Saturday, September 17, 2022

ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಶಾಲಾ ಆವರಣದಲ್ಲಿ ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*

*ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ* 

 ರಬಕವಿ-ಬನಹಟ್ಟಿ : 

 ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಆವರಣದಲ್ಲಿ ಪ್ರತಿಭಾ ಕಾರಂಜಿ ಬಹಳ ಅದ್ದೂರಿಯಾಗಿ ನಡೆಯಿತು .

ಈ ಪ್ರತಿಭಾಕಾರಂಜಿಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ , ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ ,ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ ,  ಇವರ ಜಂಟಿ  ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಅವರಣದಲ್ಲಿ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮವು ಬಹಳ  ಅದ್ದೂರಿಯಾಗಿ ಜರುಗಿತು .

ಪ್ರತಿಭಾಕಾರಂಜಿಯ ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ  ಉದ್ಘಾಟನೆಯಾಯಿತು .

ಈ ಪ್ರತಿಭಾಕಾರಂಜಿಯ ಕಾರ್ಯಕ್ರಮದಲ್ಲಿ ತೇರದಾಳ ,ಹನಗಂಡಿ ,ರಬಕವಿ ಬನಹಟ್ಟಿ ,ಹಿಪ್ಪರಗಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು . 

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಹಾಸ್ಯ ಚುಟುಕು  ,ಕ್ವಿಸ್ ಕಾಂಪಿಟೇಶನ್ , ಕವಾಲಿ ,ರಂಗೋಲಿ ಸ್ಪರ್ಧೆ ಕಲಾಕೃತಿ ಮಣ್ಣಿನಿಂದ ಮಾಡಿದ ವಸ್ತುಗಳು , ಇವೆಲ್ಲವೂ ಪ್ರತಿಭಾ ಕಾರಂಜಿಯ ವೇದಿಕೆಯ  ಮೂಲಕ ,ತಮ್ಮ ಪ್ರತಿಭೆಯನ್ನು ತೋರಿಸಿದರು .

ಈ ಪ್ರತಿಭಾಕಾರಂಜಿಯ ವಲಯ ಮಟ್ಟ ಅಷ್ಟೇ ಆಗಿತ್ತು, ಆದರೆ ಇದು ಜಿಲ್ಲಾಮಟ್ಟದ ಅನ್ನುವಂಥ ರೀತಿಯಲ್ಲಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು .

ಈ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಶಾಲಾ ಎಸ್ಡಿಎಂಸಿ ಅಧ್ಯಕ್ಷ  ಯುಸೂಪ  ಮಹಾಲಿಂಗಪೂರ ,ಶಾಲಾ ಮುಖ್ಯಗುರುಗಳು ಇಂಡಿಕರ್ ಸರ್ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜು ತೆಗ್ಗಿ , ಕೆ ಎ ಎಸ್ ಆಫೀಸರ್ ಎಂ ಎಸ್ ಮುಲ್ಲಾ ಸರ್ , ಕೃಷ್ಣ ಮೇಲ್ದಂಡೆ ಯೋಜನೆ ಯೋಜನೆಯ ಭೂಸ್ವಾಧೀನ ಅಧಿಕಾರಿ ಅಬಿದ್ ಗದ್ಯಾಳ , ಮುರಾದ್ ಮೋಮಿನ್ , ದರಪ್ಪ ಉಳಾಗಡ್ಡಿ ,ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್  ಜಮಾದಾರ್ ಮಾಜಿ  ಅಂಜುಮನ್ ಸಂಸ್ಥೆಯ ಅಧ್ಯಕ್ಷ  ಹಾರುನರಸಿದ ಸಾಂಗ್ಲಿಕರ , ಶೌಕತ್ ಅತ್ತಾರ್ , ಡಾಕ್ಟರ್ ಅಕ್ಬರ್ ತಾಂಬೋಳಿ ,ಬಂದೇನವಾಜ್ ಡಾಂಗೆ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಕ್ಷೇತ್ರಶಿಕ್ಷಣಾಧಿಕಾರಿ ಸಿ ಎಂ ನ್ಯಾಮಗೌಡ , ಸಮನ್ವಯಾಧಿಕಾರಿ ವಿಜಯ್ ಕುಮಾರ್ ವಂದಾಲ , ನರ ಬನಹಟ್ಟಿ ನಗರ ಘಟಕದ ಕಾಂಗ್ರೆಸ್ ಮುಖಂಡ ರಾಜೇಂದ್ರ ಭದ್ರನ್ನವರ್ ರಾಹುಲ್ ಕಲಾಲ್ ,ಬಸವರಾಜ್ ಹನಗಂಡಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಮಲಿಕ್  ಜಾಕೀರ್ ಬಾರಿಗಡ್ಡಿ ,ಇಸಿಓ ಎಸ್ ಬಿ ಬುರ್ಲಿ ಹಾಗೂ ಬಿ ಎಂ ಹಳೆಮನಿ ,ಉರ್ದು ಸಿಆರ್ಪಿ 
A I ಬಾಗೇವಾಡಿ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು

Friday, September 16, 2022

ಬನಹಟ್ಟಿ ನಗರದಲ್ಲಿ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ n.g.o. ಉದ್ಘಾಟನೆ :



ರಬಕವಿ-ಬನಹಟ್ಟಿ 
ವರದಿ ಮಹಿಬೂಬ್  ಬಾರಿಗಡ್ಡಿ 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್  ಜಮಾದಾರ್ ಉದ್ಘಾಟನೆ ಮಾಡಿದರು .

