Saturday, December 17, 2022

ರಬಕವಿ ಬನಹಟ್ಟಿ ಮಹಾಲಿಂಗಪುರ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ವತಿಯಿಂದ ಸಭೆ :*



ರಬಕವಿ ಬನಹಟ್ಟಿ : 

ಬಾಗಲಕೋಟೆ ಜಿಲ್ಲೆ 
 ಬನಹಟ್ಟಿ ನಗರದ ಪ್ರವಾಸಿ ಮಂದಿರದಲ್ಲಿ  (ಐ ಬಿ  ) ರಬಕವಿ ಬನಹಟ್ಟಿ ಮಹಾಲಿಂಗಪೂರ  ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ   ಅಧ್ಯಕ್ಷರಾದ ಹಾರುನರಶಿದ ಸಾಂಗ್ಲೀಕರ ಇವರ ನೇತೃತ್ವದಲ್ಲಿ ಸಭೆ  ನಡೆಯಿತು . ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್ ಬಾರಿಗಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .  ಈ ಸಭೆಯಲ್ಲಿ ಹಾರುನರಶೀದ್ ಸಾಂಗ್ಲಿಕರ  ರಪಿಕ ಬಾರಿಗಡ್ಡಿಅವರು ಮುಂಖಡರ ಉದ್ದೇಶಿಸಿ  ಮಾತನಾಡಿದರು  .

ರಬಕವಿ ಬನಹಟ್ಟ ತಾಲೂಕಿನ ಅಲ್ಪಸಂಖ್ಯಾತರ ಕಮಿಟಿ ಹಾಗೂ ಚುನಾವಣೆ ಪಟ್ಟಿಯಲ್ಲಿ ಹೆಸರ ಸೇರ್ಪಡೆ ಮಾಡುವ ಸಲುವಾಗಿ ಬೂತ್ ಮಟ್ಟದ ಪದಾಧಿಕಾರಿಗಳು ನೇಮಕ ಮಾಡಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಕೊಟ್ಟಂತ ಹಕ್ಕು ಪ್ರತಿಯೊಬ್ಬರ ಮತ  ಅಮೂಲ್ಯವಾದದ್ದು ,ಮತದಾನದ  ಹಕ್ಕು ತಪ್ಪದೇ.ಚಲಾವಣೆ ಮಾಡಬೇಕು ಅಂತ ಸಲಹೆ ನೀಡಿದರು. 

 ಸಿದ್ದರಾಮಯ್ಯ ಸರಕಾರ ಅಲ್ಪಸಂಖ್ಯಾತರಿಗೆ.ಮಾಡಿದಂತ ಯೋಜನೆಗಳು. ಅದು.ಶಾದಿ ಭಾಗ್ಯ ,ಕ್ಷೀರ ಭಾಗ್ಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಇರಬಹುದು ಇನ್ನಿತರ ಯೋಜನಗಳು ಇರಬಹುದು ಈಗಿನ ಇರುವಂತ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು   ತೆಗೆದು ಹಾಕಿದೆ  . ಮುಂಬರುವ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ , ಅಲ್ಪಸಂಖ್ಯಾತರು ಹಾಗೂ ದಲಿತರ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಾರೆ ಅಲ್ಪಸಂಖ್ಯಾತರ ಮತಗಳು ವಿಭಜನೆ ಆಗದಂತೆ ಇನ್ನಿತರ ಬೇರೆ ಪಕ್ಷಗಳಿಗೆ ಎಂಐಎಂ ಎಸ್ ಡಿ ಪಿ ಐ ಆಮ್ ಆದ್ಮಿ ಪಕ್ಷಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಅಂತ ,ಸಲಹೆ  ಸೂಚನೆಗಳು ನೀಡಿದರು .

 ಇದೇ ಸಂದರ್ಭದಲ್ಲಿ , ಬೆಳಗಾವಿ ವಿಭಾಗದ  ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾರುನರಶೀದ್ ಭೇವುರ ಮತ್ತು ಗ್ರಾಮೀಣ ವಿಭಾಗದ ಬ್ಲಾಕ್ ಅಧ್ಯಕ್ಷ ಪಜಲ ಅತಾರುತ   ಕಾಂಗ್ರೆಸ್  ಮುಖಂಡ ಅಕಬರ ಫನಿಭಂದ. ನಸೀಮ್ ಮೂಕಾಶಿ ಹುಜೇಫಾ ಮುಲ್ಲಾ   ಸಾದಿಕ ಜಕಾತಿ ಸೂಹೀಲ ಚೀಂಚಲಿ   ಇನ್ನೂ ಅನೇಕ ಮುಖಂಡರು ಕಾರ್ಯಕರ್ತರ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಹುಜೇಪಾ ಮುಲ್ಲಾ ,ಸ್ವಾಗತ ಭಾಷಣ ಮಾಡಿದರು ಹಾಗೂ  ನಸೀಮ್ ಮೂಕಾಶಿ   ವಂದಿಸಿದರು .

 *ವರದಿ : ಮಹಿಬೂಬ್ ಬಾರಿಗಡ್ಡಿ*

Thursday, December 15, 2022

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ) ತಾಲೂಕ ರಬಕವಿ ಬನಹಟ್ಟಿ ಯಿಂದ ಶಾಸಕ ಸಿದ್ದು ಸವದಿ ರವರಿಗೆ ಮನವಿ ಸಲ್ಲಿಕೆ* :-



 *ರಬಕವಿ ಬನಹಟ್ಟಿ*: 


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ  
ಶುಕ್ರವಾರ 16/12/2022 ರಂದು   9-  ಗಂಟೆಗೆ ತೆರೆದಾಳ್ ಮತ ಕ್ಷೇತ್ರದ ಶಾಸಕರಾದ  ಸಿದ್ದು ಸವದಿ   ನವರನ್ನು ಕಾನಿಪ ಧ್ವನಿ ಸಂಘಟನೆಯ ರಬಕವಿ ಬನಹಟ್ಟಿ ತಾಲೂಕ  ಪದಾಧಿಕಾರಿಗಳು ಸೇರಿ ಪತ್ರಕರ್ತರ ಜಲ್ವಂತ ಸಮಸ್ಯಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾಡಿನ ದೊರೆಯಾದ ಬಸವರಾಜ್ ಬೊಮ್ಮಾಯಿ ಯವರ ಗಮನಕ್ಕೆ ತಂದು ನಾಡಿನ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂಧಿಸಿ  ರಾಜ್ಯದ 16,000 ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಅಧ್ಯಕ್ಷ  ಮಾಳು  ದುರ್ಗನ್ನವರ್ , ಸಂಘಟನಾ ಕಾರ್ಯದರ್ಶಿ ದಿಲೀಪ್ ಕಾಂಬಳೆ , ತಾಲೂಕ ಪ್ರಧಾನ ಕಾರ್ಯದರ್ಶಿ ,ಅಮೀರ್ ಖಾನ ಅತ್ತಾರ್  ,ತಾಲೂಕ ಖಜಾಂಚಿ  ಮುಜಮಿಲ್ ಜರ್ಮನ್ ,  ಹಾಗೂ ಸದಸ್ಯರಾದ ಸತೀಶ್ ಸಣ್ಣಕ್ಕಿ , ಶಾನೂರ್ ಗೊಲಬಾವಿ , ದೇವೇಂದ್ರ ಹುಲ್ಲೂರು , ಹಾಗೂ ಕಾನಿಪ  ಧ್ವನಿ ಸಂಘಟನೆಯ ಬಾಗಲಕೋಟ್  ಜಿಲ್ಲಾ ಸದಸ್ಯರಾದ ಮಹಬೂಬ್  ಬಾರಿಗಡ್ಡಿ  ಉಪಸ್ಥಿತರಿದ್ದರು .

ವರದಿ ಮಹೆಬೂಬ್ ಬಾರಿಗಡ್ಡಿ

Tuesday, November 29, 2022

ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :

*ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :* 

ರಬಕವಿ ಬನಹಟ್ಟಿ :

 ಬಾಗಲಕೋಟೆ ಜಿಲ್ಲೆಯ ರಬಕವಿ-  ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ , 14ನೇ ದಿನಕ್ಕೆ ಕಾಲಿಟ್ಟ ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ , ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ. ವತಿಯಿಂದ ಬೆಂಬಲ ನೀಡಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ,  ತೆರೆದಾಳ ಮತಕ್ಷೇತ್ರದ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ  ಪರಶುರಾಮ್ ಮೈತ್ರಿ ,ನೇರ ಶಾಸಕರಿಗೆ ತರಾಟೆಗೆ ತೆಗೆದುಕೊಂಡು ಶಾಸಕರೆ ಅಂಗವಿಕಲರ ಕೆಲಸಗಳನ್ನು ಮಾಡದಿದ್ದರೆ , ಮುಂದಿನ ಜನ್ಮದಲ್ಲಿ ನಿಮ್ಮ ಹೊಟ್ಟೆಯಲ್ಲಿ  ನಿಮ್ಮ ಮಕ್ಕಳು ಅಂಗವಿಕಲಾಗಿ ಹುಟ್ಟಬಹುದು ಎಂದು  ಆಕ್ರೋಶ ವ್ಯಕ್ತಪಡಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾದ ದೇವೇಂದ್ರ ಅಸ್ಕಿ , ರಬಕವಿ ಬನಹಟ್ಟಿ ತಾಲೂಕ ಆಟೋ ಘಟಕದ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ,ಹಾಗೂ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರಾದ ಇಮ್ತಿಯಾಜ್ ಗೋಕಾಕ್ ,ರಂಜಾನ್ ಗೋರಿ ,ಬುಡನ್ ಸಾಬ್  ಪೆಂಡಾರಿ ,ರಿಯಾಜ್  ಜಮಖಂಡಿ ,ಮೊಹಮ್ಮದ್ ಬಿಕಾಂ , ಸಲೀಂ ಬೀಳಗಿ, ಸಿರಾಜ್ ಜಮಾದಾರ್, ಸಾಯಿಲ್ ಪೆಂಡಾರಿ ,ಇಬ್ರಾಹಿಂ ಸುಲೇದಾರ್ ,ಆದಮ್ ಸೈಯದ್ ,  ಸಮೀರ್ ಮುಲ್ಲಾ , ಬಸಿರ್ ಪೆಂಡಾರಿ  ,ಅಪ್ರೋಜ್ ಸೌದಾಗರ್ ,ಜುಬೇರ್ ಗಡ್ಡೆಕರ್  ಅರ್ಬಾಸ್ ಅಸಂಗಿ , ಮಹಮ್ಮದ್ ಗಡ್ಡೆಕರ್ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .

ವರದಿ :ಮಹಬೂಬ ಬಾರಿಗಡ್ಡಿ

Wednesday, November 16, 2022

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಾರೋನ ರಶೀದ್ ಸಾಂಗ್ಲಿ ಕರ್ ಆಯ್ಕೆ .

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆ .  
ರಬಕವಿ ಬನಹಟ್ಟಿ :

ಶ್ರೀ ಇಮ್ರಾನ ಪ್ರತಾಪಗಡ  ರಾಜ್ಯಸಭಾ ಸದಸ್ಯರು ,ಹಾಗೂ ಅಧ್ಯಕ್ಷರು, ಅಲ್ಪಸಂಖ್ಯಾತರ ವಿಭಾಗ, ಎ.ಐ.ಸಿ.ಸಿ, ಹೊಸದೆಹಲಿ ಮತ್ತು ಸನ್ಮಾನ ಶ್ರೀ ಕೆ. ಅಬ್ದುಲ್ ಜಬ್ಬಾರ, ಎಂ.ಎಲ್.ಸಿ. ಹಾಗೂ ಅಧ್ಯಕ್ಷರು, ಕೆ.ಪಿ.ಸಿ.ಸಿ, ಅಲ್ಪಸಂಖ್ಯಾತರ ವಿಭಾಗ, ಬೆಂಗಳೂರು ಇವರ ಆದೇಶದ ಮೇರೆಗೆ ,ಹರುನ್ ರಶೀದ್  ಸಾಂಗ್ಲಿಕರ್ ಅವರನ್ನು  ರಬಕವಿ ಬನಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿದ್ದಾರೆ .
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷರು ರಫೀಕ್ ಬಾರಿಗಡ್ಡಿ ,ಮೌಲಾನ ಅಬು ಶಮ ,ಹಾರೋನ  ರಶೀದ್ ಬೇವೂರ ,  ಮೌಲಾನ ಮೋಸಿನ್  ಗೋಕಾಕ್ ,ಹಾಜಿ ಶೋಕತ ಅತ್ತಾರ , ಟಿಪ್ಪು ಸುಲ್ತಾನ್ ಅಲ್ಮೆಲ್ ,ಮಲಿಕ್ ಮುಜಾವರ್ , ಇನ್ನು ಅನೇಕರು ಉಪಸ್ಥಿತರಿದ್ದರು .

ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸಿದರು .

Tuesday, October 25, 2022

2B ಮೀಸಲಾತಿಗೆ ಆಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟದ ಅಖಾಡಕ್ಕಿಳಿದ ಕರ್ನಾಟಕ ಮುಸ್ಲಿಮ್ ಯೂನಿಟಿ.

ಮೀಸಲಾತಿಗೆ ಆಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಹೋರಾಟದ ಅಖಾಡಕ್ಕಿಳಿದ ಕರ್ನಾಟಕ ಮುಸ್ಲಿಮ್ ಯೂನಿಟಿ.
ಕಾಲಾಂತರದಿಂದ ಶೇ 4% ಇದ್ದ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ಹಾಗೂ2ಬಿ  ಬದಲಾದ ಆರ್ಥಿಕ ಸಾಮಾಜಿಕ ಸ್ಥರವನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರಿಗೆ ಶೇ 4%ರ ಮೀಸಲಾತಿಯನ್ನು ಶೇ 8% ಹೆಚ್ಚಿಸಲು ಕರ್ನಾಟಕ ಮುಸ್ಲಿಮ್ ಯೂನಿಟಿಯು ಸದಾ ಆಗ್ರಹ ಪಡಿಸುವಲ್ಲಿ ಮುಂಚೂಣಿಯಲ್ಲಿತ್ತು ಅದರ ಮುಂದುವರೆದ ಭಾಗವಾಗಿ ಈಗ ಸಂಪೂರ್ಣ ಅಖಾಡಕ್ಕಿಲಿದು ಇಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತನ್ನ ಮನವಿಯನ್ನು ಸಲ್ಲಿಸಿದೆ.

ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯ ಸಂಚಾಲಕ ಜನಾಬ ಅಬ್ದುಲ್ ಜಬ್ಬಾರ ಕಲಬುರಗಿಯವರ ನೇತ್ರತ್ವದಲ್ಲಿ ಚಿಂತಕರು, ಹಿರಿಯ ಸಾಹಿತಿಗಳಾದ ಬಿ ಎಂ ಹನೀಫ್, ಜಿಲ್ಲಾ ವಕ್ಫ ಅಧ್ಯಕ್ಷರಾದ ಮೆಹಬೂಬ್ ಸರ್ಕಾವಸ, ಯೂನೂಸ ಮೌಲಾನಾ, ರಿಯಾಜ್ ಮುಲ್ಲಾ, ಅಲ್ತಾಫ ಕಲಬುರಗಿ, ನಜೀರ ಹರಕಾರಿಯವರು ಜೊತೆಯಾಗಿ ಹೋರಾಟಕ್ಕೆ ಕೈ ಬಲಪಡಿಸಿದರು

Saturday, October 22, 2022

ಬನಹಟ್ಟಿ ನಗರದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜಾ ಸಮಾರಂಭ

*ಬನಹಟ್ಟಿ ನಗರದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜಾ ಸಮಾರಂಭ*

  ರಬಕವಿ ಬನಹಟ್ಟಿ : -

ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೇರಿದ ಬಾಗಲಕೋಟೆ ಭಾಗದ ಬನಹಟ್ಟಿ ನಗರದಲ್ಲಿ 1.ಕೋಟಿ 50.ಲಕ್ಷ ರೂಪಾಯಿಗಳ  ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜೆಯನ್ನು ಮಾಡುವುದರ ಮೂಲಕ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸೌದಿ  ಚಾಲನೆಯನ್ನು ನೀಡಿದರು .

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಸಿದ್ದು ಸವದಿ , ರಬಕವಿ-ಬನಹಟ್ಟಿ ನಗರಗಳಲ್ಲಿ ಪ್ರತ್ಯಕ ನಗರದ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು . ನಗರದ ಬಸ್ ನಿಲ್ದಾಣದ ಟೆಂಡರ್ ಗಳು ಕೂಡ ಆಗಿದೆ ಅದರ ಪ್ರಕಾರ ಆಯಾ ನಗರಗಳ ನಿಲ್ದಾಣಗಳ ನೂತನ ಮಾದರಿಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಅನೇಕ ಮುಖಂಡರು ಭಾಗಿಯಾಗಿದ್ದರು .

Saturday, October 15, 2022

ಬನಹಟ್ಟಿ ನಗರದಲ್ಲಿ ಮಾಜಿ ರಾಷ್ಟ್ರಪತಿ ,ಭಾರತರತ್ನಡಾ. ಎ. ಪಿ. ಜೆ ಅಬ್ದುಲ್ ಕಲಾಂ ರವರ 91ನೇಯ್ ಹುಟ್ಟು ಹಬ್ಬ ಆಚರಣೆ .

ಮಾಜಿ ರಾಷ್ಟ್ರಪತಿ ,ಭಾರತರತ್ನ
ಡಾ. ಎ. ಪಿ. ಜೆ  ಅಬ್ದುಲ್ ಕಲಾಂ ರವರ 91ನೇಯ್ 
ಹುಟ್ಟು  ಹಬ್ಬ ಆಚರಣೆ .


ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪ್ರತಿಷ್ಠಿತ  ಬಿಲಾಲ್ ಮಸೀದಿ ಮೊಹಲ್ಲಾದ ಯುವಕರು ಹಾಗೂ ಹಿರಿಯರು ವತಿಯಿಂದ ಮಾಜಿ ರಾಷ್ಟ್ರಪತಿ ಭಾರತರತ್ನ ಎಪಿಜೆ ಅಬ್ದುಲ್ ಕಲಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು .

ಪ್ರಾಸ್ತಾವಿಕ ಮಾತನಾಡಿದ , ಮುಖ್ಯ ಅತಿಥಿಯಾಗಿ ಹಾಗೂ ತ್ರಿಭಾಷಾ ಕವಿ ಪ್ರಶಸ್ತಿ ಪಡೆದ , ಶಂಶುದ್ದಿನ್ ಜಾರೆ  ಸರ್  ,  ಅಕ್ಟೋಬರ್ 15 1931 ರಲ್ಲಿ ಜನಿಸಿದ , ಎಪಿಜೆ ಅಬ್ದುಲ್ ಕಲಾಂ , ಅವರ ಅಂತಿಮ ವಿದಾಯ 2015 ಜುಲೈನಲ್ಲಿ ಆಯಿತು .  


ಇವರು 2002 ರಿಂದ 2007 ರವರೆಗೆ ದೇಶದ  ರಾಷ್ಟ್ರಪತಿಯಾಗಿ  ಕಾರ್ಯಭಾರ ಮಾಡಿದ್ದರು .

ಇವರದೇ ಒಂದು ಮಾತು "ಸೂರ್ಯವನ್ನಾಗಿ ಮಿಂಚಬೇಕಾದರೆ  ,ಮೊದಲು ಸೂರ್ಯನ ತರ ಸುಡುವ ಕೊಳ್ಳುವುದನ್ನು ಕಲಿಯಬೇಕು " ಎಂದು ಹೇಳಿದ ಮಹಾನ್ ವ್ಯಕ್ತಿ ಎಂದು ಈ ಸಂದರ್ಭದಲ್ಲಿ ನೆನಪಿಸಿ ಕೊಟ್ಟರು .


ಇದೇ ಸಂದರ್ಭದಲ್ಲಿ ಮಾತನಾಡಿದ ಫಯಾಜ್ ಕೊಯಿಮುತ್ತೂರು ,ಭಾರತ ದೇಶದ ಮಹಾನ್ ವಿಜ್ಞಾನಿ ಹಾಗೂ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು .ಹಾಗೂ  ಬರುವಂತಹ ದಿನಮಾನಗಳಲ್ಲಿ  ನಮ್ಮ ಮಕ್ಕಳನ್ನು ಕೂಡ ಈ ದೇಶದ ವಿಜ್ಞಾನಿಗಳ ನ್ನಾಗಿ ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಈ ಕಾರ್ಯಕ್ರಮವನ್ನು ಬನಹಟ್ಟಿ ನಗರದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕ ಜಾಕಿರ್ ಹುಸೇನ್ ಬಾರಿಗಡ್ಡಿ ಅವರು ನಿರೂಪಿಸಿದರು . 

ಈ ಕಾರ್ಯಕ್ರಮದ ಅಧ್ಯಕ್ಷತೆ  ಮುರಾದ್ ಮುರಾದ್ ಮೋಮಿನ  ವಹಿಸಿದ್ದರು .

ಈ ಸಂದರ್ಭದಲ್ಲಿ ಬಿಲಾಲ್ ಮಜಿದ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಜಾಕಿರ್ ಬಾರಿಗಡ್ಡಿ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಸಿರಾಜ್ ಮೋಮಿನ  ,ಹಸನ್ ಮುಲ್ಲಾ, ಗುಲಾಬ ಯಾದವಾಡ , ಮಹಿಬೂಬ್ ಬಾರಿಗಡ್ಡಿ  ,ಶಬ್ಬೀರ್ ಮೊಮಿನ್ ,ಹುಸೇನ್ ಅಥಣಿ ಯುಸೂಪ  ಮುಧೋಳ ,ಜುಬೇರ್ ಮೋಮಿನ  ,ಮೀರಾಸಾಬ ಬಾರಿಗಡ್ಡಿ ಇಮ್ತಿಯಾಜ್ ಅತ್ತಾರ  ,ಅಕ್ಬರ್ ಅತನಿ , ಮೋದಿನಸಾಬ್ ಸಪ್ತಸಾಗರ, ಇನ್ನೂ ಅನೇಕರು ಹಾಜರಿದ್ದರು.