Tuesday, October 25, 2022

2B ಮೀಸಲಾತಿಗೆ ಆಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟದ ಅಖಾಡಕ್ಕಿಳಿದ ಕರ್ನಾಟಕ ಮುಸ್ಲಿಮ್ ಯೂನಿಟಿ.

ಮೀಸಲಾತಿಗೆ ಆಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟದ ಅಖಾಡಕ್ಕಿಳಿದ ಕರ್ನಾಟಕ ಮುಸ್ಲಿಮ್ ಯೂನಿಟಿ.
ಕಾಲಾಂತರದಿಂದ ಶೇ 4% ಇದ್ದ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ಹಾಗೂ2ಬಿ  ಬದಲಾದ ಆರ್ಥಿಕ ಸಾಮಾಜಿಕ ಸ್ಥರವನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರಿಗೆ ಶೇ 4%ರ ಮೀಸಲಾತಿಯನ್ನು ಶೇ 8% ಹೆಚ್ಚಿಸಲು ಕರ್ನಾಟಕ ಮುಸ್ಲಿಮ್ ಯೂನಿಟಿಯು ಸದಾ ಆಗ್ರಹ ಪಡಿಸುವಲ್ಲಿ ಮುಂಚೂಣಿಯಲ್ಲಿತ್ತು ಅದರ ಮುಂದುವರೆದ ಭಾಗವಾಗಿ ಈಗ ಸಂಪೂರ್ಣ ಅಖಾಡಕ್ಕಿಲಿದು ಇಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತನ್ನ ಮನವಿಯನ್ನು ಸಲ್ಲಿಸಿದೆ.

ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯ ಸಂಚಾಲಕ ಜನಾಬ ಅಬ್ದುಲ್ ಜಬ್ಬಾರ ಕಲಬುರಗಿಯವರ ನೇತ್ರತ್ವದಲ್ಲಿ ಚಿಂತಕರು, ಹಿರಿಯ ಸಾಹಿತಿಗಳಾದ ಬಿ ಎಂ ಹನೀಫ್, ಜಿಲ್ಲಾ ವಕ್ಫ ಅಧ್ಯಕ್ಷರಾದ ಮೆಹಬೂಬ್ ಸರ್ಕಾವಸ, ಯೂನೂಸ ಮೌಲಾನಾ, ರಿಯಾಜ್ ಮುಲ್ಲಾ, ಅಲ್ತಾಫ ಕಲಬುರಗಿ, ನಜೀರ ಹರಕಾರಿಯವರು ಜೊತೆಯಾಗಿ ಹೋರಾಟಕ್ಕೆ ಕೈ ಬಲಪಡಿಸಿದರು

Saturday, October 22, 2022

ಬನಹಟ್ಟಿ ನಗರದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜಾ ಸಮಾರಂಭ

*ಬನಹಟ್ಟಿ ನಗರದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜಾ ಸಮಾರಂಭ*

  ರಬಕವಿ ಬನಹಟ್ಟಿ : -

ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೇರಿದ ಬಾಗಲಕೋಟೆ ಭಾಗದ ಬನಹಟ್ಟಿ ನಗರದಲ್ಲಿ 1.ಕೋಟಿ 50.ಲಕ್ಷ ರೂಪಾಯಿಗಳ  ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜೆಯನ್ನು ಮಾಡುವುದರ ಮೂಲಕ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸೌದಿ  ಚಾಲನೆಯನ್ನು ನೀಡಿದರು .

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಸಿದ್ದು ಸವದಿ , ರಬಕವಿ-ಬನಹಟ್ಟಿ ನಗರಗಳಲ್ಲಿ ಪ್ರತ್ಯಕ ನಗರದ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು . ನಗರದ ಬಸ್ ನಿಲ್ದಾಣದ ಟೆಂಡರ್ ಗಳು ಕೂಡ ಆಗಿದೆ ಅದರ ಪ್ರಕಾರ ಆಯಾ ನಗರಗಳ ನಿಲ್ದಾಣಗಳ ನೂತನ ಮಾದರಿಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಅನೇಕ ಮುಖಂಡರು ಭಾಗಿಯಾಗಿದ್ದರು .