ಬಳಿಕ ಮಾತನಾಡಿದ ಬುಡನ್ ಜಮಾದಾರ್ n.g.o. ಸಂಸ್ಥೆಯ ಮುಖಾಂತರ ಸಾಮಾಜಿಕ ಕೆಲಸ ಮಾಡಬೇಕಾದರೆ ಯಾವುದೇ ಜಾತಿ ಭೇದ ನೋಡದೆ, ಎಲ್ಲರಿಗೂ ಸಮಾನರಾಗಿ ತಿಳಿದು ಸಾಮಾಜಿಕ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು 

ಈ ಸಂದರ್ಭದಲ್ಲಿ ಮಾತನಾಡಿದ ನಗರದ ಅಂಜುಮನ್ ಸಂಸ್ಥೆಯ   ಮಾಜಿ ಅಧ್ಯಕ್ಷ ಸಾಂಗ್ಲಿಕರ್ , ನಗರಗಳಲ್ಲಿ N G O ಸಂಸ್ಥೆಗಳು ಬಹಳಷ್ಟು ಇವೆ .ಆದರೆ ಸೇವೆಗಳ ಹಾಗೂ ಕಾರ್ಯರೂಪದಲ್ಲಿ ಇಲ್ಲ , ಕಾಗದ ರೂಪದಲ್ಲಿ ಮಾತ್ರ ಇವೆ . ಆದ್ದರಿಂದ ನೀವು ಕೂಡ ಕಾಗದ ರೂಪದಲ್ಲಿರದೆ, ಬಡಜನರ ಸೇವೆಗಳ ರೂಪದಲ್ಲಿ ಇರಬೇಕು ಎಂದು ಹೇಳಿದರು .

ಈ ಸಂದರ್ಭದಲ್ಲಿ ಫಯಾಜ್ ಅಹ್ಮದ್ ಕೊಯಿಮುತ್ತೂರು  ರವರು ಮಾತನಾಡಿ ,ಈ ಸಂಸ್ಥೆಯು ಜನಪರ ಹಾಗೂ ಬಡಜನರ ಕಾಗಿ  ಸಾಮಾಜಿಕ ಕೆಲಸಗಳಿಗೆ   ನಾವು ನಿಮಗೆ ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಹೇಳಿದರು .

ಬಳಿಕ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಮೊಹಮ್ಮದ್ ನಸಿಂ ಮೊಕಾಶಿ,  ಸಂಸ್ಥೆಯವರು ಸಾಮಾಜಿಕ ಸೇವೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು .

ಈ ಉದ್ಘಾಟನಾ ಕಾರ್ಯಕ್ರಮವನ್ನು ಯುವ ಮುಖಂಡ ಹುಜೈಫಾ ಮುಲ್ಲಾ ನಿರೂಪಿಸಿದರು.
 ಈ ಸಂದರ್ಭದಲ್ಲಿ ಫಯಾಜ್ ಅಹ್ಮದ್ ಕೊಯಿಮತ್ತೂರ್ ಜಾಫರ್ ಮನಿಬಂಧ್ ,ಫಿರೋಜ್ ಜಕಾತಿ ಸಲಿಮ ಬಾರಿಗಡ್ಡಿ ,ಇರ್ಷಾದ್ ಮೋಮಿನ್ ,ಸಾದಿಕ ಜಕಾತಿ , ಸಲೀಮ್ ಜಕಾತಿ , ಅಜರ್ ಮೋಮಿನ್ ,ಶಾನೂರ್ ಮಾಲ್ದಾರ್  ,ಹಾಗೂ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು .

Friday, September 9, 2022

ತೇರದಾಳ ಮತ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿರುವ ಆಮ್ ಆದ್ಮಿ ಮುಖಂಡ ಅರ್ಜುನ್ ಹಲಗಿ ಗೌಡರ್

ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ್ .

ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ನಡೆಸುವಲ್ಲಿ ಸಂಪೂರ್ಣವಾಗಿ ಸಫಲವಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ , ಹೌದು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನಪರ ವಾದಂತಹ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ ಇದೇತರಹದ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರದಲ್ಲಿ  ಬಂದ ನಂತರ ಕೊಡಬೇಕೆನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು ಬರುವ ವಿಧಾನಸಭೆ ಚುನಾವಣೆ 2023ರ ಭರ್ಜರಿ ತಯಾರಾಗಿದೆ ಅನ್ನುವುದರಲ್ಲಿ  ಎರಡು ಮಾತಿಲ್ಲ ,

ಅದೇ ನಿಟ್ಟಿನಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರವರು ಮತಕ್ಷೇತ್ರ ದ್ಯಂತ ಭರ್ಜರಿ ಪ್ರಚಾರ ಮಾಡಿರುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವಲಯದಲ್ಲಿ ಆತಂಕ ಎದುರಾಗಿದೆ ಅನ್ನುವುದರಲ್ಲಿ ಯಾವುದೇ ಸಂಶಯವೇ ಇಲ್ಲ ,

ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಯಾದ ಅರ್ಜುನ ಹಲಗಿ ಗೌಡ ಹಿಂದೆ ಪೊಲೀಸ್ ಇಲಾಖೆಯಲ್ಲಿ 19 ವರ್ಷ 19 ದಿವಸ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ . ಅವರು ಸಾಮಾಜಿಕವಾಗಿ ಸೇವೆಯನ್ನು ಮಾಡುವುದು ಗೋಸ್ಕರ ರಾಜಕೀಯಕ್ಕೆ ಎಂಟ್ರಿ ಕೊಡಲಿಕ್ಕೆ, ಪೋಲಿಸ್ ಇಲಾಖೆಯಲ್ಲಿ ಸ್ವಯಂ ನಿವೃತ್ತಿ ಘೋಷಿಸಿಕೊಂಡು , ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ .ಅವರು ರಾಜಕೀಯ ಕ್ಷೇತ್ರಕ್ಕೆ ಬರಲು ಮುಖ್ಯ ಉದ್ದೇಶ ಭ್ರಷ್ಟಾಚಾರ ತೊಡೆದು ಹಾಕಲಿಕ್ಕೆ , ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳ ಇದ್ದರೂ ಕೂಡ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಬ್ರಷ್ಟಾಚಾರದ ವಿರುದ್ಧ ಹೋರಾಡುತ್ತ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ತನ್ನದೇ ಆದಂತಹ ಸರ್ಕಾರ ರಚನೆ ಮಾಡಿ ಜನಪರವಾದ ಅಂತಹ ಕಾರ್ಯಕ್ರಮಗಳನ್ನು ಕೊಟ್ಟಿರುವಂತಹ ಸೇವೆಯನ್ನು ಮೆಚ್ಚಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ .

ತೇರದಾಳ ಮತ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಅರ್ಜುನ್ ಹಲಗಿ ಗೌಡರು ಭರ್ಜರಿ ಪ್ರಚಾರ ಕಾರ್ಯಕ್ರಮ ಮಾಡುತ್ತಿದ್ದಾರೆ .ಪ್ರಚಾರ ಮಾಡುವುದರ ಜೊತೆಗೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ವಂಚಿತರಾಗಿದ್ದದವರನ್ನು ಬೇಟಿ   ಮಾಡುವುದರ ಮೂಲಕ ,ಹಾಗೂ ಸಾರ್ವಜನಿಕ ಕುಂದುಕೊರತೆಗಳನ್ನು ಅಲಿಸುವುದರ ಮೂಲಕ, ಪ್ರತಿಯೊಂದು ಶಾಲೆಗಳಿಗೆ ಭೇಟಿ ಮಾಡಿ ,ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳ ಬಗ್ಗೆ ಮಾತನಾಡುವುದರ ಮೂಲಕ , ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಬೆಟ್ಟಿ ಮಾಡುವುದರ ಮೂಲಕ , ಸಾರ್ವಜನಿಕರ ಸಲುವಾಗಿ ಮುಖ್ಯ ವೈದ್ಯಾಧಿಕಾರಿಗಳನ್ನು ಬೆಟ್ಟಿ ಮಾಡುವುದರ ಮೂಲಕ ,ಭರ್ಜರಿಯಾಗಿ ಮತಕ್ಷೇತ್ರದ ಅಂತ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ . ಮತಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷವೂ ಇಷ್ಟೊಂದು ಪ್ರಚಾರ ಮಾಡುತ್ತಿರುವುದನ್ನು  ಕಾಣಸಿಗುವುದಿಲ್ಲ .

ಅರ್ಜುನ್ ಹಲಗಿ ಗೌಡರ ಮೂಲತಹ ಮಹಾಲಿಂಗಪುರ್  ಹತ್ತಿರ ಮದಬಾವಿ ಎನ್ನುವಂತ  ಹಳ್ಳಿಯಲ್ಲಿ ಜನನ  , ಒಂದನೇ ತರಗತಿಯಿಂದ ಪ್ರೈಮರಿ ಶಿಕ್ಷಣ ಮದಬಾವಿ ಹಳ್ಳಿಯಲ್ಲಿ , ಕಾಲೇಜ್ ಶಿಕ್ಷಣ ಮಹಾಲಿಂಗಪುರ ದಲ್ಲಿ  ಮುಗಿಸಿಕೊಂಡು ,2002ರಲ್ಲಿ M A ಕನ್ನಡ ವಿಷಯದ ,  ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿಕೊಂಡು  . ಎರಡು ಸಲ IAS ಪರೀಕ್ಷೆ ಬರೆದಿರುತ್ತಾರೆ  .ಎಂಟು ಸಲ PSI ಪರೀಕ್ಷೆ  ಬರೆದಿರುತ್ತಾರೆ  .

