ಖ್ಯಾತ ಬಾಗಲಕೋಟೆ ಜಿಲ್ಲೆಯ ಜವಳಿ ಉದ್ಯಮಿ   ಗಣಪತ್ತ ರಾವ ಹಜಾರೆ ,  ಜಿಲ್ಲೆಯ ಖ್ಯಾತ ವೈದ್ಯರಾದ ಡಾಕ್ಟರ್ ರವಿ ಜಮಖಂಡಿ  ,     ಇನ್ನೂ ಕೆಲವು ಹಲವು ವ್ಯಕ್ತಿಗಳ ಒಳಗೊಂಡ     ನಿಯೋಗ   ಇಂದು   ದೆಹಲಿಯಲ್ಲಿ ಒತ್ತಾಯಸಿತು.     

ಇದೇ ಸಂದರ್ಭದಲ್ಲಿ ಇಬ್ಬರು ಸಂಸದರು ಅವರನ್ನು  ಸ್ಪಂದಿಸಿ ,  ಕರ್ನಾಟಕ ರಾಜ್ಯ ರೈಲ್ವೆ ಹೋರಾಟ  ಸಮಿತಿಯ ಪದಾಧಿಕಾರಿಗಳನ್ನು ಕೇಂದ್ರ ಸಚಿವರಾದ , ಶ್ರೀ ಪ್ರಲ್ಲಾದ ಜೋಶಿ ಅವರನ್ನು ಭೆಟ್ಟಿ ಮಾಡಿಸಿ , ಕರ್ನಾಟಕ ರಾಜ್ಯ ಸರ್ಕಾರ ,ಬಾಗಲಕೋಟೆ  - ಕುಡಚಿ ರೈಲ್ವೆ ಮಾರ್ಗಕ್ಕೆ ಅಗತ್ಯವಾದಅಂತಹ ಭೂಮಿಯನ್ನು ಒದಗಿಸಿದೆ ಯಂದು ಮಾನ್ಯ ಸಚಿವರಿಗೆ ಮನವರಿಕೆ   ಮಾಡಿದರು  .  

    ಇದೇ ಸಂದರ್ಭದಲ್ಲಿ ಎರಡು ಕಡೆಯಿಂದ ಏಕಕಾಲಕ್ಕೆ  ರೈಲ್ವೆ ಕಾಮಗಾರಿ  ಪ್ರಾರಂಬಿಸಲು ಅಗ್ರಹೀಸಿ  , 2024 ರ ಒಳಗಾಗಿ ಪೂರ್ಣ ಗೊಳಿಸಲು ರೈಲ್ವೆ ಇಲಾಖೆ ಮೇಲೆ  ಒತ್ತಡ ಹೇರಬೇಕೆಂದು ,  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ , P C  ಗದ್ದಿ ಗೌಡ್ರು  ,   ಅಣ್ಣ ಸಾಬ್  ಜೊಲ್ಲೆ  ಹಾಗೂ   ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.           

ಮನವಿ ಸ್ವಿಕರಿಸಿದ ಸಚಿವರು ನಿಮ್ಮ ಬೇಡಿಕೆ ಸೂಕ್ತವಾಗಿರುವಂಥದ್ದು , ತಕ್ಷಣ ಪೂರ್ಣ ಕಾಮಗಾರಿ ಪ್ರಾರಂಭಿಸಲು ರೈಲ್ವೆ ಮಂತ್ರಿ ಗಳಿಗೆ ಸುಚಿಸುತ್ತೇನೆ ಯಂದು ಹೇಳಿದರು .   

ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ   ಕೂತುಬುದ್ದಿನ ಖಾಜಿ , ಉಪಾಧ್ಯಕ್ಷ     ಶ್ರೀನಿವಾಸ್ ಬಳ್ಳಾರಿ ,  ಗಣಪತ ರಾವ ಹಜಾರೆ ,  ರವಿ ಜಮಖಂಡಿ ,    ಹಲವರು ಪ್ರಮುಖರು ಉಪಸ್ಥಿತರಿದ್ದರು .     


