Saturday, September 28, 2024

ರಬಕವಿ ಬನಹಟ್ಟಿ ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :

*ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :

 ಬಾಗಲಕೋಟೆ / ರಬಕವಿ ಬನಹಟ್ಟಿ   : ಬಾಗಲಕೋಟೆ ಜಿಲ್ಲೆಯ ಅವಳಿ ನಗರಗಳು ಎಂದು ಖ್ಯಾತಿ ಪಡೆದ ರಬಕವಿ ಬನಹಟ್ಟಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು. 
 ಈ ಅವಳಿ ನಗರಗಳ ಬಸ್ ನಿಲ್ದಾಣಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಾಗಲಕೋಟೆ ಭಾಗದ ರಬಕವಿ ಹಾಗೂ ಬನಹಟ್ಟಿ ಬಸ್ ನಿಲ್ದಾಣಗಳನ್ನು ತಲಾ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
 ಈ ಸಂದರ್ಭದಲ್ಲಿ ಮಾತನಾಡಿದ ತೆರೆದಾಳ್ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಈ ಅವಳಿ ನಗರಗಳನ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳಿಗೆ   ಕಂಪೌಂಡು ಗೋಡೆ , ಶುದ್ಧ ಕುಡಿಯುವ  ನೀರು, ಸುಸಜ್ಜಿತ ಶೌಚಾಲಯ ಗಳನ್ನು ನಿರ್ಮಾಣ ಮಾಡಲಿಕ್ಕೆ  ತಲಾ ನಿಲ್ದಾಣಕ್ಕೆ 75 ಲಕ್ಷ ದಂತೆ  ಎರಡು ನಿಲ್ದಾಣಗಳಿಗೆ ಒಂದೂವರೆ ಒಟ್ಟು  1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಬೇಕು ಹಾಗೂ ನಮ್ಮ ಕ್ಷೇತ್ರದಿಂದ ಎರಡು ಪಲ್ಲಕ್ಕಿ ಬಸ್ ಗಳು ಎರಡು ಎಸಿ ಬಸ್ ಗಳು ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
 ಒಳಿಕ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮಲಿಂಗ ರೆಡ್ಡಿ ಅವರು ಈ ಭಾಗದಿಂದ ಪಲ್ಲಕ್ಕಿ ಬಸ್ಸುಗಳಲ್ಲಾಗಲಿ ಎಸಿ ಬಸ್ಗಳಾಗಲಿ ವಾಯುವ್ಯ ರಸ್ತೆ ಸಾರಿಗೆ ಅಥವಾ ಕೆಎಸ್ಆರ್ಟಿಸಿ ಸಂಸ್ಥೆಯ ಮೂಲಕ ಈ ಬಸ್ ಗಳನ್ನು ಕ್ಷೇತ್ರದ ಸಾರ್ವಜನಿಕರಿಗೆ ಸೌಕರ್ಯ ಮಾಡುತ್ತೇನೆ ಎಂದು ಹೇಳಿದರು. 

 ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್ ಬಿ  ತಿಮ್ಮಪೂರ್,  ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಪರಂ ಗೌಡ್ ಕಾಗೆ , ಉಪಾಧ್ಯಕ್ಷ ಗದಗದ ಪೀರ್ ಸಾಬ್  , ನಗರಸಭೆ ಅಧ್ಯಕ್ಷ ವಿದ್ಯಾ ದವಾಡಿ,  ನಾಡಗೋಡ್ ಪಾಟೀಲ್ , ಸಿದ್ದು ಕೊಣ್ಣುರ್, ಚಿದಾನಂದ್ ತೆಗ್ಗಿ, ಮಾಮುನ್ ರಶೀದ್ ಪಾರತನ ಹಳ್ಳಿ, ಅಬೂಬಕ್ಕರ್ ಜಮಖಂಡಿ , ಮಹಾಲಿಂಗಪುರ ಸಭೆ ಅಧ್ಯಕ್ಷ ಎಲ್ಲನಗೌಡ  ಪಾಟೀಲ್ , ತೇರದಾಳ್ ಪುರಸಭೆ ಅಧ್ಯಕ್ಷರು,ಇನ್ನೂ  ಅನೇಕ ನಗರಸಭೆ ಸದಸ್ಯರುಗಳು ,ಮುಖಂಡರುಗಳು ಉಪಸ್ಥಿತರಿದ್ದರು.