ಇವರ ಮುಖ್ಯ ಕಸುಬು ಕೃಷಿ ವ್ಯವಸಾಯ ವಾಗಿದೆ .ಇವರ ರಾಜಕೀಯ ನಡತೆಯನ್ನು ನೋಡಿದರೆ ಹಳೆಯ ರಾಜಕೀಯ  ನಂಟು ಇರುವುದೇನು ಅನಿಸುತ್ತದೆ ಆದರೆ ಅವರು ರಾಜಕೀಯಕ್ಕೆ ಹೊಸಬರು ,  ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಉದ್ದಿಮೆ ಕ್ಷೇತ್ರದಲ್ಲಿ ಕೂಡ ತೊಡಗಿಕೊಂಡಿರುತ್ತಾರೆ ಇವರ ಹೆಸರಿನಲ್ಲಿ ಹಲವು ಉದ್ದಿಮೆಗಳಿವೆ ,ಹಲಗಿ ಗೌಡರ್  ಪೆಟ್ರೋಲಿಯಂ , ಹಲಗಿ ಗೌಡರ ಮೆಡಿಕಲ್ಸ್ ,ಹಲಗಿ ಗೌಡರ್ ದೆವಲಪರ್ಸ್ ,ಹಲಗಿ ಗೌಡರ್   ಸಿಮೆಂಟ್ ಏಜೆನ್ಸಿ  . ಅಷ್ಟೇ ಅಲ್ಲದೆ ರಾಜಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಕ್ರಾಂತಿಯನ್ನು ಮಾಡಿದ್ದಾರೆ . ಅವರದೇ ಆದಂತಹ ಶಾಂತಿನಿಕೇತನ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಮದಬಾವಿ . ಕ ಇಂಗ್ಲಿಷ್ ಮೀಡಿಯಂನಲ್ಲಿ ಕೇವಲ 4500 ರೂಪಾಯಿಗಳನ್ನು ತೆಗೆದುಕೊಂಡು ,ಮಕ್ಕಳಿಗೆ ಯೂನಿಫಾರ್ಮ್ ,ಬುಕ್ಸ್ ಹಾಗೂ ಜೊತೆಗೆ ಬ್ಯಾಗನ್ನು ಕೊಡುತ್ತಿದ್ದಾರೆ .

ಈಗಿನ ಕಾಲದಲ್ಲಿ ಲಕ್ಷ ಲಕ್ಷ ಡೊನೇಷನ್ ಹಾವಳಿಯನ್ನು ನೋಡಿದರೆ ,ಇಷ್ಟೊಂದು ಕಡಿಮೆ  ಖರ್ಚಿನಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಮಕ್ಕಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನವಾಗಿದೆ .



ತೇರದಾಳ ಮತ ಕ್ಷೇತ್ರದ ಪ್ರತಿಯೊಂದು ಹಳ್ಳಿ ಪ್ರತಿಯೊಂದು ಪಟ್ಟಣ ಪ್ರತಿಯೊಂದು ನಗರ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ,ಅವರ ಜೊತೆ ವಿನಯದಿಂದ ಮಾತನಾಡುವುದನ್ನು ನೋಡಿದರೆ ಬರುವ ವಿಧಾನಸಭೆ 2023ರ ಭಾವಿ ಶಾಸಕರಾಗಿ ಆಯ್ಕೆ ಯಾಕಾಗಬಾರದು  ಅನ್ನುವಂತ ಪ್ರಶ್ನೆ ಉದ್ಭವವಾಗುತ್ತದೆ .ಇವರು ಪೊಲೀಸ್ ಇಲಾಖೆಯಲ್ಲಿ 19 ವರ್ಷಗಳ ಅಪಾರ ಸೇವೆ ಸಲ್ಲಿಸಿದರು ಕೂಡ ಇವರ ಮಾತುಗಳಲ್ಲಿ ಅಷ್ಟೊಂದು ಒರಟಾಗಿ ಮಾತುಗಳನ್ನು ಕಂಡುಬರುವುದಿಲ್ಲ .ಇವರು ಮಾತುಗಳಲ್ಲಿ ಪ್ರೀತಿ ವಿನಯ ಸ್ನೇಹದಿಂದ ಎಲ್ಲರನ್ನು ನಮ್ರತೆಯಿಂದ ಕಾಣುವ ವ್ಯಕ್ತಿಯೇ ಅರ್ಜುನ್ ಹಲಗಿ ಗೌಡರ್ ,

ಯೋಗ್ಯ ರೆಲ್ಲರೂ ರಾಜಕೀಯದಿಂದ ದೂರ ಉಳಿದರೆ ,ಅಯೋಗ್ಯರು ನಮ್ಮನ್ನು ಆಳುತ್ತಾರೆ . ಅನ್ನುವಂತಹ ಮಾತು ,ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರರವರು ಹೇಳಿದ್ದರು ಈ ಮಾತಿಗೆ ಪ್ರೇರಣೆಯಾಗಿ  ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ ಅನಿಸುತ್ತದೆ  .

ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲಗಿಗೌಡರ್ , ನಾನು ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾದರೆ ತಿಂಗಳಿಗೆ ಬರುವ ಶಾಸಕರ ವೇತನ ಎರಡು ಲಕ್ಷ ರೂಪಾಯಿಗಳನ್ನು ಬಡ ಮಕ್ಕಳ ಶಿಕ್ಷಣ ಸಲುವಾಗಿ ಮೀಸಲಿಡುತ್ತೇನೆ  ಎಂದು ಹೇಳುತ್ತಾರೆ .



ಲೇಖನ : 
ಮಹಿಬೂಬ್  ಬಾರಿಗಡ್ಡಿ  ಸಂಪಾದಕರು ಕಲಾಮ್ ಎಕ್ಸ್ ಪ್ರೆಸ್  ನ್ಯೂಸ್ ,

ಹಾಗೂ ಟಿವಿ ಸಿಕ್ಸ್ ವರದಿಗಾರರು ತೇರದಾಳ ಮತಕ್ಷೇತ್ರ

Thursday, September 8, 2022

ಜಮೀಯತುಲ್ ಉಲೇಮಾ ಹಿಂದ್ ವತಿಯಿಂದ ಜಮಿಯತ್ ಯೂತ್ ಕ್ಲಬ್ ನಿರ್ಮಾಣ ಕುರಿತು ವಿಚಾರ ಸಂಕಿರಣ*



ರಬಕವಿ ಬನಹಟ್ಟಿ ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಬಾರ್ಬೆಟ್ ಮೊಹಲ್ಲಾದ ಜಮೀಯತುಲ್ ಉಲೇಮಾ ಹಿಂದ  ರಬಕವಿ ಬನಹಟ್ಟಿ  ಇವರ ಆಶ್ರಯದಲ್ಲಿ ,ಜಮೀಯತ್ ಯೂತ್ ಕ್ಲಬ್ ರಚನೆ ಕುರಿತು ವಿಚಾರ ಸಂಕಿರಣ ನಡೆಯಿತು .

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀಯತ್ ಉಲೇಮಾ ಇಂದ ರಾಜ್ಯಾಧ್ಯಕ್ಷ ಮೌಲನ ಹುಸೇನ್ ಸಾಬ್ ಮದನಿ ಮಜಾಹರಿ ಕಾಸ್ಮಿ ,ಜಮೀಯತ್  ಉಲೇಮಾ ಹಿಂದ್  ಸಂಘಟನೆಯೂ 1919 ರಲ್ಲಿ ಸ್ಥಾಪನೆಯಾಯಿತು .ಈ ದೇಶವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ . ದೇಶಕ್ಕಾಗಿ ಸಾವಿರಾರು ಮೌಲ್ವಿಗಳು ಆಫೀಜ ಗಳು ಉಲೇಮಾಗಳು ಈ ದೇಶವನ್ನು ಸ್ವತಂತ್ರವಾಗಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು .

ಬಳಿಕ  , ಮಾತನಾಡಿದ ಹಿದಾಯತುಲ್ಲಾ ಸಿದ್ಧಿಕಿ ಯೂತ್ ಕ್ಲಬ್ ಜಿಲ್ಲಾ ತರಬೇತುದಾರ ನ್ಯೂ ದಿಲ್ಲಿ , ಇವರು ಜಮೀಯತ್ ಯೂತ್ ಕ್ಲಬ್  ಬಗ್ಗೆ ಸಂಪೂರ್ಣ ವಿವರಣೆ ನೀಡಿದರು .

ಹಾಗೂ ಭಾರತ ಸ್ಕೌಟ್ ಗೈಡ್ ಹಾಗೂ ಜಮೀಯತ್  ಯೂತ್ ಕ್ಲಬ್ ವಿಲೀನವಾಗಿ ,ಜಂಟಿಯಾಗಿ ಎರಡು 216 ದೇಶಗಳಲ್ಲಿ  ಕಾರ್ಯನಿರ್ವಹಿಸುತ್ತಿದೆ . ಈ ಜಮೀಯತ್ ಯೂತ್ ಕ್ಲಬ್  ಮಕ್ಕಳನ್ನು ತರಬೇತಿಯನ್ನು ಕೊಡುತ್ತೇವೆ . ಮಕ್ಕಳು ದೇಶಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಲಿ ಅಂತ ಜಮೀಯತ್ ಯೂತ್ ಕ್ಲಬ್  ಉದ್ದೇಶವಾಗಿದೆ ಎಂದು ನ್ಯೂ ದೆಹಲಿಯ ಸಲೀಂ ತ್ಯಾಗಿ ಮುಖ್ಯ ತರಬೇತುದಾರ ಹೇಳಿದರು .

