Sunday, January 28, 2024

ಅಂಜುಮನ್ ಆಡಳಿತ ಅವಧಿ ಮುಗಿದರು ಕೂಡ ಕ್ಯಾರೆ ಅನ್ನದ ಸಂಬಂಧಪಟ್ಟ ಅಧಿಕಾರಿಗಳು



 ಬಾಗಲಕೋಟೆ / ರಬಕವಿ - ಬನಹಟ್ಟಿ :

 ಬಾಗಲಕೋಟ್ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಅಂಜುಮನ ಎ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಮೂರು ವರ್ಷದ ಅವಧಿ ಕಳೆದ ಕೆಲವು ತಿಂಗಳ ಹಿಂದೆ ಮುಗಿದರೂ ಕೂಡ ಇದರ ಸಂಬಂಧಪಟ್ಟ ವಕ್ಪ್ಹ್ ಅಧಿಕಾರಿಗಳು ಕೂಡ ಕ್ಯಾರೆ ಅನ್ನುತ್ತಿಲ್ಲ. ಇದರ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೋ ಅಥವಾ ನಗರದ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷವೋ 
 ಎಂದು ಕಾದು ನೋಡಬೇಕಾಗಿದೆ.

 ಮುಸ್ಲಿಂ ಸಮುದಾಯದ ಸಾರ್ವಜನಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಚುನಾಯಿತರಾಗಲಿ ಅಥವಾ ಅವಿರೋಧವಾಗಿ ಕಳಿಸಿರುವ ಅಂತಹ ಸದಸ್ಯರು ಅವಧಿ ಮುಗಿದ ತಕ್ಷಣವೇ ಸಾರ್ವಜನಿಕರ ಸಭೆ ಕರೆದು ಇತ್ಯರ್ಥ ಪಡಿಸಬೇಕೆಂದು ಸಾರ್ವಜನಿಕ ಅಭಿಪ್ರಾಯವಾಗಿದೆ .

 ಯಾವುದೇ ಸಂಘ ಸಂಸ್ಥೆಗಳ ಚುನಾವಣೆ ಅವಧಿ ಮುಗಿಯುವುದರ ಎರಡು ತಿಂಗಳ ಮುಂಚೆಯೇ ಇದರ ಪ್ರಕ್ರಿಯೆ ಶುರುವಾಗುತ್ತದೆ. ಆದರೆ ಈ ಸಂಸ್ಥೆಯ ಅವಧಿ ಕೆಲವು ತಿಂಗಳ ಹಿಂದೆ ಮುಗಿದರು ಕೂಡ ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಸಂಸ್ಥೆಯ ಆಡಳಿತ ಮಂಡಳಿ ಆಗಲಿ, ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.

 ಅಂಜುಮನ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮುಗಿದರು ಕೂಡ ಇದು ಯಾರ ಆಡಳಿತ ಒಳಪಟ್ಟಿದೆ ಎಂದು ಪ್ರಶ್ನಾರ್ಥಕ ಚಿನ್ನವಾಗಿದೆ .

 ವರದಿ : ಮೆಹಬೂಬ್ ಎಂ ಬಾರಿಗಡ್ಡಿ

Sunday, January 14, 2024

ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಯಾವಾಗ :*

*ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ  ಕಡಿವಾಣ ಯಾವಾಗ :*
 
 ಮಾವಾ , ಜೂಜಾಟ , ಮಟ್ಕಾ , ಅಕ್ರಮ ಸರಾಯಿ ಬಿಂದಾಸ್

 ರಬಕವಿ ಬನಹಟ್ಟಿ :

 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ  ಅವಳಿ ನಗರಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಾ ತಯಾರಿಕೆ , ಹಾಗೂ ಮಟ್ಕಾ ತಾನವಾಗಿ ಮಾರ್ಪಟ್ಟಿದೆ . ಕೆಲವು ತಿಂಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾವಾ ತಯಾರು ಮಾಡುವಂತಹ ಅಡ್ಡೆ ಗಳಲ್ಲಿ ರೇಡ್ ಮಾಡಿದರು ಕೂಡ , ಪೊಲೀಸ್ ಇಲಾಖೆಗೆ ಗಮನಕ್ಕೆ ಇದ್ದರೂ ಕೂಡ , ನಗರದಲ್ಲಿ ಮಾವಾ ತಯಾರಕರು , ಜೂಜಟ್ ಕೋರರು, ಅಕ್ರಮ ಸರಾಯಿ ಕೋರರು ತಮ್ಮ ತಮ್ಮ  ದಂದೇ ಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದ್ದಾರೆ . ಮಾವಾ ಒಂದು ನಿಷೇಧಿತ ಪದಾರ್ಥ, ಇದನ್ನು ಅಡಿಕೆ , ಸುನ್ನ
 ಆರೋಗ್ಯಕ್ಕೆ ಹಾನಿಕಾರಿಯಾಗುವಂತಹ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಿ ಮಾವಾ ಅನ್ನುವಂತ ಪ್ರದಾರ್ಥವನ್ನು ತಯಾರು ಮಾಡುತ್ತಾರೆ. ಇದನ್ನು ಮನುಷ್ಯ ಸದಾ ಅಗೆಯವುದರಿಂದ ಇದರಿಂದ ಕ್ಯಾನ್ಸರ್ ಗೆ ತುತ್ತಾಗಬಹುದು.

 ಮಾವ ಅನ್ನುವಂತಹ ನಿಷೇಧಿತ ಪ್ರಧಾರ್ಥ, ನಗರ ಪ್ರದೇಶಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಂದು ಪಾನ್ ಶಾಪ್ಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅವರ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಮಾವಾ ಪದಾರ್ಥವನ್ನು ಯುವ ಪೀಳಿಗೆ ಅಷ್ಟೇ ಅಲ್ಲದೆ ಮಧ್ಯಮ ವಯಸ್ಕರ ಕೂಡ ಚಟಕ್ಕೆ ಬಲಿಯಾಗುತ್ತಿದ್ದಾರೆ . ಈ ಆಕ್ರಮ ಧoದೆಗೆ ಸಂಬಂಧ ಪಟ್ಟ ಅಧಿಕಾರಿಗಳು ಯಾವಾಗ ಕಡಿವಾಣ ಹಾಕುತ್ತಾರೆ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ .

 ಮಧ್ಯಮ ವಯಸ್ಕರು ಅಲ್ಲದೆ ಯುವ ಪೀಳಿಗೆ ಮಟ್ಕಾ ಆಟಕ್ಕೆ ಶರಣು

 ನಗರಗಳು ಮಟ್ಕಾ ತಾಣಗಳಾಗಿ ಪರಿವರ್ತನೆ ಯಾಗುತ್ತಲಿಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೂ ಅಕ್ರಮ ಸರಾಯಿ ಕೂಡ ಹಳ್ಳಿ ಗಳ ಕೆಲವೊಂದು ಪಾನ್ ಶಾಪ್ಗಳಲ್ಲಿ ದೊರೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ .

. ಬನಹಟ್ಟಿ ನಗರದ   ನೂತನ ಠಾನಾಧಿಕಾರಿ ಅಧಿಕಾರ ವಹಿಸಿದ  ಶಾಂತಾ ಹಳ್ಳಿ ಮೇಡಂ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರ್ನಾಥ್ ರೆಡ್ಡಿ ಅವರು ಈ ಎಲ್ಲಾ ಅಕ್ರಮ ಧ0ದೇ ಗಳಿಗೆ ಕಡಿವಾಣೆ ಹಾಕುತ್ತಾರೆಯೋ,  ಅನ್ನುವಂತ ಕಾದು ನೋಡಬೇಕಾಗಿದೆ  .

 ವರದಿ :
 ಮಹಬೂಬ್ ಎಮ್ ಬಾರಿಗಡ್ಡಿ 

Saturday, January 13, 2024

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ


 ಬಾಗಲಕೋಟೆ / ರಬಕವಿ- ಬನಹಟ್ಟಿ 
ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಎಕ್ಸಪರ್ಟ್ ಆಂಗ್ಲ ಮಾಧ್ಯಮ ಶಾಲೆ ರಬಕವಿ 
ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಈ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷರಾದ ಶಿವು ಗಿರಿಸಾಗರ್ ಹಾಗೂ ಕಾರ್ಯದರ್ಶಿ ಯಾದ ಬಾಬು ಪಾಲಬಾವಿ ಹಾಗೂ ಶಾಲೆಯ ಮುಖ್ಯ ಗುರುಗಳಾದ . ಮೊಹಮ್ಮದ್ ರಫೀಕ್ ನದಾಫ್ ಅವರು ಉದ್ಘಾಟಿಸಿದರು...
ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ಸಹದಿಂದ ವಿಜ್ಞಾನ ಮಾದರಿ, ಐತಿಹಾಸಿಕ ಸ್ಮಾರಕಗಳು ,ಹಾಗೂ ಇನ್ನೂ ಅನೇಕ ರೀತಿಯ ಮಾದರಿಯ ವಸ್ತುಗಳನ್ನು ಪ್ರದರ್ಶನ ಮಾಡುವುದರ ಮೂಲಕ ಗಮನ ಸೆಳೆದರು ..
ಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 240 ಕ್ಕೂ ಅಧಿಕ ವಸ್ತುಗಳನ್ನು ಪ್ರದರ್ಶನ ಮಾಡಿದರು..
ಮಕ್ಕಳು ತಮ್ಮ ತಮ್ಮ ಮಾದರಿಗಳ ವಿವರಣೆಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದರು ...

ಈ ಸಂದರ್ಭದಲ್ಲಿ  ಶಾಲೆಯ  ನಜೀರ್  ಬಳಗಾರ , ಬಸಪ್ಪಾ ಕುರಿ,  ಜ್ಯೋತಿ  ಸಿಂಧೆ, ಶೃತಿ ಕವಾಸಿ,  ಬಸಮ್ಮ ಗಿರಿಸಾಗರ್, ಪ್ರಿಯಾಂಕ ಪರಿಟ್ , ಕಾವೇರಿ ಅಥಣಿ , ಸೋನಾಲಿ ಮಾಳಿ, ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು....
ವರದಿ
ಸಂತೋಷ್ ಹೊಸಮನಿ

Saturday, December 30, 2023

ಕಲಾಕೃತಿಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತಿರುವ ಶಿಕ್ಷಕ , ಸಲೀಂ ಎಂ ಡಾಂಗೆ

ರಬಕವಿ ಬನಹಟ್ಟಿ

ಹೊಸ ವರ್ಷದ ಆಚರಣೆ  ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ .  ಇಲ್ಲೊಬ್ಬ  ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ  ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು , ಬುದ್ಧ  , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ  ಚಿತ್ರದಲ್ಲಿ ಮುದ್ರನ (ಪ್ರಿಂಟ್ ) ಹಾಕಿ ,ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ ,  ವಾರದ ಮುಂಚೆ ,  ಕೋಮುಸೌಹಾರ್ದತೆ ಯನ್ನು  ಎತ್ತಿ ಹಿಡಿಯಲಿಕ್ಕೆ ,ಎಲ್ಲ ಸಮಾಜಗಳಿಗೆ ,ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು  ಸತ್ - ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ .

ದಯವೇ ಧರ್ಮದ ಮೂಲವಯ್ಯ , ನಿಮ್ಮ ಏಕತೆ  , ನನ್ನ ಪೂಜೆ , ನನ್ನ ಉಳಿಸಿ ಜಗತ್ತು  ರಕ್ಷಿಸಿ  , ಜೈ ಭಾರತ ಜನನಿಯ  ತನುಜಾತೆ , ರಾಷ್ಟ್ರೀಯ ಏಕತೆಯೇ ನನ್ನ ಸೌಂದರ್ಯ , ಹಾಗೂ ನವಿಲು ನರ್ತನ , ಇನ್ನೂ ಅನೇಕ 16 ಚಿತ್ರ ಕಲೆಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ಹೊರ ತಂದಿದ್ದಾರೆ  .


ಸಲೀಂ ಮೈನುದ್ದೀನ್ ಡಾಂಗೆ  ಇವರು ಕಲಾ ಶಿಕ್ಷಕರು ಸದ್ಯ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ್ ಪಟ್ಟಣದ ಸಿಖ್ಯಾಬ ಸಂಸ್ಥೆಯ ಉರ್ದು ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ .


ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಚಿತ್ರಕಲಾ ಶಿಕ್ಷಕರಾದ ಶ್ರೀ ಎಸ್ ಎಂ ಡಾಂಗೆ ಸುಮಾರು 30 ವರ್ಷದಿಂದ ಇಂತಹ ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ಪ್ರತಿ ವರ್ಷ ರಚಿಸ್ತಿದ್ದು ಈ ವರ್ಷ ಅವರು ಅವಿಭಕ್ತ ಕುಟುಂಬದ ಮಹತ್ವ , ವೃದ್ಧ ತಂದೆ ತಾಯಿ ಮತ್ತು ಮಕ್ಕಳು ಸೇರಿ ಇರುವ ಕುಟುಂಬ ಯಾವುದೇ ಸ್ವರ್ಗ ಕ್ಕಿಂತ ಕಡಿಮೆ ಇಲ್ಲ ಎನ್ನುವಂತೆ ಸರ್ವಜ್ಞ ಅವರ ವಚನವನ್ನು ಮೂಲವಾಗಿಸಿ ಈ ವರ್ಷದ ಹೊಸ ವರ್ಷದ ಶುಭಾಶಯ ಚಿತ್ರವನ್ನು ರಚಿಸಿದ್ದಾರೆ

ಪ್ರತಿಯೊಂದು ಹೊಸ ವರ್ಷಕ್ಕೆ ಅವರ ವಿಶಿಷ್ಟವಾದ ಕೋಮು ಸೌಹಾರ್ದತೆ   ಸಲುವಾಗಿ ಸಾಮ್ಯರಸ ಬದುಕಿನ ಸಂದೇಶಗಳನ್ನು ಸಾರುವ ಅಪರೂಪದ ತಮ್ಮ ವಿಶಿಷ್ಟ ಕಲಾ ಕೃತಿಗಳಲ್ಲಿ ಬಿಡಿಸಿ , ಗಣ್ಯ ವ್ಯಕ್ತಿಗಳಿಗೆ  ಹಾಗೂ ಸಾರ್ವಜನಿಕರಿಗೆ , ಉಚಿತವಾಗಿ ತಮ್ಮ  ಚಿತ್ರಕಲೆಗಳ  ಗ್ರೀಟಿಂಗ್ಸ್ ಗಳನ್ನು ಹಂಚುವುದರ ಮೂಲಕ , ಹೊಸ ವರ್ಷದ ಆಚರಣೆಯನ್ನು ಮಾಡುವುದರ ಮೂಲಕ  , ಎಲ್ಲರ ಮನೆ ಮಾತಾಗಿದ್ದಾರೆ . 

ಶಿಕ್ಷಕ ಸಲೀಂ ಎಂ ಡಾಂಗೆ  ಇವರು 1993 ದಿಂದ  2023 ರವರೆಗೆ ಕನಿಷ್ಠ 31 ವರ್ಷದಿಂದ ಈ ವಿಭಿನ್ನ ಚಿತ್ರಕಲೆಗಳ ಮೂಲಕ  ಘಣಕಾರ್ಯವನ್ನು   ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ . 1995 - 96 ರಲ್ಲಿ ದೇಶದ ರಾಷ್ಟ್ರಪತಿಗಳಿಂದ ಕೂಡ ಪ್ರಶಂಸೆಯ  ಪತ್ರವೂ ಕೂಡ ಬಂದಿದೆ .

ಪ್ರತಿಯೊಂದು, ಹೊಸ ವರ್ಷದ ಸಂದರ್ಭದಲ್ಲಿ ಬೇರೆ ಬೇರೆ  ಚಿತ್ರಕಲೆಗಳ ಮೂಲಕ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಚಿತ್ರ  ಕಲೆಗಳ ಮುಖಾಂತರ ಗ್ರೀಟಿಂಗ್ಸ್ ಗಳನ್ನು ಹೊರ ತರುತ್ತಾರೆ . ಈ ವರ್ಷ ಮಾಡಿದ್ದ ಚಿತ್ರಕಲೆಯ  ಶೈಲಿ  ಮುಂದಿನ ಹೊಸ ವರ್ಷದಲ್ಲಿ ಬೇರೆ ತರಹದ ವಿಭಿನ್ನ ರೂಪದಲ್ಲಿ ಹೊರ ತರುತ್ತಾರೆ  . ಅಂದರೆ ಈ ವರ್ಷ ಮಾಡಿದ್ದ ಚಿತ್ರಕಲೆ ,  ಬರುವ  ಹೊಸ ವರ್ಷದಲ್ಲಿ  ಚಿತ್ರಕಲೆ  ಇನ್ನೊಂದು ತರ ಇರುತ್ತದೆ .  ತಮ್ಮ ಕಲಾ ಕೃತಿಗಳ ಗ್ರೀಟಿಂಗ್ಸ್ ಗಳನ್ನು ರಚಿಸಲು ತಮ್ಮ ಸ್ವಂತ ಬಂಡವಾಳ ಹಾಕುತ್ತಾರೆ  . ಯಾರಿಂದಲೂ ಕೂಡ ಒಂದು ರೂಪಾಯಿಯ ಸಹಾಯ ಕೂಡ ಪಡೆಯುವುದಿಲ್ಲ  .

1990ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ನಗರದ ಮುರಗೇಂದ್ರ ಲಲಿತ ಕಲಾ  ಮಹಾವಿದ್ಯಾಲಯದಲ್ಲಿ , ಆರ್ಟ್ಸ್ ಮಾಸ್ಟರ್ ಪದವಿ ಮುಗಿಸಿದ ಸಲೀಂ ಡಾಂಗೆ ಅವರಿಗೆ ಚಿತ್ರಕಲೆ , ಸಾಹಿತ್ಯ , ರಂಗಭೂಮಿ , ಲಘು ಸಂಗೀತ , ಸಂಘಟನೆ , ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಒಲವು ಇರುತ್ತದೆ .


ನಾನು ಕಷ್ಟಪಟ್ಟು ಮಾಡುತ್ತಿರುವ ಕಲಾಕೃತಿ ಗ್ರೀಟಿಂಗ್ಸ್ ಗಳ ಸಾಮ್ಯರಸ ಶಾಂತಿ ಸಂದೇಶ ಸಾರವನ್ನು ಜನಸಾಮಾನ್ಯರು  ಅರಿತುಕೊಂಡು ,ಅದರಂತೆಯೇ ನಡೆದುಕೊಂಡರೆ ಪ್ರತಿಯೊಂದು ಸಮಾಜಕ್ಕಾಗಿ ನನ್ನ ಚಿತ್ರಕಲೆಗಳ ಮೂಲಕ  ತನ್ನ ಅಳಿಲು ಸೇವೆ ಸ್ವಾರ್ಥಕವಾಗುತ್ತದೆ ಎಂದು ಕಲಾ ಶಿಕ್ಷಕ ಸಲೀಂ ಡಾಂಗೆ ಹೇಳುತ್ತಾರೆ .


ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ 
  ಸಂಪಾದಕರು 
ಕಲಾಂ ಎಕ್ಸ್ ಪ್ರೆಸ್  ನ್ಯೂಸ್ 
9448593518

Wednesday, December 27, 2023

ಚಳಿಯಲ್ಲಿ ನಿರ್ಗಗತಿಗಳಿಗೆ ಆಸರೆಯಾದ, ಕರವೇ ಬಶೀರ್ ಜಮಾದಾರ್.*

*ಚಳಿಯಲ್ಲಿ ನಿರ್ಗಗತಿಗಳಿಗೆ ಆಸರೆಯಾದ, ಕರವೇ ಬಶೀರ್ ಜಮಾದಾರ್.*

 *ರಬಕವಿ ಬನಹಟ್ಟಿ*

 ತಂದೆ ತಾಯಿಗಳು ಇದ್ದರೂ ಈಗಿನ ಕಾಲದಲ್ಲಿ ಆಶ್ರಮಕ್ಕೆ ಬಿಟ್ಟು ಬರುವಂತ ಕಲಿಯುಗದಲ್ಲಿ , ಇಲ್ಲೊಬ್ಬ್ ಸಾಮಾಜಿಕ ಹೋರಾಟಗಾರ ಸತತವಾಗಿ 7 ವರ್ಷಗಳಿಂದ ತಂದೆ ಪುಣ್ಯ ಸ್ಮರಣೆಯ ಅಂಗವಾಗಿ ಕಾಯಕ ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಬಶೀರ್ ಜಮಾದಾರ್ ಇವರು ವರ್ಷದ ಕಡೆಯ ಡಿಸೆಂಬರ್ ಬಂತಂದರೆ ವಿಶೇಷವಾಗಿ ತನ್ನ ತಂದೆ ಯ ಪುಣ್ಯಸ್ಮರಣೆ ನೆನಪಿನ ಗೋಸ್ಕರ ನೀರ್ಗತಿಯರನ್ನು ಗುರುತಿಸಿ ಬಸ್ ನಿಲ್ದಾಣ,  ಮಂದಿರ ಮಠಗಳು , ಮಸೀದಿ ಹತ್ತಿರ ಬೀದಿಯಲ್ಲಿ ಮಲಗಿರುವಂತ ಅನಾಥರನ್ನು ಗುರುತಿಸಿ, ಅವರಿಗೆ ಊಟ ನೀರು ಕೊಟ್ಟು , ಅವರ ಮಾತುಗಳ ಆಲಿಸಿ
 ಚಳಿಯಲ್ಲಿ ದಿಕ್ಕು ಇಲ್ಲದವರ ಅನಾತ್ ನಿರ್ಗತಿಯರಿಗೆ ಮಲಗಲಿಕ್ಕೆ ರಗ್ಗು ಬೆಡ್ಸಿಟ್ಟುಗಳನ್ನು ಕೊಟ್ಟು, ತನ್ನ ತಂದೆ ಸಿಕಂದರ್ ಸಾಬ್ ಹೆಸರಿನಲ್ಲಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ.

 ಬಶೀರ್ ಜಮಾದಾರ್ ಇವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಒಬ್ಬ ಆಟೋ ಚಾಲಕನಾಗಿ ವೃತ್ತಿಯನ್ನು ಮಾಡುತ್ತಿದ್ದು , ಇವರು ಮಾಡುವಂತಹ ತಂದೆಯ ಹೆಸರಿನಲ್ಲಿ ಕಾಯಕವನ್ನು ಹಲವರಿಗೆ ಪ್ರೀತಿ ಮೆಚ್ಚುಗೆ ಪಾತ್ರವಾಗಿದ್ದಾರೆ.

 ಇದೇ ಸಂದರ್ಭದಲ್ಲಿ ಸುರೇಶ್ ಗೋಕಾವಿ , ರಮೇಶ್ ಶಿರೋಳ , ವಿಜಯ್  ಕಂಬಾರ್ ಹಾಗೂ ಚನ್ನಪ್ಪ ಪಾಟೀಲ್ ಉಪಸ್ಥಿತರಿದ್ದು ಒಳ್ಳೆಯ ಕಾರ್ಯಕ್ಕೆ ಸಾತ್ ಕೊಟ್ಟಿದ್ದಾರೆ.

 ವರದಿ ಮಹಬೂಬ್ ಬಾರಿಗಡ್ಡಿ

Wednesday, November 1, 2023

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ರಾಜ್ಯೋತ್ಸವ ಆಚರಣೆ

  ರಬಕವಿ ಬನಹಟ್ಟಿ

 ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಬೈಕ್ ಆಟೋ ರಿಕ್ಷಾಗಳ ಮೇಲೆ ವೀರ ಹೋರಾಟಗಾರರಾದ ದಕ್ಷಿಣ ಪತೇಶ್ವರ ಇಮ್ಮಡಿ ಪುಲಕೇಶಿ ಸಂಗೊಳ್ಳಿ ರಾಯಣ್ಣ ಕಿತ್ತೂರಾಣಿ ಚೆನ್ನಮ್ಮ ಬೆಳವಡಿ ಮಲ್ಲಮ್ಮ ತಾಯಿ ಭುವನೇಶ್ವರಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಇನ್ನು ಹಲವು ಭಾವಚಿತ್ರಗಳನ್ನು ಆಟೋರಿಕ್ಷಗಳ ವಿವಿಧ ಬೀದಿಗಳಲ್ಲಿ ಸಂಚರಿಸಿ ,
 ಬನಹಟ್ಟಿ ಇಂದ ರಬಕವಿ ನಾಕ ಅವರಿಗೆ ಬೃಹತ್ ಆಚರಣೆ ಮಾಡಲಾಯಿತು .


ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜೇಶ್ವರಿ ಹಿರೇಮಠ್ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ವಹಿದಾ ನದಾಫ್ ಅಜಿತ್ ಬರಡಗಿ ಸುರೇಶ ಗೋಕಾವಿ ಮಲಿಕ್ ಜಮಾದಾರ್ ರೇಷ್ಮಾ ಲಕ್ಷ್ಮಿ ಶಿವಲೀಲಾ ಗೈಬು ಸಾಬ್ ಮಲ್ಲು ಬಂಡಾರಿ ಸಿರಾಜ್ ಅತ್ತಾರ್ ಇನ್ನು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು .



ವರದಿ :
ಮಹಬೂಬ್ ಎಂ ಬಾರಿಗಡ್ಡಿ

Tuesday, October 24, 2023

ಕಳೆದ 75 ವರ್ಷಗಳಲ್ಲಿ ಇಸ್ರೇಲ್ ನಡೆಸುತ್ತಾ ಬಂದಿರುವುದು ಏನನ್ನು?