Saturday, October 15, 2022

ಬನಹಟ್ಟಿ ನಗರದಲ್ಲಿ ಮಾಜಿ ರಾಷ್ಟ್ರಪತಿ ,ಭಾರತರತ್ನಡಾ. ಎ. ಪಿ. ಜೆ ಅಬ್ದುಲ್ ಕಲಾಂ ರವರ 91ನೇಯ್ ಹುಟ್ಟು ಹಬ್ಬ ಆಚರಣೆ .

ಮಾಜಿ ರಾಷ್ಟ್ರಪತಿ ,ಭಾರತರತ್ನ
ಡಾ. ಎ. ಪಿ. ಜೆ  ಅಬ್ದುಲ್ ಕಲಾಂ ರವರ 91ನೇಯ್ 
ಹುಟ್ಟು  ಹಬ್ಬ ಆಚರಣೆ .


ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪ್ರತಿಷ್ಠಿತ  ಬಿಲಾಲ್ ಮಸೀದಿ ಮೊಹಲ್ಲಾದ ಯುವಕರು ಹಾಗೂ ಹಿರಿಯರು ವತಿಯಿಂದ ಮಾಜಿ ರಾಷ್ಟ್ರಪತಿ ಭಾರತರತ್ನ ಎಪಿಜೆ ಅಬ್ದುಲ್ ಕಲಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು .

ಪ್ರಾಸ್ತಾವಿಕ ಮಾತನಾಡಿದ , ಮುಖ್ಯ ಅತಿಥಿಯಾಗಿ ಹಾಗೂ ತ್ರಿಭಾಷಾ ಕವಿ ಪ್ರಶಸ್ತಿ ಪಡೆದ , ಶಂಶುದ್ದಿನ್ ಜಾರೆ  ಸರ್  ,  ಅಕ್ಟೋಬರ್ 15 1931 ರಲ್ಲಿ ಜನಿಸಿದ , ಎಪಿಜೆ ಅಬ್ದುಲ್ ಕಲಾಂ , ಅವರ ಅಂತಿಮ ವಿದಾಯ 2015 ಜುಲೈನಲ್ಲಿ ಆಯಿತು .  


ಇವರು 2002 ರಿಂದ 2007 ರವರೆಗೆ ದೇಶದ  ರಾಷ್ಟ್ರಪತಿಯಾಗಿ  ಕಾರ್ಯಭಾರ ಮಾಡಿದ್ದರು .

ಇವರದೇ ಒಂದು ಮಾತು "ಸೂರ್ಯವನ್ನಾಗಿ ಮಿಂಚಬೇಕಾದರೆ  ,ಮೊದಲು ಸೂರ್ಯನ ತರ ಸುಡುವ ಕೊಳ್ಳುವುದನ್ನು ಕಲಿಯಬೇಕು " ಎಂದು ಹೇಳಿದ ಮಹಾನ್ ವ್ಯಕ್ತಿ ಎಂದು ಈ ಸಂದರ್ಭದಲ್ಲಿ ನೆನಪಿಸಿ ಕೊಟ್ಟರು .


ಇದೇ ಸಂದರ್ಭದಲ್ಲಿ ಮಾತನಾಡಿದ ಫಯಾಜ್ ಕೊಯಿಮುತ್ತೂರು ,ಭಾರತ ದೇಶದ ಮಹಾನ್ ವಿಜ್ಞಾನಿ ಹಾಗೂ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು .ಹಾಗೂ  ಬರುವಂತಹ ದಿನಮಾನಗಳಲ್ಲಿ  ನಮ್ಮ ಮಕ್ಕಳನ್ನು ಕೂಡ ಈ ದೇಶದ ವಿಜ್ಞಾನಿಗಳ ನ್ನಾಗಿ ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಈ ಕಾರ್ಯಕ್ರಮವನ್ನು ಬನಹಟ್ಟಿ ನಗರದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕ ಜಾಕಿರ್ ಹುಸೇನ್ ಬಾರಿಗಡ್ಡಿ ಅವರು ನಿರೂಪಿಸಿದರು . 

ಈ ಕಾರ್ಯಕ್ರಮದ ಅಧ್ಯಕ್ಷತೆ  ಮುರಾದ್ ಮುರಾದ್ ಮೋಮಿನ  ವಹಿಸಿದ್ದರು .