ಈ ಸಂದರ್ಭದಲ್ಲಿ ಬಾಗಲ್ಕೋಟ್ ಜಮೀಯತ್ ಉಲೇಮಾ ಹಿಂದ್ ಬಾಗಲ್ಕೋಟ್  ಜಿಲ್ಲಾ ಅಧ್ಯಕ್ಷ , ಮೌಲಾನಾ ಯುನೋಸ್ ಜಮಖಂಡಿ , ಬಾಗಲ್ಕೋಟ್ ಜಿಲ್ಲಾ ಜನರಲ್ ಸೆಕ್ರೆಟರಿ ಮೌಲಾನ ಮೋಹಸಿನ್ , ಜಿಲ್ಲಾ ಜಮೀಯತ್  ಉಪಾಧ್ಯಕ್ಷ ಮೌಲಾನಾ ಮುಜಮ್ಮಿಲ್ ,ಜಮೀಯತ್ಉಲೇಮಾ ಹಿಂದ್   ಜಮಖಂಡಿಯ ಅಧ್ಯಕ್ಷ ಮೌಲಾನಾ ಮಂಜೂರ,ಜಮೀಯತ್ ಉಲೇಮಾ ಹಿಂದ್ ಮುಧೋಳ ಅಧ್ಯಕ್ಷ ಮೌಲಾನಾ ಹುಸೇನ್ ,ರಬಕವಿ ಬನಹಟ್ಟಿ ಜಮೀಯತ್ ಜನರಲ್ ಸೆಕ್ರೆಟರಿ ಆಫೀಜ  ಅಕ್ಬರ್ . ಜಮೀಯತ್ ರಬಕವಿ ಬನಹಟ್ಟಿ ತಾಲೂಕ ಉಪಾಧ್ಯಕ್ಷ ಆಫೀಜ  ರಿಯಾಜ್ ,ಮೌಲಾನಾ ಇಲಿಯಾಸ್ ,ಮೌಲಾನಾ ಅಸ್ಲಾಂ ,ಮೌಲಾನಾ ಆಸೀಫ್, ಆಫೀಜ ಸುಲೆಮಾನ , ಹಾಗೂ ಇನ್ನೂ ಅನೇಕ ಮೌಲ್ವಿಗಳು ಆಫೀಜಗಳು ಉಪಸ್ಥಿತರಿದ್ದರು .

Sunday, August 28, 2022

ನಗರಗಳಲ್ಲಿ ಗಣೇಶ ಪ್ರತಿಷ್ಠಾನ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ವಾಗಿ ಶಾಂತಿಪಾಲನಾ ಸಭೆ

 
ವರದಿ ಮಹಿಬೂಬ್ ಬಾರಿಗಡ್ಡಿ 

ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ಮಹಾಲಿಂಗಪುರ್ ಹಾಗೂ ತೇರದಾಳ ನಗರಗಳಲ್ಲಿ ಗಣೇಶ್ ಪ್ರತಿಷ್ಠಾಪನೆ ಹಾಗೂ ಅವುಗಳ ವಿಸರ್ಜನೆ ಮಾಡುವುದು ಕುರಿತು ,ಬನಹಟ್ಟಿ ನಗರ ಪೊಲೀಸ್ ಠಾಣೆಯಲ್ಲಿ ಸರ್ವಧರ್ಮ ಶಾಂತಿಪಾಲನಾ ಸಭೆ ನಡೆಯಿತು .

ಈ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ್ ಗುಡಿಮನಿ ,ಸರ್ಕಾರದ ಸುತ್ತೋಲೆಯಂತೆ ಗರಿಷ್ಠ ಐದು ಅಡಿ ಎತ್ತರದ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಇದಕ್ಕಿಂತ ಹೆಚ್ಚು ಅಡಿ ಪ್ರತಿಷ್ಠಾಪನೆ ಮಾಡುವುದು ಸರ್ಕಾರ ನಿರ್ಬಂಧನೆ ಮಾಡಲಾಗಿದೆ ಹಾಗೂ ಮಣ್ಣಿನ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಪ್ಲಾಸ್ಟರ್ ನಲ್ಲಿ ಮಾಡಿದಂತ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದರು .

ಕಂದಾಯ  ಇಲಾಖೆ ,ಪೊಲೀಸ್ ಇಲಾಖೆ ,ವಿದ್ಯುತ್ ಇಲಾಖೆ, ನಗರಸಭೆ ಇಲಾಖೆ , ಫೈಯರ್ ಗ್ರೇಡ್ ಇಲಾಖೆ  , 5 ಇಲಾಖೆ ಅಧಿಕಾರಿಗಳ ತಂಡ ಏಕಗವಾಕ್ಷಿ ಪದ್ಧತಿ ರೂಪದಲ್ಲಿ ಅತಿ ಶೀಘ್ರವಾಗಿ ಪ್ರತಿಷ್ಠಾಪನೆಯ ಪರವಾನಿಗೆಯನ್ನು ಕೊಡತಕ್ಕಂಥ ವ್ಯವಸ್ಥೆಯನ್ನು ಸರ್ಕಾರದ ಆದೇಶದಂತೆ ನಾವು ಈಗಾಗಲೇ ಚಾಲನೆ ಮಾಡಿದ್ದೇವೆ ಎಂದು ಹೇಳಿದರು  .