ಭಯೋತ್ಪಾದನೆ ಎಲ್ಲಿ ನಡೆದರೂ ಅದರ ಕಾರಣ ಏನೇ ಇದ್ದರೂ ಅದು ಅಮಾನವೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಇಸ್ರೇಲ್-ಫೆಲಸ್ತೀನ್ ಯುದ್ಧದ ಹಿನ್ನೆಲೆಯಲ್ಲಿ  ಪ್ರಧಾನಿ ಆಡಿದ ಮಾತಿದು.

ಅಮೆರಿಕ, ಇಂಗ್ಲೆಂಡ್ ಸಹಿತ ಪಾಶ್ಚಾತ್ಯ ಶಕ್ತಿಗಳು ಹಮಾಸ್ ಅನ್ನು ಟೆರರಿಸ್ಟ್ ಎಂದು ಕರೆಯುತ್ತವೆ. ಆದರೆ ವಿಶ್ವಸಂಸ್ಥೆ, ಭಾರತ ಮತ್ತು ನೆರೆಯ ಅರಬರಾಗಲಿ ಚೀನ, ರಷ್ಯವಾಗಲಿ ಹಮಾಸನ್ನು ಇನ್ನೂ ಟೆರರಿಸ್ಟ್ ಸಂಘಟನೆ ಎಂದು ಘೋಷಿಸಿಲ್ಲ.

ಯಾವುದೇ ಒಂದು ಸಂಘಟನೆ ಇನ್ನೊಂದು ದೇಶದ ಗಡಿ ದಾಟಿ  ನಾಗರಿಕರ ಹತ್ಯೆ ಮಾಡಿದರೆ ಅದನ್ನು ಟೆರರಿಸಂ ಎಂದು  ಹೇಳಲಾಗುತ್ತದೆ. ಹೀಗಾಗಿ ಹಮಾಸ್‌ನ ಕೃತ್ಯವನ್ನು ಸಮರ್ಥಿಸುವಂತಿಲ್ಲ. ಈಗ ಹಮಾಸ್ ಇಸ್ರೇಲಿನೊಳಗೆ ನುಗ್ಗಿ ಯುದ್ಧ ಆರಂಭಿಸಿದೆ. 1300ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಹಮಾಸ್‌ನ ಆ ಕೃತ್ಯದಂತೆ ಇಸ್ರೇಲ್ ನಡೆಸಿದ ಬಾಂಬಿಂಗನ್ನು ಕೂಡ ಸಮರ್ಥಿಸುವಂತಿಲ್ಲ. ಅದು ನಾಗರಿಕರ ಮೇಲೆ, ವಿಶ್ವಸಂಸ್ಥೆಯ ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಫೆಲಸ್ತೀನ್ ನಿರಾಶ್ರಿತರ ವಿಭಾಗ ತಿಳಿಸಿದೆ. ಹಾಗಾಗಿ ಇದೂ ಟೆರರಿಸ್ಟ್ ಕೃತ್ಯವೇ ಆಗಿಬಿಡುತ್ತದೆ. ಹೀಗಾಗಿಯೇ ವಿಶ್ವಸಂಸ್ಥೆಗೆ ಈ ವರೆಗೆ ಹಮಾಸ್ ಅನ್ನು ಟೆರರಿಸ್ಟ್  ಪಟ್ಟಿಗೆ ಸೇರಿಸಲು ಸಾಧ್ಯವಾಗದೇ ಹೋಗಿದೆ.

ಗಾಝವನ್ನು ನಿರ್ಜನ ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಗಾಝವನ್ನು ನಿರ್ಜನ ಮಾಡುತ್ತೇವೆ ಎನ್ನುವಾಗ ಅಲ್ಲಿರುವ  ಸುಮಾರು 50 ಲಕ್ಷ ಮಂದಿಯನ್ನು ಇಸ್ರೇಲ್ ನಾಶಪಡಿಸುತ್ತದೆ ಎಂದರ್ಥ. ಈಗಾಗಲೇ ನೀರು, ವಿದ್ಯುತ್, ಇಂಧನ, ಆಹಾರ ಎಲ್ಲ ಮೂಲ ಸೌರ‍್ಯಗಳನ್ನು ಇಸ್ರೇಲ್ ಸ್ಥಗಿತಗೊಳಿಸಿದೆ. ಆದರೆ ಮಾಧ್ಯಮಗಳು ಈ ಅಂಶವನ್ನು ಪರಿಗಣಿಸುತ್ತಿಲ್ಲ. ನಮ್ಮ ಮಾಧ್ಯಮ ಮಂದಿ ವಿಕೃತ ಸಂಭ್ರಮಾಚರಣೆಯಲ್ಲಿದ್ದಾರೆ.

ಹೀಗಾಗಿ ಪ್ರಧಾನಿ ಮೋದಿಯ ಮಾತಿನ ಅರ್ಥದಲ್ಲಿ ಹೇಳುವುದಾದರೆ ಇದು ಕೂಡ ಮನುಷ್ಯತ್ವ ರಹಿತವಾದದ್ದು. ಆದರೆ ಹಮಾಸ್ ಮಾಡುವುದೂ ಈ ಹಿಂದೆ ಫೆಲಸ್ತೀನ್ ಲಿಬರೇಷನ್ ಫ್ರಂಟ್ ಮಾಡಿದ್ದೂ ಅವರ ನಾಡಿನ  ಸ್ವಾತಂತ್ರ್ಯಕ್ಕೆ ಎಂಬುದು ಹಗಲಿನಷ್ಟೇ ಸ್ಪಷ್ಟ. ಆದ್ದರಿಂದ ಇಲ್ಲಿ ಧರ್ಮಕ್ಕೆ ಸ್ಥಾನ ಇಲ್ಲ. ಆದರೆ ಇಸ್ರೇಲ್? ಫೆಲಸ್ತೀನ್ ಭೂಭಾಗದಲ್ಲಿ 1948ರಲ್ಲಿ ಅಕ್ರಮವಾಗಿ ಸ್ಥಾಪಿಸಿದ ದೇಶ ಅದು. ನಿಜಕ್ಕಾದರೆ ಅದು ಹುಟ್ಟಿಕೊಂಡದ್ದೆ ಫೆಲಸ್ತೀನಿಯರ ವಿರೋಧದ ನಡುವೆ. ಪಾಶ್ಚಾತ್ಯ  ಶಕ್ತಿಗಳು ಬಲವಂತದಿಂದ ಹುಟ್ಟು ಹಾಕಿದ ದೇಶ ಅದು. ಇಂದು ಹಮಾಸ್ ಅನ್ನು ಇವರೇ ಟೆರರಿಸ್ಟ್ ಎಂದು ಘೋಷಿಸಿದ್ದಾರೆ. ನಮ್ಮ  ದೇಶಕ್ಕೂ ಇದು ಗೊತ್ತಿದೆ. ಹೀಗಾಗಿ ಫೆಲಸ್ತೀನ್ ಸ್ವತಂತ್ರ ದೇಶ ಎಂಬ ಸಂಕಲ್ಪವನ್ನು ಭಾರತ ಬೆಂಬಲಿಸುತ್ತಾ ಬಂದಿದೆ.