 ವರದಿ ಮಹಿಬೂಬ್  ಎಂ ಬಾರಿಗಡ್ಡಿ 
ರಬಕವಿ ಬನಹಟ್ಟಿ ತಾಲೂಕ ವರದಿಗಾರರು 

Tuesday, September 3, 2024

ಪೊಲೀಸ್ ಬಿಟ್ ಗಳಲ್ಲಿ ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ :

ಪೊಲೀಸ್ ಬಿಟ್ ಗಳಲ್ಲಿ  ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ :

ಬಾಗಲಕೋಟೆ / ರಬಕವಿ ಬನಹಟ್ಟಿ : ಬಾಗಲಕೋಟ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ  ನಮ್ಮ ಊರು, ನಮ್ಮ ಪೊಲೀಸ್ , ನಮ್ಮ ಬೀಟ್ ಮೊಬೈಲ್ ನಂಬರ್, ಅನ್ನುವಂತಹ ಪೋಸ್ಟರ್ ಗಳನ್ನು  ಜನಭೀಢವಾದ  ಸ್ಥಳಗಳಲ್ಲಿ ಅಂಟಿಸಿ ಸಣ್ಣಪುಟ್ಟ ಅಹಿತಕರವಾದ  ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಹಾಗೂ ನಗರದ ಪೊಲೀಸ್ ಠಾಣಾ ಪೊಲೀಸರು ಸಾರ್ವಜನಿಕರಿಗೆ  ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ.

 ಬಾಗಲಕೋಟ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರು  ನಗರದ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಮುಂಬಾಗ ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು .

 ಸುಧಾರಿತ ಬೀಟ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಬಿಟ್ ಗಳನ್ನು ಹಂಚಿಕೆ ಮಾಡಿ, ಅದರೊಳಗೆ ಪೊಲೀಸರನ್ನು ಹಂಚಿಕೆ ಮಾಡಿ , ಪೊಲೀಸರಿಗೆ ಸರ್ಕಾರಿ ಸಂಚಾರಿ ನಂಬರ್ ಗಳನ್ನು ಹಂಚಿಕೆ ಮಾಡಿರುತ್ತಾರೆ . ಈ ಬೀಟ್ ಸಂಬಂಧ ಪಟ್ಟಂತೆ ಏನೇ ಅಹಿತ ಘಟನೆಗಳ ಸಂಬಂಧಿಸಿದಂತೆ ಗೋಡೆ ಗಳ ಮೇಲೆ ಅಂಟಿಸಿರುವ  ಪೋಸ್ಟರ್ ಗಳಲ್ಲಿ   ನಮ್ಮ ಪೊಲೀಸ, ನಮ್ಮ ಬೀಟ್ ಮೊಬೈಲ್ ನಂಬರ್ ಅನ್ನುವಂತ ಸರ್ಕಾರಿ ನಂಬರುಗಳು ಇರುತ್ತವೆ. ಈ ನಂಬರ್ ಗಳಿಗೆ ನೀವು ಕರೆ ಮಾಡಿದರೆ ತಕ್ಷಣ ನಾವುಗಳು ಸ್ಪಂದನೆ ಮಾಡುತ್ತೇವೆ ಎಂದು ಬೀಟ್ ಪೊಲೀಸ್ ಗಳಾದ ದೇವೇಂದ್ರ ಹಾಗೂ ಅಜ್ಜನಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಅಧಿಕಾರಿ , ಮಲ್ಲಪ್ಪ ದಿವಾನ್ದಾರ್, ಶಿವನಗೌಡ ಪಾಟೀಲ್ , ಪ್ರಶಾಂತ್ ಪುಕಾಳೆ,  ಖೈಯುಮ್ ನಾಯಕವಾಡಿ , ಮುಬಾರಕ್ ಸಪ್ತಸಾಗರ್ ಇನ್ನೂ ಅನೇಕರಿದ್ದರು .