ಈ ಶಾಂತಿಪಾಲನೆ ಸಭೆಯಲ್ಲಿಮಾತನಾಡಿದ ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ವೀರೇಶ್ ಮಠಪತಿ ,ವಿಸರ್ಜನೆ ಸಲುವಾಗಿ ಕೊಟ್ಟಿರುವಂತಹ ಮಾರ್ಗದಲ್ಲಿ ಯಾವುದೇ ಕೂಡ ವ್ಯತ್ಯಾಸ ಆಗಬಾರದು ,ಎಲ್ಲ ಗಣೇಶ ಪ್ರತಿಷ್ಠಾಪನ ಮಂಡಳಿಗಳು ಆದೇಶ ಪಾಲನೆ ಮಾಡಬೇಕು. ರಾತ್ರಿ 12 ಗಂಟೆಯವರೆಗೆ ವಿಸರ್ಜನೆ ಮಾಡಲಿಕ್ಕೆ ಸಮಯ ಕೊಡಬೇಕು ,ಎಂದು ಕೇಳಿದ ಗಣೇಶ ಪ್ರತಿಷ್ಠಾಪನ ಮಂಡಳಿಗಳಿಗೆ ಉತ್ತರಿಸಿದ ,ಗಣೇಶ ವಿಸರ್ಜನೆಯ ಮೆರವಣಿಗೆಯ  ಸಂದರ್ಭದಲ್ಲಿ ಮಾಡಿರುವಂತಹ ಅಲಂಕಾರಗಳನ್ನು  ನೋಡಲಿಕ್ಕೆ  ಸಾರ್ವಜನಿಕರಿಗೆ , ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಹಾಗೂ ಮಕ್ಕಳಿಗೆ ನೋಡುವಂತ ವ್ಯವಸ್ಥೆ ಆಗಬೇಕು , ಆದರೆ ವಿಸರ್ಜನೆ ಹೆಚ್ಚು ಸಮಯ ತೆಗೆದುಕೊಂಡರೆ ,ಆಯಾ ಪ್ರತಿಷ್ಠಾಪನ ಮಂಡಳಿಗಳೇ , 100 , 150 ಜನ ಕೇವಲ ತೆಗೆದುಕೊಂಡು ಹೋಗಬೇಕಾಗುತ್ತದೆ ,ಎಂದು ಉತ್ತರಿಸಿದರು .

ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ನಗರಸಭೆ ಅಧ್ಯಕ್ಷ ಸಂಜು ತೆಗ್ಗಿ ರಬಕವಿ-ಬನಹಟ್ಟಿ ನಗರದ ಗಣೇಶ ಮಿತ್ರ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಊರಿನ ಹಿರಿಯರು ಹಾಗೂ ಮುಸ್ಲಿಂ ಸಮಾಜದ ಅಕ್ಬರ್ ತಾಂಬೋಳಿ ,ಅಂಜುಮನ್ ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ಮಹಿಬೂಬ್ ತಾಂಬೋಳಿ ಇನ್ನೂ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು .

Saturday, August 27, 2022

ದಲಿತರು ಮತ್ತು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಖಂಡಿಸಿ , ಬೃಹತ್ ಪ್ರತಿಭಟನೆ*


KALAAM EXPRESS NEWS
ವರದಿ ಮಹಿಬೂಬ್ ಬಾರಿಗಡ್ಡಿ  

ದೇಶದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ಖಂಡಿಸಿ,  ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದಲ್ಲಿ ರ್ಯಾಲಿ ಮೂಲಕ ಭಾರಿ ಪ್ರತಿಭಟನೆ ಮಾಡಿದರು .

ಈ ಪ್ರತಿಭಟನೆಯ ರ್ಯಾಲಿಯು ನಗರದ ,, ಬಸ್ ನಿಲ್ದಾಣದ ಹತ್ತಿರ ಗಣಪತಿ ದೇವಾಲಯದಿಂದ   ಚಾಲನೆಗೊಂಡು ,ನಗರದ  ಕಿತ್ತೂರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಗಾಂಧಿ ಸರ್ಕಲ್ ಪುರಸಭೆವರೆಗೆ ಘೋಷಣೆಗಳ ಮೂಲಕ  ಭಾರಿ  ಪ್ರತಿಭಟನೆ ನಡೆಸಿ ,ನಂತರ  ಪುರಸಭೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿದರು   .

ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಲ್ಪಸಂಖ್ಯಾತರ ಮುಖಂಡ ಜಾವೇದ್ ಭಾಗವಾನ್ ಮಾತನಾಡಿದರು .

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಮನಪ್ಪ ಗುಣದಾಳ ನಗರದ ಅಲ್ಪಸಂಖ್ಯಾತರ ಮುಖಂಡರಾದ ಜಾವೇದ್ ಭಗವಾನ್ ಪರಶುರಾಮ್ ಮೇತ್ರಿ , ಮುಬಾರಕ್ ಅಲ್ಲಾಖಾನ್ ,ಸಿಂಹ ಮೇತ್ರಿ  ,ಭೀಮ್ ಆರ್ಮಿಯ ಮುಖಂಡರು ಲವಿತ್ ಮೇತ್ರಿ ಸಂಜು ಕಂಬಾಗಿ ,ಡಿಎಸ್ಎಸ್ ಹರಿಜನ್ ಮುಖಂಡರಾದ ಸುನಿಲ್ ಹರಿಜನ್ ,ಅರ್ಜುನ್ ದೊಡ್ಮನಿ ,  ಭೀಮ್ಸಿ ಮಾವಿನ ಹಿಂದಿ ಬಸು ಮಾವಿನಹಿಂದಿ ,ಸಿರಾಜುದ್ದೀನ್ ಮುಜಾವರ ,ಯಾಸೀನ್  ಬಳಗಾರ ,   ಯುನುಸ್ ಬೀಳಗಿ   ,    ಇನ್ನೂ ಹಲವಾರು ಮುಖಂಡರು ಭಾಗಿಯಾಗಿದ್ದರು  .

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದ ನೂತನವಾಗಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿದ ಶಾಸಕ ಸನ್ಮಾನ್ಯ ಸಿದ್ದು ಸೌದಿ*



 
ವರದಿ  ಮಹಿಬೂಬ್  ಬಾರಿಗಡ್ಡಿ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ರಬಕವಿ-ಬನಹಟ್ಟಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ , ,ಕ್ಯಾಟರ್ ಪಿಲ್ಲರ  ಫೌಂಡೇಶನ್ ಬೆಂಗಳೂರು ,ಮತ್ತು  ಯುನೈಟೆಡ್ ವೇ   ಬೆಂಗಳೂರು , ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರಬಕವಿ-ಬನಹಟ್ಟಿ, ಸಮುದಾಯ ಆರೋಗ್ಯ ಕೇಂದ್ರ ರಬಕವಿ ಬನಹಟ್ಟಿ ಇವರ ಸಹಯೋಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು .

 ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ತೇರದಾಳ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಸಿದ್ದು ಸವದಿ ಉದ್ಘಾಟನೆ ಮಾಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಸಿದ್ದು ಸವದಿ ಕಳೆದ ಕೋವಿಡ್-19 ಲ್ಲಿ ಸಾಕಷ್ಟು ಜನರಿಗೆ ಆಕ್ಸಿಜನ ಇಲ್ಲದೆ ಇರುವುದರಿಂದ ಸಾಕಷ್ಟು ಜನರ ಜೀವ ಕಳೆದುಕೊಂಡರು .ಒಂದು ಆಮ್ಲಜನಕದ ಟ್ಯಾಂಕರ್ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ಹಂಚು ಹರಿದು ಹೋಗುವಷ್ಟರಲ್ಲಿ ಸಾಕಷ್ಟು ಜನರು  ಆಮ್ಲಜನಕದ ತೊಂದರೆಗೆ  ಈಡಾಗುತ್ತಿದ್ದರು .ಈಗ ಬಾಗಲಕೋಟ್ ಜಿಲ್ಲೆಯ  ರಬಕವಿ ಬನಹಟ್ಟಿ ಯಲ್ಲಿ  ಆಮ್ಲಜನಕವನ್ನೇ ಅಂದ್ರೆ ಆಕ್ಸಿಜನ್ ನೆ  ಉತ್ಪಾದನೆ ಮಾಡುವಂತಹ ಘಟಕ ನಿರ್ಮಾಣವಾಗಿವೆ . ಆಮ್ಲಜನಕದ ಘಟಕಗಳು ನಿರ್ಮಾಣ ಮಾಡುವಲ್ಲಿ ಕ್ಯಾಟರ್ ಪಿಲ್ಲರ್ ಹಾಗೂ ಅಸಿಸ್ಟ್ ಇಂಟರ್ನ್ಯಾಷನಲ್ ಸಂಸ್ಥೆ ಮತ್ತು ಯುನೈಟೆಡ್ ವೇ  ಸಂಸ್ಥೆ ಜಂಟಿ ಸಹಯೋಗದೊಂದಿಗೆ ಆಮ್ಲಜನಕದ ಘಟಕಗಳು ದಾನ ಮಾಡಿರುವಂತ ದಾನಿಗಳಿಗೆ ಆ ಭಗವಂತ ಇನ್ನಷ್ಟು ದಾನಮಾಡುವ ಶಕ್ತಿ ಕೊಡ್ಲಿ ಅಂತ ಸಂದರ್ಭದಲ್ಲಿ ಹೇಳಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ ಜಿಲ್ಲಾ  ಆರೋಗ್ಯ ಅಧಿಕಾರಿ ಜಯಶ್ರೀ ಎಮ್ಮಿ ಮಾತನಾಡಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ .ಕ್ಯಾಟರ ಪಿಲ್ಲರ್ ಸಂಸ್ಥೆಯ ಪೀಟರ್ ,ತಾಲೂಕ ಆರೋಗ್ಯ ಅಧಿಕಾರಿ ಜಿಎಸ್ ಗಲಗಲಿ , ರಬಕವಿ-ಬನಹಟ್ಟಿ ತಾಲೂಕಾ ತಹಸೀಲ್ದಾರ್ ಸಂಜಯ್ ಇಂಗಳೆ ,ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ನಿರೀಕ್ಷಕರು ವೀರೇಶ್ ಮಠಪತಿ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ್ ತೆಗ್ಗಿ , ಉಪಾಧ್ಯಕ್ಷ ಶ್ರೀಮತಿ ವಿದ್ಯಾ ದಬಾಡಿ   ,ಸಮುದಾಯ ಆರೋಗ್ಯ ಕೇಂದ್ರ ರಬಕವಿ-ಬನಹಟ್ಟಿ ಮುಖ್ಯ ವೈದ್ಯಾಧಿಕಾರಿ  N M ನದಾಫ್ .ಸಂಜಯ್ ಹಿಪ್ಪರ್ಗಿ  ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ , ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತರು  ಉಪಸ್ಥಿತರಿದ್ದರು .