Monday, January 30, 2023

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದಿಂದ 2023 ವಿಧಾನಸಭೆ ಚುನಾವಣೆಗೆ ಚಿಂತನ ಸಭೆ :

*ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದಿಂದ  2023  ವಿಧಾನಸಭೆ ಚುನಾವಣೆಗೆ ಚಿಂತನ ಸಭೆ :*

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ 2023 ಕರ್ನಾಟಕ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದಿಂದ ಚಿಂತನ ಸಭೆ ನಡೆಯಿತು . 

ಈ ಸಂದರ್ಭದಲ್ಲಿ ಕೆಪಿಸಿಸಿ ಕರ್ನಾಟಕ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ, ಶಫೀಕ್ ಎಂ ಬೆಪಾರಿ  , ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್ ಭಾರಿಗಡ್ಡಿ , ವಾಕಪ ಜಿಲ್ಲಾ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ರೆಹಮಾನ್ ತೋರಗಲ್ ,ಗುಳೇದಗುಡ್ಡ ತಾಲೂಕ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಭಾಷಾ ಭಾವಖಾನ್ ,ಮುಬಾರಕ್ ಮಂಗಳೂರು ,ರಜಾಕ್ ಕುದ್ರಿ ಇನ್ನೂ ಅನೇಕ ಕಾಂಗ್ರೆಸ್  ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .


ವರದಿ : ಮಹಬೂಬ್ ಬಾರಿಗಡ್ಡಿ 

Saturday, January 28, 2023

ನಗರದ ಬಿಲಾಲ್ ಮಸ್ಜಿದ್ ಹತ್ತಿರ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣದ ಭೂಮಿ ಪೂಜಾ :

*ಸರ್ಕಾರಿ ಉರ್ದು ಶಾಲೆಯ ಕೊಠಡಿ ನಿರ್ಮಾಣದ ಭೂಮಿ  ಪೂಜಾ* 

 *ರಬಕವಿ ಬನಹಟ್ಟಿ*:  

ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ  ಮೊಹಲ್ಲಾ ಬಡಾವಣೆಯ  2022 -  23ನೇ ಸಾಲಿನ ವಿವೇಕ್ ಶಾಲಾ ಬೋಧನಾ ಕೊಠಡಿಗಳ ನಿರ್ಮಾಣದ ಯೋಜನೆಯ ಅಡಿಯಲ್ಲಿ , ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಗೆ ಒಂದು ಕೊಠಡಿ ಮಂಜುರಾಗಿದ್ದು , ಈ ಕೊಠಡಿಯ ನಿರ್ಮಾಣದ ಅಂದಾಜು ವೆಚ್ಚ ರೂಪಾಯಿ 13.90 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಲಿದೆ  , ಈ ಭೂಮಿ ಪೂಜಾ ಕಾರ್ಯಕ್ರಮವನ್ನು ತೇರದಾಳ  ಮತ ಕ್ಷೇತ್ರದ ಶಾಸಕ  ಹಾಗೂ ಕರ್ನಾಟಕ ಅಭಿವೃದ್ಧಿ ನಿಗಮ ಅಧ್ಯಕ್ಷರಾದ  ಸಿದ್ದು ಸವದಿ   ಅವರು ಗುದ್ದಲಿ ಪೂಜೆ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು .

ಈ ಭೂಮಿ ಗುದ್ದಲಿ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ,  
ರಬಕವಿ ಬನಹಟ್ಟಿ ನಗರಸಭೆಯ ಸದಸ್ಯರಾದ  ಮಿಸ್ಸಸ್ ಮುರಾದ್ ಮೊಮಿನ್,
 ಸಿದ್ರಾಮಣ್ಣ ಸೌದತ್ತಿ ,ನಗರಸಭೆ ಹಲೋ ಸ್ಥಾಯಿ ಸಮಿತಿ ಚೆರ್ಮನ ಸದಾಶಿವ ಪರಿಟ್ , ಅಶೋಕ್ ರಾವಲ್ ಶಿವಾನಂದ್ ಕಾಗಿ , ಜಾಕಿರ್ ಹುಸೇನ್ ಬಾರಿಗಡ್ಡಿ ,ಶಿವಾನಂದ ಬುದ್ನಿ , ದುರ್ಗವ್ವ ಹರಿಜನ್ ಭರ್ಮಪ್ಪ ಮೂಲಿಮನ,  ಭಾರತೀಯ ಜನತಾ ಪಕ್ಷ  ರಬಕವಿ ಬನಹಟ್ಟಿ ನಗರ ಘಟಕದ ಅಲ್ಪಸಂಖ್ಯಾತರ ಅಧ್ಯಕ್ಷ ಮಲ್ಲಿಕ್ ಬಾರಿಗಡ್ಡಿ, ಶಾಲೆಯ ಮುಖ್ಯ ಗುರುಗಳಾದ, ಇಂಡಿಕರ್ ಸರ್, ರಬಕವಿ ಬನಹಟ್ಟಿ ಉರ್ದು ಸಿಆರ್ಪಿ ಆಯೆಜಾಜ್ ಅಹ್ಮದ್ ಬಾಗೇವಾಡಿ,  ಸಿರಾಜ್ ಮೊಮಿನ್ ,ಬುಡನ್ ಗೋರಿ, ಬಂದೆನವಾಜ್ ಮೊಮಿನ್, ಹಾರೂನ್ ಮೊಮಿನ್ ,ಶಬೀರ್ ಮೊಮಿನ್ ,ಮುರಾದ್ ಬಾರಿಗಡ್ಡಿ ,ಇಮ್ತಿಯಾಜ್ ಅತ್ತಾರ, ಝುಬೆರ್ ಮೊಮಿನ್ , ಹಿದಾಯತ್  ಮಾಲ್ದಾರ್  ,ಇನ್ನು ಅನೇಕ ಹಿರಿಯರು ಮತ್ತು ಯುಕರು ಈ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು . 


ವರದಿ ಮಹೆಬೂಬ ಬಾರಿಗಡ್ಡಿ

Thursday, January 26, 2023

ಕಲಾಕೃತಿಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತಿರುವ ಶಿಕ್ಷಕ , ಸಲೀಂ ಎಂ ಡಾಂಗೆ


 ರಬಕವಿ ಬನಹಟ್ಟಿ

ಹೊಸ ವರ್ಷದ ಆಚರಣೆ  ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ .  ಇಲ್ಲೊಬ್ಬ  ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ  ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು , ಬುದ್ಧ  , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ  ಚಿತ್ರದಲ್ಲಿ ಮುದ್ರನ (ಪ್ರಿಂಟ್ ) ಹಾಕಿ ,ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ ,  ವಾರದ ಮುಂಚೆ ,  ಕೋಮುಸೌಹಾರ್ದತೆ ಯನ್ನು  ಎತ್ತಿ ಹಿಡಿಯಲಿಕ್ಕೆ ,ಎಲ್ಲ ಸಮಾಜಗಳಿಗೆ ,ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು  ಸತ್ - ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ .

ದಯವೇ ಧರ್ಮದ ಮೂಲವಯ್ಯ , ನಿಮ್ಮ ಏಕತೆ  , ನನ್ನ ಪೂಜೆ , ನನ್ನ ಉಳಿಸಿ ಜಗತ್ತು  ರಕ್ಷಿಸಿ  , ಜೈ ಭಾರತ ಜನನಿಯ  ತನುಜಾತೆ , ರಾಷ್ಟ್ರೀಯ ಏಕತೆಯೇ ನನ್ನ ಸೌಂದರ್ಯ , ಹಾಗೂ ನವಿಲು ನರ್ತನ , ಇನ್ನೂ ಅನೇಕ 16 ಚಿತ್ರ ಕಲೆಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ಹೊರ ತಂದಿದ್ದಾರೆ  .


ಸಲೀಂ ಮೈನುದ್ದೀನ್ ಡಾಂಗೆ  ಇವರು ಕಲಾ ಶಿಕ್ಷಕರು ಸದ್ಯ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ್ ಪಟ್ಟಣದ ಸಿಖ್ಯಾಬ ಸಂಸ್ಥೆಯ ಉರ್ದು ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ . 

ಪ್ರತಿಯೊಂದು ಹೊಸ ವರ್ಷಕ್ಕೆ ಅವರ ವಿಶಿಷ್ಟವಾದ ಕೋಮು ಸೌಹಾರ್ದತೆ   ಸಲುವಾಗಿ ಸಾಮ್ಯರಸ ಬದುಕಿನ ಸಂದೇಶಗಳನ್ನು ಸಾರುವ ಅಪರೂಪದ ತಮ್ಮ ವಿಶಿಷ್ಟ ಕಲಾ ಕೃತಿಗಳಲ್ಲಿ ಬಿಡಿಸಿ , ಗಣ್ಯ ವ್ಯಕ್ತಿಗಳಿಗೆ  ಹಾಗೂ ಸಾರ್ವಜನಿಕರಿಗೆ , ಉಚಿತವಾಗಿ ತಮ್ಮ  ಚಿತ್ರಕಲೆಗಳ  ಗ್ರೀಟಿಂಗ್ಸ್ ಗಳನ್ನು ಹಂಚುವುದರ ಮೂಲಕ , ಹೊಸ ವರ್ಷದ ಆಚರಣೆಯನ್ನು ಮಾಡುವುದರ ಮೂಲಕ  , ಎಲ್ಲರ ಮನೆ ಮಾತಾಗಿದ್ದಾರೆ . 

ಶಿಕ್ಷಕ ಸಲೀಂ ಎಂ ಡಾಂಗೆ  ಇವರು 1993 ದಿಂದ  2023 ರವರೆಗೆ ಕನಿಷ್ಠ 31 ವರ್ಷದಿಂದ ಈ ವಿಭಿನ್ನ ಚಿತ್ರಕಲೆಗಳ ಮೂಲಕ  ಘಣಕಾರ್ಯವನ್ನು   ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ . 1995 - 96 ರಲ್ಲಿ ದೇಶದ ರಾಷ್ಟ್ರಪತಿಗಳಿಂದ ಕೂಡ ಪ್ರಶಂಸೆಯ  ಪತ್ರವೂ ಕೂಡ ಬಂದಿದೆ .

ಪ್ರತಿಯೊಂದು, ಹೊಸ ವರ್ಷದ ಸಂದರ್ಭದಲ್ಲಿ ಬೇರೆ ಬೇರೆ  ಚಿತ್ರಕಲೆಗಳ ಮೂಲಕ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಚಿತ್ರ  ಕಲೆಗಳ ಮುಖಾಂತರ ಗ್ರೀಟಿಂಗ್ಸ್ ಗಳನ್ನು ಹೊರ ತರುತ್ತಾರೆ . ಈ ವರ್ಷ ಮಾಡಿದ್ದ ಚಿತ್ರಕಲೆಯ  ಶೈಲಿ  ಮುಂದಿನ ಹೊಸ ವರ್ಷದಲ್ಲಿ ಬೇರೆ ತರಹದ ವಿಭಿನ್ನ ರೂಪದಲ್ಲಿ ಹೊರ ತರುತ್ತಾರೆ  . ಅಂದರೆ ಈ ವರ್ಷ ಮಾಡಿದ್ದ ಚಿತ್ರಕಲೆ ,  ಬರುವ  ಹೊಸ ವರ್ಷದಲ್ಲಿ  ಚಿತ್ರಕಲೆ  ಇನ್ನೊಂದು ತರ ಇರುತ್ತದೆ .  ತಮ್ಮ ಕಲಾ ಕೃತಿಗಳ ಗ್ರೀಟಿಂಗ್ಸ್ ಗಳನ್ನು ರಚಿಸಲು ತಮ್ಮ ಸ್ವಂತ ಬಂಡವಾಳ ಹಾಕುತ್ತಾರೆ  . ಯಾರಿಂದಲೂ ಕೂಡ ಒಂದು ರೂಪಾಯಿಯ ಸಹಾಯ ಕೂಡ ಪಡೆಯುವುದಿಲ್ಲ  .