 ವರದಿ  : 
ಮಹಿಬೂಬ್ ಎಂ ಬಾರಿಗಡ್ಡಿ

Tuesday, July 16, 2024

ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು :


 ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : 

 ಬಾಗಲಕೋಟೆ :

ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಬೆಳಗಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೂರಾಣಿ ಮಸಿದೆ ಹಿಂಭಾಗದ ಇರುವ ದಸಗಿರ್ ಪೆಂಡಾರಿ ಇವರ ಮನೆಯ ಮೇಲೆ ಸಿನಿಮಯ ರೀತಿಯಲ್ಲಿ ದುಷ್ಕರ್ಮಿಗಳು ಅಂದಾಜು 250 ಲೀ ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿಕೊಂಡು. 2 hp ನೀರು ಎತ್ತುವ ಮೋಟಾರ್ ಮೂಲಕ ಮನೆಯ ಮೇಲೆ ಸಿಂಪಡಿಸಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಅತಿ ಕ್ರೂರ ಕೃತ್ಯವನ್ನು ಎಸೆಗಿದ್ದಾರೆ. 

ಈ ಮನೆಯಲ್ಲಿ ಐದು ಜನ ಇದ್ದರು. ಮಧ್ಯರಾತ್ರಿ 2 ಅಥವಾ 3 ಗಂಟೆಯ ಮಧ್ಯದಲ್ಲಿ ಈ ಕೃತ್ಯವು ನಡೆದಿರಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದರು.

 ಮುಸ್ಲಿಂ ಕುಟುಂಬದ ಜೈಬಾನ್ ದಸಗಿರ್ ಪೆಂಡಾರಿ ವಯಸು 55, ಶಬಾನಾ ದಸಗಿರ್ ಪೆಂಡಾರಿ ವಯಸು 26, ಈ ಇಬ್ಬರು ಘಟನೆಯಲ್ಲೇ ಸುಟ್ಟು ಸಾವನ್ನಪ್ಪಿದ್ದಾರೆ .
 ದಸಗಿರ ಪೆಂಡಾರಿ ಹಾಗೂ ಸುಭಾನ್ ದಸಗಿರ್ ಪೇಂಡಾರಿ ತಂದೆ ಮಗ ಇವರಿಬ್ಬರೂ ನಿದ್ದೆಯಲ್ಲಿದ್ದ ಎಚ್ಚರಗೊಂಡು, ನಡೆಯುತ್ತಿರುವಂತಹ ಘಟನೆಯನ್ನು ಕಂಡು ಕೂಡಲೇ ಘಟನೆಯ ಸ್ಥಳದಲ್ಲಿದ್ದ ಮನೆಯ ಹೊರಗಡೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸಿದ್ದಿಕ್ ಶೌಕತ್ ಪೆಂಡಾರಿ ಈತ ಕ್ಷಣದಲ್ಲಿ ಪಾರಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿಕೊಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಬಾಗಲಕೋಟೆ ಎಸ್‌ಪಿ ಅವರು ಈ ಘಟನೆಯ ವಿಚಾರಣೆಗೆ ಮೂರು ತಂಡಗಳನ್ನು ಏರ್ಪಡಿಸಿದ್ದಾರೆ. ಈ ಘಟನೆಗೆ ಕಾರಣಗಳಾದ ದುಷ್ಕರ್ಮಿಗಳನ್ನು ಎಡಮುರಿ ಕಟ್ಟಲು ತಯಾರಾಗಿದ್ದಾರೆ ಹಾಗೂ ಈ ಘಟನೆ ಕುರಿತುಲೆ ಮುಧೋಳ ನಗರದ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನಕ್ಕೆ ಪ್ರಕರಣ ದಾಖಲಾಗಿದ್ದು ದಾ ಎಂದು ಬಾಗಲಕೋಟೆ ಜಿಲ್ಲಾ ಎಸ್ ಪಿ ಅಮರ್ನಾಥ್ ರೆಡ್ಡಿ ತಿಳಿಸಿದರು.

 ವರದಿ ಮಹಿಬೂಬ್ ಎಂ ಬಾರಿಗಡ್ಡಿ 

Tuesday, June 25, 2024

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ 

 ಬಾಗಲಕೋಟೆ / ರಬಕವಿ - ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕೆಲವು ಕಾಲ ರಸ್ತೆಯನ್ನು ತಡೆದು ಭಾರತೀಯ ಜನತಾ ಪಕ್ಷವು ಬೃಹತ್ ಪ್ರತಿಭಟನೆ ಮಾಡಿದರು . 

ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕೈಗೊಂಡಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೇರದಾಳ್ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು . 

 ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸೌದಿ 
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಹೇಳಿದರು . 

ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮಾನ್ಯರು, ಕಾರ್ಮಿಕರು, ಬಡವರು, ರೈತರು ಮುಖ್ಯವಾಗಿ ನಮ್ಮ ನೇಕಾರರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ತಕ್ಷಣ ಈ ನಿರ್ಧಾರ ಹಿಂಪಡೆಯುವಂತೆ ಎಚ್ಚರಿಸಿದರು 
 
ಈ ಸಂದರ್ಭದಲ್ಲಿ ರಬಕವಿ. ಬನಹಟ್ಟಿ ಬಿಜೆಪಿ ನಗರ ಘಟಕದ ಧ್ಯಕ್ಷರಾದ . ಶ್ರೀಶೈಲ್ ಬೀಳಗಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುರೇಶ್ ಅಕ್ಕಿವಾಟ್ ,ಮತ್ತು ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 ವರದಿ : ಮಹಬೂಬ್ ಎಂ ಬಾರಿಗಡ್ಡಿ

Monday, June 17, 2024

ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

*ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

 ಇದ್ಗಾ ಮೈದಾನದಲ್ಲಿ ನಮಾಜ್ ಮಾಡಲು ಸಾವಿರಾರು ಜನ ಮುಸ್ಲಿಂ ಬಾಂಧವರು ಬಾಗಿ....

ಎಲ್ಲ ಜೀವರಾಶಿಗಳಲ್ಲಿ ಶ್ರೇಷ್ಠವಾದದ್ದು ಮಾನವ ಜನ್ಮ ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ನಮ್ಮವರು ತಮ್ಮವರು ಅನ್ನುವ ಮನೋಭಾವದಿಂದ ಕಾಣುತ್ತಾ ದೇವರ ಜ್ಞಾನ ಮಾಡೋಣ ಪ್ರತಿದಿನ ನಮಾಜ್ ಮಾಡುವ ಮೂಲಕ ನಮಗೆ ಬಂದ ಕಷ್ಟವನ್ನು ದೂರಮಾಡು ಎಂದು ಅಲ್ಲಾ ಹತ್ತಿರ ಕೇಳಿಕೊಳ್ಳೋಣ.
ಎಲ್ಲರನ್ನೂ ಸಮಾನವಾಗಿ ನೋಡೋಣ ಭೂಮಿಯ ಮೇಲೆ ಇರುವ ಎಲ್ಲ ಜೀವ ರಾಶಿಗಳನ್ನು ಚೆನ್ನಾಗಿಟ್ಟು ಕಾಪಾಡು ಎಂದು ದೇವರ ಸ್ಮರಣೆ ಮಾಡೋಣ ಎಂದು ಮೋಸಿನ್ ಮೌಲಾನಾ ಗೋಕಾಕ್ ಎಲ್ಲರಿಗೂ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಮುಸ್ಲಿಂ ಬಾಂಧವರು ಬಹಳ ಸರಳ ಹಾಗೂ ಶಾಂತತೆಯಿಂದ 
ಸಾವಿರಾರು ಸಂಖ್ಯೆಯಲ್ಲಿ ರಬಕವಿಯ ವಿದ್ಯಾ ನಗರ ಹತ್ತಿರ ಇರುವ ಇದ್ಗಾ ಮೈದಾನಕ್ಕೆ ಬಂದು ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.