ವಿಷಯ ಬದಲಿಸೋಣ:
ಚುನಾವಣಾ ಆಯೋಗವು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಝೊರಂಗಳ ಚುನಾವಣಾ ದಿನಾಂಕ ಪ್ರಕಟಿಸಿದ  ನಂತರ ಪಕ್ಷಾವಾರು ಮೇಲಾಟಗಳು ಶುರುವಾಗಿವೆ. ಇದೇ ವೇಳೆ ರಾಜಸ್ತಾನದಲ್ಲಿ ಬಿಜೆಪಿ ಹಾಕಿದ ಪೋಸ್ಟರ್‌ವೊಂದು ಭಾರೀ ವಿವಾದಕ್ಕೆ ಮತ್ತು ಕಾನೂನು ಕ್ರಮಕ್ಕೆ ತುತ್ತಾಗುವಂತೆ ಮಾಡಿದೆ. ಗೆಲ್ಲಲೇಬೇಕಾದ ಅನಿವಾರ‍್ಯತೆಯಲ್ಲಿ ಬಿಜೆಪಿ ಇಲ್ಲಿ ಸುಳ್ಳಿನ ಮೊರೆ ಹೋಗಿದೆ.

ಬಿಜೆಪಿ ರೈತರ ವಿಷಯವನ್ನು ಎತ್ತಿಕೊಂಡು ಗೆಹ್ಲೋಟ್ ಸರಕಾರವನ್ನು ರಾಜಸ್ತಾನ ಸಹಿಸುವುದಿಲ್ಲ ಎಂಬ ಅಭಿಯಾನವನ್ನು ನಡೆಸಿತು. ಇದರಲ್ಲಿ ಅಂಟಿಸಿದ ಪೋಸ್ಟರ್‌ನಲ್ಲಿ ಮಾಧೇರಾಂ ಎಂಬ ರೈತನ ಫೋಟೊ ಇತ್ತು. 19 ಸಾವಿರಕ್ಕೂ ಹೆಚ್ಚು ರೈತರ ಜಮೀನು ಏಲಂ ಆಗಿದೆ ಎಂದು ಅದರಲ್ಲಿ ಬರೆಯಲಾಗಿತ್ತು.

ಫೋಟೊದಲ್ಲಿದ್ದ ಮಾಧೇರಾಂರ 200 ಬಿಗಾ ಜಮೀನನ್ನು ಆತ ಪಡೆದ ಸಾಲಕ್ಕೆ ಗೆಹ್ಲೋಟ್  ಸರಕಾರ ಏಲಂ ಮಾಡಿಸಿದೆ ಎಂದು ಆರೋಪ ಹೊರಿಸಲಾಗಿತ್ತು. ಆದರೆ, ತನ್ನ 200 ಬಿಗಾ ಜಮೀನು ತನ್ನ ಬಳಿಯೇ ಇದೆ, ಯಾರೂ ಏಲಂ ಮಾಡಿಲ್ಲ, ಬಿಜೆಪಿ ಫೋಟೊ ಹಾಕಿ ಅಪಮಾನ ಮಾಡಿದೆ ಎಂದು ರೈತ ರಾಧೇರಾಂ ಪೊಲೀಸ್ ಠಾಣೆಯಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಪ್ರಚಾರಕ್ಕೆ ಹೋಗಿ ರಾಜಸ್ತಾನ ಬಿಜೆಪಿ ಸಿಕ್ಕಿಬಿದ್ದಿದೆ. ಮಾಧೇರಾಂರನ್ನು ಸ್ವತಃ ಮುಖ್ಯಮಂತ್ರಿ ಗೆಹ್ಲೋಟ್  ಭೇಟಿಯಾಗಿ ಪೋಸ್ಟರ್ ತೆಗೆಸುವ ಭರವಸೆ ಕೊಟ್ಟರು.

ಬಿಜೆಪಿಯ ಸ್ಥಿತಿ ಉತ್ತಮ ಆಗಿಲ್ಲ ಎಂಬುದನ್ನೆ ಈ ಸುಳ್ಳು ಪ್ರಚಾರ ತೋರಿಸುತ್ತಿದೆ.  ಈ ಪ್ರಕಾರ ಹೇಳುವುದಾದರೆ ಚುನಾವಣೆ  ಘೋಷಣೆಯಾದ ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಚುನಾವಣಾ ಪರ‍್ವ ಸಮೀಕ್ಷೆಗಳನ್ನು ಗಮನಿಸುವುದಾದರೆ,  ಮಿಝೊರಂ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿಯ ಪರಿಸ್ಥಿತಿ ನೆಟ್ಟಗಿಲ್ಲ.

ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದೇ ಚುನಾವಣಾ ಪರ‍್ವ ಸಮೀಕ್ಷೆಗಳು ಹೇಳುತ್ತಿವೆ. ಮಧ್ಯಪ್ರದೇಶದ ಬಗ್ಗೆ  ಟೈಮ್ಸ್ ನೌ- ನವಭಾರತ್ ಸಮೀಕ್ಷೆಯಲ್ಲಿ ಬಿಜೆಪಿಗೆ 110 ಸೀಟು, ಕಾಂಗ್ರೆಸ್‌ಗೆ 119 ಸೀಟುಗಳು,  ಟೈಮ್ಸ್- ಎಬಿಪಿ, ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ 113 ರಿಂದ 125 ಸೀಟು ಸಿಗಬಹುದು. ಒಟ್ಟು 230 ಸೀಟುಗಳಲ್ಲಿ ಈ ಫಲಿತಾಂಶ. ಇಲ್ಲಿಯೂ ಬಿಜೆಪಿ ಗೆಲ್ಲುವುದು ಕಷ್ಟ. ಛತ್ತೀಸ್‌ಗಢದಲ್ಲಿ ಎಬಿಪಿ ಸಮೀಕ್ಷೆ ಪ್ರಕಾರ, ಬಿಜೆಪಿಗೆ 39 ರಿಂದ 45 ಸೀಟು ಸಿಗಬಹುದು. ಅದೇ ವೇಳೆ ಕಾಂಗ್ರೆಸ್‌ಗೆ  45 ರಿಂದ 51 ಸೀಟು ಸಿಗುವ ಸಾಧ್ಯತೆ ಇದೆ. ಇಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್‌ರ ಬಿಆರ್ ಎಸ್‌ಗೆ  43ರಿಂದ 55 ಸೀಟುಗಳು ಸಿಗಲಿದೆ. ಕಾಂಗ್ರೆಸ್‌ಗೆ 48ರಿಂದ 69 ಸೀಟುಗಳ ವರೆಗೆ ಸಿಗಲಿದೆ. ಇಲ್ಲಿ ಬಿಜೆಪಿ ಚಿತ್ರದಲ್ಲೇ ಇಲ್ಲ. ಸಿಕ್ಕರೆ  5ರಿಂದ 11 ಸೀಟುಗಳು ಸಿಗಬಹುದು.

ರೈತ ಮಾಧೇರಾಂರನ್ನು ಅಪಮಾನಿಸಿದ ರಾಜಸ್ಥಾನವನ್ನೇ ಎತ್ತಿ ಕೊಳ್ಳುವುದಾದರೆ ಇಲ್ಲಿಯೂ ಬಿಜೆಪಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾರ ಮುನಿಸು. ಈಗ ವಸುಂಧರಾ ರಾಜೆ ಸಿಂಧಿಯಾ ನೇರವಾಗಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ. ಅವರು ಎಲ್ಲಾದರೂ ಬಂಡಾಯ ಎದ್ದರೆ  ರಾಜಸ್ತಾನದಲ್ಲಿ ಬಿಜೆಪಿ ಕಾಣೆಯಾಗಬಹುದು. ವಸುಂಧರಾ ರಾಜೆ ಸಿಂಧಿಯರ ಬೆಂಬಲಿಗರಿಗೆ ಬಿಜೆಪಿ ಟಿಕೆಟು ನಿರಾಕರಿಸಿದೆ. ಇವರಲ್ಲಿ  ಮುಖೇಶ್ ಗೋಯಲ್ ತನ್ನ ಬೆಂಬಲಿಗರ ಸಭೆಯಲ್ಲಿ ಅತ್ತು ಬಿಟ್ಟಿದ್ದಾರೆ. ಮಾತ್ರವಲ್ಲ ಸಂಸತ್ಸದಸ್ಯ ರಾಜ್ಯ ವರ್ಧನ ಸಿಂಗ್ ರಾಠೋಡ್,  ದಿವ್ಯ ಕುಮಾರಿಗೆ ಟಿಕೆಟ್ ಕೊಟ್ಟಿರುವುದು ರಾಜಸ್ತಾನದಲ್ಲಿ ಬಿಜೆಪಿಯ ದುಸ್ಥಿತಿಯನ್ನು ಓದಿ ಹೇಳುತ್ತಿದೆ.

ಇವೆಲ್ಲಕ್ಕೆ ವಸುಂಧರಾರ ಬಂಡಾಯವನ್ನೇ ಕಾರಣ ಎಂದು ಹೇಳಬಹುದಾದರೂ ಜಾಟ್ ವಿಭಾಗ ಬಿಜೆಪಿ ವಿರೋಧಿಯಾಗಿದ್ದೂ ಒಂದು ಕಾರಣವಾಗಿದೆ ಎಂದು ಹೊರಬರುತ್ತಿರುವ ವಿಶ್ಲೇಷಣೆಗಳು ಹೇಳುತ್ತಿವೆ. ಇನ್ನೊಂದು ಕಡೆ ಜಾತಿ ಜನಗಣತಿ ನಡೆಸುವ ಕಾಂಗ್ರೆಸ್ಸಿನ ಘೋಷಣೆಯು ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವವು ಬಿಜೆಪಿ ಹಿಂದುತ್ವ ತತ್ವಕ್ಕೆ ಪ್ರತಿಯಾಗಿ ಎದ್ದು ನಿಂತದ್ದೂ ಕಾರಣವಾಗಿದೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಒಬಿಸಿ ವಿಭಾಗದವರಿದ್ದರು. ಕಾಂಗ್ರೆಸ್ ರಾಜ್ಯಗಳಲ್ಲಿ ಜಾತಿ ಜನಗಣತಿ ಮಾಡಿ ಒಬಿಸಿ ವಿಭಾಗಗಳಿಗೆ ಅರ್ಹ ಸರಕಾರಿ ಕೆಲಸ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ತರುತ್ತೇವೆ ಎಂದಿದ್ದಾರೆ. ಇದೂ ಜಾಟ್ ಮತದಾರರನ್ನು ರಾಜಸ್ತಾನದಲ್ಲಿ ಒಲಿಸಿಕೊಳ್ಳುವುದು ಖಚಿತವಾಗಿದೆ. ಬಿಜೆಪಿಯ ದುಸ್ಥಿತಿಗೆ ಇದೂ ಒಂದು ಕಾರಣವಾಗಬಹುದು.

ಇನ್ನು ಮಧ್ಯಪ್ರದೇಶದಲ್ಲಿ ಯಾವ ಕಾರಣಕ್ಕೂ ಶಿವರಾಜ ಸಿಂಗ್ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳಿಂದಲೂ ಗೊತ್ತಾಗುತ್ತದೆ. ಬಹುತೇಕ ಬಿಜೆಪಿಯವರು ಕಾಂಗ್ರೆಸ್ಸಿಗೆ ಬರುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಜ್ಯೋತಿರಾದಿತ್ಯ ಸಿಂಧಿಯಾರ ವಿರುದ್ಧ ಬಹಳ ಅಸಮಾಧಾನ ಬಿಜೆಪಿಯವರಲ್ಲಿದೆ. ಸಿಂಧಿಯಾ ಬೆಂಬಲಿಗರೇ ಕಾಂಗ್ರೆಸ್ ಮರು ಸೇರ್ಪಡೆಯಾಗುತ್ತಿದ್ದು ಇತ್ತ ಛತ್ತೀಸ್‌ಗಢದಲ್ಲಿ ಮತ್ತೊಮ್ಮೆ ಭೂಪೇಶ್ ಬಗೇಲ್ ಸರಕಾರ ರಚಿಸುವ ಸಾಧ್ಯತೆಯನ್ನು ಸಮೀಕ್ಷೆ ತಿಳಿಸುತ್ತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢದ ಆದಿವಾಸಿ ಪ್ರದೇಶದಲ್ಲಿ ಆದಿವಾಸಿ ಸಮುದಾಯ ಬಿಜೆಪಿಯನ್ನು ಈ ಸಲ ದೂರ ಇಡುವ ಸಾಧ್ಯತೆ ಗೊಚರಿಸುತ್ತಿದೆ. ಒಟ್ಟು ನಾಲ್ಕು ರಾಜ್ಯಗಳು ಕಾಂಗ್ರೆಸ್ ತೆಕ್ಕೆಗಾಗಬಹುದು.