1990ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ನಗರದ ಮುರಗೇಂದ್ರ ಲಲಿತ ಕಲಾ  ಮಹಾವಿದ್ಯಾಲಯದಲ್ಲಿ , ಆರ್ಟ್ಸ್ ಮಾಸ್ಟರ್ ಪದವಿ ಮುಗಿಸಿದ ಸಲೀಂ ಡಾಂಗೆ ಅವರಿಗೆ ಚಿತ್ರಕಲೆ , ಸಾಹಿತ್ಯ , ರಂಗಭೂಮಿ , ಲಘು ಸಂಗೀತ , ಸಂಘಟನೆ , ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಒಲವು ಇರುತ್ತದೆ .


ನಾನು ಕಷ್ಟಪಟ್ಟು ಮಾಡುತ್ತಿರುವ ಕಲಾಕೃತಿ ಗ್ರೀಟಿಂಗ್ಸ್ ಗಳ ಸಾಮ್ಯರಸ ಶಾಂತಿ ಸಂದೇಶ ಸಾರವನ್ನು ಜನಸಾಮಾನ್ಯರು  ಅರಿತುಕೊಂಡು ,ಅದರಂತೆಯೇ ನಡೆದುಕೊಂಡರೆ ಪ್ರತಿಯೊಂದು ಸಮಾಜಕ್ಕಾಗಿ ನನ್ನ ಚಿತ್ರಕಲೆಗಳ ಮೂಲಕ  ತನ್ನ ಅಳಿಲು ಸೇವೆ ಸ್ವಾರ್ಥಕವಾಗುತ್ತದೆ ಎಂದು ಕಲಾ ಶಿಕ್ಷಕ ಸಲೀಂ ಡಾಂಗೆ ಹೇಳುತ್ತಾರೆ .


ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ 
  ಸಂಪಾದಕರು 
ಕಲಾಂ ಎಕ್ಸ್ ಪ್ರೆಸ್  ನ್ಯೂಸ್ 
9448593518

Sunday, January 22, 2023

ಆಮ್ ಆದ್ವಿ ಪಕ್ಷದ ಕಾರ್ಯಾಲಯ ಉದ್ಘಾಟನೆ , ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಕೂಡಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ . ಅರ್ಜುನ್ ಹಲಗಿ ಗೌಡರ ಆರೋಪ*




 *ರಬಕವಿ ಬನಹಟ್ಟಿ :* 

 ಬಾಗಲಕೋಟೆ ಜಿಲ್ಲೆಯ  ತೇರದಾಳ ಮತ ಕ್ಷೇತ್ರದ ರಬಕವಿ ಬನಹಟ್ಟಿ ವ್ಯಾಪ್ತಿಯ ರಾಂಪುರ ನಗರದಲ್ಲಿ ಭರ್ಜರಿ ಬೈಕ್ ರ್ಯಾಲಿ ಮೂಲಕ ಆಮ್ ಆದ್ಮಿ ಪಕ್ಷದ ಮುಖ್ಯ ಕಾರ್ಯಾಲಯವನ್ನು ಉದ್ಘಾಟನೆ ಆಯಿತು .

ನಂತರ ಪತ್ರಕರ್ತರ ಜೊತೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಹಾಗೂ ನ್ಯಾಯವಾದಿ ರಮೇಶ್ ಬದನೂರು , ದೇಶಕ್ಕೆ ಪರ್ಯಾಯ ರಾಜಕಾರಣ ಬೇಕಾಗಿದೆ .ಪ್ರಜಾಪ್ರಭುತ್ವದ ಮೂಲ ಆಸೆಯನ್ನ  ಸಂವಿಧಾನದ ಅನುಷ್ಠಾನವನ್ನು ಮಾಡ್ಲಿಕ್ಕೆ ಈ ದೇಶದ ಜನಸಾಮಾನ್ಯರ ಬೆನ್ನಿಗೆ ನಿಂತುಕೊಂಡು ಜನಸಾಮಾನ್ಯರ ಧ್ವನಿಯಾಗಿ ಆಮ್ ಆದ್ಮಿ ಪಕ್ಷವು ಒಂದು ಸಂಘರ್ಷದ ಮೂಲಕ ಜನ್ಮ ತಾಳಿದೆ .ಕಾಂಗ್ರೆಸ್ಸು ಮತ್ತು ಬಿಜೆಪಿ ಇದುವವರಿಗೆ ದೇಶ ಆಳಿರುವಂತ ಎಲ್ಲ ಪ್ರಮುಖ ಪಕ್ಷಗಳು  ನಂಬಿಕೆಯಲ್ಲಿ  ಹಿಂಜರೆದ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ತೊಲಗಿಸುವುದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿ ಎಲ್ಲ ರಾಜಕೀಯ ಪಕ್ಷಗಳು ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲ ಎಸೆದಾಗ ಆ ಸವಾಲನ್ನು ಸ್ವೀಕರಿಸಿ ಜನ್ಮ ತಾಳಿದ ಪಕ್ಷವೇ ಆಮ್ ಆದ್ಮಿ ಪಕ್ಷ , ದೆಹಲಿ  ಮತ್ತು ಪಂಜಾಬ್  ರಾಜ್ಯಗಳಲ್ಲಿ ಇವತ್ತು ನಾವು ಆಡಳಿತ ಮಾಡುತ್ತಿದ್ದೇವೆ .

ಬಿಜೆಪಿಯವರಿಗೆ ಹಾಗೂ ಕಾಂಗ್ರೆಸ್ಸಿನವರಿಗೆ ಸೋಲಿನ ಭಯ ಕಾಡುತ್ತಿದೆ .ಆದರೆ ಸೋಲಿನ ಭಯದಲ್ಲಿ ಗೆಲವು ಕಾಣುತ್ತಿರುವುದು ಆಮ್ ಆದ್ಮಿ ಪಕ್ಷ , ಅದಕ್ಕೆ ಈ ಆಮ್ ಆದ್ಮಿ ಪಕ್ಷವನ್ನು ಜನರು ಒಪ್ಪುತ್ತಿದ್ದಾರೆ ಎಂದು ಹೇಳಿದರು .

ನಂತರ ಪತ್ರಕರ್ತರ ಜೊತೆ ಮಾತನಾಡಿದ ತೇರದಾಳ  ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲಗಿಗೌಡರ, ಕಳೆದ ಕೆಲವು ವರ್ಷಗಳಿಂದ ಆಡಳಿತ ನಡೆಸಿರುವಂತಹ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಸರ್ಕಾರಗಳು ಸಂಪೂರ್ಣವಾಗಿ ಲಂಚವನ್ನೇ ನಂಬಿ ಆಡಳಿತ ಮಾಡುತ್ತಾ ಬಂದಿವೆ . ಮಾಜಿ ಶಾಸಕರಾದ  ಉಮಾಶ್ರೀ ಅವರ ಆಡಳಿತದಲ್ಲಿ  ಜಲಜೀವನದ ಯೋಜನೆಯ ಮಂಜೂರು ಆದಂತಹ ,  ಕುಡಿಯುವ ನೀರು ಇವತ್ತಿನವರೆಗೂ ಆ ಯೋಜನೆಯನ್ನು ಪೂರ್ಣಗೊಳಿಸುವದಲ್ಲಿ  ಈಗ ಇರುವಂತಹ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ . ಇದಲ್ಲದೆ ಮಹೇಶ್ ವಾಡಗಿಯ ಕೃಷ್ಣಾ ನದಿಯ ಸೇತುವೆಯ ಯೋಜನೆ 2018 ರಲ್ಲಿ 30 ಕೋಟಿ 26 ಲಕ್ಷ ಮಂಜೂರು ವಾಗಿದ್ದು , ಆ ಯೋಜನೆಯು 5 ವರ್ಷ ಕಳೆದರೂ ಕೂಡ ನೆನೆಗುದಿಗೆ ಬಿದ್ದಿದೆ  .ಈಗಿರುವ ಶಾಸಕರ ಕಿರಿಕಿರಿಗು  ,ಅವ್ಯವಸ್ಥೆಗೊ ಅಲ್ಲಿರುವಂತ ಗುತ್ತಿಗೆದಾರ ಗೆಲುವು ದಿನಗಳ ಹಿಂದೆ , ಎಲ್ಲ ಕಬ್ಬಿನ ಸಲಕರಣೆಗಳನ್ನು ಹೇರಿಕೊಂಡು ಬೇರೆ ಕಡೆಗೆ ಪಲಾಯನ ಮಾಡಿದ್ದಾರೆ . ಏಕೆಂದರೆ ಜನರಿಗೆ ಬೇಕಾಗಿರುವ  ಅಭಿವೃದ್ಧಿಯ ಕೆಲಸ , ಶಾಸಕರಿಗೆ ಬೇಕಾಗಿರುವುದು ಕೇವಲ ಕಮಿಷನ್ , ಮಾಜಿ ಶಾಸಕರಿಗೆ ಕೂಡ ಬೇಕಾಗಿರುವುದೇ ಕಮಿಷನ್ , ಇವರಿಬ್ಬರೂ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು . 

ಈ ಸಂದರ್ಭದಲ್ಲಿ ಬಾಗಲಕೋಟ್ ಜಿಲ್ಲಾ ವೀಕ್ಷಕರಾಗಿ ರೋಹನ್ ಐನಾಪುರ್ , ತೆರೆದಾಳ್ ಮತ ಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ ,  ಹಾಗೂ ನಗರ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು ,ಜಿಲ್ಲೆಯ ಎಲ್ಲಾ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು .


ವರದಿ : ಮಹಿಬೂಬ್ ಬಾರಿಗಡ್ಡಿ

Sunday, January 15, 2023

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ*

*ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ  ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ*

ಬಾಗಲಕೋಟ್ : ಕರ್ನಾಟಕ ರಾಜ್ಯ ಸಮಾಜ  ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಶಫೀಕ್  ಎಂ ಬೇಪಾರಿ  ಅವರನ್ನು ,ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ,  ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅವರು ಆದೇಶ ಹೊರಡಿಸಿದ್ದಾರೆ . 

ಮುಧೋಳ್ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ , ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ .

ಶಫೀಕ್  ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಹಾಸಿಮ್ ಜಕ್ಲಿ ,ಹಾಜಮೀನ  ಬಾಗವಾನ್ , ಮುಧೋಳ್ ನಗರ  ಸಭೆ ಸದಸ್ಯ ರಾಜು ಬೆಪಾರಿ  ,ಹುಬ್ಬಳ್ಳಿಕರ್ ಹಾಗೂ ದಯಾನಂದ್ ಪಾಟೀಲ್, ದಾನೇಶ್ ತಡೆಸಲೂರ್ , ಗುರು ಊದಪುಡಿ ,ರಫೀಕ್ ಬೈರಕದ್ದಾರ , ರಹಿಮಾನ್ ತೋರಗಲ್ ,ಅಬ್ದುಲ್ ವಾಲಿಕಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರನ್ನು  ಕೃತಜ್ಞತೆಗಳನ್ನು ಹೇಳಿದ್ದಾರೆ .