ವರದಿ:- ಮೊಹಮ್ಮದ್ ಹುಸೇನ್ ಲೆಂಗ್ರೆ

Sunday, June 16, 2024

ಶಾಂತಿಯಿಂದ ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ

 ಬಾಗಲಕೋಟೆ / 

ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು . 

 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೆಂಡಾರಿ ಮೊಹಲ್ಲಾದ ಇದಗಾ ಮೈದಾನದಲ್ಲಿ ಸಾಮೂಹಿಕವಾಗಿ ಬಕ್ರೀದ್ ಹಬ್ಬದ ಪ್ರಾರ್ಥನೆ ಯನ್ನು ಸಲ್ಲಿಸಿದರು . ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಕೈ ಕುಲುಕಿದರ ಮೂಲಕ ಒಬ್ಬರಿಗೊಬ್ಬರು ಶುಭಾಶಯಗಳು ವಿನಮಯ ಮಾಡಿಕೊಂಡರು . 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ನಾವುಗಳು ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ಮಾಡಬೇಕು ಹೊರತು ನಮ್ಮ ದೊಡ್ಡ ಸ್ಥಿಕೆಯನ್ನು ತೋರಿಸಲಿಕ್ಕೆ ಮಾಡಬಾರದು ಎಂದು ಹೇಳಿದರು . ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 
 
 ವರದಿ ಮಹಿಬೂಬ ಎಂ ಬಾರಿಗಡ್ಡಿ

Tuesday, June 11, 2024

ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬನಹಟ್ಟಿ ಆಟೋ ಚಾಲಕರು*



ಬಾಗಲಕೋಟೆ/ ರಬಕವಿ ಬನಹಟ್ಟಿ :

ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40 ರಿಂದ 50 ವರ್ಷಗಳಿಂದ ಆಟೋ ನಿಲ್ದಾಣ ಇದೆ   ಈ ಆಟೋ ನಿಲ್ದಾಣದ 400 ಕ್ಕಿಂತ ಅಧಿಕ ಆಟೋ ಚಾಲಕರು ತಮ್ಮ ತಮ್ಮ ಕುಟುಂಬದ ಉಪಜೀವನವನ್ನು ಮಾಡುತ್ತಿ ರೂವಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ ಅಂದ್ರೆ ಮಹಿಳೆಯರಿಗಾಗಿ ಉಚಿತ ಬಸ್ ಮಾಡಿದ ಮೇಲೆ ಆಟೋ ಚಾಲಕರಿಗೆ ಭಾರಿ ವಾಡಿತ ಬಿದ್ದಿದೆ . ಹೀಗಿರುವಾಗ  ನಗರದ ಹೊಸ ಬಸ್ ನಿಲ್ದಾಣದ ಕಟ್ಟಡದ ಮುಕ್ತಾಯ ಹಂತ ತಲುಪಿರುವಾಗ  , ಕೆಎಸ್ಆರ್ಟಿಸಿ ಅಧಿಕಾರಿಗಳ ಆದೇಶ ಅನುಸಾರ ಬಸ್ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನ ತಡೆ ಕಂಬಗಳನ್ನು ಹಾಕಲಿಕ್ಕೆ ಮುಂದಾದಾಗ ಆಟೋ ನಿಲ್ದಾಣದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ .

 ದಿಡೀರನೆ ನಗರದ 400 ಕಿಂತ ಹೆಚ್ಚು ಆಟೋಗಳನ್ನು ಬಂದು ಮಾಡಿ ಚಾಲಕರು ಹಾಗೂ ಮಾಲಕರು ಸೇರಿ ರಬಕವಿ ಬನಹಟ್ಟಿ ನಗರ ಸಭೆ ಅಧಿಕಾರಿಗಳಿಗೆ ಹಾಗೂ ತೇರದಾಳ ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು .

 ಈ ಸಂದರ್ಭದಲ್ಲಿ ಮಾತನಾಡಿದ ಬಸ್ಸಿರ ಜಮಾದಾರ್ , ಕಳೆದ ಸುಮಾರು 40 ವರ್ಷಗಳಿಂದ ಆಟೋ ಚಾಲಕರು ಬಸ್ ನಿಲ್ದಾಣದ ಹತ್ತಿರ ನಾವು  ನಮ್ಮ ಉಪಜೀವನವನ್ನು ನಡೆಸುತ್ತಿದ್ದೇವೆ . ಬಸ್ ನಿಲ್ದಾಣದ ಹಳೆ ಕಟ್ಟಡವನ್ನು ತೆರೆವುಗೊಳಿಸಿದ್ದಾರೆ  . ಇದರಿಂದ ನಮ್ಮ ಅಟೋಗಳನ್ನು ನಿಲ್ಲುಗಡೆ ಮಾಡ್ಲಿಕ್ಕೆ ಜಾಗ  ಇರೋದಿಲ್ಲ ಇದೇ ಜಾಗದಲ್ಲಿ ನಮ್ಮ ಉಪಜೀವನ ನಡೆಯುತ್ತಿದೆ  .  ಆದ್ದರಿಂದ ನಾವುಗಳು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ,  ಇನ್ನೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ , ಅಧಿಕಾರಿಗಳು ಏನು ಹೇಳುತ್ತಾರೆ  ಅನ್ನುವುದನ್ನು ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷೆ ಮಾಡಿ  , ಧರಣಿ ಮುಖಾಂತರ ಆಟೋ ನಿಲ್ದಾಣಕ್ಕೆ ಜಾಗವನ್ನು ತೆಗೆದುಕೊಳ್ಳುವಂತ ಕೆಲಸ ಮಾಡುತ್ತೆವೆ ಎಂದು ಎಚ್ಚರಿಕೆಯನ್ನು ನೀಡಿದರು  .

 ಈ ಸಂದರ್ಭದಲ್ಲಿ  ಶ್ರೀ ಕಾಡ ಸಿದ್ದೇಶ್ವರ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಅಪ್ಸರ ಭಾಷಾ ಪೆಂಡಾರಿ , ಅಶೋಕ್ ಹೊಸಕೋಟೆ, ಅಕ್ರಂ ರಾಜನ್ನವರ್ , ಮಲ್ಲಪ್ಪ  ದಿವಾನ್ದಾರ್ ಮುಸ್ತಾಕ್ ಪೆಂಡಾರಿ ,ಇಕ್ಬಾಲ್ ಮುಧೋಳ್ ಸುಭಾಷ್ ಪಾರತ್ನ ಹಳ್ಳಿ , ರಾವ್ ಸಾಬ್ ಶಿಂದೆ ಪ್ರಕಾಶ್ ಪುಕಾಳೆ ,ಈಶ್ವರ್ ,ಶಂಶೋದ್ದೀನ್ ಪೆಂಡಾರಿ , ರಾಜು ಎಂಟ್ ಗೌಡ, ಆಯಾಜ ಇನಾಮ್ದಾರ್ ಸಿದ್ದಲಿಂಗ ಗೌಡ ಪಾಟೀಲ್ ಇನ್ನೂ ಅನೇಕ ಆಟೋ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು. 

 ವರದಿ :  ಮಹಿಬೂಬ್ ಎಂ ಬಾರಿಗಡ್ಡಿ