ಈ ಸಂದರ್ಭದಲ್ಲಿ ಬಿಲಾಲ್ ಮಜಿದ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಜಾಕಿರ್ ಬಾರಿಗಡ್ಡಿ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಸಿರಾಜ್ ಮೋಮಿನ  ,ಹಸನ್ ಮುಲ್ಲಾ, ಗುಲಾಬ ಯಾದವಾಡ , ಮಹಿಬೂಬ್ ಬಾರಿಗಡ್ಡಿ  ,ಶಬ್ಬೀರ್ ಮೊಮಿನ್ ,ಹುಸೇನ್ ಅಥಣಿ ಯುಸೂಪ  ಮುಧೋಳ ,ಜುಬೇರ್ ಮೋಮಿನ  ,ಮೀರಾಸಾಬ ಬಾರಿಗಡ್ಡಿ ಇಮ್ತಿಯಾಜ್ ಅತ್ತಾರ  ,ಅಕ್ಬರ್ ಅತನಿ , ಮೋದಿನಸಾಬ್ ಸಪ್ತಸಾಗರ, ಇನ್ನೂ ಅನೇಕರು ಹಾಜರಿದ್ದರು.


Thursday, October 13, 2022

ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾ ಮಹಿಳಾ ಉಪಾಧ್ಯಕ್ಷರ ವಿನೂತನ ಹುಟ್ಟುಹಬ್ಬ ಆಚರಣೆ*

*
 *ರಬಕವಿ ಬನಹಟ್ಟಿ :* 

 ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಿಲ್ಲಾ ಉಪಾಧ್ಯಕ್ಷ ರಾಜೇಶ್ವರಿ ಹಿರೇಮಠ್ ಅವರು ತಮ್ಮ ಹುಟ್ಟುಹಬ್ಬವನ್ನು ಬಡ ವಿದ್ಯಾರ್ಥಿಗಳಿಗೆ ಪೆನ್ನು ಹಾಗೂ ನೋಟ್ ಬುಕ್ ವಿತರಣೆ ಮಾಡುವುದರ ಮೂಲಕ ,ಮತ್ತು ತಾಲೂಕ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಣ್ಣು - ಹಂಪಲ ಕೊಡುವುದರ ಮೂಲಕ , ಹಾಗೂ ತೇರದಾಳ ಪಟ್ಟಣದಲ್ಲಿ ಗೋ ಶಾಲೆಗೆ ಭೇಟಿ ನೀಡಿ ಹಸುಗಳಿಗೆ ಮೇವು ಹಾಕುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು 

ಬಳಿಕ , ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ನೂತನವಾಗಿ ಕಾರ್ಯಕರ್ತರನ್ನು ಕೂಡ ಸೇರ್ಪಡೆ ಮಾಡುವುದರ ಮೂಲಕ ಕೂಡ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ  ಆಚರಿಸಿಕೊಂಡರು .


ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ  ಆಟೋ ಘಟಕದ  ಅಧ್ಯಕ್ಷ ,ಮೊಹಮ್ಮದ್ ಹುಸೇನ್  ಲೆoಗ್ರೆ , ಉಪಾಧ್ಯಕ್ಷ ದಾದಾಪೀರ್ ಶಿವಳ್ಳಿ ,ಕರವೇ ತಾಲೂಕ  ಆಟೋ ಘಟಕ  ಪ್ರಧಾನ ಕಾರ್ಯದರ್ಶಿ ಜಮಾದಾರ್ ,ಅನುರಾಧ ಶಿರಗುಪ್ಪಿ , ಭಾರತಿ 
 ಕೊಪ್ಪದ ,ಇನ್ನೂ ಅನೇಕ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು .


KALAAM EXPRESS NEWS 

RABKAVI -BANHATTI

Tuesday, October 11, 2022

ಬನಹಟ್ಟಿ ನಗರದಲ್ಲಿ ಈದ್ ಮಿಲಾದ್ ನಿಮಿತ್ಯ ರಕ್ತದಾನ ಶಿಬಿರ .

 ನಿಮಿತ್ಯ ರಕ್ತದಾನ ಶಿಬಿರ

ರಬಕವಿ  ಬನಹಟ್ಟಿ :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಗಾರದ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಮಿತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು .

ಈ ರಕ್ತದಾನ ಶಿಬಿರ ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ರಕ್ತದಾನ ಭಂಡಾರ ನವನಗರ ಇವರ ಸಹಯೋಗದೊಂದಿಗೆ ನಡೆಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಮಿತಿಯ ಅಧ್ಯಕ್ಷ  , ಸಾಧಿಕ್ ಮಳಲಿ  ರಕ್ತದಾನ ಮಾಡುವುದರಿಂದ ಯಾರಿಗೆ ಸಹಾಯವಾಗುತ್ತದೆ ಎನ್ನುವುದನ್ನು ,ಪೂರ್ಣ ವಿವರಿಸಿದರು .

ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶಾನೂರ್ ಮಾಲ್ದಾರ ,ಇರ್ಷಾದ್ ಮೋಮಿನ್ ,ಬುಡನ ಬೇಪಾರಿ, ಸೋಹಿಲ್ ಬೇಪಾರಿ , ಆಸಿಫ್ ಅತ್ತಾರ್   , ಖಲೀಲ್ ಜಾರೆ , ಸಾಯಿಲ್ ಚಿಸ್ತಿ , ಸಲೀಂ ಹಲಗಲಿ ,ರಾಜು ಜಮಖಂಡಿ ಇನ್ನೂ ಅನೇಕರು ಉಪಸ್ಥಿತರಿದ್ದರು .


ಕಲಾಂ ಎಕ್ಸ್ ಪ್ರೆಸ್ ನ್ಯೂಸ್ ರಬಕವಿ ಬನಹಟ್ಟಿ




Sunday, October 9, 2022

ಈದ್ ಮಿಲಾದ್ ಪ್ರಯುಕ್ತ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ*

*ಈದ್ ಮಿಲಾದ್ ಪ್ರಯುಕ್ತ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ* 

ಮುಧೋಳ : ಬಾಗಲಕೋಟ ಜಿಲ್ಲೆಯ ಮುಧೋಳ ನಗರದ ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ವತಿಯಿಂದ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಕೊಡುವುದರ ಮೂಲಕ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಿದರು .

ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ಮುದೋಳ ನಗರದಲ್ಲಿ ಒಂದಿಲ್ಲ ಒಂದು ಸಾಮಾಜಿಕ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ಜನತೆಯ ಮನಸ್ಸು ಗೆದ್ದಿದ್ದಾರೆ .

ಈ ಕಾರ್ಯಕ್ರಮದ ಸಂದರ್ಭದಲ್ಲಿ ದಸರಾ ಕ್ರೀಡಾ ಕಾರ್ಯಕ್ರಮದಲ್ಲಿ ಕುಸ್ತಿ  ವಿಜೇತ ಕ್ರೀಡಾಪಟು ಪ್ರತೀಕ್ಷಾ ಸೈದು ಬೋವಿ ಅವರನ್ನು ಸನ್ಮಾನ ಮಾಡಲಾಯಿತು .

ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಂಜು ಮಾನೆ , ಸೈದುಸಾಬ ಬೋವಿ ,ಹುಸೇನ್ ಸಾಬ್ ಪಡಕೆ ,ನಗರದ ಭೀಮ್ ಆರ್ಮಿಯ ಅಧ್ಯಕ್ಷ ಲವಿತ್ ಮೇತ್ರಿ ,ಅನಿಲ್ ಬರ್ಗಿ ,ನಗರಸಭೆ ಸದಸ್ಯರಾದ ರಾಜು ಬೇಪಾರಿ ,ಜನತಾ ಸುಲ್ತಾನ್ ಹಾಗೂ ಬೇಪಾರಿ ಬ್ರದರ್ಸ್ ರುವಾರಿ ಶಫೀಕ್ M ಬೇಪಾರಿ ,ರಾಜು ಬೇಪಾರಿ, ರಾಶಿದ್ ಪಟಾನ್ ,ಗೌಸ  ಸುರ್ನಾಸಿ  ,ಹಾಗೂ ಇನ್ನುಳಿದ ಮುಖಂಡರು ಹಾಜರಿದ್ದರು .


ಕಲಾಮ್ ಎಕ್ಸ್  ಪ್ರೈಸ್  ನ್ಯೂಸ್ 
ರಬಕವಿ ಬನಹಟ್ಟಿ .

Saturday, September 17, 2022

ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಶಾಲಾ ಆವರಣದಲ್ಲಿ ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*

*ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ* 

 ರಬಕವಿ-ಬನಹಟ್ಟಿ : 

 ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಆವರಣದಲ್ಲಿ ಪ್ರತಿಭಾ ಕಾರಂಜಿ ಬಹಳ ಅದ್ದೂರಿಯಾಗಿ ನಡೆಯಿತು .

ಈ ಪ್ರತಿಭಾಕಾರಂಜಿಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ , ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ ,ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ ,  ಇವರ ಜಂಟಿ  ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಅವರಣದಲ್ಲಿ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮವು ಬಹಳ  ಅದ್ದೂರಿಯಾಗಿ ಜರುಗಿತು .