ವರದಿ ಮಹಿಬೂಬ್  ಎಂ ಬಾರಿಗಡ್ಡಿ

Sunday, January 8, 2023

ಸಿದ್ದು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಹಿಳಾ ಕಬ್ಬಡ್ಡಿ ಚಾಂಪಿಯನ್ಶಿಪ್ ಮುಕ್ತಾಯ .


ಮಹಾಲಿಂಗಪೂರ : ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ   ಬೆಲ್ಲದಿ ನಗರಿ ಎಂದೇ ಖ್ಯಾತ ಪಡೆದ  ಮಹಾಲಿಂಗಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ  ಮಹಿಳಾ ಎ ಗ್ರೇಡ್  ಕಬ್ಬಡ್ಡಿ ಚಾಂಪಿಯನ್ಶಿಪ್  ಮುಕ್ತಾಯಗೊಂಡಿತು .
ಅಮೇಚೂರ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ
 ಕರ್ನಾಟಕ ರಾಜ್ಯ ಅಮೇಚೂರ ಕಬಡ್ಡಿ ಅಸೋಶಿಯನ್ ಅನುಮತಿಯೊಂದಿಗೆ ಹಾಗೂ ಬಾಗಲಕೋಟ್ ಅಮೇಚೂರ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ 
ಸಿದ್ದು  ಕೊಣ್ಣೂರ ಸ್ಪೋಟ್ಸ ಕ್ಲಬ್ ಹಾಗೂ ಕೆ.ಎಲ್.ಇ ಕಾಲೇಜ್  ಮಹಾಲಿಂಗಪುರ ವತಿಯಿಂದ  ಅಖಿಲ್ ಭಾರತ ಎ -ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಪದ್ಯಾವಳಿಯ ಫೈನಲ್ ಪಂದ್ಯ ಜನೆವರಿ 4 ರಂದು ನಡೆಯಿತು.
ಫೈನಲ್ ನಲ್ಲಿ ಪ್ರಥಮ ಬಹುಮಾನ ವೆಸ್ಟರ್ನ ರೈಲ್ವೆ. ಪಡೆದುಕೊಂದಿದ್ದರೆ,  ಪಾಲಂ ದೆಹಲಿ  ತಂಡ 2 ಸ್ಥಾನ ಪಡೆದುಕೊಂಡಿದೆ, ಚಿಂಚಲಿಯ ಜೈ ಮಾಕಾಳಿ ತಂಡ ತೃತಿಯ ಬಹುಮಾನ ಪಡೆದುಕೊಂಡಿದೆ, ಆಳ್ವಾಸ ಮೂಡಬಿದರೆಯ ತಂಡ ನಾಲ್ಕನೇಯ ಬಹುಮಾನ ಪಡೆದುಕೊಂಡಿದೆ .

  
 ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದ ದೆಹಲಿ . .
ಫೈನಲ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ  ಕಾಂಗ್ರೆಸ್ ಪಕ್ಷದ ಹಿರಿಯರು ಮಾಚಿ ಸಚಿವರಾದ   ರಾಮಲಿಂಗಾರೆಡ್ಡ ಅವರು.ಕೆಪಿಸಿಸಿ ಕಾರ್ಯಾದ್ಯಕ್ಷರಾದ  ಸತೀಶ ಜಾರಕಿಹೊಳಿ., ಬಾಗಲಕೋಟ  ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ  ಎಸ್. ಜಿ. ನಂಜಯ್ಯನಮಠ , ಮಾಜಿ ಸಚಿವರು ಗಳಾದ ಎಸ್.ಆರ್ ಪಾಟೀಲ್ , ಆರ್ ಬಿ. ತಿಮ್ಮಾಪೂರ  ಸೇರಿದಂತೆ ಅಪಾರ ಪ್ರಮಾಣದಲ್ಲಿ ಕ್ರೀಡಾಸಕ್ತರು ಉಪಸ್ಥಿತರಿದ್ದರು .


ವರದಿ ಮಹಬೂಬ್ ಬಾರಿಗಡ್ಡಿ 

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ,*

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ,*

ರಬಕವಿ ಬನಹಟ್ಟಿ : ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ 
ಬನಹಟ್ಟಿ ನಗರದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು  ,ಇದರ ರಬಕವಿ ಬನಹಟ್ಟಿ ತಾಲೂಕ  ಶಾಖೆ  ರಚನೆ ಮಾಡಲಾಯಿತು .

ರಬಕವಿ ಬನಹಟ್ಟಿ ತಾಲೂಕ ಅಧ್ಯಕ್ಷರಾಗಿ , ಉಸ್ಮಾನ್ ಶಾ  ಮಕಾಂದರ್ .ಉಪಾಧ್ಯಕ್ಷ ಬಿ .ಜೆ  ಬೈರೊಡ್ಗಿ . ಮಹಿಳಾ ಉಪಾಧ್ಯಕ್ಷರಾಗಿ , ಶ್ರೀಮತಿ ಏನ್ ಎಂ ಇನಾಮ್ದಾರ್ , ಕಾರ್ಯದರ್ಶಿ ಕೆ ಡಿ ಗೋಟೆದ  , ಖಜಾಂಚಿ ಆರ್ ಎಚ್  ಬಿಜಾಪುರ್ , ಜಂಟಿ ಕಾರ್ಯದರ್ಶಿಯಾಗಿ ,ಕ್ಯೂ ಆರ್ ಫನಿಬಂಧ ಹಾಗೂ ಎಸ್ ಬಿ ಅತ್ತಾರ್  , ಸಂಘಟನಾ ಕಾರ್ಯದರ್ಶಿ ಐ ಬಿ ಪೊಲೀಸ್ , ಸಂಸ್ಕೃತಿ ಕಾರ್ಯದರ್ಶಿಯಾಗಿ ಎಸ್ ಎಂ ನದಾಫ್ , ಇನ್ನುಳಿದರು ಸದಸ್ಯರಾಗಿ ,ಆ ಯಸ್  ಬಾಗವಾನ್ , ಎಚ್ ಸಿ ಹಣಗಂಡಿ , ಜಡ್  ಆರ್ ಕೊಕನಿ,  ಮೌಲಾನ ರಿಜ್ವೀ , ಮಹಿಳಾ ಸದಸ್ಯರಾಗಿ ಶ್ರೀಮತಿ ಎನ್ ಐ ಸಂಗಾಪುರ್   ಒಟ್ಟು 14 ಜನರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ   ಸಂಘ ಚಾಲನೆಗೊಂಡಿತು .

ಇದರ ಸಲಹಾ ಸಮಿತಿ   ಪದಾಧಿಕಾರಿಗಳಾಗಿ ,  ಐ ಎ  ಡಾಂಗೆ ,ಝೆಡ್ ಎಚ್ ಇಂಡಿಕರ್ , ಎ ಎಂ ಗೋರಿಖಾನ್, ಎಮ್ ಎಚ್ ಲಾಡಕಾನ  ಆಯ್ಕೆಯಾಗಿದ್ದಾರೆ .  

ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ , ಸಲೀಂ ಮುಜಾವರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು .

ಈ ಕಾರ್ಯಕ್ರಮವನ್ನು ಆರ್ ಎಚ್ ಬಿಜಾಪುರ್ ನಿರೂಪಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ  ಚಿಕ್ಕೋಡಿ ಭಾಗದ ಅಧ್ಯಕ್ಷ ಜಾಕಿರ್ ಪಟೇಲ್ ಹಾಗೂ ರಾಯಬಾಗ್ ತಾಲೂಕ ಅಧ್ಯಕ್ಷ ಅಬೂಬಕ್ಕರ್ ಪಟೇಲ್ ಹಾಗೂ ಇನ್ನೂ ಅನೇಕ  ಶಿಕ್ಷಕ  ಶಿಕ್ಷಕಿಯರು  ಉಪಸ್ಥಿತರಿದ್ದರು .

ವರದಿ : ಮಹಿಬೂಬ್ ಬಾರಿಗಡ್ಡಿ