ಪಾರ್ಲಿಮೆಂಟ್ ಚುನಾವಣೆಗೆ ಸೆಮಿಫೈನಲ್ ಎನ್ನಲಾಗುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗಯಾ ಎಂದಾದರೆ 2024ರ ಪಾರ್ಲಿಮೆಂಟ್ ಚುನಾವಣೆ ಗೆಲ್ಲುವುದು ಕಷ್ಟ.

ಇರಲಿ ವಿಷಯಕ್ಕೆ ಬರೋಣ:

ಹಮಾಸ್, ಇಸ್ರೇಲ್ ಘರ್ಷಣೆ ಮಾನವತೆಯ ದುರಂತದತ್ತ ಸಾಗುತ್ತಿದೆ ಎಂಬುದು ಸತ್ಯ. ಚುನಾವಣೆಯ ವೇಳೆ ಫೇಕ್ ನ್ಯೂಸ್‌ಗಳು  ಹಬ್ಬಿಸಲಾಗುವಂತೆ ಹಮಾಸ್-ಇಸ್ರೇಲ್ ಯುದ್ಧದ ಕುರಿತ ಸುಳ್ಳು ಸುದ್ದಿಗಳೂ ಬಿರುಸಿನಿಂದ ಹರಿದಾಡುತ್ತಿವೆ. ಅಮೆರಿಕದ ಅಧ್ಯಕ್ಷ ಬೈಡನ್‌ರೇ ಈ ಫೇಕ್ ನ್ಯೂಸ್ ವಾಹಕರಾದದ್ದು  ಒಂದು ವಿಚಿತ್ರ.

ಅಮೆರಿಕದ ಯಹೂದಿ ಸಮುದಾಯವನ್ನು ಉದ್ದೇಶಿಸಿ ಮಾತಾಡುವಾಗ ಟೆರರಿಸ್ಟ್ ಗಳು ಶಿಶುಗಳ ತಲೆ ಕತ್ತರಿಸುವ ದೃಶ್ಯವನ್ನು ನಾನು ನೋಡಬೇಕಾದೀತೆಂದು ಭಾವಿಸಿಲ್ಲ ಎಂದು ಹೇಳಿ ಬಿಟ್ಟಿದ್ದರು. ಅದನ್ನು ಎತ್ತಿಕೊಂಡು ಸಿಎನ್‌ಎನ್ ಮುಂತಾದ ವಿದೇಶಿ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿದವು. ಭಾರತದಲ್ಲಿಯೂ ಇದು ದೊಡ್ಡ ಸುದ್ದಿಯಾಗಿ ಟಿವಿ, ಪತ್ರಿಕೆಗಳಲ್ಲಿ ಬಂತು. ಬೈಡನ್ ಅಂದ ಬೆನ್ನಿಗೆ  ವೈಟ್ ಹೌಸ್ ಸ್ಪಷ್ಟನೆ ಕೊಟ್ಟು ಬೈಡನ್ ಅಂತಹ ಚಿತ್ರ-ದೃಶ್ಯಗಳನ್ನು ನೋಡಿಲ್ಲ ಎಂದು ಸ್ಪಷ್ಟೀಕರಣ ನೀಡಿತು. ತಮ್ಮ ಅಧ್ಯಕ್ಷರ ಮಾತನ್ನೇ  ಅಲ್ಲಗಳೆಯುವ ವೈಟ್ ಹೌಸ್‌ನ ಶಕ್ತಿಯನ್ನು ಪ್ರಶಂಸಿತಕ್ಕದ್ದೇ ಅನ್ನಬಹುದು.

ಇತ್ತೀಚೆಗೆ ಗಾಝದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ. 58 ಮಂದಿ ಹಮಾಸನ್ನು ಬೆಂಬಲಿಸಿದ್ದಾರೆ. ಈ ಮೂಲಕ ಫತಹ್ ಪಾರ್ಟಿಯನ್ನು  ತಿರಸ್ಕರಿಸಿದ್ದಾರೆ. ಹಮಾಸ್ ಗಾಝದಲ್ಲಿ ಜನ ಬೆಂಬಲ ಇರುವ ಒಂದು ಪಾರ್ಟಿಯಾಗಿದೆ. ಅಮೆರಿಕ ಹೇಳಿದ್ದನ್ನು ಕೇಳ್ಕೊಂಡು ತೆಪ್ಪಗಿರುವ  ಸ್ವಭಾವ ಅದಕ್ಕಿಲ್ಲ. ಅದಕ್ಕೆ ಅಜೆಂಡ ಇದೆ, ಅದರಂತೆ ಅದು ಕಾರ್ಯ ನಿರ್ವಹಿಸುತ್ತಿದೆ.

ಹೇಳಿ, ಇಲ್ಲಿ ಸತ್ಯ ಯಾವುದು? ಭೂಪಟದಲ್ಲಿಯೇ ಇಲ್ಲದ ಒಂದು ದೇಶ ಫೆಲಸ್ತೀನಿನಲ್ಲಿ 1948ರಲ್ಲಿ ಪಾಶ್ಚಾತ್ಯರ ಬಲವಂತದಲ್ಲಿ ಸ್ಥಾಪನೆ  ಯಾದದ್ದಾ? ಅಥವಾ ಆಗಾಗ ನಡೆಯುವ ಆಕ್ರಮಣಕ್ಕೆ ಪ್ರತಿರೋಧವಾಗಿ ಹುಟ್ಟಿಕೊಂಡ ಹಮಾಸ್ ಗತ್ಯಂತರವಿಲ್ಲದೆ ಶಸ್ತ್ರಾಸ್ತ್ರ ದಾಳಿಯನ್ನು ನೆಚ್ಚಿಕೊಂಡದ್ದಾ? ಪ್ರಧಾನಿ ಮೋದಿ ಹೇಳುವಂತೆ ಎಲ್ಲಿಯೇ ಆಗಿರಲಿ ಯಾವುದೇ ಕಾರಣಕ್ಕಾಗಿಯೇ ಆಗಿರಲಿ ಟೆರರಿಸಂ ಮನುಷ್ಯತ್ವ ವಿರುದ್ಧದ್ದು. 


ವಿವರಣೆ 

ಪತ್ರಕರ್ತ ಮೆಹಬೂಬ್ ಎಂ ಬಾರಿಗಡ್ಡಿ 

ರಬಕವಿ ಬನಹಟ್ಟಿ