ಪ್ರತಿಭಾಕಾರಂಜಿಯ ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ  ಉದ್ಘಾಟನೆಯಾಯಿತು .

ಈ ಪ್ರತಿಭಾಕಾರಂಜಿಯ ಕಾರ್ಯಕ್ರಮದಲ್ಲಿ ತೇರದಾಳ ,ಹನಗಂಡಿ ,ರಬಕವಿ ಬನಹಟ್ಟಿ ,ಹಿಪ್ಪರಗಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು . 

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಹಾಸ್ಯ ಚುಟುಕು  ,ಕ್ವಿಸ್ ಕಾಂಪಿಟೇಶನ್ , ಕವಾಲಿ ,ರಂಗೋಲಿ ಸ್ಪರ್ಧೆ ಕಲಾಕೃತಿ ಮಣ್ಣಿನಿಂದ ಮಾಡಿದ ವಸ್ತುಗಳು , ಇವೆಲ್ಲವೂ ಪ್ರತಿಭಾ ಕಾರಂಜಿಯ ವೇದಿಕೆಯ  ಮೂಲಕ ,ತಮ್ಮ ಪ್ರತಿಭೆಯನ್ನು ತೋರಿಸಿದರು .

ಈ ಪ್ರತಿಭಾಕಾರಂಜಿಯ ವಲಯ ಮಟ್ಟ ಅಷ್ಟೇ ಆಗಿತ್ತು, ಆದರೆ ಇದು ಜಿಲ್ಲಾಮಟ್ಟದ ಅನ್ನುವಂಥ ರೀತಿಯಲ್ಲಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು .

ಈ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಶಾಲಾ ಎಸ್ಡಿಎಂಸಿ ಅಧ್ಯಕ್ಷ  ಯುಸೂಪ  ಮಹಾಲಿಂಗಪೂರ ,ಶಾಲಾ ಮುಖ್ಯಗುರುಗಳು ಇಂಡಿಕರ್ ಸರ್ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜು ತೆಗ್ಗಿ , ಕೆ ಎ ಎಸ್ ಆಫೀಸರ್ ಎಂ ಎಸ್ ಮುಲ್ಲಾ ಸರ್ , ಕೃಷ್ಣ ಮೇಲ್ದಂಡೆ ಯೋಜನೆ ಯೋಜನೆಯ ಭೂಸ್ವಾಧೀನ ಅಧಿಕಾರಿ ಅಬಿದ್ ಗದ್ಯಾಳ , ಮುರಾದ್ ಮೋಮಿನ್ , ದರಪ್ಪ ಉಳಾಗಡ್ಡಿ ,ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್  ಜಮಾದಾರ್ ಮಾಜಿ  ಅಂಜುಮನ್ ಸಂಸ್ಥೆಯ ಅಧ್ಯಕ್ಷ  ಹಾರುನರಸಿದ ಸಾಂಗ್ಲಿಕರ , ಶೌಕತ್ ಅತ್ತಾರ್ , ಡಾಕ್ಟರ್ ಅಕ್ಬರ್ ತಾಂಬೋಳಿ ,ಬಂದೇನವಾಜ್ ಡಾಂಗೆ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಕ್ಷೇತ್ರಶಿಕ್ಷಣಾಧಿಕಾರಿ ಸಿ ಎಂ ನ್ಯಾಮಗೌಡ , ಸಮನ್ವಯಾಧಿಕಾರಿ ವಿಜಯ್ ಕುಮಾರ್ ವಂದಾಲ , ನರ ಬನಹಟ್ಟಿ ನಗರ ಘಟಕದ ಕಾಂಗ್ರೆಸ್ ಮುಖಂಡ ರಾಜೇಂದ್ರ ಭದ್ರನ್ನವರ್ ರಾಹುಲ್ ಕಲಾಲ್ ,ಬಸವರಾಜ್ ಹನಗಂಡಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಮಲಿಕ್  ಜಾಕೀರ್ ಬಾರಿಗಡ್ಡಿ ,ಇಸಿಓ ಎಸ್ ಬಿ ಬುರ್ಲಿ ಹಾಗೂ ಬಿ ಎಂ ಹಳೆಮನಿ ,ಉರ್ದು ಸಿಆರ್ಪಿ 
A I ಬಾಗೇವಾಡಿ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು