Monday, February 16, 2026

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ :

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ : 

 ರಬಕವಿ : ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯೊಬ್ಬರ ತರಕಾರಿ ಚೀಲದಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ , ಕಳ್ಳ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಯಶಸ್ವಿಯಾಗಿದ್ದಾರೆ . ಪೊಲೀಸರ ಈ ಚುರುಕು ಕಾರ್ಯಾಚರಣೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಪಿ ಎಸ್ ಪೂಜಾರಿ, ಮತ್ತು ಪೊಲೀಸ್ ಸಿಬ್ಬಂದಿ ಡಿ ವಿ ಕುಂಬಾರ್ ಸಿ ಎಚ್ ಸಿ, ಪಿ ಹೆಚ್ ಗಣಿ ಸಿಪಿಸಿ, ಎಸ್ ಜಿ ಲಗಳಿ ಸಿಪಿಸಿ, ವಿ ಎಸ್ ಅಜ್ಜನಗೌಡರ್, ಎಸ್ ಎಸ್ ಬಾಡಗಿ ಸಿಪಿಸಿ, ರವರ ತಂಡ ಆರೋಪಿಗಾಗಿ ಬಲೆ ಬೀಸಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಂಕವ್ವ ಮಾಂತೇಶ್ ಹೂಗಾರ ಎಂಬ ಮಹಿಳೆ ತಮ್ಮ ಹೊಲದ ಚೀಲದಲ್ಲಿ ಮಾಂಗಲ್ಯ ಸರ ಇಟ್ಟು ಸಂತೆಗೆ ಹೋಗಿದ್ದರು. ತರಕಾರಿ ತೆಗೆದುಕೊಂಡು ಬಂದು ನೋಡುವಷ್ಟರಲ್ಲಿ ಚೀಲದಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಬನಹಟ್ಟಿ ಪೊಲೀಸರು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳಲ್ಲಿ ಆರೋಪಿ ಅಬೂಬ್ಕರ್ ರಂಜಾನ್ ಸಾಬ್ ಮುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಮಾರು 3 ಲಕ್ಷ ರೂ. ಮೌಲ್ಯದ 10 ಗ್ರಾಂ ಮಾಂಗಲ್ಯ ಸರ, 5 ಗ್ರಾಂ ಸರ ಮತ್ತು ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ಯಶಸ್ವಿ ಯಶಸ್ವಿ ಕಾರ್ಯಾಚರಣೆಯಲ್ಲಿ , ಮಹದೇವ್ ಶಿರಹಟ್ಟಿ ಸಿಪಿಐ ಇವರ ನೇತೃತ್ವದ ಪೊಲೀಸ್ ಠಾಣಾ ಅಧಿಕಾರಿ ಶಿವರಾಜ್ ದರಿಗೋನ್ ಪಿಎಸ್ಐ ( ಕಾಸು ) ಹಾಗೂ ಸಿಬ್ಬಂದಿ ಯವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯೆಲ್ ಐಪಿಎಸ್, ರೋಷನ್ ಜಮೀರ್ ಎಸ್, ಡಿ ಎಸ್ ಪಿ ಜಮಖಂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

Thursday, February 12, 2026

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ 

ತೇರದಾಳ: ಪಟ್ಟಣದಲ್ಲಿ ಇದೇ ತಿಂಗಳು ಫೆಬ್ರವರಿ 15 ರಂದು  ಶ್ರೀ ಅಲ್ಲಮಪ್ರಭುವಿನ ದೇವಸ್ಥಾನದಲ್ಲಿಜರಗುಲಿರುವ  ದ್ವಿತೀಯ ಜಿಲ್ಲಾ ಕರ್ನಾಟಕ ಜಾನಪದ ಸಮ್ಮೇಳನ ಜರುಗಲಿದ್ದು ಎಲ್ಲ ಪದಾಧಿಕಾರಿಗಳು ಹಾಗೂ ಕಲಾವಿದರು ತನುಮನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪೂರ್ವಭಾವಿ ಸಭೆಯಲ್ಲಿ ಹೇಳಿದರು.ಸಮಿತಿಗಳ ರಚನೆ ಹಾಗೂ ಕಾರ್ಯ ಹಂಚಿಕೆ ಕೆಲಸ ಸಮಾನ ಜೀವಿಗಳು ಒಗ್ಗೂಡಿಕೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ರಾಯಪ್ಪ ಕುಂಬಾರ್ ಅಭಿಮತವನ್ನು ವ್ಯಕ್ತಪಡಿಸಿದರು. ನನಗೆ ಈಗ 81 ವರ್ಷದ ಪ್ರಾಯ ನಾನು ಕೂಡ ತಾವು ವಹಿಸಿದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವೆ ಯಾವುದೇ ಕಾರ್ಯ ಕೆಲಸಗಳ ಮಾಡುವಾಗ ಹಿಂಜರಿಕೆ ಪ್ರಶ್ನೆ ಇಲ್ಲ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಂಗಾಧರ್ ಮೋಪಗಾರ ಮಾತನಾಡಿ ಕಾರ್ಯ ಹಂಚಿಕೆ ಹಾಗೂ ಸಮಿತಿಗಳ ಜವಾಬ್ದಾರಿ ವಹಿಸಿಕೊಂಡವರು ತನುಮನದಿಂದ  ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಕಡಿಮೆ  ಸಮಯದ ಅಭಾವ ಇರೋದ್ರಿಂದ ಜಿಲ್ಲಾ ಸಮೇಳನಕ್ಕೆ ಕೆಲವೇ  ದಿನಗಳು ಉಳಿದಿದ್ದು  ಪದಾಧಿಕಾರಿಗಳು
ತಮಗೆ ವಹಿಸಿದ ಕೆಲಸದಲ್ಲಿ ಆಸಕ್ತಿವಹಿಸಿ
ಮುಂದಿನ ಕಾರ್ಯರೂಪರೇಷಗಳು ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ತಾಲೂಕು ನೂತನ ನಿಯೋಜಿತ ಕಜಾಪ ಅಧ್ಯಕ್ಷರಾದ ಅಶೋಕ್ ಮಹಾಲಿಂಗಪುರ್ ಮಾತನಾಡಿ ನನಗೆ ಅಧ್ಯಕ್ಷ ಸ್ಥಾನ ದೊರಕಿರುವುದು ಅನಿರೀಕ್ಷಿತ ಅದರಂತೆ ಅಲಕ್ಷಿತ ಕಲಾವಿದರು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವೆ. ಜಿಲ್ಲಾ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾರ್ಯ ಚಟುವಟಿಕೆಗಳು ಬಾಕಿ ಉಳಿದಿದ್ದು ತಮ್ಮೊಂದಿಗೆ ಸೇರಿ ಜಾನಪದ ಕಟ್ಟಾಳಾಗಿ ಕೆಲಸ ಮಾಡುವೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಶಿವಾನಂದ್, ಸತ್ಯಪ್ಪ ಸುಣಗಾರ, ಭಾಗ್ಯಶ್ರೀ ಸುನಗಾರ, ಸಂತೋಷ್ ನಡುವಿನಕೆರೆ, ಪದ್ಮಸಾಗರ್ ನಾಗನೂರ, ಗಂಗಾಧರ ಸೇರಿದಂತೆ  ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಕಲಾವಿದರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Friday, February 6, 2026

ಇತಿಹಾಸ ಬರೆದ ಪಂಚ ಗ್ಯಾರಂಟಿ ಯೋಜನೆಗಳು - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ



     ಪಂಚಗ್ಯಾರoಟಿ ಯೋಜನೆಗಳು ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ . - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ

ತೇರದಾಳ: ನಮ್ಮ ಘಣ ಸರಕಾರವು ಬಡವರ ಉದ್ಧಾರಕ್ಕಾಗಿ ಪಂಚಗ್ಯಾರoಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗಿದೆ. ಯಾವುದೇ ಧರ್ಮ ಜಾತಿ ಮತ ಎನ್ನದೆ ಪ್ರತಿ ಕುಟುಂಬದ ಹೆಣ್ಣುಮಗಳಿಗೆ ಅವರು ಶ್ರೀಮಂತರಿರಲಿ. ಬಡವರಿರಲಿ ಎಲ್ಲಾ ಮಹೀಳೆಯರಿಗೂ ಈ ಯೋಜನೆ ನೀಡಿ ಇಡೀ ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ ಎಂದು ಕಾಂಗ್ರೆಸ್ ಯುವ ಧುರಿಣರಾದ ಸಿದ್ದು ಕೊಣ್ಣೂರ ಹೇಳಿದರು.
        ತೇರದಾಳ ಪಟ್ಟಣದ ಶ್ರೀ ಬ್ರಹ್ಮಾನಂದ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕು ಪಂಚಾಯತ ರಬಕವಿ-ಬನಹಟ್ಟಿ ಹಾಗೂ ಪುರಸಬೆ ತೇರದಾಳ ಇವರ ನೇತೃದಲ್ಲಿ ತೇರದಾಳ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ, ಅವರು ಅಧಿಕಾರಿಗಳಾದವರು ದಯವಿಟ್ಟು ನಿಮ್ಮ ಹತ್ತಿರ ಬರುವ ಯಾರನ್ನೂ ಕಚೇರಿಗೆ ಅಲೆಯುವಂತೆ ಮಾಡಬೇಡಿ. ಅವರ ನೋವಿಗೆ ಸ್ಪಂದಿಸಿ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ಯಾರಂಟಿ ಅನುಷ್ಠಾಣ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ತಿಮ್ಮಾಪೂರವರು ಪೂರ್ವಕಾಲದಿಂದಲೂ ಮಹಿಳೆಯು ಒಂದು ಸಂಕೋಲೆಯಲ್ಲಿ ಜೀವನ ನಡೆಸುತ್ತಾ ಬಂದಿದ್ದಾಳೆ. ಅವಳಿಗೆ ಕಾನೂನಿನಲ್ಲಿ ಸಮಾನ ಸ್ಥಾನಮಾನವಿದ್ದರೂ ಅವಳು ಒಂದು ರೀತಿಯ ಮೀತಿಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇತ್ತು. ಆದರೆ ಆ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ತಾಯಂದಿರನ್ನು ಬಿಡುಗಡೆಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಸ್ವಾಭಿಮಾನದ ಬದುಕನ್ನು ನೀಡಿದವರು ಧೀಮಂತ ನಾಯಕ ನಮ್ಮ ಸಿದ್ಧರಾಮಯ್ಯನವರು ಎಂದರು. ತಾಲೂಕು ಅಧ್ಯಕ್ಷ ನೇಮಣ್ಣ ಸಾವಂತನವರ, ತಹಶೀಲದಾರ ವಿಜಯಕುಮಾರ ಕಡಕೋಳ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆಯ ಮುಖ್ಯಾದಿಕಾರಿ ಎಫ್.ಬಿ.ಗಿಡ್ಡಿ, ತಾಲೂಕಾಪಂಚಾಯತ ಅಧಿಕಾರಿ ವಿನಯಕುಮಾರ ಹುಲ್ಯಾಳ ಆಹಾರ ನಿರೀಕ್ಷಕ ಎಸ್.ಐ. ಸೂಡಿ ಹಾಗೂ ಗ್ಯಾರಂಟಿ ಪ್ರಾಧಿಕಾರ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

 ವರದಿ : ಮಹೆಬೂಬ್ ಬಾರಿಗಡ್ಡಿ 




Monday, February 2, 2026

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ: ಬೇಸತ್ತ ಜನ ವರದಿ; ಮಹಿಬುಬ ಮ ಬಾರಿಗಡ್ಡಿ

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ:  ಬೇಸತ್ತ ಜನ 


ಮಹಿಬುಬ ಮ ಬಾರಿಗಡ್ಡಿ

ಹಣಗಂಡಿ ;  ಗ್ರಾಮ ಪಂಚಾಯಿತಿಯ ಟಿಪ್ಪು ಸುಲ್ತಾನ್ ಸರ್ಕಲ್ ಹತ್ತಿರ ಜನಬೀಡ ಪ್ರದೇಶದಲ್ಲಿ  ಕಾಣುವ ಕಸದ ರಾಶಿ ಬೀದಿನಾಯಿ-ಹಂದಿಗಳಿAದ ರಸ್ತೆಯಲ್ಲಿ  ಪಕ್ಕದಲ್ಲಿ ಬೀಳುವ ತ್ಯಾಜ್ಯದಿಂದ  ಗಲೀಜ ಗ್ರಾಮವಾಗಿ ಬದಲಾಗುತ್ತಿದೆ, ಗ್ರಾಮದಲ್ಲಿ  ನಿತ್ಯವೂ ಕಂಡುಬರುವ ದೃಶ್ಯವಿದು. ಕಸ ವಿಲೇವಾರಿಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಕಸದ ರಾಶಿಗಳು ತಿಂಗಳುಗಟ್ಟಲೇ ಸ್ಥಳದಲ್ಲಿ  ಬಿದ್ದುಕೊಂಡಿರಬೇಕಾಗಿದೆ . ಕುಡಚಿ - ಜಮಖಂಡಿ ಪ್ರಮುಖ ರಸ್ತೆಯ, ಚಾ ಅಂಗಡಿ, ಎಗ್ ರೈಸ್ ಅಂಗಡಿ  ಸೇರಿದಂತೆ , ವಿವಿಧ ವ್ಯಾಪಾರಸ್ಥರ ಕಸವನ್ನು ಒಂದೇ ಕಡೆ ಹಾಕುವುದರಿಂದ ಕಸದ ರಾಶಿಗಳು ಹೋಗುವ  ಪ್ರಯಾಣಿಕರ ಕಣ್ಣಿಗೆ ಕಂಡು ಮುಜಗರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಕಸದ ತಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಯ  ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಬೇಸರಕ್ಕೆ  ಕಾರಣವಾಗಿದೆ.
 ಹಣಗಂಡಿಯ ಪ್ರಸಿದ್ದ ವಾಡೆ ;  ಪಂಚಾಯತಿ ಯ್ಯಾಪ್ತಿಯಲ್ಲಿ ರಾಜ ವಾಡೆಗೆ  ಖ್ಯಾತಿ ಪಡೆದಿರುವ ಗ್ರಾಮ , ಈ ಗ್ರಾಮ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯಿಂದ ಹಾಗೂ ಚರಂಡಿಯ ಕೊಳಚೆ ನೀರಿ ನಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ಗ್ರಾಮದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹೋಗಿದ್ದು, ಹೂಳು ತೆಗೆಯುವ ಕೆಲಸವಾಗಿಲ್ಲ. ಚರಂಡಿಯಲ್ಲಿ ನೀರು ನಿಂತು, ದುರ್ನಾತ ಬರುತ್ತಿದ್ದರೂ,  ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರ ಜೊತೆಯಲ್ಲಿಯೇ, ಕಸದ ಸಮಸ್ಯೆಯೂ ಹೆಚ್ಚಾಗುತ್ತಲಿದೆ. ಮನೆಗಳ  ಹಾಗೂ ಅಂಗಡಿಗಳ ಸ್ಥಳದಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆ ಗ್ರಾಮದಲ್ಲಿ ಇದೆಯೇ? ಎನ್ನುವಂತ ಪ್ರಶ್ನೆ ಕಾಡುತ್ತಿದೆ . ಆದರೆ, ಬಹುತೇಕ ಜನರು ಇಂದಿಗೂ ರಸ್ತೆ ಅಕ್ಕ-ಪಕ್ಕದಲ್ಲಿ ಕಸ  ಹಾಕುತ್ತಿದ್ದಾರೆ. ಗ್ರಾಮದ ಪ್ರಮುಖ ವೃತ್ತಗಳಲ್ಲಿ ಕಸ ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದಲೇ ,ಕಸದ ಸಮಶೈ ಹೆಚ್ಚಾಗುತ್ತಿದೆ. ಕಸ
ಸಂಗ್ರಹಿಸುವ ಸಿಬ್ಬಂದಿ, ರಸ್ತೆ ಅಕ್ಕ-ಪಕ್ಕದ ಕಸದ ರಾಶಿ ಸಂಗ್ರಹಿಸುತ್ತಿಲ್ಲ ಕಾರಣಕ್ಕೆ ಹಲವು ದಿನಗಳ ಕಾಲದ  ಕಸದ ರಾಶಿ ಬದ್ದಲ್ಲೆ ಬಿದ್ದುಕೊಂಡಿರುತ್ತದೆ.
ಅಷ್ಟಾದರೂ ಕಸದ ವಿಲೇವಾರಿ ಆಗುತ್ತಿಲ್ಲವೆಂದು ಜನರು ಗ್ರಾಮ ಪಂಚಾಯಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ ಬಗ್ಗೆ ಏನು ಕ್ರಮ ತೆಗೆÀದುಕೊಳ್ಳುತ್ತಿಲ್ಲ ಇದರಿಂದಾಗಿ ಕಸದ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ' ಎಂದು ಜನರು ಅಳಲು ತೋಡಿಕೊಂಡರು.
ವಿಲೇವಾರಿಯಾದ ಕಸದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, , ವಾಯು ವಿವಾಹರಕ್ಕೆ   ಹೋಗುವ ಸ್ಥಿತಿಯಿಲ್ಲ. ಹೋದರೆ, ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿಯಿದೆ.ಇದರಿಂದ ಆರೋಗ್ಯಕ್ಕೆ ಸಮಸ್ಯೆ ಉಂಟಾಗುವುದು ಖಚಿತ' ಎಂದು ಹೇಳಿದರು.

ಗ್ರಾಮದ ವಾರ್ಡ್ ನಂಬರ್ ೩ ರ ಇಳಿಜಾರು ಪ್ರದೇಶ ವಾಗಿದೆ. ಚರಂಡಿಯ ( ಗಟಾರು  ) ಕೆಲಸ ಅರ್ಧಕ್ಕೆ ನಿಂತಿದ್ದರಿAದ ಚರಂಡಿಯ ಕೊಳಚೆ ನೀರು ರಸ್ತೆಯ ತುಂಬೆಲ್ಲ ಹರಡಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಳೆ ಬಂತAದರೆ ಸಾಕು ರಸ್ತೆ ತುಂಬೆಲ್ಲ ಚರಂಡಿ ನೀರು ನಿಂತು ರಸ್ತೆ ಬ್ಲಾಕ್ ವಾಗುತ್ತದೆ . ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾರಿ ತೊಂದರೆ ಆಗುತ್ತಲಿದೆ .ಈ ಕುರಿತು ಗ್ರಾಮ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರು ಏನು ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು  ತಮ್ಮ ಅಳಲು ತೋಡಿಕೊಂಡರು.


 ಹೇಳಿಕೆ ೦೧ : ದೊಡ್ಡ ಗ್ರಾಮ, ಸಿಬ್ಬಂದಿಗಳು ಇಬ್ಬರೇ ಇರುವುದರಿಂದ ಕಸದ ಸಮಸ್ಯೆ ಆಗುತ್ತಿದೆ. ಆದ್ದರಿಂದ ೧೫ ದಿನಕ್ಕೊಮ್ಮೆ ಕಸ ತೆಗೆಯುವಂತ ವ್ಯವಸ್ಥೆ ಇದೆ. ಹೆದ್ದಾರಿ ಪಕ್ಕದಲ್ಲಿ ಬಿದ್ದ ಕಸವನ್ನು ತೆಗೆಯುವಂತಹ ಕ್ರಮ ತೆಗೆದುಕೊಳ್ಳುತ್ತೇನೆ.
  ಪಿ . ಪಿ. ರಾವಳ , ಗ್ರಾಮ ಪಂಚಾಯತ ಅಧಿಕಾರಿ

ಹೇಳಿಕೆ ೦೨  ಚರಂಡಿ ( ಗಟಾರ ) ಅರ್ದಂ ಬರ್ದ ಕಾಮಗಾರಿ ಮಾಡಿ ರಸ್ಥೆ ತುಂಬೆಲ್ಲಾ ಕೊಳಚೆ ನೀರು ಹರಡುವುದರಿಂದ ಇಲ್ಲಿನ ಸಾರ್ವಜನಿಕರಿಗೆ
  ತೊಂದರೆಯಾಗುತ್ತಿದೆ.  ಜೊತೆಗೆ ರೋಗ ಹರಡುವ ಭೀತಿ ಇರುತ್ತದೆ. ಮತ್ತು ಪ್ರಮುಖ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಳೆದ ನಾಲ್ಕು ತಿಂಗಳಿನಿoದ ಕಸ ವೀಲೇವಾರಿಯಾಗದೆ ಹಾಗೆ ಬಿದ್ದಿರುತ್ತದೆ. ಕಸವನ್ನು ನಾಯಿ ಹಂದಿಗಳು ಚೆಲ್ಲಾ ಪಿಲ್ಲಿಯಾಗಿ ಮಾಡುತ್ತಲ್ಲಿವೆ .ವಾಹನಗಳು ಹಾದಾಡುವ ಸಮಯದಲ್ಲಿ ನಾಯಿ ಹಂದಿಗಳು  ಅಡ್ಡ ಬಂದರೆ ಅನಾಹುತ ಗ್ಯಾರಂಟಿ , ಹಲವು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದರೊ  ಏನೊ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಸ್ಥಳೀಯ ನಿವಾಸಿ - ಶಾನುರ ಸುಲೆಮಾನ ರಾಮದುರ್ಗ










 

Monday, January 26, 2026

ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ | ಶಾಸಕ ಸಿದ್ದು ಸವದಿ


 ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ  |  ಶಾಸಕ ಸಿದ್ದು ಸವದಿ

ತೇರದಾಳ: ಒಂದು ರಾಜ್ಯ ಅಥವಾ ದೇಶವಾಗಲಿ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಒಂದು ಒಳ್ಳೆಯ ಆಢಳಿತವಿರಬೇಕು. ಒಳ್ಳೆಯ ಆಢಳಿತ ನಡೆಸಬೇಕಾದರೆ ಅಲ್ಲಿ ಒಂದು ಸರ್ವಶ್ರೇಷ್ಠವಾದ ಆಢಳಿತ ಗ್ರಂಥವೆ ಬೇಕಾಗುತ್ತದೆ. ಅಂತಹ ಶ್ರೇಷ್ಠವಾದ ಗ್ರಂಥವೆAದರೆ ಅದುವೇ ನಮ್ಮ ಸಂವಿಧಾನ ಎಂದು ಶಾಸಕ ಸಿದ್ದು ಸವದಿ ಹೇಳಿದರು.
 
               ಪಟ್ಟಣದಲ್ಲಿ ನಿನ್ನೆ ಜನೇವರಿ ೨೬ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೭ ನೇ ಗಣರಾಜ್ಯೋತ್ಸದಲ್ಲಿ ಗೌರವವಂದನೆ ಸ್ವಿಕರಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸಾವಿರಾರು ಜಾತಿಗಳಿವೆ ಹಲವಾರು ದರ್ಮಗಳಿವೆ. ವಿವಿಧ ಭಾಷೆಗಳಿವೆ, ವಿವಿಧ ಧಾರ್ಮಿಕ ಆಚರಣೆಗಳಿವೆ, ಸಂಪ್ರದಾಯಗಳು ಹೀಗೇ ಎಷ್ಟೇ ವಿವಿಧತೆಯಿದ್ದರೂ ಯಾವುದೇ ಧರ್ಮಕ್ಕಾಗಲಿ, ಜಾತಿಗಾಗಲಿ, ಆಚರಣೆಗಾಗಲಿ ಒಂದಿಷ್ಟೂ ಧಕ್ಕೆಯಾಗದ ರೀತಿಯಲ್ಲಿ ಸಂವಿಧಾನ ರಚಿಸಿ ಡಾ.ಬಾಬಾಸಾಹೇಬರು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳಿವೆ ಆದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರö್ಯದಿನೋತ್ಸವ ಮಾತ್ರ ಅತ್ಯಂತ ಪರಮಪವಿತ್ರ ಹಬ್ಬಗಳಾಗಿವೆ. ಇಲ್ಲಿ ಯಾವುದೇ ಧರ್ಮವಿಲ್ಲ ಜಾತಿ ಇಲ್ಲ, ಮೇಲಿಲ್ಲ ಕೀಳಿಲ್ಲ, ನಾವೆಲ್ಲರೂ ಭಾರತೀಯರು ಎಂಬ ಪವಿತ್ರ ಭಾವನೆಯನ್ನು ಮೂಡಿಸುವಂತಹ ರಾಷ್ಟಿçÃಯ ಹಬ್ಬವಾಗಿವೆ. ನಮ್ಮನಮ್ಮ ಧರ್ಮ, ಆಚರಣೆ ನಮ್ಮ ಮನೆಯಲ್ಲಿರಲಿ ಆದರೆ ರಾಷ್ಟಿçÃಯ ಹಬ್ಬಗಳು ಬಂದಾಗ ನಾವೆಲ್ಲರೂ ಒಂದಾಗಬೇಕು. ಪರಸ್ಪರರಲ್ಲಿ ಸಾಮರಸ್ಯ ಮೂಡಿಸುವ ಈ ಹಬ್ಬಗಳು ಅತ್ಯಂತ ಶ್ರೇಷ್ಠಹಬ್ಬಗಳಾಗಿವೆ. ಕಾರಣ ನಮಗೆ ಸಮಾನತೆಯಿಂದ ಗೌರಯುತವಾಗಿ ಬದುಕುವ ಮೂಲಭೂತ ಹಕ್ಕುಗಳನ್ನು ನೀಡಿದ ಈ ರಾಷ್ಟಿçÃಯ ಹಬ್ಬವನ್ನು ನಾವೆಲ್ಲರೂ ಸೇರಿ ಅತ್ಯಂತ ಸಡಗರ ಸಂಭ್ರಮದಿAದ ಆಚರಿಸೋಣ. ಈ ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ ಗೌರವಿಸೋಣ ಎಂದರು. ತಹಶೀಲದಾರ ವಿಜಯಕುಮಾರ ಕಡಕೋಳ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಎಲ್ಲಾ ಶಾಲಾ ಮಕ್ಕಳು ನಮ್ಮ ನಾಡು ನುಡಿ ಹಿರಿಮೆ ಗರಿಮೆ ಮೆರೆಯುವಂತಹ ಗೀತೆಗಳಿಗೆ ನೃತ್ಯಮಾಡಿ ಗತಕಾಲದ ವೈಭವವನ್ನು ಮರುಕಳಿಸಿದರು. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕಾಢಳಿತದಿಂದ ಗೌರವಿಸಲಾಯಿತು. ವೇದಿಕೆಯ ಮೇಲೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆಯ ಸರ್ವಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಟಿ.ಪತ್ತಾರ ನಿರೂಪಿಸಿ ವಂದಿಸಿದರು.  

Friday, January 2, 2026

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ :

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ

ತೇರದಾಳ : ದೇವರು ಸೃಷ್ಠಿಸಿದ ಬದುಕು ಹರಿಯುವ ನೀರಿನಂತಿದ್ದು, ಪ್ರತಿ ಕ್ಷಣ ನಮ್ಮ ಬದುಕಿನಲ್ಲಿ ಯಶಸ್ಸು ಸಂಕಲನವಾದರೆ ವಯಸ್ಸು ವ್ಯವಕಲನವಾಗಿ,ಗೆದ್ದವರಿಗೆ ಖುಷಿ ಸೋತವರಿಗೆ ದು:ಖ ಹೀಗೆ ನೋವು ನಲಿವುಗಳ ಸಮ್ಮಿಲನವೇ ಬದುಕಾಗಿದ್ದು,ಕೆಟ್ಟದನ್ನು ದೂರವಿಟ್ಟು ಒಳ್ಳೆಯದನ್ನು ಸನಿಹಕ್ಕೆ ಬರಮಾಡಿಕೊಂಡು ಸುಂದರ ಬದುಕಿಗಾಗಿ ಸಂಕಲ್ಪ ತಾಳುವುದೇ ಹೊಸ ವರ್ಷಾಚರಣೆಯ ಮೂಲ ಆಶಯವಾಗಿದೆಯಂದು ಶಿಕ್ಷಕ ಶೀತಲ ನಂದೆಪ್ಪನವರ ಅಭಿಮತವನ್ನು ವ್ಯಕ್ತಪಡಿಸಿದರು. ಸಮೀಪದ ಹಳಿಂಗಳಿ ಗ್ರಾಮದ ವಿದ್ಯಾಕಾಶಿ ಶ್ರೀ ಸದ್ಗುರು ಶರಣಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ ಹೊಸವರ್ಷಾಚರಣೆಯ ಸಂಭ್ರಮವನ್ನು ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗತಿಸಿ ಹೋದ ವರುಷದ ಕಹಿ ನೆನಪುಗಳನ್ನು ಕಟ್ಟೆಯ ಮೇಲೆ ಬಿಟ್ಟು ಸಿಹಿ ನೆನಪುಗಳನ್ನು ರಟ್ಟೆಯಲ್ಲಿ ತೆಗೆದುಕೊಂಡು ಹೊಸ ವರುಷದಲ್ಲಿ ಉತ್ತಮ ಕಾಯಕವನ್ನು ನಿರ್ವಹಿಸಿ ಏಕಾಗ್ರತೆಯಿಂದ ಅಧ್ಯಯನವನ್ನು ಕೈಗೊಂಡು ಕಲಿಸಿದ ಶಾಲೆ,ಗುರುಗಳು ಹಾಗೂ ಹೆತ್ತವರಿಗೆ ಉತ್ತಮ ಕೀರ್ತಿ ತರುವುದರೊಂದಿಗೆ ಸ್ವಾವಲಂಬಿ ಬದುಕಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಿಕೊಂಡು ಪ್ರತಿಯೊಬ್ಬರು ಆದರ್ಶ ವಿದ್ಯಾರ್ಥಿಗಳಾಗಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಂಜನಾ.ಯು ಅಬಕಾರ ಮಾತನಾಡಿ ನಿತ್ಯ ಸುರ್ಯೋದಯ ನಮ್ಮ ಬದುಕಿನ ಸುಂದರ ಕ್ಷಣವಾಗಿದ್ದು, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿ,ಏಕಾಗ್ರತೆಯಿಂದ ಓದಿನೆಡೆಗೆ ಹೆಚ್ಚಿನ ಗಮನ ಹರಿಸಿ,ಜಾಗತಿಕ ಜಗತ್ತಿನ ನಾಗಾಲೋಟದ ವೇಗಕ್ಕೆ ಪೂರಕವಾಗಿ ಓಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಾಯ್.ಎಚ್ ಅಲಾಸ ವಹಿಸಿದ್ದರು, ಅತಿಥಿಗಳಾಗಿ ಉಪಪ್ರಾಚಾರ್ಯೆ ಎಸ್.ಟಿ ಘಂಟಿ,ಹಿರಿಯ ಶಿಕ್ಷಕ ಎಸ್.ಟಿ ಕುಂಬಾರ,ಸುನಿತಾ ಪಾಟೀಲ,ವಿಲಯಲಕ್ಷಿö್ಮಪೂಜಾರಿ ಇದ್ದರು. ಶಿಕ್ಷಕರಾದ ಶ್ರೀಮತಿ ಗಿರಿಜಾ ಲಾಳಿ,ಸೋನಾಲಿ ಮಠಪತಿ ಹಾಗೂ ಶ್ರೀಶೈಲ ಬಸವನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 ಸಂಪಾದಕರು   : 
ಮಹಿಬೂಬ್ ಎಂ ಬಾರಿಗಡ್ಡಿ 

 

Monday, December 29, 2025

ಬುಲ್ಡೋಜರ್ ರಾಜಕಾರಣಕ್ಕೆ ಎಸ್ ಡಿ ಪಿ ಐ ತೀವ್ರ ಖಂಡನೆ :

ಬೆಂಗಳೂರಿನ ಫಕೀರ್ ಲೇಔಟ್ ನಿರಾಶ್ರಿತರ ಪರವಾಗಿ ತೇರದಾಳದಲ್ಲಿ SDPI ಬೃಹತ್ ಪ್ರತಿಭಟನೆ
ಬುಲ್ಡೋಜರ್ ರಾಜಕಾರಣಕ್ಕೆ ತೀವ್ರ ಖಂಡನೆ
ತೇರದಾಳ: ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮನೆಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಧ್ವಂಸಗೊಳಿಸಿ ಅವರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಅಮಾನವೀಯ **“ಬುಲ್ಡೋಜರ್ ರಾಜಕಾರಣ”**ವನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಜದ್ ಖಾನ್ ಇನಾಮದಾರ ಅವರು, “ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ. ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ನೆಲಸಮಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ನಿರಾಶ್ರಿತರಿಗೆ ತಕ್ಷಣ ಪುನರ್ವಸತಿ ಕಲ್ಪಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಬಾರಕ್ ಅಲ್ಲಾ ಖಾನ್ ಮಾತನಾಡಿ, ಸರ್ಕಾರ ಕೇವಲ ಬಡವರನ್ನೇ ಗುರಿಯಾಗಿಸಿಕೊಂಡು ಬುಲ್ಡೋಜರ್ ಪ್ರಯೋಗ ಮಾಡುತ್ತಿದೆ. ಅಧಿಕಾರವು ಬಡವರಿಗೆ ಆಸರೆಯಾಗಲು ಇರಬೇಕೇ ಹೊರತು, ಅವರನ್ನು ಅನಾಥರನ್ನಾಗಿ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹುಸೇನ್ ಜಮಾದರ, ನಿಸಾರ್ ಅಲಾಸ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮೈನುದ್ದೀನ್ ಮೋಮಿನ್, ಜೊತೆ ಕಾರ್ಯದರ್ಶಿ ಆಸಿಫ್ ಸಂಗತ್ರಾಸ್, ಕೋಶಾಧಿಕಾರಿ ಅಕ್ರಮ್ ಜಮಾದರ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.