 ವರದಿ ಮಹಿಬೂಬ್ ಎಂ  ಬಾರಿಗಡ್ಡಿ ಬಾಗಲಕೋಟೆ

ಮುಸ್ಲಿಂ ಮೀಸಲಾತಿ ರದ್ದು ಹಿಂಪಡೆಯಲು ಆಗ್ರಹಿಸಿ, ತಹಶೀಲ್ದಾರಗೆ ಮನವಿ,

ಬಾಗಲಕೋಟೆ :

ಮುಧೋಳ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ಆಯೋಗದ ಅನುಮತಿ ಇಲ್ಲದೆ ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇದ್ದ ಶೇ.4ರ ಮೀಸಲಾತಿ ರದ್ದುಗೊಳಿಸಿರುವುದನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ಮುಸ್ಲಿಂ ಯೂನಿಟಿ ಮುಧೋಳ ತಾಲೂಕು ಘಟಕದಿಂದ ತಹಶೀಲ್ದಾರ ವಿನೂದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಗಳಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಪ್ರಕರಣದಿಂದ ಕೈ ಬಿಡುವುದು ಹಾಗೂ ಉಡುಪಿಯಲ್ಲಿ ನಡೆದ ವಿಡಿಯೋ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಹಿರಿಯ ನ್ಯಾಯವಾದಿ ಐ.ಎಚ.ಅಂಬಿ,
ಮುಸ್ಲಿಂ ಯೂನಿಟಿ ತಾಲೂಕು ಅಧ್ಯಕ್ಷ ಬಿಲಾಲ ಬಾನದಾರ, ಮಾತನಾಡಿ, ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ, ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ ಮೆರವಣಿಗೆ, ಮುಸ್ಲಿಂ ಬಾಂಧವರ ಜನ ಜಾಗೃತಿ ಸಮಾವೇಶ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಸ್ಲಿಂರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕೆಎಂಯೂ ಬಲವಾಗಿ ಖಂಡಿಸುತ್ತೇದೆ ಎಂದರು.
ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಮೀಸಲಾತಿ ರದ್ದು 
ಹಿಂಪಡೆಯಬೇಕು. ಅಮಾಯಕರಿಗೆ ಶಿಕ್ಷೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಯುನಿಟಿ ಮುಧೋಳ ತಾಲ್ಲೂಕು ಘಟಕದ ವತಿಯಿಂದ ಮುಧೋಳ ತಹಸೀಲ್ದಾರ ರವರ ಮುಖಾಂತರ ಮುಸ್ಲಿಂ ಮೀಸಲಾತಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮೌಲಾನ ಸಜ್ಜಾದ ಹುಸೇನ್ ಅಣ್ಣಿಗೇರಿ ಮತ್ತು ರಾಜ್ಯ ಸಮಿತಿ ಸದಸ್ಯರಾದ ಸಿರಾಜ್ ಹೊರಟ್ಟಿ, ಬಂದೇನವಾಜ್ ಧಾರವಾಡಕರ್, ಆರೀಫ್ ಪಠಾಣ, ಶಫೀಕ್ ಬೇಪಾರಿ, ತಾಲೂಕು ಘಟಕದ ಉಪಾಧ್ಯಕ್ಷರಾದ ಮೈನು ಅಂಬಿ, ದಾವಲಸಾಬ್ ನದಾಫ್,  ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಂಬಿ, ಕಾರ್ಯದರ್ಶಿ ಶರೀಫ್ ಮುಲ್ಲಾ,  ಶಾನೂರ್ ಸೊನ್ನದ, ಸಮೀರ್ ಮುಧೋಳ, ಮೈಬುಬ ನದಾಫ ನಗರದ ಮುಸ್ಲಿಂ ಸಮಾಜದ ಹಿರಿಯರಾದ  ಖಾಜಾಮಿನ ಬಾಗವಾನ, ಬಾದಷ ಬಾವಾಖಾನ, ಬಾಬುಲಾಲ್ ಮನಿಯಾರ, ಬಾದಷ ಕೌಜಲಗಿ,  ಸುಲೇಮಾನ್ ಅಂಬಿ,  ಗೈಬುಸಾಬ್  ಮೋಮಿನ,  ಮುನ್ನಾ ಜಮಾದಾರ, ನ್ಯಾಯವಾದಿ ಸದ್ದಾಂ ಕರಜಗಿ, ಯಾಸೀನ ಹೊನವಾಡ, ರಫೀಕ ಮುದ್ದಾಪುರ,ಸಾಜಿದ ಹುಲಕುಂದ,ಅರ್ಬಾಜ್ ಪಠಾಣ,ಸೇರಿದಂತೆ ಇನ್ನು ಅನೇಕ ಮುಸ್ಲಿಂ ಸಮಾಜ ಮುಖಂಡರು ಯುವಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು,

ವರದಿ :
ಮಹಬೂಬ್ ಬಾರಿಗಡ್ಡಿ

Wednesday, August 2, 2023

ಕಾಲುವೆಗೆ ಉರುಳಿದ ರಾಂಪುರ್ ನಗರದ ಕಾರು ,ಸಾಹಸ ಮೆರೆದ ಯುವಕ ಚೇತನ್ ಒಡೆಯರ್ :

ಕಾಲುವೆಗೆ ಉರುಳಿದ ಕಾರು ಸಾಹಸ ಮೆರೆದ ಯುವಕ 

ಘಟಪ್ರಭಾ: ನಗರಕ್ಕೆ ಅರಿಸಿಣ ಕೊಳ್ಳಲು ಬಂದಿದ್ದ ಬನಹಟ್ಟಿ'ಯ ರಾಮಪುರಿನ ವ್ಯಾಪಾರಿಗಳಾದ ಖಲೀಲ್ ರಾಜಣ್ಣವರ ಮತ್ತು ಮಲ್ಲಿಕ ಮುಲ್ಲಾ ಅವರು ತಮ್ಮ ಟಾಟಾ ಕಂಪೆನಿಯ ನೆಕ್ಸಾನ್ ಕಾರಿನಲ್ಲಿ ಘಟಪ್ರಭಾ ಹಾಗೂ ಮಲ್ಲಾಪೂರದ ವಾಹನ ದಟ್ಟಣೆ ತಪ್ಪಿಸಲು ಘಟಪ್ರಭಾ ಎಡದಂಡೆ ಕಾಲುವೆ ಮೇಲೆ ಹೊಸದಾಗಿ ನಿರ್ಮಿಸಿರುವ ಬೈಪಾಸ್ ರಸ್ತೆಯ ಮುಖಾಂತರ ಸಾಗುತ್ತಿರುವಾಗ ಮಲ್ಲಾಪೂರ ಪುಲ್ ಹತ್ತಿರ ದುರದುಂಡಿ-ಮಲ್ಲಾಪೂರದ ಹಾಗೂ ಬೈಪಾಸ್ ರಸ್ತೆ ಸಂದಿಸುವ (ಕ್ರಾಸ್ ಆಗುವ) ಸ್ಥಳದಲ್ಲಿ ರಸ್ತೆ ತಗ್ಗಾಗಿದ್ದು ಬೈಪಾಸ್ ರಸ್ತೆಯ ಎರಡು ಬದಿಗಳು ದಿಬ್ಬಾಗಿದ್ದು ಆ ಸ್ಥಳದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ದಿಬ್ಬದ ಕಾರಣದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿದೆ. 

ಆ ಸಮಯದಲ್ಲಿ ಧೈರ್ಯ ತೋರಿದ ವ್ಯಾಪಾರಿಗಳಿಬ್ಬರು ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ ಅದರಲ್ಲಿ ಈಜು ಕಲಿತಿದ್ದ ಮಲ್ಲಿಕ ಮುಲ್ಲಾ ಈಜಿ ದಡ ಸೇರಿದ್ದಾರೆ ಇನ್ನು ಕಾರಿನಿಂದ ಹೊರ ಬಂದರು ಈಜು ಬಾರದ ಖಲೀಲ್ ರಾಜಣ್ಣವರ ನೀರಿನಲ್ಲಿ ಮುಳುಗುತಿದ್ದಾಗ ಅದೆ ದಾರಿಯಲ್ಲಿ ಸಾಗುತ್ತಿದ್ದ ಪಾಮಲದಿನ್ನಿ ಗ್ರಾಮದ ಇನ್ನು ಮಿಸೆ ಚಿಗುರದ ಯುವಕ ಚೇತನ ವಿಠ್ಠಲ ಒಡೆಯರ ದೇವರಾಗಿ ಬಂದು ನೀರಿನಲ್ಲಿ ಮುಳುಗುತಿದ್ದ ಖಲೀಲ್ ರಾಜಣ್ಣವರ ಅವರನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಕಾಪಾಡಿ ಸಾಹಸ ಮೆರೆದಿದ್ದಾನೆ.